ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ. ಕಾಲೇಜುಗಳಲ್ಲಿ ಅಡ್ಮಿಷನ್ ಆರಂಭವಾಗಿದೆ. ನೀವು ಬೆಂಗಳೂರು ಯುನಿವರ್ಸಿಟಿಯಲ್ಲಿ (Bangalore University) ಪರೀಕ್ಷೆ ಬರೆಯಲು ಬಯಸಿದರೆ ಈ ಕೂಡಲೇ ಅಡ್ಮಿಷನ್ ಮಾಡಿಸಬೇಕಾಗುತ್ತದೆ. ಏಕೆಂದರೆ ಅಡ್ಮಿಷನ್ ಮಾಡಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಮೇ 2ನೇ ತಾರೀಖು (Date) ಅಪ್ಲೈ ಮಾಡಲು ಕೊನೆ ದಿನವಾಗಿರುತ್ತದೆ. ಆ ಕಾರಣ ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಗಮನಿಸಿ ಆದಷ್ಟು ಬೇಗ ಅಪ್ಲೈ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಆರಂಭವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿಗಾಗಿ ನೋಂದಣಿಯನ್ನು ಪ್ರಾರಂಭಿಸಿದೆ. 2023-24ರ ಅವಧಿಯ ಕೋರ್ಸ್‌ಗಳಿಗೆ ನೀವು ಜಾಯಿನ್ ಆಗಲು ಬಯಸಿದರೆ ಇಲ್ಲಿ ಅಪ್ಲೈ ಮಾಡಬಹುದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರವೇಶ 2023 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಮೇ 2023 ಆಗಿದೆ .
ನೀವು ಇಲ್ಲಿ MA, MSc, Mcom, MEd, MPEd ಮತ್ತು ಇನ್ನೂ ಹೆಚ್ಚಿನ ವಿವಿಧ ವಿಭಾಗಗಳಲ್ಲಿ PG ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದು. MCom, MCom (FA), MCom (IB) ಮತ್ತು MTTM ನಂತಹ ಕೋರ್ಸ್‌ಗಳು ಲಭ್ಯವಿದೆ. ಇದರ ಪ್ರವೇಶ ಪ್ರಕ್ರಿಯೆಯು ಮೇ ಮತ್ತು ಜೂನ್‌ನಲ್ಲಿ ಪ್ರಾರಂಭವಾಗುತ್ತದೆ. ಯುಜಿ ಕೋರ್ಸ್‌ಗಳಿಗೆ, ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತದೆ.
ಕೆಲವು ವಿದ್ಯಾರ್ಥಿಗಳಿಗೆ ತಾವು ಇದೇ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಬೇಕು ಎಂಬ ಹಂಬಲ ಇರುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಯಾವ ಕಾಲೇಜಿಗೆ ಸೇರುತ್ತಾರೋ ತಾವು ಅಲ್ಲೇ ಸೇರಲು ಬಯಸುತ್ತಾರೆ. ಅಂತಹ ವಿದ್ಯಾರ್ಥಿಗಳೆಲ್ಲರೂ ಈಗಿನಿಂದಲೇ ಅಡ್ಮಿಷನ್ ತಯಾರಿ ನಡೆಸುವುದು ಒಳ್ಳೆಯದು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಕೋರ್ಸ್
ಬೆಂಗಳೂರು ವಿಶ್ವವಿದ್ಯಾಲಯವು ಸುಮಾರು 50 ಪಿಜಿ ಕೋರ್ಸ್‌ಗಳು, ಡಿಪ್ಲೊಮಾ ಕೋರ್ಸ್‌ಗಳು ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡುತ್ತದೆ. ಅಲ್ಲದೆ, ಇದು 48 ಪಿಜಿ ವಿಭಾಗಗಳನ್ನು ಮತ್ತು ಕೋಲಾರದಲ್ಲಿ ಒಂದು ಪಿಜಿ ಕೇಂದ್ರವನ್ನು ಹೊಂದಿದೆ. ಪಿಜಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ನಡೆಸುವ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಮತ್ತು ಪಿಎಚ್‌ಡಿಗಾಗಿ, ವಿದ್ಯಾರ್ಥಿಗಳು ತಮ್ಮ ಪದವಿ ಪದವಿಯನ್ನು ಯುಜಿಸಿ-ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಕನಿಷ್ಠ 50% ಅಂಕಗಳನ್ನು ಪಡೆಯಬೇಕಾಗುತ್ತದೆ.
ಈ ಎಲ್ಲಾ ನಿಯಮಗಳನ್ನು ಅನುಸರಿಸಿ ನೀವು ಅಡ್ಮಿಷನ್ ಮಾಡಿಸಬೇಕಾಗುತ್ತದೆ.
ವಿಶ್ವವಿದ್ಯಾಲಯದ ಹೆಸರು | ಬೆಂಗಳೂರು ವಿಶ್ವವಿದ್ಯಾಲಯ |
ವಿಶ್ವವಿದ್ಯಾಲಯದ ಪ್ರಕಾರ | ರಾಜ್ಯ ವಿಶ್ವವಿದ್ಯಾಲಯ |
ವಿಭಾಗ | ಯುಜಿಸಿ |
ಆರಂಭ | 1964 |
ಲಭ್ಯವಿರುವ ಕೋರ್ಸ್ | BA/ BFA/ BVA/ B.Sc/ BCA/ B.Lib/ B.Com/ BBA/ BHM/ BIAS/ BBF/ LL.B |
ಪಿಜಿ ಕೋರ್ಸ್‌ಗಳ ವಿವರ | MA/ M.Com/ M.Ed/ MBA/ MSW/ MTTM |
ವಿಳಾಸ | ರಾಜಭವನ, ಬೆಂಗಳೂರು, ಕರ್ನಾಟಕ |
ರಾಜ್ಯ | ಕರ್ನಾಟಕ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ