• Home
 • »
 • News
 • »
 • jobs
 • »
 • CBSE Announcement: ಇನ್ಮುಂದೆ 10+2 ಶಿಕ್ಷಣ ಬದಲು 5+3+3+4 ಕಲಿಕಾ ಮಾದರಿ: ಪೂರ್ತಿ ಮಾಹಿತಿ ಇಲ್ಲಿದೆ

CBSE Announcement: ಇನ್ಮುಂದೆ 10+2 ಶಿಕ್ಷಣ ಬದಲು 5+3+3+4 ಕಲಿಕಾ ಮಾದರಿ: ಪೂರ್ತಿ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹೊಸ 5+3+3+4 ವ್ಯವಸ್ಥೆಯು ಮಗುವಿನ ಅಡಿಪಾಯದಿಂದ (ಮೊದಲ) ದ್ವಿತೀಯ (ಕೊನೆಯ) ಹಂತದವರೆಗೆ ತಡೆರಹಿತ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ಈ ರಚನಾ ಮಾದರಿಯ ವರ್ಷಗಳು ಮುಖ್ಯ ಶಾಲಾ ಶಿಕ್ಷಣದ ಭಾಗವಾಗಿರುವುದರಿಂದ ಬದಲಾವಣೆಯು ಸಕಾರಾತ್ಮಕವಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮುಂದೆ ಓದಿ ...
 • Share this:

  ನಮಗೆಲ್ಲ ತಿಳಿದಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಜಾರಿಯಾಗಿದ್ದು ಅದರ ಪ್ರಕಾರ ಮುಂದಿನ ಶೈಕ್ಷಣಿಕ ಅಧಿವೇಶನದಿಂದ 10+2 ಶಿಕ್ಷಣ ಮಾದರಿಯ ಬದಲು ಹೊಸ 5+3+3+4 ಮಾದರಿಗೆ ಬದಲಾಯಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಪ್ರಕಟಿಸಿದೆ. ಈ ಯೋಜನೆಯು ಮಕ್ಕಳ ಅರಿವಿನ ಬೆಳವಣಿಗೆಯ ವಿವಿಧ ಹಂತಗಳೊಂದಿಗೆ ಸಿಂಕ್ರೊನೈಸೇಶನ್  (Syncretization) ಹೊಂದಿದ್ದು ಅಂತಾರಾಷ್ಟ್ರೀಯ ಪ್ರವೃತ್ತಿಗಳಿಗೆ ಬದ್ಧವಾಗಿದೆ ಎನ್ನಲಾಗಿದೆ. "ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಗುರಿಗಳ ಪ್ರಕಾರ, ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಜೀವಮಾನದ ಕಲಿಕೆಗೆ ಅವಕಾಶಗಳನ್ನು ಉತ್ತೇಜಿಸಬೇಕು ಮತ್ತು NEP ಮೂಲಭೂತವಾಗಿ ಈ ಜಾಗತಿಕ ಶಿಕ್ಷಣ ಗುರಿಯೊಂದಿಗೆ ಹೊಂದಿಕೊಂಡಿದೆ" ಎಂದು VIBGYOR ಶಾಲೆಗಳ ಸಮೂಹದ ನಿರ್ದೇಶಕಿ (ಶೈಕ್ಷಣಿಕರು, ಗುಣಮಟ್ಟದ ವಿಶ್ಲೇಷಣೆ ಮತ್ತು ತರಬೇತಿಗಳು) ಅನ್ನಿ ಡಯಾಸ್ ಹೇಳುತ್ತಾರೆ.


  ಹೊಸ ಮಾದರಿ


  ಈ ಹೊಸ 5+3+3+4 ವ್ಯವಸ್ಥೆಯು ಮಗುವಿನ ಅಡಿಪಾಯದಿಂದ (ಮೊದಲ) ದ್ವಿತೀಯ (ಕೊನೆಯ) ಹಂತದವರೆಗೆ ತಡೆರಹಿತ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ಈ ರಚನಾ ಮಾದರಿಯ ವರ್ಷಗಳು ಮುಖ್ಯ ಶಾಲಾ ಶಿಕ್ಷಣದ ಭಾಗವಾಗಿರುವುದರಿಂದ ಬದಲಾವಣೆಯು ಸಕಾರಾತ್ಮಕವಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. "ಇಡೀ ಶಿಕ್ಷಣ ವ್ಯವಸ್ಥೆಯು ಸಾಮರ್ಥ್ಯ ಆಧಾರಿತ ಕಲಿಕೆಗೆ ಬದಲಾಗುತ್ತಿರುವ ಕಾರಣ, CBSE ಯ ಈ ನಿರ್ಧಾರವು ಮುಂದೆ ಮೌಖಿಕ ಕಲಿಕೆಗೆ ಕಡಿವಾಣ ಹಾಕುತ್ತದೆ ಹಾಗೂ ಕಲಿಕೆಯು ಇನ್ನಷ್ಟು ವಾಸ್ತವಿಕ, ಸಮಗ್ರ ಮತ್ತು ಅನುಭವವನ್ನು ಪಡೆಯುತ್ತದೆ ”ಎಂದು ಮಹಾರಾಷ್ಟ್ರದ ಭಾಯಂದರ್‌ನಲ್ಲಿರುವ ಆರ್‌ಬಿಕೆ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರಾದ ಶೀತಲ ಪ್ರಭು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.


  latest updates on cbse and upmsp exams 2023
  ಸಾಂದರ್ಭಿಕ ಚಿತ್ರ


  ಅಳವಡಿಕೆಯಾಗಿರುವ ಅಂಶಗಳು


  ಈ ಹೊಸ ನೀತಿ ತರಬೇಕೆಂಬ ನಿರ್ಧಾರವು, ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳನ್ನು ಗಣನೆಗೆ ತೆಗೆದುಕೊಂಡಿದ್ದು ಮೂಲಭೂತ ಸಾಕ್ಷರತೆ ಮತ್ತು ಬಹುಶಿಸ್ತೀಯ, ವೃತ್ತಿಪರ ಮತ್ತು ವಿಮರ್ಶಾತ್ಮಕ-ಚಿಂತನಾ ಕೌಶಲ್ಯಗಳನ್ನು ಒದಗಿಸಲು ಅವಕಾಶವನ್ನೂ ಸೃಷ್ಟಿಸುವತ್ತ ಗಮನಹರಿಸಿದೆ. ಶಿವ ನಾಡರ್ ಶಾಲೆಯ ಶಿಕ್ಷಣ ನಿರ್ದೇಶಕ ಶಶಿ ಬ್ಯಾನರ್ಜಿ ಅವರು, “ಈ ನಿರ್ಧಾರವು ಸಮಗ್ರ ಕಲಿಕೆಯತ್ತ ಕ್ರಮೇಣ ಪ್ರಗತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇದನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಅದು ಕಲಿಕೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಅಡಿಪಾಯದ ಕೌಶಲ್ಯಗಳೊಂದಿಗೆ ಬೆಳೆಯಲು ಅವಕಾಶವನ್ನು ಒದಗಿಸುವುದು ಬಲು ಮುಖ್ಯ" ಎಂದು ಅವರು ಹೇಳುತ್ತಾರೆ.


  ಎಷ್ಟು ಪ್ರಯೋಜನ?


  ಈ ಹಿಂದೆ 10+2 ವ್ಯವಸ್ಥೆಯಲ್ಲಿ ಪರಿಗಣಿಸದೆ ಇದ್ದ ಪೂರ್ವ ಪ್ರಾಥಮಿಕ ವರ್ಷಗಳನ್ನು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸಿರುವುದು ದೊಡ್ಡ ಪ್ರಯೋಜನವಾಗಿದೆ. NEP ಅಳವಡಿಕೆಯ ಮೂಲಕ ಪರಿಣಾಮಕಾರಿತ್ವದ ಕಲಿಕೆಯು ಹೊರಬರಲಿದೆ. ಇದು ಕಲಿಕೆಯನ್ನು ಹೆಚ್ಚು ಪ್ರಾಯೋಗಿಕ ಮತ್ತು ಪ್ರಾಜೆಕ್ಟ್ ಆಧಾರಿತವಾಗಿಸುತ್ತದೆ. “ಇದು ಭಾರತದಲ್ಲಿನ ಎಲ್ಲಾ ಹಂತದ ಶಾಲಾ ಶಿಕ್ಷಣಕ್ಕೆ ಒಂದೇ ನಿಯಂತ್ರಣವನ್ನು ಪ್ರೋತ್ಸಾಹಿಸುತ್ತದೆ. ಗ್ರೇಡಿಂಗ್ ವ್ಯವಸ್ಥೆಯು ಕಲಿಯುವವರಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಖಚಿತಪಡಿಸುತ್ತದೆ. ಉತ್ತಮ ಮಾನದಂಡದೊಂದಿಗೆ, ಪಠ್ಯಕ್ರಮ ಮತ್ತು ಮೌಲ್ಯಮಾಪನ ಪರಿಕರಗಳು ಹೆಚ್ಚು ಪರಿಣಾಮಕಾರಿ ಕಲಿಕೆಯ ಔಟ್‌ಪುಟ್ ಅನ್ನು ಖಚಿತಪಡಿಸುತ್ತದೆ, ” ಎಂದು ಡಯಾಸ್ ವಿವರಿಸುತ್ತಾರೆ.


  wrong information in cbse school textbooks


  ಮುಂದುವರೆಯುತ್ತ ಅವರು, "ಇದರಲ್ಲಿರುವ ದೀರ್ಘವಾದ ಅಡಿಪಾಯದ ಹಂತವು ಪೂರ್ವಸಿದ್ಧತಾ ಹಂತವನ್ನು ಪ್ರವೇಶಿಸುವ ಮೊದಲು ಮಕ್ಕಳ ಭಾಷೆ, ಸಂವಹನ, ಸಂಖ್ಯಾಶಾಸ್ತ್ರ ಮತ್ತು ಸಾಮಾಜಿಕ ಕೌಶಲ್ಯಗಳು ಬಲವಾಗಿರುವಂತೆ ಖಚಿತಪಡಿಸುತ್ತದೆ, ಮಧ್ಯಮ ಹಂತವು ಅನುಭವದ ಕಲಿಕೆಯ ಮೇಲೆ ಕೇಂದ್ರೀಕರಿಸುತ್ತದೆ, ತದನಂತರ ಅದು ಕೊನೆಯ ಹಂತಕ್ಕೆ-ಸೆಕೆಂಡರಿ ಹಂತಕ್ಕೆ ಸಮರ್ಪಕವಾಗಿ ಹೋಗಲು ಕಾರಣವಾಗುತ್ತದೆ. ಇಲ್ಲಿ, ಬಹುಶಿಸ್ತೀಯ ಶಿಕ್ಷಣದ ಮೇಲಿನ ಗಮನವು ವಿದ್ಯಾರ್ಥಿಗಳನ್ನು ಆಲೋಚನೆ ಹಾಗೂ ಚಿಂತನೆ ಮಾಡುವಂತೆ ಉತ್ತೇಜಿಸುತ್ತದೆ ಮತ್ತು ಇದು ಅವರನ್ನು ಜಗತ್ತಿಗಾಗಿ ಸಕಲ ರೀತಿಯಿಂದ ಸಿದ್ಧಗೊಳಿಸುತ್ತದೆ" ಎಂದು ಡಯಾಸ್ ಗಮನಸೆಳೆಯುತ್ತಾರೆ.


  ಇದನ್ನೂ ಓದಿ: Career Guidance after 10th: SSLC ಬಳಿಕ ವೃತ್ತಿ ಆಯ್ಕೆ ಮಾಡುವಾಗ ಈ 5 ಅಂಶಗಳನ್ನು ಮರೆಯಬೇಡಿ


  ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆನ್ಲೈನ್ ನಲ್ಲಿ ತರಬೇತಿ ಪಡೆದಿರುವ ಅನೇಕ ಮಕ್ಕಳೇ ಈಗ ಈ ನೀತಿಯಡಿಯಲ್ಲಿ ಪೂರ್ವಸಿದ್ಧತಾ ಹಂತಕ್ಕೆ ಮರಳಲಿದ್ದಾರೆ ಎಂದು ಬ್ಯಾನರ್ಜಿ ಹೇಳುತ್ತಾರೆ. "ಪ್ಲೇ-ವೇ ವಿಧಾನ ಮತ್ತು ಅನ್ವೇಷಣೆ ಮತ್ತು ವಿಚಾರಣೆ-ಆಧಾರಿತ ಕಲಿಕೆಯಿಂದ ಅಂಶಗಳನ್ನು ಇದರಲ್ಲಿ ಸೇರಿಸಲಾಗಿರುವುದರಿಂದ ಮಕ್ಕಳು ಮುಂದೆ ಹೆಚ್ಚು ಶೈಕ್ಷಣಿಕ ಮಧ್ಯಮ ಮತ್ತು ಮಾಧ್ಯಮಿಕ ಹಂತಗಳಿಗೆ ಹೋಗಲು ಸರಿಯಾದ ರೀತಿಯಲ್ಲಿ ಸಿದ್ಧರಾಗಲು ಇದು ಪ್ರಮುಖ ಪಾತ್ರವಹಿಸುತ್ತದೆ" ಎಂದು ಬ್ಯಾನರ್ಜಿ ಹೇಳುತ್ತಾರೆ.


  ಯಶಸ್ವಿಯಾಗುವುದು ಹೇಗೆ?


  ಈ ನೀತಿಯ ಅನುಸಾರ ಪ್ರಾಜೆಕ್ಟ್ ಆಧಾರಿತ ಕಲಿಕೆ, ಅಂತರಶಿಸ್ತೀಯ ಕಲಿಕೆ, ಅನುಭವದ ಕಲಿಕೆ ಮತ್ತು ಹೆಚ್ಚಿನವುಗಳೊಂದಿಗೆ ಮಲ್ಟಿಡಿಸಿಪ್ಲಿನರಿ ಕಲಿಕೆ ಮತ್ತು ವಿಚಾರಣೆಯ ಮನೋಭಾವವನ್ನು ಮಧ್ಯಮ ವರ್ಷಗಳಲ್ಲಿ ನಿರ್ವಹಿಸಲಾಗುತ್ತದೆ. ತದನಂತರದ ಶಿಕ್ಷಣದ ಹಿರಿಯ ವರ್ಷಗಳಲ್ಲಿ, ವಿದ್ಯಾರ್ಥಿಗಳಿಗೆ ಎರಡನೇ ಬೋರ್ಡ್ ಪರೀಕ್ಷೆಯನ್ನು ಹೊಂದುವ ಆಯ್ಕೆ ನೀಡಿರುವುದು ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಹಾಗಾಗಿ ಈ ನೀತಿಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಯಶಸ್ವಿಯಾಗಬೇಕಾದ್ದಲ್ಲಿ ಪ್ರತಿ ಅಭಿವೃದ್ಧಿ ಹಂತದ ಅಗತ್ಯತೆಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶಾಲೆಗಳು ತಮ್ಮ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

  Published by:Kavya V
  First published: