ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University) ನ್ಯಾಕ್ ತಂಡ ಭೇಟಿ ಹಿನ್ನಲೆ ಶಿಕ್ಷಕರೆಲ್ಲರಿಗೂ ಹೊಸ ಸೂಚನೆ ನೀಡಲಾಗಿದೆ. ನ್ಯಾಕ್ (NAAC) ತಂಡ ಭೇಟಿ ನೀಡುವ ಮುನ್ನ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಅದಕ್ಕೆ ಬೇಕಾದ ಎಲ್ಲಾರೀತಿಯ ದಾಖಲೆಗಳನ್ನು ನೀಡಬೇಕಾಗುತ್ತದೆ. ನ್ಯಾಕ್- ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ ಈ ಬಾರಿ ಬೆಂಗಳೂರು ವಿಶ್ವವಿದ್ಯಾಲಯದ ಸಿಬ್ಬಂದಿಗಳು ಕೆಲಸಕ್ಕೆ (Work) ತಕ್ಷಣ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಾರಣ ಸಧ್ಯದಲ್ಲೇ ನ್ಯಾಕ್ ವಿಸಿಟ್ ಮಾಡಲಿದೆ.
ಮೇ 17 ರಿಂದ ಮೇ 19 ರವರೆಗೆ ನ್ಯಾಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಯಲಿದೆ. ಆದ್ದರಿಂದ ಮೇ 13 ಮತ್ತು ಮೇ 14 ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರ ಆಗಿದ್ರೂ ಕೂಡ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ಕೊಟ್ಟ ವಿವಿ ಕುಲಸಚಿವರು ಎಲ್ಲಾ ಶಿಕ್ಷಕರಿಗೂ ಹಾಗೂ ಸಿಬ್ಬಂದಿಗಳಿಗೂ ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಮೇ 13 ಮತ್ತು ಮೇ 14ರಂದು ಕರ್ತವ್ಯದ ದಿನವೆಂದು ವಿವಿ ಪರಿಗಣನೆ ಮಾಡಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: CBSE 12th Results 2023: ಸಿಬಿಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟ; ಈ ಲಿಂಕ್ ಬಳಸಿ ಚೆಕ್ ಮಾಡಿ
ಅಂದು ತಪ್ಪದೆ ಕರ್ತವ್ಯಕ್ಕೆ ಹಾಜರಾಗಬೇಕು
ಸೂಚನೆ ಪ್ರಕಾರ ಈಗಾಗಲೇ ರಜೆ ಮಂಜೂರು ಮಾಡಿಕೊಂಡು ರಜೆಯ ಮೇಲೆ ತೆರಳಿರುವ ಸಿಬ್ಬಂದಿ ಸಹ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಲಾಗಿದೆ.
ಒಂದು ವೇಳೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ. ಇದರಿಂದಾಗಿ ಸಿಬ್ಬಂದಿಗಳು ಯಾವುದೇ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಬೇಕಾಗಿದೆ.
ನ್ಯಾಕ್ ಭೇಟಿ ಮುಕ್ತಾಯ ತನಕ ಸಿಬ್ಬಂದಿಗೆ ಯಾವುದೇ ರಜೆ ಇಲ್ಲ
ಈ ಅವಧಿಯಲ್ಲಿನ ರಜೆಯನ್ನು ಈ ವರ್ಷದ ಡಿಸೆಂಬರ್ 31ರೊಳಗೆ ಪಡೆದುಕೊಳ್ಳುವ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ನ್ಯಾಕ್ ತಂಡದ ಭೇಟಿ ಒಂದು ಮುಖ್ಯ ವಿಷಯವಾಗಿದ್ದು ಕಾಲೇಜುಗಡ ಗ್ರೇಡ್ ಇದರಿಂದಲೇ ನಿರ್ಣಯವಾಗಲಿದೆ.
ನ್ಯಾಕ್ ಹಿನ್ನೆಲೆ ಮಾಹಿತಿ
ರಾಷ್ರ್ಟೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು ಕಾಲೇಜುಗಳಿಗೆ ಹಲವಾರು ಮಾನದಂಡಗಳ ಮೇಲೆ ರೇಟಿಂಗ್ ನೀಡುವ ಸಂಸ್ಥೆಯಾಗಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಅನ್ನು 1994 ರಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(UGC) ಯ ಸ್ವಾಯತ್ತ ಸಂಸ್ಥೆಯಾಗಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳ (HEIs) ಕಾರ್ಯನಿರ್ವಹಣೆಯ ಅವಿಭಾಜ್ಯ ಅಂಗವಾಗಿ ಗುಣಮಟ್ಟದ ಭರವಸೆಯನ್ನು ಮಾಡುವಲ್ಲಿ ನ್ಯಾಕ್ ನ ಆದೇಶವು ಪ್ರಮುಖವಾಗಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) 19ನೇ ಜನವರಿ 2013 ದಿನಾಂಕದ ಗೆಜೆಟ್ ಅಧಿಸೂಚನೆಯ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEIs) ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಎಲ್ಲಾ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳು ನ್ಯಾಕ್ ತಂಡದಿಂದ ಮಾನ್ಯತೆಯನ್ನು ಪಡೆಯುತ್ತದೆ. ಪಡೆಯಲು ತುಂಬಾ ದಾಖಲೆಗಳನ್ನು ಜೋಡಿಸಿಕೊಳ್ಳುತ್ತದೆ.
ನ್ಯಾಕ್ ಮಾನ್ಯತೆ ಪಡೆಯಲು ಏನೆಲ್ಲಾ ಬೇಕು?
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ನ್ಯಾಕ್, ಮಾನ್ಯತೆಯ ಭಾಗವಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಪ್ರಮಾಣೀಕರಿಸುತ್ತದೆ.
ಉನ್ನತ ಶಿಕ್ಷಣ ಸಂಸ್ಥೆಯು ಪಠ್ಯಕ್ರಮ, ಅಧ್ಯಾಪಕರು, ಮೂಲಸೌಕರ್ಯ, ಸಂಶೋಧನೆ ಮತ್ತು ಇತರ ನಿಯತಾಂಕಗಳ ವಿಷಯದಲ್ಲಿ ಮೌಲ್ಯಮಾಪಕರು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆಯೇ ಎಂಬುದನ್ನು ನಿರ್ಧರಿಸಿ ಕಾಲೇಜುಗಳಿಗೆ ಗ್ರೇಡ್ ಗಳನ್ನು ನೀಡುತ್ತದೆ. ರೇಟಿಂಗ್‌ಗಳು A++ ನಿಂದ C ವರೆಗೆ ಇರುತ್ತದೆ. ನ್ಯಾಕ್ ಒಂದು ಸಂಸ್ಥೆಗೆ D ದರ್ಜೆಯನ್ನು ನೀಡಿದರೆ, ಅದು ಮಾನ್ಯತೆ ಪಡೆದಿಲ್ಲ ಎಂದರ್ಥ
ವರದಿ: ಶರಣು ಹಂಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ