• Home
  • »
  • News
  • »
  • jobs
  • »
  • Henry Harvin Academy: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಸಲೆಂದೇ ಹುಟ್ಟಿಕೊಂಡಿದೆ ಈ ಕಂಪನಿ!

Henry Harvin Academy: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಸಲೆಂದೇ ಹುಟ್ಟಿಕೊಂಡಿದೆ ಈ ಕಂಪನಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಾಂತ್ರಿಕ ಮತ್ತು ಸೃಜನಶೀಲತೆಯಿಂದ ಹಿಡಿದು ಭಾಷಾ ಕೋರ್ಸ್‌ಗಳವರೆಗೆ ಹಲವಾರು ಕ್ಷೇತ್ರಗಳ ಸುತ್ತಲೂ ಅವರ ವೈವಿಧ್ಯಮಯ ಕೋರ್ಸ್‌ಗಳ ಮೂಲಕ ತರಬೇತಿ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ ಈ ಕಂಪನಿ.

  • Share this:

ಬೆಂಗಳೂರಿಗೆ ಕೆಲಸ ಅರಸಿ ಬರುವವರ ಪಟ್ಟಿ ದಿನ ದಿನ ಬೆಳೆಯುತ್ತಲೇ ಇರುತ್ತದೆ. ಇಲ್ಲಿ ಕೆಲಸ ಹುಡುಕುವುದು ಸುಲಭದ ಮಾತಲ್ಲ, ಅದಕ್ಕೆ ತಕ್ಕಂತೆ ನಾವು ಕೆಲವು ಕೌಶಲ್ಯ, ಕೋರ್ಸ್‌ (Course) ಎಲ್ಲವನ್ನೂ ಹೊಂದಿರಬೇಕು. ಹೀಗೆ ಉತ್ತಮ ಕೌಶಲ್ಯ (Skill) ತರಬೇತಿ ನೀಡುವ ಭಾರತೀಯ ಎಡ್-ಟೆಕ್ ಪ್ಲಾಟ್‌ಫಾರ್ಮ್ ಹೆನ್ರಿ ಹಾರ್ವಿನ್ (Henry Harvin Academy) ಎಜುಕೇಶನ್ ಬೆಂಗಳೂರಿನಲ್ಲಿ (Bengaluru) ಹಲವು ಕೆಲಸಗಳಿಗೆ ಪ್ಲೇಸ್‌ಮೆಂಟ್‌ ನೀಡುತ್ತಿದೆ. ಬೆಂಗಳೂರಿನ ಉದ್ಯೋಗಗಳಲ್ಲಿ ಪ್ಲೇಸ್‌ಮೆಂಟ್‌ ನೀಡುವಲ್ಲಿ ಈ ಕಂಪನಿ 212% ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ ಎಂದು ಇತ್ತೀಚಿನ ಅಧಿಕೃತ ಪ್ರಕಟಣೆ ತಿಳಿಸಿದೆ.


ದೇಶಾದ್ಯಂತ ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ವೇಗಗೊಳಿಸಲು ಫ್ರ್ಯಾಂಚೈಸಿ ಆಯ್ಕೆಗಳೊಂದಿಗೆ ಬರುವ ಮೂಲಕ ಕಂಪನಿಯು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ 11 ಕಚೇರಿಗಳ ವಿಸ್ತರಣೆಯೊಂದಿಗೆ ಯುಎಸ್ ಮತ್ತು ಭಾರತವನ್ನು ಆಧರಿಸಿದ ಜಾಗತಿಕ ಎಡ್-ಟೆಕ್‌ ಪ್ಲಾಟ್‌ಫಾರ್ಮ್ ಹಲವಾರು ಪಟ್ಟು ಬೆಳೆದಿದೆ.


2 ವರ್ಷಗಳಲ್ಲಿ ಸಂಸ್ಥೆಯು ತನ್ನ ಉದ್ಯೋಗಿಗಳನ್ನು 150 ರಿಂದ 350 ಕ್ಕೆ ವಿಸ್ತರಿಸಿದ್ದು, ಉದ್ಯೋಗ ದರವೂ  ಬೆಳೆಯುತ್ತಿದೆ. ಹೆನ್ರಿ ಹಾರ್ವಿನ್ ಎಜುಕೇಶನ್ ಅನ್ನು ಪ್ರಸ್ತುತದ ಅತಿ ದೊಡ್ಡ ಕೌಶಲ್ಯದ ಕೋರ್ಸ್ ಪೂರೈಕೆದಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: HMT Recruitment 2022: ಡಿಪ್ಲೋಮಾ ಆಗಿದ್ರೆ ಇಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ


ಒಂದು ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರು
ಮಾಹಿತಿಯ ಪ್ರಕಾರ, ಹೆನ್ರಿ ಹಾರ್ವಿನ್ ಶಿಕ್ಷಣ ಸಂಸ್ಥೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕೋರ್ಸ್‌ಗಳ ಮೂಲಕ ವಿಶೇಷ ವಿಷಯಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಒದಗಿಸುವ ಮೂಲಕ ಒಂದು ಮಿಲಿಯನ್ ಪ್ಲಸ್ ಗ್ರಾಹಕರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಎಡ್‌-ಟೆಕ್‌ ಕಂಪನಿಯು ದೇಶದಾದ್ಯಂತ ತಾಂತ್ರಿಕ ಮತ್ತು ಇತರ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.


"ಹೆಚ್ಚಿನ ಉದ್ಯೋಗಗಳನ್ನು ಕೊಡಿಸುವಲ್ಲಿ ಎದುರು ನೋಡುತ್ತಿದ್ದೇವೆ"
"ನಮ್ಮ ಈ ಸಂಸ್ಥೆ ಬಗ್ಗೆ ಎಲ್ಲರೂ ಉತ್ತಮ ಭಾವನೆ ಹೊಂದಿದ್ದಾರೆ, ಫಲಿತಾಂಶವೂ ಸಹ ಸಕಾರಾತ್ಮಕವಾಗಿದೆ. ಇದೇ ಕಾರಣಕ್ಕೆ ನಾವು ಇನ್ನೂ ಹೆಚ್ಚಿನ ಫ್ರ್ಯಾಂಚೈಸಿ ಆಯ್ಕೆಗಳೊಂದಿಗೆ ಕಂಪನಿಯ ವ್ಯಾಪ್ತಿಯನ್ನು ವಿಸ್ತರಿಸಲು ಬಯಸಿದ್ದೇವೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ನಮ್ಮ ಕೋರ್ಸ್‌ಗಳ ಮೂಲಕ ವಿವಿಧ ವಿಷಯಗಳ ಸುಧಾರಿತ ಕೌಶಲ್ಯಗಳನ್ನು ಒದಗಿಸುವ ಮೂಲಕ ಹೆಚ್ಚಿನ ಉದ್ಯೋಗಗಳನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೆನ್ರಿ ಹಾರ್ವಿನ್ ಶಿಕ್ಷಣದ ಸಂಸ್ಥಾಪಕ, CEO, ಕೌನಾಲ್ ಗುಪ್ತಾ ಹೇಳುತ್ತಾರೆ.


ಹೆನ್ರಿ ಹಾರ್ವಿನ್ ಎಂದರೇನು?
ಹೆನ್ರಿ ಹಾರ್ವಿನ್ ಭಾರತೀಯ ಎಡ್ಟೆಕ್ ಕಂಪನಿಯಾಗಿದ್ದು ಅದು ವೃತ್ತಿಪರ ಅಭಿವೃದ್ಧಿ, ಸೃಜನಶೀಲತೆ ಮತ್ತು ಉತ್ಪಾದಕತೆಯ ಕುರಿತು ಆನ್‌ಲೈನ್ ಮತ್ತು ಆಫ್‌ಲೈನ್ ಕೋರ್ಸ್‌ಗಳನ್ನು ಒದಗಿಸುತ್ತದೆ. ಕಂಪನಿಯು ತರಬೇತಿ ಪರಿಹಾರಗಳು, ಸಲಹಾ ಸೇವೆಗಳು ಮತ್ತು ಇತರ ಶೈಕ್ಷಣಿಕ ಪರಿಹಾರಗಳನ್ನು ಸಹ ನೀಡುತ್ತದೆ.


ಹೆಚ್ಚು ಡಿಮ್ಯಾಂಡ್‌ ಇರುವ ಹೆನ್ರಿ ಹಾರ್ವಿನ್
ಹೆನ್ರಿ ಹಾರ್ವಿನ್ ಎಡ್‌-ಟೆಕ್‌ ವೇದಿಕೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಂಸ್ಥೆಯಾಗಿದ್ದು, ಪ್ರತಿವರ್ಷ ಈ ಸಂಸ್ಥೆಯ ಜನಪ್ರಿಯತೆಯ ದರ ಹೆಚ್ಚುತ್ತಲೇ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷದಲ್ಲಿ 285% ರಷ್ಟು ಕಂಪನಿಯ ಜನಪ್ರಿಯತೆ ಬೆಳೆದಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ‌ಬೆಂಚ್‌ಮಾರ್ಕ್ ಮಾಡಲಾದ ವಿಷಯ, ಸಂಪನ್ಮೂಲಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತರಬೇತಿ ಮತ್ತು ಸೇವೆಗಳನ್ನು ನೀಡುವ ಮೂಲಕ ಜಾಗತಿಕವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬೆಳವಣಿಗೆಯನ್ನು ಮರುರೂಪಿಸುವುದು ಕಂಪನಿಯ ಧ್ಯೇಯವಾಕ್ಯವಾಗಿದೆ.


ಇದು ತಾಂತ್ರಿಕ ಮತ್ತು ಸೃಜನಶೀಲತೆಯಿಂದ ಹಿಡಿದು ಭಾಷಾ ಕೋರ್ಸ್‌ಗಳವರೆಗೆ ಹಲವಾರು ಕ್ಷೇತ್ರಗಳ ಸುತ್ತಲೂ ಅವರ ವೈವಿಧ್ಯಮಯ ಕೋರ್ಸ್‌ಗಳ ಮೂಲಕ ತರಬೇತಿ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

First published: