ಬಾಂಬೆ ಹೈಕೋರ್ಟ್ (Bombay High Court) ಮಂಗಳವಾರ ಈ ತಿಂಗಳ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2023 ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿತು. ರಾಷ್ಟ್ರೀಯ ಪರೀಕ್ಷಾ (Exam) ಏಜೆನ್ಸಿ (ಎನ್ಟಿಎ) ವಿರುದ್ಧ ಕಾರ್ಯಕರ್ತೆ ಅನುಭಾ ಶ್ರೀವಾಸ್ತವ ಸಹಾಯ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ವಿ ಗಂಗ್ಪುರವಾಲಾ ಮತ್ತು ನ್ಯಾಯಮೂರ್ತಿ ಸಂದೀಪ್ ವಿ ಮಾರ್ನೆ ನೇತೃತ್ವದ ಪೀಠವು ತೀರ್ಪು ನೀಡಿದೆ. ಅರ್ಜಿದಾರರು ಜನವರಿ ಪರೀಕ್ಷೆಯನ್ನು ಮುಂದೂಡಬೇಕು (Postpone) ಮತ್ತು ಶೇಕಡಾ 75 ರ ಅರ್ಹತಾ ಮಾನದಂಡವನ್ನು ತೆಗೆದುಹಾಕಬೇಕು ಎಂದು ಎನ್ಟಿಎಗೆ ಒತ್ತಾಯಿಸಿದ್ದರು.
ಜೆಇಇ ಮೇನ್ 2023 ಜನವರಿ ಅಧಿವೇಶನಕ್ಕೆ ಹೊಂದಿಕೆಯಾಗುವ ಪರೀಕ್ಷೆಯಾಗಿದ್ದು, ಜನವರಿಯಲ್ಲಿ 12 ನೇ ತರಗತಿಯ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಪರೀಕ್ಷೆಗಳು, ವೈವಾ ಪರೀಕ್ಷೆ ಇತ್ಯಾದಿಗಳಿಗೆ ಹಾಜರಾಗಲಿದ್ದಾರೆ. ಫೆಬ್ರವರಿ 1 ರಂದು HSC, CBSE, ICSE (12 ನೇ ತರಗತಿ) ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಇದು 12 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಆ ಕಾರಣಕ್ಕಾಗಿ ದಿನಾಂಕ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಜೆಇಇ ಪರೀಕ್ಷೆಯನ್ನು ಮುಂದೂಡದಂತೆ ನಿರ್ಧಾರ
ಜನವರಿ ಪರೀಕ್ಷೆಗಳನ್ನು ಮುಂದೂಡುವಂತೆ ನಿರ್ದೇಶಿಸುವ ಯಾವುದೇ ಆದೇಶಗಳನ್ನು ನೀಡಲಾಗಿಲ್ಲ. ಈ ಪರೀಕ್ಷೆಯನ್ನು ಮುಂದೂಡಿದರೆ ಭವಿಷ್ಯದ ಪರೀಕ್ಷೆಯ ಮೇಲೂ ಸಹ ಪರಿಣಾಮ ಬೀರುತ್ತದೆ ಆ ಕಾರಣದಿಂದ ಬದಲಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ಇದನ್ನೂ ಓದಿ: MBBS Results: ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಫಲಿತಾಂಶ ವಿಳಂಬ
ಲಕ್ಷಾಂತರ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷಾ ಸಿದ್ಧತೆ ನಡೆಸುತ್ತಿರುತ್ತಾರೆ. ಈ ರೀತಿ ಪರೀಕ್ಷಾ ದಿನಾಂಕವನ್ನು ಮುಂದೂಡದೇ ಇದ್ದರೆ 5 ಸಾವಿರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಪರೀಕ್ಷಾ ದಿನಾಂಕವನ್ನು ಮುಂದೂಡಿದರೆ ಖಂಡಿತ ಇದು 50,000 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಆ ಕಾರಣಕ್ಕಾಗಿ ಯಾವುದೇ ದಿನಾಂಕವನ್ನೂ ಸಹ ಮುಂದೂಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಧಿಕೃತ NTA ವೇಳಾಪಟ್ಟಿ ಪ್ರಕಾರ JEE ಮೇನ್ 2023 ವೇಳಾಪಟ್ಟಿ
ಶೈಕ್ಷಣಿಕ ನೀತಿ ಉತ್ತಮವಾಗಿಲ್ಲದಿದ್ದರೂ ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ. ಅಧಿಕೃತ NTA ವೇಳಾಪಟ್ಟಿ ಪ್ರಕಾರ JEE ಮೇನ್ 2023ಯ ಮೊದಲ ಅವಧಿಯ ಪರೀಕ್ಷೆಗಳು ಜನವರಿ 24, 25, 27, 28, 29, 30, ಮತ್ತು 31, 2023 ರಂದು ನಡೆಯಲಿವೆ.
ಪರೀಕ್ಷೆಯನ್ನು ಮುಂದೂಡಲು ಸಾಧ್ಯವೇ ಇಲ್ಲ ಎಂದಾದರೆ ಮೇ ತಿಂಗಳಿನಲ್ಲಿ ಹೆಚ್ಚುವರಿ ಅವಕಾಶ ಕಲ್ಲಿಸಬೇಕು ಎಂದು ಹಲವಾರು ಅರ್ಜಿಗಳು ಬಂದಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಸಮಾಧಾನವಾಗಿಲ್ಲ. ಆದರೂ ತಮ್ಮ ಪರಿಸ್ಥಿತಿಯ ಅರಿವು ವಿದ್ಯಾಪೀಠಕ್ಕಿದೆ ಎಂಬುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ವಿಷಯ ಪರಿಗಣನೆಗೆ ನ್ಯಾಯಾಲಯದ ಸಮ್ಮತಿ
75 ಪ್ರತಿಶತ ಅರ್ಹತಾ ಮಾನದಂಡವನ್ನು ತೆಗೆದುಹಾಕಲು ಸಗ NTA ಗೆ ವಿನಂತಿಸುತ್ತಿದ್ದಾರೆ. ಏಕೆಂದರೆ ವಿದ್ಯಾರ್ಥಿಗಳು ಗಳಿಸಿದ ಅಂಕ ನಿಜವಾಗಿಯೂ ಅವರನ್ನು ಅಳೆಯುವ ಮಾನದಂಡವಾಗಲಾರದು ಆದ್ದರಿಂದ ಈ ವರ್ಷದ ಪರೀಕ್ಷೆಗಳಿಗೆ ಅರ್ಹತಾ ಮಾನದಂಡಗಳಿಗಿಂತ 75 ಕ್ಕಿಂತ ಕಡಿಮೆ ಅಂಕ ಗಳಿಸಿದವರೂ ಸಹ ಮೇನ್ ಎಕ್ಸಾಂನಲ್ಲಿ ಹೆಚ್ಚಿನ ಅಂಕ ಗಳಿಸಬಹುದು ಎಂದು ತಿಳಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಸಹ ಅವರಿಗೆ ನ್ಯಾಯಯುತ ಅವಕಾಶವನ್ನು ನೀಡ ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಫೆಬ್ರವರಿ 21 ರಂದು ಈ ವಿಷಯವನ್ನು ಪರಿಗಣಿಸಲು ನ್ಯಾಯಾಲಯ ನಿರ್ಧರಿಸಿದೆ ಎಂಬುದು ತಿಳಿದು ಬಂದಿದೆ.
ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಿಸಿದೆ ವಿಳಂಭ
ಮರು ಮೌಲ್ಯಮಾಪನ ವಿಳಂಬವಾಗಿರುವ ಕಾರಣ ಎಂಬಿಬಿಎಸ್ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಈ ರೀತಿ ವಿಳಂಭವಾಗಿದೆ. 600 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಯಲಾಗಿದೆ. ಒಂದೇ ವಿಷಯದ ಮೌಲ್ಯಮಾಪನದಲ್ಲಿ ಅಂಕ ಏರು ಪೇರಾಗಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ