• Home
  • »
  • News
  • »
  • jobs
  • »
  • CBSE Board Exam 2023: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ, ಪರೀಕ್ಷೆ ತಯಾರಿ ನಡೆಸಿ

CBSE Board Exam 2023: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ, ಪರೀಕ್ಷೆ ತಯಾರಿ ನಡೆಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪರೀಕ್ಷೆಯ ದಿನಾಂಕಗಳನ್ನು ಹಂಚಿಕೊಳ್ಳದಿದ್ದರೂ, ಪರೀಕ್ಷೆಗೆ ಸಿದ್ಧವಾಗುವಂತೆ ಶಾಲೆಗಳಿಗೆ ಸೂಚನೆಯಲ್ಲಿ ತಿಳಿಸಲಾಗಿದೆ ಸದ್ಯದಲ್ಲೇ ದಿನಾಂಕವೂ ಪ್ರಕಟವಾಗಲಿದೆ.

  • News18 Kannada
  • Last Updated :
  • Karnataka, India
  • Share this:

10 ಮತ್ತು 12 ನೇ ತರಗತಿಗಳಿಗೆ 2023 CBSE ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಮಾರ್ಚ್ 2023ರಲ್ಲಿ ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ. ಇತ್ತೀಚಿನ ಸುತ್ತೋಲೆಯಲ್ಲಿ ಮಂಡಳಿಯು ಶಾಲೆಗಳೊಂದಿಗೆ (School) ಈ ಸೂಚನೆಗಳನ್ನು ಹಂಚಿಕೊಂಡಿದೆ. ಫೆಬ್ರವರಿ 15 ರಿಂದ ಮೇ ವರೆಗಿನ CBSE ಬೋರ್ಡ್ ಪರೀಕ್ಷೆಗಳ (Exam) ನಡೆಸುವಿಕೆ ಮತ್ತು ಮೌಲ್ಯಮಾಪನಕ್ಕಾಗಿ ಸಮಯವನ್ನು ಹಂಚಿಕೊಂಡಿದೆ. ಈ ಕುರಿತು ಇನ್ನಷ್ಟು ಮಾಹಿತಿ (Information) ಪಡೆಯಲು ಮುಂದೆ ಓದಿ. 


ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಬೋರ್ಡ್ ಪರೀಕ್ಷೆಗಳು 2023 ಅಂದರೆ ಮುಂದಿನ ವರ್ಷ ಫೆಬ್ರವರಿಯಿಂದ ಪ್ರಾರಂಭವಾಗುತ್ತದೆ. ಮಂಡಳಿಯು ಬಿಡುಗಡೆ ಮಾಡುವ ನಿರೀಕ್ಷೆಯಿದೆ. CBSEಬೋರ್ಡ್ ಪರೀಕ್ಷೆ 2023ರ 10 ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳ ದಿನಾಂಕ ಪಟ್ಟಿ ಶೀಘ್ರದಲ್ಲೇ ತಿಳಿದುಬರುತ್ತದೆ. CBSE ವಿವಿಧ ಅಂಗಸಂಸ್ಥೆ ಶಾಲೆಗಳಿಗೆ ಸೂಚನೆಯನ್ನು ಕಳುಹಿಸಿದೆ.


ಇತ್ತೀಚಿನ ಅಧಿಸೂಚನೆಯಲ್ಲಿ, ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಮಂಡಳಿಯು ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಫೆಬ್ರವರಿ 15 ರಿಂದ ಮೇ 15, 2023 ರ ನಡುವೆ ಯಾರ ವ್ಯಕ್ತಿಯ ಹಸ್ತಕ್ಷೇಪವನ್ನು ಒಳಗೊಂಡಿರದೇ ಎಲ್ಲ ಕ್ರಿಯೆಗಳು ಸರಾಗವಗಿ ಮತ್ತು ನ್ಯಾಯಯುತವಾಗಿ ನಡೆಯಬೇಕು ಎಂದು ಸೂಚಿಸಲಾಗಿದೆ.


ಪರೀಕ್ಷೆಯ ದಿನಾಂಕಗಳನ್ನು ಹಂಚಿಕೊಳ್ಳದಿದ್ದರೂ, ಪರೀಕ್ಷೆಗೆ ಸಿದ್ಧವಾಗುವಂತೆ ಶಾಲೆಗಳನ್ನು ಕೇಳಲಾಗಿದೆ. ಶಾಲೆಗಳು, CBSE ತರಗತಿ 10, 12 ಬೋರ್ಡ್ ಪರೀಕ್ಷೆಗೆ ಕೇಂದ್ರಗಳಾಗಿ ಗೊತ್ತುಪಡಿಸಲಾಗಿದೆ. ಸಂಪೂರ್ಣ ದಿನಾಂಕ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.


ಅಧಿಕೃತ ಮಾಹಿತಿ ಬಗ್ಗೆ ನಿಮಗೆ ಕುತೂಹಲವಿದ್ದರೆ ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ತಿಂಗಳಿಗೆ 39 ಸಾವಿರ ಸಂಬಳ! ನಿಮ್ಮ ಹತ್ತಿರದ ಜಿಲ್ಲೆಯಲ್ಲಿದೆ ಕೆಲಸ


CBSE ಬೋರ್ಡ್ ಪರೀಕ್ಷೆಗಳ ದಿನಾಂಕ
CBSE ಬೋರ್ಡ್ ಪರೀಕ್ಷೆಗಳು 2023 ಅನ್ನು ಫೆಬ್ರವರಿ ಮತ್ತು ಮಾರ್ಚ್ 2023 ರಲ್ಲಿ ನಡೆಸಲಾಗುವುದು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ. ಆದ್ದರಿಂದ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅದಾದ ನಂತರ ಮೌಲ್ಯಮಾಪನ ಹಾಗೂ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗಧಿ ಪಡಿಸಲಾಗುತ್ತದೆ.


ಚಟುವಟಿಕೆಗಳ ಅನುಷ್ಠಾನ
ಪರೀಕ್ಷೆಗಳು ಅಥವಾ ಮೌಲ್ಯಮಾಪನ ಸಂಬಂಧಿತ ಚಟುವಟಿಕೆಗಳ ಅನುಷ್ಠಾನದ ಸಮಯದಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ಶಾಲೆಗಳು 2023 ಫೆಬ್ರವರಿ 15 ರಿಂದ ಮೇ 1, 2023 ರವರೆಗೆ ಶಾಲಾ ಆವರಣದಲ್ಲಿ ಯಾವುದೇ ನಿರ್ಮಾಣ ಅಥವಾ ನವೀಕರಣ ಕಾರ್ಯವನ್ನು ನಡೆಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


ಇದರ ಹೊರತಾಗಿ, ಸಿಬಿಎಸ್‌ಇ ಹೇಳಿದ ಅವಧಿಯಲ್ಲಿ ಯಾವುದೇ ರಜೆಯನ್ನು ಮಂಜೂರು ಮಾಡಬೇಡಿ ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಆರೋಗ್ಯದ ಸಮಸ್ಯೆ ಇದ್ದರೂ ಸಹ ಸರಿಯಾದ ವೈದ್ಯಕೀಯ ಕಾರಣಗಳೊಂದಿಗೆ ಸಮರ್ಥಿಸದ ಹೊರತು ರಜೆ ನೀಡುವಂತಿಲ್ಲ ಎಂದು ಹೇಳಲಾಗಿದೆ.


ಅಂದಾಜು ಮೌಲ್ಯ ಮಾಪನ ದಿನಾಂಕ
ಹಂಚಿಕೊಂಡ ಮಾಹಿತಿಯ ಪ್ರಕಾರ, CBSE 10, 12 ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಮತ್ತು ಮೇ 15, 2023 ರೊಳಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಲು ಯೋಜಿಸಿದೆ ಎಂದು ಊಹಿಸಬಹುದು. ಟೈಮ್‌ಲೈನ್ ಮತ್ತು ವೇಳಾಪಟ್ಟಿಯನ್ನು ಅನುಸರಿಸಿ, 10 ನೇ ತರಗತಿಯ CBSE ಫಲಿತಾಂಶಗಳು 2023 ಎಂದು ನಿರೀಕ್ಷಿಸಲಾಗುತ್ತದೆ. ಮತ್ತು 12 ಮೇ 2023 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ.


ನಿಗದಿತ ದಿನಾಂಕ ತಿಳಿಸಲಾಗುವುದು
ಸಂಪೂರ್ಣ ದಿನಾಂಕ ಶೀಟ್‌ಗಾಗಿ, ಮಂಡಳಿಯು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸುತ್ತೋಲೆಯಲ್ಲಿ ಯಾವುದೇ ನಿಖರ ದಿನಾಂಕಗಳನ್ನು ಉಲ್ಲೇಖಿಸಲಾಗಿಲ್ಲ. ನವೆಂಬರ್ ಅಂತ್ಯದೊಳಗೆ ತಿಳಿಸಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ತಮ್ಮ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕು. ಸದ್ಯದಲ್ಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಲಿದೆ.

First published: