ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯನ್ನು ಗಮನಲ್ಲಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ರೂ 1.12 ಲಕ್ಷ ಕೋಟಿಗಳನ್ನು ಮೀಸಲಿಟ್ಟಿದ್ದು ಇದು 2022-23 ರಲ್ಲಿ ನಿಗದಿಪಡಿಸಿದಕ್ಕಿಂತ 8.2% ದಷ್ಟು ಹೆಚ್ಚಳವಾಗಿದೆ. ಕೇಂದ್ರ ಸರಕಾರವು ಶಿಕ್ಷಕರ ತರಬೇತಿಯನ್ನು ಪುನರ್ ರೂಪಿಸುತ್ತಿದ್ದು ಶಿಕ್ಷಣಕ್ಕಾಗಿ (Education) ಹಾಗೂ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಉತೃಷ್ಟ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿದೆ. ಕೋವಿಡ್-19 ಸಂದರ್ಭದ ಸಮಯದಲ್ಲಿ ಉಂಟಾದ ಕಲಿಕಾ ನಷ್ಟವನ್ನು ಸರಿದೂಗಿಸಲು ಮಕ್ಕಳಿಗೆ (Students) ಹಾಗೂ ಯುವಜನರಿಗೆ ಸಹಕಾರಿಯಾಗುವಂತೆ ಬೇರೆ ಬೇರೆ ಕಲಿಕಾ ವಿಷಯಗಳಾದ್ಯಂತ ಗುಣಮಟ್ಟದ ಪುಸ್ತಕಗಳನ್ನು (Book) ಲಭ್ಯವಾಗುವಂತೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು (Digital Library) ಸ್ಥಾಪಿಸಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ಕೇಂದ್ರ ಬಜೆಟ್ ಶಿಕ್ಷಣಕ್ಕಾಗಿ ₹ 1.12 ಲಕ್ಷ ಕೋಟಿಗಳನ್ನು ಮೀಸಲಿಟ್ಟಿದೆ - ಇದು 2022-23 ರಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತವಾಗಿದೆ ಮತ್ತು ಸುಮಾರು 8.2% ಹೆಚ್ಚಳವಾಗಿದೆ. 2022-23ರ ಬಜೆಟ್ ಅಂದಾಜಿನಲ್ಲಿ ಈ ವಲಯಕ್ಕೆ ರೂ 1,04,277.72 ಕೋಟಿ ಮೀಸಲಿಟ್ಟಿದ್ದರೆ, ಪರಿಷ್ಕೃತ ಅಂದಾಜು ರೂ 99,881.13 ಕೋಟಿಗೆ ಮೊಟಕುಗೊಳಿಸಿದೆ. ಈ ವರ್ಷದ ಹಂಚಿಕೆಯು ಪರಿಷ್ಕೃತ ಅಂದಾಜಿನಿಂದ 13% ಹೆಚ್ಚಳವಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡುತ್ತ, ಬಜೆಟ್ ಎಲ್ಲಾ ಕ್ಷೇತ್ರಕ್ಕೂ ಅನುಕೂಲಕರವಾದ ಜನಕೇಂದ್ರಿತ ಮತ್ತು ಬೆಳವಣಿಗೆ-ಉತ್ತೇಜಕ ಎಂದು ಶ್ಲಾಘಿಸಿದರು ಮತ್ತು ಸಚಿವಾಲಯಕ್ಕೆ ಇದುವರೆಗೆ ಅತಿ ಹೆಚ್ಚು ಹಂಚಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಸಂಶೋಧನೆ ಮತ್ತು ಅಭಿವೃದ್ಧಿ, ಡಿಜಿಟಲ್ ಮೂಲಸೌಕರ್ಯ, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಮೂಲಕ, ಬಜೆಟ್ ಭಾರತಕ್ಕೆ ನಿಖರವಾದ ನೀಲನಕ್ಷೆ ಕೊಟ್ಟಿದೆ ಮತ್ತು ಭಾರತವನ್ನು ತಂತ್ರಜ್ಞಾನ-ಚಾಲಿತ ಜ್ಞಾನವಾಗಿ ಪರಿವರ್ತಿಸಲು ಭದ್ರ ಬುನಾದಿ ಹಾಕುತ್ತದೆ ಎಂದಿದ್ದಾರೆ.
ಡಿಜಿಟಲ್ ಗ್ರಂಥಾಲಯ
ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮಕ್ಕಳು ಹಾಗೂ ಹದಿಹರೆಯವರ ಕಲಿಕೆಗೆ ನೆರವಾಗುವಂತೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಭೌಗೋಳಿಕತೆ, ಭಾಷೆಗಳು, ಪ್ರಕಾರಗಳಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 2020 ರಲ್ಲಿ ದೇಶವನ್ನು ಅಪ್ಪಳಿಸಿದ ಕೋವಿಡ್ -19 ಸಾಂಕ್ರಾಮಿಕ ರೋಗವು ಶಾಲೆಗಳನ್ನು ಮುಚ್ಚಿದ್ದರಿಂದ ಮೂಲಭೂತ ಶಿಕ್ಷಣದ ಮೇಲೆ ಹಾನಿಯನ್ನುಂಟುಮಾಡಿತು.
ಬುಧವಾರ ಬಿಡುಗಡೆಯಾದ ವಾರ್ಷಿಕ ಶಿಕ್ಷಣ ಸ್ಥಿತಿಯ ವರದಿಯ ಪ್ರಕಾರ, ಮಕ್ಕಳ ಮೂಲಭೂತ ಓದುವ ಸಾಮರ್ಥ್ಯವು 2012 ಕ್ಕಿಂತ ಹಿಂದಿನ ಮಟ್ಟಕ್ಕೆ ಇಳಿದಿದೆ. ಇದು ಹೆಚ್ಚಿನ ರಾಜ್ಯಗಳಲ್ಲಿ ಬಹಿರಂಗಗೊಂಡಿದೆ.
ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ
ಸರ್ಕಾರ ತನ್ನ ಕಳೆದ ಬಜೆಟ್‌ನಲ್ಲಿ ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ವಿಶ್ವವಿದ್ಯಾನಿಲಯವು ಈ ವರ್ಷ ಜೂನ್-ಜುಲೈನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ಒದಗಿಸಲು ಪಂಚಾಯತ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲು ರಾಜ್ಯಗಳನ್ನು ಒತ್ತಾಯಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಓದುವ ಸಂಸ್ಕೃತಿಯ ನಿರ್ಮಾಣ
ಓದುವ ಸಂಸ್ಕೃತಿಯನ್ನು ನಿರ್ಮಿಸಲು ಈ ಭೌತಿಕ ಗ್ರಂಥಾಲಯಗಳಿಗೆ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲು ನ್ಯಾಷನಲ್ ಬುಕ್ ಟ್ರಸ್ಟ್, ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಮತ್ತು ಇತರ ಮೂಲಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಕಲಿಕೆಯ ನಷ್ಟವನ್ನು ಭೌತಿಕ ಗ್ರಂಥಾಲಯಗಳು ತುಂಬಲಿವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಸಾಕ್ಷರತೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್‌ಜಿಒಗಳೊಂದಿಗೆ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತೆಯನ್ನು ಬೆಳೆಸಲು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿರುವ ಸಚಿವರು ಈ ಗ್ರಂಥಾಲಯಗಳಿಗೆ ವಯಸ್ಸಿಗೆ ಸೂಕ್ತವಾದ ಓದುವ ಸಾಮಗ್ರಿಗಳನ್ನು ಒದಗಿಸಲು ಹಣಕಾಸು ವಲಯದ ನಿಯಂತ್ರಕರು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದ್ದಾರೆ.
ವಿನೂತನ ಶಿಕ್ಷಣ, ಪಠ್ಯಕ್ರಮ ವಹಿವಾಟು, ನಿರಂತರ ವೃತ್ತಿಪರ ಅಭಿವೃದ್ಧಿ ಇತ್ಯಾದಿಗಳ ಮೂಲಕ ಶಿಕ್ಷಕರ ತರಬೇತಿಯನ್ನು ಪುನರ್ ರೂಪಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಈ ಉದ್ದೇಶಕ್ಕಾಗಿ ಉತ್ತಮ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
5G ಸೇವೆಗಳ ಬಳಕೆ
5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 100 ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಸೀತಾರಾಮನ್ ಘೋಷಿಸಿದ್ದಾರೆ.
ಹೊಸ ಶ್ರೇಣಿಯ ಅವಕಾಶಗಳು, ವ್ಯವಹಾರ ಮಾದರಿಗಳು ಮತ್ತು ಉದ್ಯೋಗದ ಸಾಮರ್ಥ್ಯವನ್ನು ಅರಿತುಕೊಳ್ಳಲು, ಲ್ಯಾಬ್‌ಗಳು ಸ್ಮಾರ್ಟ್ ತರಗತಿಗಳು, ನಿಖರವಾದ ಕೃಷಿ, ಸಾರಿಗೆ ವ್ಯವಸ್ಥೆಗಳು ಮತ್ತು ಆರೋಗ್ಯ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತವೆ ಎಂದು ಅವರು ತಿಳಿಸಿದ್ದಾರೆ. ಒಟ್ಟು ವೆಚ್ಚದಲ್ಲಿ ಶಾಲೆಗಳಿಗೆ ರೂ 68,804.85 ಕೋಟಿ ಹಾಗೂ ಉನ್ನತ ಶಿಕ್ಷಣಕ್ಕೆ ರೂ 44,094.62 ಕೋಟಿ ಮೀಸಲಿಡಲಾಗಿದೆ.
ಶಾಲಾ ಬಜೆಟ್ 2022-23ರಲ್ಲಿ ರೂ 63,449 ಕೋಟಿಯಿಂದ (ಬಜೆಟ್ ಅಂದಾಜು) 8% ರಷ್ಟು ಏರಿಕೆ ಕಂಡಿದ್ದರೆ, ಉನ್ನತ ಶಿಕ್ಷಣಕ್ಕೆ 2022-23ರಲ್ಲಿ ರೂ 40,828 ಕೋಟಿಯಿಂದ (ಬಜೆಟ್ ಅಂದಾಜು) 7.9% ಹೆಚ್ಚಳವಾಗಿದೆ.
ಮಧ್ಯಾಹ್ನದ ಊಟದ ಯೋಜನೆ ಪಿಎಂ ಪೋಶನ್
2022-23ರಲ್ಲಿ ಶಾಲಾ ಮತ್ತು ಉನ್ನತ ಶಿಕ್ಷಣ ಇಲಾಖೆಗಳಿಗೆ ಕ್ರಮವಾಗಿ ರೂ 59,052.78 ಕೋಟಿ ಮತ್ತು ರೂ 40,828.35 ರಂತೆ ಹಂಚಿಕೆಯನ್ನು ನಿಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಸಾರ್ವತ್ರಿಕ ಶಿಕ್ಷಣದ ಪ್ರಮುಖ ಕಾರ್ಯಕ್ರಮವಾದ ಸಮಗ್ರ ಶಿಕ್ಷಾ ಅಭಿಯಾನದ ವೆಚ್ಚವು ಕಳೆದ ವರ್ಷದಂತೆಯೇ ಹಾಗೆಯೇ ಸ್ಥಿರವಾಗಿದೆ (ರೂ 37,453.46 ಕೋಟಿ).
ಮಧ್ಯಾಹ್ನದ ಊಟದ ಯೋಜನೆಗೆ ಪಿಎಂ ಪೋಶನ್ ಎಂದು ಮರುಹೆಸರಿಸಲಾಗಿದ್ದು 2022-23ರಲ್ಲಿ ರೂ 10,233 ಕೋಟಿಯಿಂದ 2023-24 ರಲ್ಲಿ ರೂ 11,600 ಕೋಟಿಗೆ ಹೆಚ್ಚಳವಾಗಿದೆ. ಆದರೆ, ಪರಿಷ್ಕೃತ ಬಜೆಟ್‌ನಲ್ಲಿ ಯೋಜನೆಗೆ ಮೀಸಲಿಟ್ಟ ಮೊತ್ತವನ್ನು ರೂ12,800ಕ್ಕೆ ಹೆಚ್ಚಿಸಲಾಗಿದೆ.
ಸರ್ಕಾರದ ಪ್ರಧಾನ ಮಂತ್ರಿ ಶಾಲೆಗಳಿಗಾಗಿ ರೈಸಿಂಗ್ ಇಂಡಿಯಾ (PM-SHRI) ಯೋಜನೆಗೆ ಬಜೆಟ್ ರೂ 4,000 ಕೋಟಿಗಳನ್ನು ಮೀಸಲಿಟ್ಟಿದೆ, ಇದರ ಅಡಿಯಲ್ಲಿ ದೇಶದಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ವರದಿಯಾಗಿದೆ.
ಉನ್ನತ ಶಿಕ್ಷಣದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಅನುದಾನ ಹಂಚಿಕೆ
ಉನ್ನತ ಶಿಕ್ಷಣದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಅನುದಾನ ಹಂಚಿಕೆ ಕಳೆದ ವರ್ಷ ರೂ 11,034.32 ಕೋಟಿ ಪರಿಷ್ಕೃತ ಅಂದಾಜಿನಿಂದ ರೂ 11,528.90 ಕೋಟಿಗೆ ಏರಿಕೆಯಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಆರ್ಥಿಕ ಬೆಂಬಲವು ರೂ 316.5 ಕೋಟಿಗಳಷ್ಟು ಹೆಚ್ಚಿದ್ದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳಲ್ಲಿ (ಐಐಎಂ) ಸುಮಾರು ರೂ 300 ಕೋಟಿಗಳಷ್ಟು ಕಡಿಮೆಯಾಗಿದೆ.
ಕಲಿಕಾ ನಷ್ಟವನ್ನು ಸರಿದೂಗಿಸಲು ಕ್ರಮಗಳು
2022-23 ರಲ್ಲಿ ರೂ 218.66 ಕೋಟಿಗೆ ಹೋಲಿಸಿದರೆ 2023-24 ರಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ರೂ 210.61 ವೆಚ್ಚವನ್ನು ನಿಗದಿಪಡಿಸಲಾಗಿದೆ. 2021-22ರಲ್ಲಿ ಪರಿಷ್ಕೃತ ಹಂಚಿಕೆ ರೂ185.24 ಕೋಟಿಗೆ ಇಳಿಕೆಯಾಗಿದೆ.
ಬಜೆಟ್ ಡಾಕ್ಯುಮೆಂಟ್ ಉನ್ನತ ಶಿಕ್ಷಣ ನಿಧಿ ಸಂಸ್ಥೆಗೆ (HEFA) ಹಂಚಿಕೆಯನ್ನು ಉಲ್ಲೇಖಿಸಿಲ್ಲ. HEFA ಮೂಲಸೌಕರ್ಯ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 10 ವರ್ಷಗಳ ಸಾಲಗಳನ್ನು ನೀಡುತ್ತದೆ. ಏಜೆನ್ಸಿಯ ಬಜೆಟ್ ಅನ್ನು 2021-22 ರಲ್ಲಿ ₹1 ಕೋಟಿಯಿಂದ 2022-23 ರಲ್ಲಿ ₹1 ಲಕ್ಷಕ್ಕೆ ಇಳಿಸಲಾಗಿದೆ.
ಉನ್ನತ ಶಿಕ್ಷಣದ ಬಜೆಟ್‌ನಲ್ಲಿನ ಹೆಚ್ಚಳ
ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಅಧ್ಯಕ್ಷ ಎಂ ಜಗದೇಶ್ ಕುಮಾರ್ ತಿಳಿಸಿರುವಂತೆ, ಉನ್ನತ ಶಿಕ್ಷಣದ ಬಜೆಟ್‌ನಲ್ಲಿನ ಹೆಚ್ಚಳವು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕಲಿಕೆಯ ನಷ್ಟವನ್ನು ನಿವಾರಿಸಲು ಮತ್ತು ಹೆಚ್ಚಿನ ಲಭ್ಯತೆ ಮತ್ತು ಇಕ್ವಿಟಿಗಾಗಿ ಹೆಚ್ಚಿನ ಡಿಜಿಟಲ್ ತಂತ್ರಜ್ಞಾನವನ್ನು ಸುಧಾರಿಸಲು ನೆರವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿರುವ ಉಪಕ್ರಮಗಳನ್ನು ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.
ದೆಹಲಿಯ ಮೌಂಟ್ ಅಬು ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಜ್ಯೋತಿ ಅರೋರಾ, ಬಜೆಟ್‌ನಲ್ಲಿ ಶಿಕ್ಷಕರ ತರಬೇತಿ, ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳು ಮತ್ತು ಮೊದಲ ಬಾರಿಗೆ ಓದುವಿಕೆಯ ಸಂಸ್ಕೃತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣತಜ್ಞರಿಗೆ ಜಿಲ್ಲಾ ತರಬೇತಿ ಕೇಂದ್ರಗಳ ಸ್ಥಾಪನೆಯು ಭಾರತದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಶಾಲಾ ಶಿಕ್ಷಣವನ್ನು ಉತ್ತೇಜನಗೊಳಿಸುತ್ತದೆ ಎಂದು ಅರೋರಾ ತಿಳಿಸಿದ್ದಾರೆ.
ಡಿಜಿಟಲ್ ಗ್ರಂಥಾಲಯ ಮತ್ತು ಭೌತಿಕ ಗ್ರಂಥಾಲಯಗಳ ಸ್ಥಾಪನೆ
ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಮತ್ತು ಭೌತಿಕ ಗ್ರಂಥಾಲಯಗಳ ಸ್ಥಾಪನೆಯ ಕನಸು ನನಸಾಗಿದೆ ಎಂದು ಅರೋರಾ ತಿಳಿಸಿದ್ದಾರೆ. ಈ ಬಜೆಟ್ ಸೂಕ್ಷ್ಮ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಅನುಷ್ಠಾನವನ್ನು ಖಚಿತಪಡಿಸುತ್ತದೆ. ಅದೇ ಸಮಯದಲ್ಲಿ, ರಾಷ್ಟ್ರ ನಿರ್ಮಾಣದ ಖಾಸಗಿ ಶಾಲಾ ಶಿಕ್ಷಣವನ್ನು ಬೆಂಬಲಿಸಲು ನಾವು ಕೆಲವು ಕ್ರಮಗಳನ್ನು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ