• ಹೋಂ
 • »
 • ನ್ಯೂಸ್
 • »
 • Jobs
 • »
 • Bellary: ಊಟ ಸರಿಯಿಲ್ಲ ಅಂತಾ ಕೇಳಿದ್ದಕ್ಕೆ ಹಾಸ್ಟೆಲ್​ನಿಂದ್​ ಗೇಟ್​ಪಾಸ್​!

Bellary: ಊಟ ಸರಿಯಿಲ್ಲ ಅಂತಾ ಕೇಳಿದ್ದಕ್ಕೆ ಹಾಸ್ಟೆಲ್​ನಿಂದ್​ ಗೇಟ್​ಪಾಸ್​!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳು  ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ಆಶಾ ಭಾವನೆಯಿಂದ ಜಿಲ್ಲಾಧಿಕಾರಿಗಳ ಮೆನೆಗೆ ರಾತ್ರಿ ತೆರಳಿದ್ದಾರೆ. ಆದರೆ ವಿದ್ಯಾರ್ಥಿಗಳು ಯಾವ ರೀತಿ ಸ್ಪಂದನೆ ಸಿಗುತ್ತೆ ಅಂದುಕೊಂಡಿದ್ದರೋ ಅದಕ್ಕೆ ವಿರುದ್ಧವಾಗಿ ಶಾಕಿಂಗ್​ ರೆಸ್ಪಾನ್ಸ್​ ಬಂದಿದ್ದಕ್ಕೆ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ. 

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

ಎಷ್ಟೋ ಜನ ವಿದ್ಯಾರ್ಥಿಗಳು (Students) ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸೋಕೆ ಅಂತ ಹಾಸ್ಟೇಲ್​ನಲ್ಲಿ ಉಳಿದುಕೊಳ್ತಾರೆ. ಅವರಿಗೆ ಅನುಕೂಲವಾಗುವ ರೀತಿಯಲ್ಲೇ ಎಲ್ಲಾ ಸೌಕರ್ಯಗಳನ್ನೂ (Benefits) ಸಹ ಹಾಸ್ಟೇಲ್​ನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತೆ. ಪಾಲಕರೂ (Parents) ಸಹ ತಮ್ಮ ಮಕ್ಕಳು ಇಲ್ಲಿ ಆರಾಮಾಗಿ ಉಳಿದುಕೊಂಡು ಅಭ್ಯಾಸ ಮಾಡಲಿ ಅಂತ ಲಕ್ಷ ಲಕ್ಷ ಹಣ ಕೊಟ್ಟು ಮಕ್ಕಳನ್ನು ಹಾಸ್ಟೇಲ್​ನಲ್ಲಿ (Hostel) ಬಿಟ್ಟಿರ್ತಾರೆ. ಆದ್ರೆ ನಿಜಕ್ಕೂ ಅಲ್ಲಿ ನಡೆಯೋದೇ ಬೇರೆ. 


ಇಲ್ಲೊಂದು ಘಟನೆ ಜರುಗಿದೆ ನೋಡಿ. ಹಾಸ್ಟೇಲ್​ನಲ್ಲಿ ಊಟ ಸರಿ ಇಲ್ಲ ಅಂತ ವಿದ್ಯಾರ್ಥಿಗಳು ಕಂಪ್ಲೇಂಟ್​ ಮಾಡಲು ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಯಾವುಧೆ ರೀತಿ ಸ್ಪಂದನೆ ಸಿಕ್ಕಿಲ್ಲ. ಬಳ್ಳಾರಿಯ ಕೌಲಬಜಾರ್ ನಲ್ಲಿ ಎಸ್ ಟಿ ಕಾಲೇಜ್ ಹಾಸ್ಟೇಲ್ ನಲ್ಲಿ ಈ ಘಟನೆ ಜರುಗಿದೆ.


ಚಿಕನ್ ಸರಿಯಿಲ್ಲ ಅಂತಾ ಪ್ರಶ್ನಿಸಿದ್ದ ವಿದ್ಯಾರ್ಥಿಗಳು


ನಿನ್ನೆ ಚಿಕನ್ ಸರಿಯಿಲ್ಲ ಅಂತಾ ಪ್ರಶ್ನಿಸಿದ್ದ ವಿದ್ಯಾರ್ಥಿಗಳು ರಾತ್ರಿ ಚಿಕನ್  ಸಮೇತ ಅಧಿಕಾರಿಗಳ ಮನೆಗೆ ತೆರಳಿದ್ಧಾರೆ. ರಾತ್ರಿ ಜಿಲ್ಲಾಧಿಕಾರಿ ನಿವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಊಟ ಸರಿಯಿಲ್ಲ ಇದನ್ನು ಹೇಗೆ ತಿನ್ನೋದು ಎಂದು ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: Republic Day GK Questions: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣರಾಜ್ಯೋತ್ಸವದ ಬಗ್ಗೆ ಕೇಳುವ ಪ್ರಶ್ನೆಗಳು, ಉತ್ತರಗಳು ಇಲ್ಲಿವೆ


ರಾತ್ರಿ ವೇಳೆ ನಿವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು


ರಾತ್ರಿ ವೇಳೆ ನಿವಾಸಕ್ಕೆ ಬಂದಿದ್ದಕ್ಕೆ ವಿದ್ಯಾರ್ಥಿಗಳನ್ನ ಹಾಸ್ಟೇಲ್ ನಿಂದ ಹೊರಹಾಕುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ 25 ಜನ ವಿದ್ಯಾರ್ಥಿಗಳನ್ನು ಹಾಸ್ಟೇಲ್​ನಿಂದ ಸಸ್ಪೆಂಡ್​ ಮಾಡಲಾಗಿದೆ. ಡಿಸಿ ಪವನ್ ಕುಮಾರ್ ಈ ಹಾಸ್ಟೇಲ್​ನ ವಾರ್ಡನ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬಳಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು ಅದರ ಪ್ರಕಾರವೇ ವಿದ್ಯಾರ್ಥಿಗಳಿಗೆ ಗೇಟ್​ ಪಾಸ್​ ಮಾಡಲಾಗಿದೆ.


ಡಿಸಿ ಸೂಚನೆ ಮೇರೆಗೆ ವಿದ್ಯಾರ್ಥಿಗಳನ್ನ ಹೊರ ಹಾಕಿದ ವಾರ್ಡನ್
ಜಿಲ್ಲಾಧಿಕಾರಿಗಳ ಮನೆಗೆ ತೆರಳಿದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂಬ ಪ್ರಯತ್ನ ಮಾಡಿದ್ದೇ ತಪ್ಪಾಯ್ತು. ಯಾಕೆಂದರೆ ವಿದ್ಯಾರ್ಥಿಗಳು ಅಲ್ಲಿ ಹೋಗಿದ್ದಕ್ಕೆ ಅವರ ಹಾಸ್ಟೆಲ್​ ಲೈಪ್​ ಮುಕ್ತಾಯವಾಗುವ ಪರಿಸ್ಥಿತಿ ಎದುರಾಗಿ ಇನ್ನೂ ದೊಡ್ಡ ಸಮಸ್ಯೆಯಾಯ್ತು. ಡಿಸಿ ಸೂಚನೆ ಮೇರೆಗೆ ವಿದ್ಯಾರ್ಥಿಗಳನ್ನ ವಾರ್ಡ್​ನ್​ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳು ಡಿಸಿ ಬಳಿ ಹೋಗಿ ನ್ಯಾಯ ಕೇಳಿದ್ದೇ ತಪ್ಪಾಯ್ತಾ?
ವಿದ್ಯಾರ್ಥಿಗಳು  ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ಆಶಾ ಭಾವನೆಯಿಂದ ಜಿಲ್ಲಾಧಿಕಾರಿಗಳ ಮೆನೆಗೆ ರಾತ್ರಿ ತೆರಳಿದ್ದಾರೆ. ಆದರೆ ವಿದ್ಯಾರ್ಥಿಗಳು ಯಾವ ರೀತಿ ಸ್ಪಂದನೆ ಸಿಗುತ್ತೆ ಅಂದುಕೊಂಡಿದ್ದರೋ ಅದಕ್ಕೆ ವಿರುದ್ಧವಾಗಿ ಶಾಕಿಂಗ್​ ರೆಸ್ಪಾನ್ಸ್​ ಬಂದಿದ್ದಕ್ಕೆ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ. ಡಿಸಿ ಆದೇಶದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.


ಈ ಹಿಂದೆ ಶಿವಮೊಗ್ಗ ಹಾಸ್ಟೇಲ್​ನಲ್ಲೂ ಸಹ ಇದೇ ರೀತಿಯಾಗಿತ್ತು
ಇದೇರೀತಿ ಹಾಸ್ಟೆಲ್​​ನಲ್ಲಿ ಊಟ ಮಾಡಿದ ಬಳಿಕ ಕೆಲವು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇದರಲ್ಲಿ ಐವರು ವಿದ್ಯಾರ್ಥಿಗಳು ಗುಣಮುಖವಾಗಿ ವಿದ್ಯಾರ್ಥಿನಿಯಲಕ್ಕೆ ತೆರಳಿದ್ದರು. ಆಗಾಗ ಹಾಸ್ಟೇಲ್​ ಹಾಗೂ ಮಧ್ಯಾಹ್ನದ ಬಿಸಿಊಟದ ಬಗ್ಗೆ ದೂರು ಕೇಳುತ್ತಾ ಇರುತ್ತದೆ. ಆದರೂ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾತ್ರ ವಿದ್ಯಾರ್ಥಿಗಳಿಗೆ   ದೊರೆಯುತ್ತಿಲ್ಲ. ಘಟನೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಆದರೆ ಬಳ್ಳಾರಿ ಹಾಸ್ಟೇಲ್​ ವಿಚಾರಕ್ಕೆ ಇದು ವಿರುದ್ಧವಾದ ಪ್ರತಿಕ್ರಿಯೆ ದೊರೆತಿದೆ.

First published: