• Home
  • »
  • News
  • »
  • jobs
  • »
  • Forestry After 12th: PUC ನಂತರ ಫಾರೆಸ್ಟ್ರಿ ಕೋರ್ಸ್​ ಮಾಡಿದರೆ ಮುಂದೆ ಒಳ್ಳೆಯ ಉದ್ಯೋಗ ಸಿಗುತ್ತೆ

Forestry After 12th: PUC ನಂತರ ಫಾರೆಸ್ಟ್ರಿ ಕೋರ್ಸ್​ ಮಾಡಿದರೆ ಮುಂದೆ ಒಳ್ಳೆಯ ಉದ್ಯೋಗ ಸಿಗುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಕೋರ್ಸ್ ಮಾಡಲು ಯೋಚಿಸುತ್ತಿರುವ ಎಲ್ಲಾ ಅಭ್ಯರ್ಥಿಗಳು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ.

  • News18 Kannada
  • Last Updated :
  • New Delhi, India
  • Share this:

ಬಿಎಸ್ಸಿ ಫಾರೆಸ್ಟ್ರಿ 4 ವರ್ಷಗಳ ಪೂರ್ಣ ಸಮಯದ ಯುಜಿ ಕೋರ್ಸ್ ಆಗಿದ್ದು, ಇದನ್ನು 8 ಸೆಮಿಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಈ ಕೋರ್ಸ್ ಮಾಡುವಾಗ ನಿಮ್ಮ ಗಮನದಲ್ಲಿರಬೇಕಾದ ಮುಖ್ಯ ವಿಷಯಗಳೆಂದರೆ (Subject) ಮೌಖಿಕ ಮೌಲ್ಯ ಶಿಕ್ಷಣ, ಅರಣ್ಯ ಮಾಪನ, ವೃತ್ತಿಪರ ಸಂವಹನ, ಪರಿಸರ ಅಧ್ಯಯನಗಳು ಮತ್ತು ಅರಣ್ಯ (Forest) ಮಣ್ಣಿನ ವಿಜ್ಞಾನಗಳ ತತ್ವಗಳು ಈ ಎಲ್ಲಾ ವಿಷಯಗಳನ್ನೂ ಸಹ ನೀವು ಈ ಕೋರ್ಸ್ (Course)  ಮಾಡುವಾಗ ತಿಳಿದುಕೊಳ್ಳುತ್ತೀರಿ. ಅಷ್ಟೇ ಅಲ್ಲ ಈ ಕೋರ್ಸ್ ಪೂರ್ಣಗೊಂಡ ನಂತರ ನಿಮಗೆ ಉತ್ತಮ ಉದ್ಯೋಗಾವಕಾಶಗಳೂ (Job) ಸಹ ಲಭಿಸುತ್ತದೆ.


ಈ ಕೋರ್ಸ್ ಮಾಡಲು ಯೋಚಿಸುತ್ತಿರುವ ಎಲ್ಲಾ ಅಭ್ಯರ್ಥಿಗಳು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಹಂತವೆಂದರೆ ಅವರು ಇತ್ತೀಚಿನ ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮದ ಪ್ರಕಾರ ಅಧ್ಯಯನ ಮಾಡಬೇಕು. ಮುಖ್ಯವಾಗಿ, ಬಹುತೇಕ ಎಲ್ಲಾ ಪ್ರವೇಶ ಪರೀಕ್ಷೆಗಳಲ್ಲಿ ಐದು ವಿಭಾಗಗಳಿವೆ, ಅವುಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಕೃಷಿ ವಿಷಯಗಳ ಬಗ್ಗೆ ಇರುತ್ತದೆ.


ಈ ಎಲ್ಲಾ ಕೋರ್ಸ್​ಗಳೂ ಸಹ ಲಭ್ಯವಿದೆ
ವನ್ಯಜೀವಿ ನಿರ್ವಹಣೆಯಲ್ಲಿ ಪ್ರಮಾಣಪತ್ರ ಕೋರ್ಸ್
ಝೂ ಮತ್ತು ವೈಲ್ಡ್ ಅನಿಮಲ್ ಹೆಲ್ತ್ ಕ್ಯೂರ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ
ಅರಣ್ಯ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDFM)
ಪೋಸ್ಟ್-ಮಾಸ್ಟರ್ಸ್ ಡಿಪ್ಲೋಮಾ ನಾನ್-ವುಡ್ ಫಾರೆಸ್ಟ್ ಪ್ರಾಡಕ್ಟ್ಸ್


ಇದನ್ನೂ ಓದಿ: ಇಸ್ರೋದಿಂದ ಉಚಿತ ಆನ್​ಲೈನ್​ ಕೋರ್ಸ್,​ ನೀವೂ ಭಾಗಿಯಾಗಿ


ಈ ಎಲ್ಲಾ ಕಾಲೇಜ್​ಗಳಲ್ಲಿ ಕೋರ್ಸ್​ ಲಭ್ಯವಿದೆ
1. ಡಾ . ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
2. ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆ, ಜೋಧಪುರ.
3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್‌ಮೆಂಟ್, ಭೋಪಾಲ್ .
4. ಅರಣ್ಯ ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯ, ಡೆಹ್ರಾ ಡನ್ .
5. ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್
6. ಜಿಬಿ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪಂತನಗರ
7. ಡಾ. ಯಶವಂತ್ ಸಿಂಗ್ ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ, ಹಿಮಾಚಲ ಪ್ರದೇಶ
8. ಉಷ್ಣವಲಯದ ಅರಣ್ಯ ಸಂಶೋಧನಾ ಸಂಸ್ಥೆ, ಜಬಲ್ಪುರ
9. ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಜೆನೆಟಿಕ್ಸ್ ಮತ್ತು ಟ್ರೀ ಬ್ರೀಡಿಂಗ್, ಕೊಯಮತ್ತೂರು. 


ಇಷ್ಟೇ ಅಲ್ಲ ಕರ್ನಾಟಕದ ಕೆಲವು ಕಾಲೇಜುಗಳಲ್ಲೂ ಸಹ  BSC ಮತ್ತು MSC ಪದವಿ ಲಭ್ಯವಿದೆ.


ಲಭ್ಯವಿರುವ ವೃತ್ತಿ ಅವಕಾಶಗಳು
ಹೌದು ಈ ಕ್ಷೇತ್ರದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳು ಲಭ್ಯವಿವೆ. ಉದ್ಯೋಗಾವಕಾಶಗಳು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಲಭ್ಯವಿದೆ. ಸಾರ್ವಜನಿಕ ವಲಯದ ಉದ್ಯೋಗಗಳು ಝೂಲಾಜಿಕಲ್ ಪಾರ್ಕ್‌ಗಳು, ವನ್ಯಜೀವಿ ಶ್ರೇಣಿಗಳು, ಮರಗಳ ತಯಾರಿಕೆಗಾಗಿ ತಮ್ಮದೇ ಆದ ತೋಟಗಳನ್ನು ಹೊಂದಿರುವ ಕಾರ್ಪೊರೇಟ್, ವನ್ಯಜೀವಿ ಸಂಶೋಧನಾ ಸಂಸ್ಥೆಗಳು, ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE), ಮತ್ತು ಅದರ ಅಂಗಸಂಸ್ಥೆಗಳು, ವನ್ಯಜೀವಿ ಇಲಾಖೆ, ಅರಣ್ಯ ಇಲಾಖೆ, ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳು, ಅರಣ್ಯ ನರ್ಸರಿಗಳು.


ಉನ್ನತ ಹುದ್ದೆಗಳೂ ಲಭ್ಯ
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯ ಮೂಲಕ ಅರಣ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು . ಉಪನ್ಯಾಸಕರ ಹುದ್ದೆಗೆ ಕಾಲೇಜುಗಳಿಗೂ ಅರ್ಜಿ ಸಲ್ಲಿಸಬಹುದು.  ಇಷ್ಟೆಲ್ಲಾ ಅವಕಾಶವಿರುವ ಈ ಕೋರ್ಸ್ ಮಾಡಿದರೆ ನಿಮಗೂ ಹಲವು ರೀತಿಯಲ್ಲಿ ಸಹಾಯವಾಗಲಿದೆ. ಅಷ್ಟೇ ಅಲ್ಲ ಉತ್ತಮ ವೇತನ ಪಡೆಯುವ ಅವಕಾಶಕೂಡಾ ನಿಮ್ಮದಾಗುತ್ತದೆ. ನೀವೂ ಕೂಡ ಅಪ್ಲೈ ಮಾಡಿ.

First published: