ಭುವನೇಶ್ವರ: ವಿದ್ಯಾರ್ಥಿನಿಯೊಬ್ಬಳು (Student) ತನ್ನ ಜೀವವನ್ನೇ ಪಣಕ್ಕಿಟ್ಟು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಘಟನೆ ನಡೆದಿದೆ. ಇದು ನಡೆದಿದ್ದು ಒಡಿಶಾದಲ್ಲಿ. ಹಾವು ಕಚ್ಚಿದ್ದರೂ ಪರೀಕ್ಷೆಗೆ (Exam) ಆಗಮಿಸಿದ ಹುಡುಗಿ, ಪರೀಕ್ಷೆ ಬರೆಯುತ್ತಿರುವ ವೇಳೆಯಲ್ಲಿ ಅಸ್ವಸ್ಥಳಾಗಿದ್ದಾಳೆ. ಮೂಲಗಳ ಪ್ರಕಾರ ಆನಂದಪುರ ಪೊಲೀಸ್ ವ್ಯಾಪ್ತಿಯ ದಾದಿನ್ ಬಾಪುರ ಗ್ರಾಮದ ವಿದ್ಯಾರ್ಥಿನಿ ಲಿಪ್ಸ ರಾಣಿ ಸಾಹು ಬೆಳಗ್ಗೆ ಪರೀಕ್ಷೆಗೆ ಹೊರಡುವ ಮೊದಲು ತನ್ನ ಮನೆಯ ಹಿತ್ತಲಿಗೆ ಹೋಗಿದ್ದಳು. ಹಿತ್ತಲಿಗೆ ಹೋದಾಗ ಅಲ್ಲಿ ಹಾವೊಂದು (Snake) ಕಚ್ಚಿದೆ. ಆದರೆ ತನಗೆ ಪರೀಕ್ಷೆ ಇರುವುದನ್ನು ತಪ್ಪಿಸಿಕೊಳ್ಳಬಾರದು ತಾನು ಪರೀಕ್ಷೆಯನ್ನು ಬರೆದಿರಬೇಕು ಎಂದು ಆ ಹುಡುಗಿ ಆಲೋಚಿಸಿದ್ದಾಳೆ. ಮುಂದೇನು ಮಾಡಿದ್ದಾಳೆ ನೀವೇ ನೋಡಿ.
ಈ ಹುಡುಗಿ ತನ್ನ ಮನೆಯಲ್ಲಿ ಪಾಲಕರಿಗೂ ಸಹ ಈ ವಿಷಯವನ್ನು ತಿಳಿಸಿಲ್ಲ. ತಾನೇ ಸ್ವತಹ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಳೆ. ಒಬ್ಬಳೇ ಅಂಜಿಕೆ ಇಲ್ಲದೆ ಪರೀಕ್ಷೆ ಹಾಲ್ನಲ್ಲಿ ಕುಳಿತಿದ್ದಾಳೆ. ಪರೀಕ್ಷೆ ಬರೆಯುತ್ತಿರುವಾಗಲೇ ಆಕೆಗೆ ವಾಕರಿಕೆ ಬಂದ ಅನುಭವ ಆಗಿದೆ. ತನಗೇನೋ ಹುಷಾರು ತಪ್ಪುತ್ತಿದೆ ಎಂದು ಅವಳಿಗೆ ತಿಳಿದು ಬಂದಿದೆ. ಆ ಸಂದರ್ಭದಲ್ಲಿ ಅವಳಿಗೆ ಕೊಂಚ ಭಯ ಹುಟ್ಟಿಕೊಂಡಿದೆ. ಶಿಕ್ಷಕರು ಹಾಗೂ ಇನ್ವಿಜಿಲೇಟರ್ಗಳ ಬಳಿ ಹಿತ್ತಲಲ್ಲಿ ಹಾವು ಕಚ್ಚಿದ ಘಟನೆಯನ್ನು ವಿವರಿಸಿದ್ದಾಳೆ.
ಇದನ್ನೂ ಓದಿ: NEP: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಆರಂಭವಾಗಲಿದೆ NCERT ಪಠ್ಯಪುಸ್ತಕಗಳ ಪರಿಷ್ಕರಣೆ
ಆಕೆಯನ್ನ ತಕ್ಷಣವೇ ಅಲ್ಲಿನ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯನ್ನ ಆನಂದಪುರ ಉಪ ವಿಭಾಗೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆಯ ಸ್ಥಿತಿ ಸ್ಥಿರವಾಗಿಲ್ಲ ಎಂದು ತಿಳಿದ ತಕ್ಷಣ ಆಸ್ಪತ್ರೆಯವರು ಬೇಗ ಚಿಕಿತ್ಸೆ ನೀಡಿದ್ದಾರೆ. ನಂತರ ಈಕೆಯ ವಿಷಯವನ್ನು ಪಾಲಕರಿಗೆ ತಿಳಿಸಲಾಗಿದೆ. ಮಾಹಿತಿ ತಿಳಿದು ಬಂದ ತಕ್ಷಣ ಆಕೆಯ ಕುಟುಂಬಸ್ಥರು ಆಕೆಯನ್ನು ನೋಡಲು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.
ನಂತರ ಅವರಲ್ಲಿ ಒಬ್ಬರು ಮಾಧ್ಯಮಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ತನ್ನ ಮನೆಯ ಹಿತ್ತಲಿನಲ್ಲಿ ಕಚ್ಚಿರುವುದು ಒಂದು ಕಪ್ಪು ಬಣ್ಣದ ಹಾವು ಎಂಬುದಷ್ಟೇ ತಿಳಿದಿತ್ತು. ಆದರೆ ಅದು ಯಾವ ಹಾವು ಎಂಬ ವಿಷಯ ಅವಳಿಗೆ ಗೊತ್ತಿರಲಿಲ್ಲ. ಹಾಗಾಗಿ ಚಿಕಿತ್ಸೆ ನೀಡುವಾಗ ಆ ವಿಷಯದ ಬಗ್ಗೆ ಅಷ್ಟಾಗಿ ಸ್ಪಷ್ಟನೆ ದೊರೆತಿಲ್ಲ. ಆದರೂ ಕೂಡ ಆ ಹುಡುಗಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ತನ್ನ ಜೀವವನ್ನೇ ಒತ್ತೆ ಇಟ್ಟು ಪರೀಕ್ಷೆಯನ್ನು ಬರೆದಿದ್ದಾಳೆ. ಇದು ಜೀವನದ ಸ್ಪೂರ್ತಿ ಅಂದ್ರೆ ಆದರೆ ಇಂತಹ ಘಟನೆಗಳು ಆದಾಗ ವಿದ್ಯಾರ್ಥಿಗಳು ತಮ್ಮ ಮನೆಯವರಿಗೆ ತಿಳಿಸುವುದು ಉತ್ತಮ.
ತಲೆಗೆ 8 ಹೊಲಿಗೆ ಹಾಕಿದ್ರೂ ಆಸ್ಪತ್ರೆಯಿಂದಲೇ ಪರೀಕ್ಷೆ ಬರೆದ ಛಲಗಾರ!
ಪರೀಕ್ಷೆ ಬರೆಯುವ ಸಲುವಾಗಿ ವಿದ್ಯಾರ್ಥಿಗಳು ಎಷ್ಟೋ ದಿನ ಕಷ್ಟ ಪಟ್ಟು ಓದುತ್ತಾರೆ. ಅದಕ್ಕೆ ತಕ್ಕಂತೆ ತಯಾರಿ ಕೂಡಾ ನಡೆಸುತ್ತಾರೆ. ಆದರೆ ಕೊನೆ ಕ್ಷಣದಲ್ಲಿ ಪರೀಕ್ಷೆಯಿಂದ ವಂಚಿತರಾದ್ರೆ ಎಷ್ಟು ಬೇಜಾರಾಗುತ್ತೆ ಅಲ್ವಾ? ಹಾಗೇ ಒಂದು ಘಟನೆ ಇಲ್ಲಿಯೂ ನಡೆಯೋದಿತ್ತು ಆದರೆ ಆ ವಿದ್ಯಾರ್ಥಿ ತಾನು ಪರೀಕ್ಷೆ ಬರೆಯಲೇ ಬೇಕು ಎಂದು ಹಠ ಹಿಡಿದು ಪರೀಕ್ಷೆ ಬರೆದ ಘಟನೆ ನಡೆದಿದೆ.
ಪರೀಕ್ಷೆ ಬರೆಯೋಕೆ ಅಂತಲೇ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿ ತನ್ನ ಬೈಕ್ ಮೂಲಕ ಸಾಗುತ್ತಿದ್ದಾಗ ಬೇರೆ ಒಂದು ಗಾಡಿಗೆ ತಗುಲಿ ಅಫಘಾತವಾಗಿತ್ತು. ಈ ರೀತಿಯಾದ ಕಾರಣ ವಿದ್ಯಾರ್ಥಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಕೂಡಾ ಆತ ತನ್ನನ್ನು ಪರೀಕ್ಷಾ ಕೊಠಡಿಗೆ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದ. ನಂತರ ಆತ ಪರೀಕ್ಷೆ ಬರೆದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ