• ಹೋಂ
  • »
  • ನ್ಯೂಸ್
  • »
  • Jobs
  • »
  • CBSE ಬೋರ್ಡ್ ಪರೀಕ್ಷೆ 2023ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ನಿಜಾನಾ? ಇಲ್ಲಿದೆ ಮಾಹಿತಿ

CBSE ಬೋರ್ಡ್ ಪರೀಕ್ಷೆ 2023ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ನಿಜಾನಾ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

CBSE ಬೋರ್ಡ್ ಪರೀಕ್ಷೆ 2023 ಪತ್ರಿಕೆ ಸೋರಿಕೆ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಿಡಿಗೇಡಿಗಳು ಹರಡಿರುವ ಸುಳ್ಳು ಮಾಹಿತಿಯ ಕುರಿತು CBSE ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ.

  • Share this:

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪೇಪರ್ (Paper) ಸೋರಿಕೆಯ ಬಗ್ಗೆ ಸುಳ್ಳು ಮಾಹಿತಿಗಳು ಹರಿದಾಡಿದ್ದವು ಇದರ ವಿರುದ್ಧ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSC) ಸೋಮವಾರ (ಫೆಬ್ರವರಿ 27) ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. CBSE ಬೋರ್ಡ್ ಪರೀಕ್ಷೆ 2023 ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ನಕಲಿ ಮತ್ತು ತಪ್ಪು ದಾರಿಗೆಳೆಯುವ ಮಾಹಿತಿಯನ್ನು ಯೂಟ್ಯೂಬ್, ಫೇಸ್‌ಬುಕ್ (Face Book) ಟ್ವಿಟರ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಳ್ಳಲಾಗಿದೆ ಇದರ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು CBSE ಸಾರ್ವಜನಿಕ ಎಚ್ಚರಿಕೆಯನ್ನು ನೀಡಿದೆ.


ತಪ್ಪು ಮಾಹಿತಿಯಿಂದ ಅದೆಷ್ಟೊ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಸರಿಯಾದ ಕ್ರಮದಲ್ಲಿ ಪರೀಕ್ಷೆ ನಡೆಸುತ್ತಿದ್ದರೂ ಸಹ ಅದರಲ್ಲೂ ಲೋಪ ಕಂಡುಹಿಡಿಯುವ ಜನರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದೇ ಹೋದಲ್ಲಿ ಮತ್ತೆ ಮತ್ತೆ ಇಂತಹ ಘಟನೆಗಳು ಜರುಗುತ್ತವೆ ಎಂದು ಹೇಳಲಾಗಿದೆ. ಆ ಕಾರಣದಿಂದ ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ತಿಳಿಸಲಾಗಿದೆ.


ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪತ್ರಿಕೆ ಸೋರಿಕೆ ಅಥವಾ 2023 ರ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಪಟ್ಟ ಯಾವುದೇ ಸುಳ್ಳು ಮಾಹಿತಿಗಳು ಸಿಕ್ಕಿವೆ. ಈ ಕುರಿತು ವದಂತಿಗಳನ್ನು ಹರಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಈ ವ್ಯಕ್ತಿಗಳು, ಗುಂಪುಗಳು ಮತ್ತು ಏಜೆನ್ಸಿಗಳು ಇದಕ್ಕೆ ಪ್ರತಿಯಾಗಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಈ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಲು ಉದ್ದೇಶಿಸಲಾಗಿದೆ. ಇಂತಹ ಬೇಜವಾಬ್ದಾರಿ ಚಟುವಟಿಕೆಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಭೀತಿಯನ್ನು ಸೃಷ್ಟಿಸುತ್ತವೆ ಎಂದು CBSE ಸಾರ್ವಜನಿಕ ಎಚ್ಚರಿಕೆಯ ಮೂಲಕ ತಿಳಿಸಿದೆ.


ಇದನ್ನೂ ಓದಿ: Exam Postponed: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ಮುಂದೂಡಿಕೆ


ಸುಳ್ಳು ಮಾಹಿತಿ ಹರಡುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಡಳಿ ತಿಳಿಸಿದೆ. "ಐಪಿಸಿ ಮತ್ತು ಐಟಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಬಿಎಸ್‌ಇ ದೆಹಲಿ ಪೊಲೀಸ್ ವಿಶೇಷ  (ಎಂಎಸಿ)  ಮಾಹಿತಿ ನೀಡುತ್ತಿದೆ" ಎಂದು ತಿಳಿಸಿದೆ.




ಬೋರ್ಡ್ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅಡ್ಡಿಪಡಿಸುವ ಯಾವುದೇ ಚಟುವಟಿಕೆಯಲ್ಲಿ ತೊಡಗಬೇಡಿ ಎಂದು CBSE ಹೇಳಿಕೆ ನೀಡಿದೆ. ಈ ಬಾರಿ ಪ್ರಶ್ನೆ ಪತ್ರಿಕೆ ಲೀಕ್​ ಆಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆದ್ದರಿಂದ ಯಾವುದೇ ಪ್ರಶ್ನೆ ಪತ್ರಿಕೆ ಲೀಕ್​ ಆಗುವ ಸಾಧ್ಯತೆ ಇಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಅಂಕ ತೆಗೆಯುವಂತಾಗಲಿ ಎಂದು ಪಾಲಕರು ಅಥವಾ ಶಿಕ್ಷರೇನಾದರು ಈ ರೀತಿ ಪ್ರಶ್ನೆ ಪತ್ರಿಕೆ ಲೀಕ್​ ಮಾಡುವ ಪ್ರಯತ್ನ ಮಾಡಿದರೂ ಸಹ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.


'ಸುರಕ್ಷಿತ ಪರೀಕ್ಷಾ ವ್ಯವಸ್ಥೆ' ಎಂದರೇನು?


ಎಸ್‌ಎಸ್‌ಎಲ್‌ಸಿ  ಮತ್ತು ಪಿಯುಸಿ  ಪರೀಕ್ಷೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ತನ್ನ 'ಸುರಕ್ಷಿತ ಪರೀಕ್ಷಾ ವ್ಯವಸ್ಥೆ ' ಯೋಜನೆಯ ಭಾಗವಾಗಿ ಸಿಐಡಿ, ಪೊಲೀಸ್ ಗುಪ್ತಚರ ದಳಗಳು ಮತ್ತು ಸೈಬರ್ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಿದೆ. ಇದಲ್ಲದೆ, ಪರೀಕ್ಷೆ ಅಥವಾ ಪ್ರಶ್ನೆ  ಪತ್ರಿಕೆಗಳಲ್ಲಿನ ಪೋಸ್ಟ್‌ಗಳನ್ನು ಟ್ರ್ಯಾಕ್ ಮಾಡಲು ಸರ್ಕಾರವು ಸಾಮಾಜಿಕ ಮಾಧ್ಯಮಗಳ  ಮೇಲೆ ಕಣ್ಣಿಡುತ್ತದೆ. ಈ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಂತ ಯಾವುದೇ ಅಹಿತಕರ ಘಟನೆ ಜರುಗದ ಹಾಗೆ ನೋಡಿಕೊಳ್ಳುವ ಗುರಿಯನ್ನು ಪರೀಕ್ಷಾ ಮಂಡಳಿ ಹೊಂದಿದೆ.

First published: