• ಹೋಂ
  • »
  • ನ್ಯೂಸ್
  • »
  • Jobs
  • »
  • Bengaluru: ಹಾಸ್ಟೆಲ್​ ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ UVCE

Bengaluru: ಹಾಸ್ಟೆಲ್​ ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ UVCE

UVCE

UVCE

ಯುವಿಸಿಇಯಲ್ಲಿ ಓದುತ್ತಿರುವ 350 ವಿದ್ಯಾರ್ಥಿಗಳು ಬಿಯು ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಈಗ ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಲಾಗಿದೆ. ಆ ಕಾರಣದಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ವಿದ್ಯಾರ್ಥಿಯೊಬ್ಬರು ಈ ಬಗ್ಗೆ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ (UVCE) ವಿದ್ಯಾರ್ಥಿಗಳು ಮೇ 1 ರೊಳಗೆ ತಮ್ಮ ಹಾಸ್ಟೆಲ್‌ಗಳನ್ನು (Hostel) ಖಾಲಿ ಮಾಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 25, 2022 ರಂದು, ಬೆಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿರುವ ಯುವಿಸಿಇಯನ್ನು ಸ್ವಾಯುತ್ತ ಕಾಲೇಜಾಗಿ ಮಾರ್ಪಡಿಸಲಾಯಿತು. ಆದರೂ ಕೆಲವು ಹಣ (Money) ಕಾಸಿನ ಅಡಚಣೆಯಿಂದ ರಾಜ್ಯ () ಸರ್ಕಾರವು ಒಂದು ವರ್ಷದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶವನ್ನು ಹೊರಡಿಸಿತ್ತು. ಹಾಗಾಗಿ ಇದು ವರೆಗು ಒಂದು ಘಟಕ ಕಾಲೇಜಾಗಿ ಇದು ಕಾರ್ಯನಿರ್ಬಹಿಸುತ್ತಿದೆ. ಇನ್ನು ಒಂದು ವರ್ಷ ಬಾಕಿ ಇರುವ ಕಾರಣ ಮೇ (May) 1ರೊಳಗೆ ಹಾಸ್ಟೆಲ್‌ಗಳನ್ನು ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.


ಯುವಿಸಿಇಯಲ್ಲಿ ಓದುತ್ತಿರುವ 350 ವಿದ್ಯಾರ್ಥಿಗಳು ಬಿಯು ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಈಗ ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಲಾಗಿದೆ. ಆ ಕಾರಣದಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ವಿದ್ಯಾರ್ಥಿಯೊಬ್ಬರು ಈ ಬಗ್ಗೆ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ. ಖಾಲಿ ಮಾಡಲೇ ಬೇಕಾದರೆ ತಾವು ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಎತ್ತಿದ್ದಾರೆ. ಆದರೆ ಎಲ್ಲರೂ ಇನ್ನು ಗೊಂದಲದಲ್ಲೇ ಕಾಲ ಕಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ


ವಿದ್ಯಾರ್ಥಿಗಳು ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಿದ್ದಾರೆ. ಈ ವಿಷಯವನ್ನು ಪರಿಹರಿಸಲಾಗಿದೆ ಎಂದು ಯುವಿಸಿಇ ಅಧ್ಯಕ್ಷ ಬಿ ಮುತ್ತುರಾಮನ್ ಈ ಪತ್ರಿಕೆಗೆ ನೀಡಿದ್ದಾರೆ. “ವಿದ್ಯಾರ್ಥಿಗಳು ಹಾಸ್ಟೆಲ್‌ಗಳನ್ನು ಖಾಲಿ ಮಾಡುವ ಅಗತ್ಯವಿಲ್ಲ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ,'' ಎಂದು ಅವರು  ಹೇಳಿದರು.


ಶುಕ್ರವಾರ ಇದಕ್ಕೆ ಸಂಬಂಧಿಸಿ ಮತ್ತೊಂದು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಮೊದಲು ಹಾಸ್ಟೆಲ್ ಬಿಟ್ಟು ಹೋಗಿ ಎಂದು ಹೊರಡಿಸಿದ ಸುತ್ತೋಲೆಯ ಬದಲು ಇದೀಗ ಯಾರೂ ಜಾಗ ಖಾಲಿ ಮಾಡುವ ಅವಶ್ಯಕತೆ ಇಲ್ಲಾ ಎಂದು ಹೇಳಲಾಗಿದೆ. ಆದರೆ, ಯುವಿಸಿಇ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಬಿಯು ರಿಜಿಸ್ಟ್ರಾರ್ ಮಹೇಶ್ ಬಾಬು ಹೇಳಿದ್ದಾರೆ.




ಯುವಿಸಿಇ ತನ್ನ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದು ಜವಾಬ್ದಾರಿ ಹೊಂದಿದೆ. ವಿದ್ಯಾರ್ಥಿಗಳಿಗೆ ಆಹಾರ ಅಥವಾ ವಸತಿಗಾಗಿ ನಾವು ಯಾವುದೇ ಬಜೆಟ್ ಹಂಚಿಕೆಗಳನ್ನು ಹೊಂದಿಲ್ಲ. ಹಾಗಾಗಿ ಯುವಿಸಿಇ ವತಿಯಿಂದ ಒಂದಷ್ಟು ವ್ಯವಸ್ಥೆ ಮಾಡಬೇಕಿದೆ. ಆದರೆ ನಮ್ಮನ್ನು ಯಾರೂ ಇನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಇದೀಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿಲ್ಲಾ. ಆದರೂ ವಿದ್ಯಾರ್ಥಿಗಳು ಯಾವಾಗ ಯಾವ ಆದೇಶ ಬರುತ್ತದೆಯೋ ಎಂಬ ಆತಂಕದಲ್ಲಿ ಇರಬೇಕಾದ ಸ್ಥಿತಿ ಎದುರಾಗಿದೆ.


ಕಲಬುರಗಿ ಹಾಸ್ಟೆಲ್ ಅಡ್ಮಿಷನ್


ಮೆಟ್ರಿಕ್‌ ನಂತರ ಶಿಕ್ಷಣ ಪಡೆಯುತ್ತಿರುವ ಕೋಲಿ ಸಮುದಾಯದ ಬಡ ಮಕ್ಕಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಅರ್ಹ ಕೋಲಿ ಸಮುದಾಯದ ಮಕ್ಕಳಿಗೆ ಮಹರ್ಷಿ ವೇದ ವ್ಯಾಸ ಮಂಥನ ಮತ್ತು ಪ್ರೇರಣ ಟ್ರಸ್ಟ್ ವತಿಯಿಂದ ಉಚಿತ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸೂಕ್ತ ದಾಖಲಾತಿ, ಅರ್ಹತೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಮೆಟ್ರಿಕ್‌ ನಂತರದ ಶಿಕ್ಷಣವನ್ನು ಉಚಿತ ವಸತಿಯೊಂದಿಗೆ ಪಡೆಯಬಹುದಾಗಿದೆ.


ಕೋಲಿ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ 2023-24 ನೇ ಸಾಲಿಗೆ ಈ ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ನಗರದ ಹೀರಾಪುರ ಮುಖ್ಯ ರಸ್ತೆಯ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಜೆಡಿಎ ಕಾಲೋನಿಯಲ್ಲಿರುವ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

top videos
    First published: