• Home
 • »
 • News
 • »
 • jobs
 • »
 • Brain Teaser: ಈ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸ್​ ಆಗ್ತಿರಾ!

Brain Teaser: ಈ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸ್​ ಆಗ್ತಿರಾ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಪ್ರಶ್ನೆಗಳಲ್ಲಿ ನಿಮಗೆ ಎಷ್ಟು ಪ್ರಶ್ನೆಗೆ ಉತ್ತರ ಗೊತ್ತಿದೆ ಎಂದು ನಿಮ್ಮನ್ನು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೋಡಿ. ಆಗ ನಿಮ್ಮ ಬುದ್ಧಿ ಶಕ್ತಿ ಸಾಮರ್ಥ ನಿಮಗೆ ಅರಿವಾಗುತ್ತದೆ. ನೀವೇನಾದರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಮೊದಲೇ ಈ ಪ್ರಶ್ನೆಗಳನ್ನು ಓದಿಕೊಂಡಿರಬಹುದು.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Karnataka, India
 • Share this:

ಸರ್ಕಾರಿ ಉದ್ಯೋಗ ಪ್ರವೇಶ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನವು ಪ್ರಮುಖ ಭಾಗವಾಗಿದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಿಂದ (Exam) ಸಂದರ್ಶನದವರೆಗೆ ಈ ಪ್ರಶ್ನೆಗಳನ್ನು ಎದುರಿಸುತ್ತಾರೆ. ಸಾಮಾನ್ಯ ಜ್ಞಾನದ (General Knowledge) ಸಂಪೂರ್ಣ ತಯಾರಿಯು ಕೆಲಸದ ಹಾದಿಯನ್ನು ಸುಲಭಗೊಳಿಸುತ್ತದೆ. ಒಮ್ಮೆ ಕೂಲಂಕುಷವಾಗಿ ಅಧ್ಯಯನ (Study) ಮಾಡಿ ಚೆನ್ನಾಗಿ ನೆನಪಿಸಿಕೊಂಡರೆ ಅವು ಯಾವಾಗಲೂ ಉಪಯೋಗಕ್ಕೆ ಬರುತ್ತವೆ. ಇಲ್ಲಿ ನೀಡಿರುವ ಕೆಲವು ಪ್ರಶ್ನೆಗಳನ್ನು (Questions) ನೀವು ಓದಿ ಮತ್ತು ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನೀವೂ ಉತ್ತರಿಸಿದ್ದೇ ಹೌದಾದಲ್ಲಿ ನಿಮ್ಮ ಬುದ್ದಿ ಚುರುಕಾಗಿದೆ ಎಂದರ್ಥ.


ಸಾಮಾನ್ಯ ಜ್ಞಾನದತ್ತ ಗಮನ ಹರಿಸುವುದು ಅವಶ್ಯಕ. ಯಾಕೆಂದರೆ ಎಲ್ಲಾ ಸಾಮಾನ್ಯ ಜ್ಞಾನ ಪ್ರಶ್ನೆಗಳೂ ಸಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯವಾಗುತ್ತದೆ.


10 ಸಾಮಾನ್ಯ ಜ್ಞಾನದ ಪ್ರಶ್ನೆಗಳು ಇಲ್ಲಿವೆ, ನೀವು ಅವುಗಳಿಗೆ ಉತ್ತರಿಸಬಹುದೇ ನೋಡಿ.


ಪ್ರಶ್ನೆ- ಹಳದಿ ಬೋರ್ಡ್‌ನ ಮೇಲೆ ರೈಲ್ವೆ ನಿಲ್ದಾಣಗಳ ಹೆಸರನ್ನು ಕಪ್ಪು ಬಣ್ಣದಲ್ಲಿ ಏಕೆ ಬರೆಯಲಾಗಿದೆ?


ಉತ್ತರ- ಹಳದಿ ಹಲಗೆಯಲ್ಲಿ ಕಪ್ಪು ಬಣ್ಣದ ಪದಗಳು ಇತರ ಬಣ್ಣಗಳಿಗಿಂತ ಉತ್ತಮವಾಗಿ ಗೋಚರಿಸುತ್ತವೆ ಆದ್ದರಿಂದ


ಪ್ರಶ್ನೆ- ರವೀಂದ್ರ ನಾಥ್ ಠಾಗೋರ್ ಅವರು ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶದ ರಾಷ್ಟ್ರಗೀತೆಯನ್ನು ಬರೆದಿದ್ದಾರೆ?


ಉತ್ತರ - ಬಾಂಗ್ಲಾದೇಶ


ಪ್ರಶ್ನೆ- ಮಾನವನ ಕಣ್ಣಿನ ತೂಕ ಎಷ್ಟು?


ಉತ್ತರ - 8 ಗ್ರಾಂ


ಇದನ್ನೂ ಓದಿ: UGC Guidelines: ಯುಜಿಸಿ ಹೊಸ ನಿಯಮ, ಇನ್ಮುಂದೆ 4 ವರ್ಷ ಸ್ನಾತಕಪೂರ್ವ ಪದವಿ ಜಾರಿ


ಪ್ರಶ್ನೆ- ಭಾರತದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಹಗ್ಗದ ಹೆಸರೇನು?


ಉತ್ತರ - ಮನಿಲಾ ಹಗ್ಗ

ಪ್ರಶ್ನೆ- ಮೊದಲ ಕಂಪ್ಯೂಟರ್‌ನ ಹೆಸರೇನು?


ಉತ್ತರ- ಮೊದಲ ಕಂಪ್ಯೂಟರ್‌ನ ಹೆಸರು ENIAC. ಇದರ ಪೂರ್ಣ ಹೆಸರು ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಮತ್ತು ಕಂಪ್ಯೂಟರ್.


ಪ್ರಶ್ನೆ- ಕಂಪ್ಯೂಟರ್‌ನ ಐಸಿ ಚಿಪ್ ಯಾವುದರಿಂದ ಮಾಡಲ್ಪಟ್ಟಿದೆ?


ಉತ್ತರ- ಐಸಿ ಚಿಪ್ ಸಿಲಿಕಾನ್‌ನಿಂದ ಮಾಡಲ್ಪಟ್ಟಿದೆ.


ಪ್ರಶ್ನೆ- ಭಾರತದಲ್ಲಿ ಪ್ರಧಾನಿಯಾಗಲು ಕನಿಷ್ಠ ವಯಸ್ಸು ಎಷ್ಟು?


ಉತ್ತರ - 25 ವರ್ಷಗಳು


ಪ್ರಶ್ನೆ- ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪ್ರಾರಂಭಿಸಿದವರು ಯಾರು?


ಉತ್ತರ - ಲಾರ್ಡ್ ಮೆಕಾಲೆ


ಪ್ರಶ್ನೆ- 'ಗಾಂಧಿ' ಚಿತ್ರದಲ್ಲಿ ಗಾಂಧಿ ಪಾತ್ರವನ್ನು ನಿರ್ವಹಿಸಿದವರು ಯಾರು?


ಉತ್ತರ - ಬೆನ್ ಕಿಂಗ್ಸ್ಲಿ


ಈ ಪ್ರಶ್ನೆಗಳಲ್ಲಿ ನಿಮಗೆ ಎಷ್ಟು ಪ್ರಶ್ನೆಗೆ ಉತ್ತರ ಗೊತ್ತಿದೆ ಎಂದು ನಿಮ್ಮನ್ನು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೋಡಿ. ಆಗ ನಿಮ್ಮ ಬುದ್ಧಿ ಶಕ್ತಿ ಸಾಮರ್ಥ ನಿಮಗೆ ಅರಿವಾಗುತ್ತದೆ. ನೀವೇನಾದರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಮೊದಲೇ ಈ ಪ್ರಶ್ನೆಗಳನ್ನು ಓದಿಕೊಂಡಿರಬಹುದು. ಆದರೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಥವಾ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಸಹ ಮುಖ್ಯವಾಗುತ್ತದೆ.


ಪ್ರಶ್ನೆ- ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?
ಉತ್ತರ -13


ಪ್ರಶ್ನೆ - ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
ಉತ್ತರ - 527


ಪ್ರಶ್ನೆ- ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
ಉತ್ತರ - ಗ್ರೀಕ್


ಪ್ರಶ್ನೆ -ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”ಎಷ್ಟು?
ಉತ್ತರ - 26


ಪ್ರಶ್ನೆ -“ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
ಉತ್ತರ - ಫೆ-28


ಇವಿಷ್ಟು ಸಿಂಪಲ್ ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿದ್ದು ಮತ್ತೊಮ್ಮೆ ನೀವು ನಿಮ್ಮನ್ನು ಪರಿಶೀಲಿಸಿಕೊಳ್ಳಿ. ಹೀಗೆ ಹಲವಾರು ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತಾ ಹೋದಂತೆಲ್ಲಾ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ ಅಷ್ಟೇ ಅಲ್ಲ ನಿಮ್ಮ ಸಾಮರ್ಥ್ಯ ಕೂಡ ಹೆಚ್ಚುತ್ತದೆ.

First published: