• Home
  • »
  • News
  • »
  • jobs
  • »
  • Computer Programming: ಈ ಕೋರ್ಸ್​ ಮಾಡಿದರೆ ನೀವು ಲಕ್ಷಗಳ ಪ್ಯಾಕೇಜ್‌ ಇರುವ ಕೆಲಸ ಸೇರಬಹುದು!

Computer Programming: ಈ ಕೋರ್ಸ್​ ಮಾಡಿದರೆ ನೀವು ಲಕ್ಷಗಳ ಪ್ಯಾಕೇಜ್‌ ಇರುವ ಕೆಲಸ ಸೇರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾರ್ವರ್ಡ್ ವಿಶ್ವವಿದ್ಯಾಲಯವು ಆನ್‌ಲೈನ್‌ನಲ್ಲಿ ನೀಡುವ ಹತ್ತು ಉಚಿತ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೌಶಲ್ಯ ಕೋರ್ಸ್‌ಗಳ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ. ಈ ಕೋರ್ಸ್​ ನಿವೂ ಮಾಡಿ.

  • News18 Kannada
  • Last Updated :
  • Karnataka, India
  • Share this:

ಕಂಪ್ಯೂಟರ್ ಪ್ರೋಗ್ರಾಮಿಂಗ್ (Computer Programming) ಇದೊಂದು ಬಹುಬೇಡಿಕೆಯ ಕೋರ್ಸ್ ಆಗಿದ್ದು ನೀವಿದನ್ನು ಮಾಡಬಹುದು.  ಪ್ರಸ್ತುತಸ್ಪರ್ಧಾತ್ಮಕ ಜಗತ್ತಿನಲ್ಲಿ ಲಕ್ಷಗಳ ಪ್ಯಾಕೇಜ್‌ನೊಂದಿಗೆ ಒಂದು ಕೆಲಸಗಳಿಸಲು (Job) ನೀವು ಕೆಲವು ಸುಧಾರಿತ ಕೌಶಲ್ಯಗಳನ್ನು ಕಲಿಯಬೇಕು. ವಿಶೇಷವಾಗಿ ತಂತ್ರಜ್ಞಾನ (Technology) ಕ್ಷೇತ್ರದಲ್ಲಿ ವೃತ್ತಿಜೀವನದ ಯೋಜನೆಯನ್ನು ಮಾಡುವವರು ಕೆಲವು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೌಶಲ್ಯಗಳು ಮತ್ತು ಕೋಡಿಂಗ್ ಕೌಶಲ್ಯಗಳನ್ನು (Skills) ಕಲಿಯಬೇಕು. ಅಂತಹ ಜನರಿಗಾಗಿ, ಟ್ವಿಟರ್ ಬಳಕೆದಾರರು ಹಸನ್ ಟೂರ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯವು (Univercity) ಆನ್‌ಲೈನ್‌ನಲ್ಲಿ ನೀಡುವ ಹತ್ತು ಉಚಿತ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೌಶಲ್ಯ ಕೋರ್ಸ್‌ಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.


Super Mario Bros, Pokemon, Angry Birds ನಂತಹ ಯಶಸ್ವಿ ಗೇಮ್​ ರಚಿಸಲು, ಹಾಗೆಯೇ 2D ಮತ್ತು 3D ಸಂವಾದಾತ್ಮಕ ಆಟಗಳ ಅಭಿವೃದ್ಧಿಯ ಸಂಪೂರ್ಣ ತಿಳುವಳಿಕೆಯನ್ನು ಪಡೆಯಲು ಈ ಕೋರ್ಸ್ ಉಪಯುಕ್ತ. ವಾರಕ್ಕೆ 6-9 ಗಂಟೆಗಳನ್ನು ನಿಗದಿಪಡಿಸಿದರೆ, ನೀವು ಇದನ್ನು ಮೂರು ತಿಂಗಳಲ್ಲಿ ಕರಗತ ಮಾಡಿಕೊಳ್ಳಬಹುದು.


 ಪ್ರೋಗ್ರಾಮಿಂಗ್‌ಗೆ ಪರಿಚಯ
ಇದು ಮೂರು ವಾರಗಳ ಅವಧಿಯ ಆನ್‌ಲೈನ್ ಕೋರ್ಸ್ ಆಗಿದೆ. ಈ ಕೋರ್ಸ್ ವಿದ್ಯಾರ್ಥಿಗೆ ಪ್ರೋಗ್ರಾಮಿಂಗ್‌ನ ಸೂಕ್ಷ್ಮ ಅಂಶಗಳನ್ನು ಪರಿಚಯಿಸುತ್ತದೆ ಮತ್ತು ಕೋಡಿಂಗ್ ಅನ್ನು ಯಶಸ್ವಿಯಾಗಿ ಮಾಡಲು ಸಹಾಯ ಮಾಡುತ್ತದೆ, ಅದಕ್ಕಾಗಿ ಮಾರ್ಗದರ್ಶನ ನೀಡುತ್ತದೆ.
ಪೈಥಾನ್ ಮತ್ತು ಜಾವಾ ಸ್ಕ್ರಿಪ್ಟ್‌ನೊಂದಿಗೆ ವೆಬ್ ಪ್ರೋಗ್ರಾಮಿಂಗ್ ಕೋರ್ಸ್​ ಮಾಡಬಹುದಾಗಿದೆ.


ಇದನ್ನೂ ಓದಿ: Scholarship: ಈ ಸ್ಕಾಲರ್​ ಶಿಪ್​ ನಿಮ್ಮದಾಗಬೇಕೆ? ಹಾಗಾದರೆ ಡಿಸೆಂಬರ್​ 13ರ ಒಳಗೆ ಅಪ್ಲೈ ಮಾಡಿ


ಈ ಕೋರ್ಸ್‌ನೊಂದಿಗೆ, ಜಾಂಗೊ, ರಿಯಾಕ್ಟ್, ಬೂಟ್‌ಸ್ಟ್ರ್ಯಾಪ್, ಜಾವಾ ಸ್ಕ್ರಿಪ್ಟ್, ಪೈಥಾನ್ ಮತ್ತು SQL ನಂತಹ ಫ್ರೇಮ್‌ವರ್ಕ್‌ಗಳನ್ನು ಬಳಸಿಕೊಂಡು ವೆಬ್ ಅಪ್ಲಿಕೇಶನ್‌ಗಳನ್ನು ಹೇಗೆ ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸುವುದು ಎಂಬುದರ ಕುರಿತು ವಿದ್ಯಾರ್ಥಿಗಳು ತಿಳುವಳಿಕೆಯನ್ನು ಪಡೆಯುತ್ತಾರೆ. ಈ ಜ್ಞಾನವು ಅವುಗಳನ್ನು ಕಾರ್ಯಗತಗೊಳಿಸಲು ಸಹ ಉಪಯುಕ್ತವಾಗಿದೆ. ನೀವು ವಾರಕ್ಕೆ 6 ರಿಂದ 9 ಗಂಟೆಗಳನ್ನು ನಿಗದಿಪಡಿಸಿದರೆ ಈ ಕೋರ್ಸ್ ಅನ್ನು 12 ವಾರಗಳಲ್ಲಿ ಕಲಿಯಬಹುದು.


ಸಾಂಕೇತಿಕ ಚಿತ್ರ


ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬಹುದು
ಪ್ರತಿದಿನ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವವರಿಗೆ ಈ ಕೋರ್ಸ್ ಉಪಯುಕ್ತವಾಗುತ್ತದೆ. ಆದರೆ ಕೋಡಿಂಗ್‌ನಲ್ಲಿ ಸಮಸ್ಯೆ ಉಂಟಾದಾಗ ಅದನ್ನು ಹೇಗೆ ಪರಿಹರಿಸಬೇಕೆಂದು ಸಂಪೂರ್ಣವಾಗಿ ತಿಳಿದಿಲ್ಲ ಎಂದಾದರೆ ಈ ಕೋರ್ಸ್ಅನ್ನು  6 ವಾರಗಳ ಕಾಲ ಮಾಡಿ


ಪೈಥಾನ್‌ನೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಪರಿಚಯ
ಮುಂದಿನ ದಿನಗಳಲ್ಲಿ ಎಲ್ಲಾ ತಂತ್ರಜ್ಞಾನಗಳು ಕೃತಕ ಬುದ್ಧಿಮತ್ತೆಯೊಂದಿಗೆ ಕಾರ್ಯನಿರ್ವಹಿಸಲಿವೆ. ಈ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಯಂತ್ರ ಕಲಿಕೆಯಲ್ಲಿ ತಿಳುವಳಿಕೆಯನ್ನು ಪಡೆಯಬಹುದು. 7 ವಾರದ ಈ ಕಾರ್ಯಕ್ರಮದಲ್ಲಿ ನೀವು ಪೈಥಾನ್ ಸಹಾಯದಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಕಲಿಯಬಹುದು.


ಈ ಕೋರ್ಸ್‌ನಲ್ಲಿ ನೀವು ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ಪೈಥಾನ್ ಬಗ್ಗೆ ಎಲ್ಲವನ್ನೂ ಕಲಿಯಬಹುದು. ಪೈಥಾನ್ ಪ್ರೋಗ್ರಾಮಿಂಗ್ ಕಲಿತರೆ  ಕೋಡ್ ಅನ್ನು ಹೇಗೆ ಓದುವುದು ಮತ್ತು ಬರೆಯುವುದು ಎಂದು ತಿಳಿಯುತ್ತೀರಿ. ಕೋಡ್ ಅನ್ನು ಪರೀಕ್ಷಿಸುವುದು ಮತ್ತು ಡೀಬಗ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬಹುದು.


ವ್ಯಾಪಾರ ವೃತ್ತಿಪರರಿಗೆ ಕಂಪ್ಯೂಟರ್ ಸೈನ್ಸ್
ಇದು ಸಾಫ್ಟ್‌ವೇರ್ ವಿದ್ಯಾರ್ಥಿಗಳು ಮತ್ತು ವ್ಯಾಪಾರದಲ್ಲಿ ಉತ್ತಮ ಸಾಧನೆ ಮಾಡಲು ಬಯಸುವ ಇತರ ವಿದ್ಯಾರ್ಥಿಗಳಿಗೆ ಸರಿ ಹೊಂದುವ ವೃತ್ತಿಪರ ಕೋರ್ಸ್ ಆಗಿದೆ. ಆರು ವಾರಗಳಲ್ಲಿ ಈ ಕೋರ್ಸ್‌ನಲ್ಲಿ ಕಂಪ್ಯೂಟೇಶನಲ್ ಥಿಂಕಿಂಗ್, ಪ್ರೋಗ್ರಾಮಿಂಗ್ ಭಾಷೆಗಳು, ಇಂಟರ್ನೆಟ್ ತಂತ್ರಜ್ಞಾನಗಳನ್ನು ಕಲಿಯಬಹುದು.


ಡೇಟಾ ಸೈನ್ಸ್‌ಗೆ ಪರಿಚಯ: ಈ ಕೋರ್ಸ್‌ನೊಂದಿಗೆ ನೀವು ಪೈಥಾನ್ ಜ್ಞಾನದೊಂದಿಗೆ ಡೇಟಾವನ್ನು ವಿಶ್ಲೇಷಿಸಲು ಮತ್ತು ಬಳಸಲು ಕಲಿಯಬಹುದು.

First published: