• ಹೋಂ
  • »
  • ನ್ಯೂಸ್
  • »
  • Jobs
  • »
  • Admission: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

Admission: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ; ಈ ಲಿಂಕ್ ಬಳಸಿ ಅಪ್ಲೈ ಮಾಡಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕವು ಎರಡು ಡಿಪ್ಲೊಮಾ ಕೋರ್ಸ್ ಹಾಗೂ ಐದು ಸರ್ಟಿಫಿಕೇಟ್ ಕೋರ್ಸ್‌ಗಳ ಈ ವರ್ಷದ ಅವಧಿಯ ಕೋರ್ಸ್​ಗಳಿಗಾಗಿ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಿಸಿದೆ. 

  • News18 Kannada
  • 5-MIN READ
  • Last Updated :
  • Karnataka, India
  • Share this:
  • published by :

ಬೆಂಗಳೂರು: ಎಷ್ಟೋ ವಿಶ್ವವಿದ್ಯಾಲಯಗಳಲ್ಲಿ (University) ಕಾಲೇಜಿಗೆ ಹೋಗಿ ಕೋರ್ಸ್​ ಪೂರ್ಣಗೊಳಿಸಬೇಕಾಗುತ್ತದೆ. ಆದರೆ ಇನ್ನು ಕೆಲವು ಕಾಲೇಜುಗಳಲ್ಲಿ ಮಾತ್ರ ದೂರಶಿಕ್ಷಣ ಅವಕಾಶ ಲಭ್ಯವಿರುತ್ತದೆ. ಅದೇ ರೀತಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನೀವು ಡಿಪ್ಲೋಮಾ (Diploma) ಅಥವಾ ಇನ್ಯಾವುದೇ ಸರ್ಟಿಫಿಕೇಟ್​ ಕೋರ್ಸ್​ಗಳನ್ನು ಮಾಡಲು ಬಯಸಿದರೆ ಅಪ್ಲೈ (Apply) ಮಾಡಬಹುದು. ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗೆ ಅಧಿಕೃತ ಜಾಲತಾಣದ ಮಾಹಿತಿಯನ್ನು ನಾವು ನಿಮಗಾಗಿ ನೀಡಿದ್ದೇವೆ ಗಮನಿಸಿ. 


ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕವು ಎರಡು ಡಿಪ್ಲೊಮಾ ಕೋರ್ಸ್ ಹಾಗೂ ಐದು ಸರ್ಟಿಫಿಕೇಟ್ ಕೋರ್ಸ್‌ಗಳ ಈ ವರ್ಷದ ಅವಧಿಯ ಕೋರ್ಸ್​ಗಳಿಗಾಗಿ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಿಸಿದೆ.


2023-24ನೇ ಶೈಕ್ಷಣಿಕ ಸಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅದು ಅರ್ಜಿಗಳನ್ನು ಆಹ್ವಾನಿಸಿದೆ. ನೀವೂ ಸಹ ಈ ಕಾಲೇಜು ಸೇರಲು ಬಯಸಿದ್ದರೆ ಅಥವಾ ಎಲ್ಲಾದರೂ ದೂರ ಶಿಕ್ಷಣವನ್ನು ಪಡೆಯಲು ಬಯಸಿದರೆ ಖಂಡಿತ ಇಲ್ಲೇ ಅಪ್ಲೈ ಮಾಡಿ.


ಇದನ್ನೂ ಓದಿ: NEP: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಆರಂಭವಾಗಲಿದೆ NCERT ಪಠ್ಯಪುಸ್ತಕಗಳ ಪರಿಷ್ಕರಣೆ


ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕ ಈ ಕೋರ್ಸ್‌ಗಳನ್ನು ನಡೆಸುತ್ತದೆ. ಇದರಿಂದ ಹಲವು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನೀವೂ ಇದರ ಪ್ರಯೋಜನ ಪಡೆದುಕೊಳ್ಳಬೇಕಾದರೆ ಈ ವರ್ಷ ಅಪ್ಲೈ ಮಾಡಿ.


ಒಂದು ವರ್ಷದ ಸ್ನಾತಕೋತ್ತರ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ತಲಾ 12,000 ರೂಪಾಯಿ ಶುಲ್ಕವಿದೆ. ನೀವು ಒಂದು ವರ್ಷಕ್ಕೆ 12 ಸಾವಿರ ಕಟ್ಟಿ ಅಪ್ಲೈ ಮಾಡಿದ್ರೆ ಸಾಕು. ಇದೇ ರೀತಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ಕೂಡಾ ಇದೆ. ಇದು ಕನ್ನಡ ಮಾಧ್ಯಮದಲ್ಲಿ ಇರಲಿದೆ. ಇಂಗ್ಲೀಷ್​ ಕಷ್ಟ ಸುಲಭವಾಗಿ ನೀವು ಕನ್ನಡದಲ್ಲಿ ಕಲಿಯಲು ಇಷ್ಟ ಪಡ್ತೀರಾ ಅಂದ್ರೆ  ಕನ್ನಡಲ್ಲಿ ಕೂಡಾ ಮಾಡ್ಬಹುದು.




ಸರ್ಟಿಫಿಕೇಟ್‌ ಕೋರ್ಸ್‌ಗಳ ಪೈಕಿ 'ಕೃಷಿಯಲ್ಲಿ ಬೀಜೊತ್ಪಾದನೆ ತಾಂತ್ರಿಕತೆಗಳು' ಮತ್ತು 'ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ' ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗಿದೆ. ನಿಮ್ಮಿಷ್ಟದ ಕೋರ್ಸ್​ ನೀವು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಈಗ ನಿಮಗೇ ಇದೆ. ಇದಕ್ಕೆ ತಲಾ 3 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಡಿಪ್ಲೊಮಾ ಮತ್ತು ಸರ್ಟಿಫೀಕೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಏ.28 ಕೊನೇ ದಿನವಾಗಿದ್ದು ಅದಕ್ಕಿಂದ ಮುಂಚಿತವಾಗಿ ನೀವು ಅಪ್ಲೈ ಮಾಡಬೇಕಾಗುತ್ತದೆ.


ಅಧಿಕೃತ ಜಾಲತಾಣ ಇಲ್ಲಿದೆ


ನೀವು ಏ8 ರ ಒಳಗೆ ಮಾತ್ರ ಅಪ್ಲೈ ಮಾಡಿ ನಿಮ್ಮ ಸೀಟ್​ ರಿಸರ್ವ್​​ ಮಾಡಿಕೊಳ್ಳಿ. ಅಪ್ಲೈ ಮಾಡಲು ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ https://www.uasbangalore.edu.in/  ನಿಮಗೆ ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅಪ್ಲೈ ಮಾಡಲು ಬೇಕಾದ ಅರ್ಜಿಯನ್ನು ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಕೋರ್ಸ್ ಶುಲ್ಕವನ್ನು ಡಿ.ಡಿ. ಮೂಲಕ ಪಾವತಿಸಿ ನಂತರ ಈ ವಿಳಾಸಕ್ಕೆ ಕಳಿಸಿಕೊಡಿ. ನಿಯಂತ್ರಕರು, ಯುಎಎಸ್‌, ಜಿಕೆವಿಕೆ, ಬೆಂಗಳೂರು- 65 ಇವರ ಹೆಸರಿನಲ್ಲಿ ಪಡೆದು ಏ. 29ರೊಳಗೆ ಸಂಯೋಜಕರು/ ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿವಿ, ಜಿಕೆವಿಕೆ, ಬೆಂಗಳೂರು-65

top videos


    ಇಷ್ಟು ಹಂತಗಳನ್ನು ನೀವು ಪೂರೈಸಿದರೆ ಅರ್ಜಿ ಸಲ್ಲಿಕೆ ಯಶಸ್ವಿಯಾಗುತ್ತದೆ. ಯಶಸ್ವಿಯಾದ ನಂತರ ನೀವು ಮುಂದಿನ ಹಂತದಲ್ಲಿ ಶಿಕ್ಷಣವನ್ನು ಪಡೆಯಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. ಮಾಹಿತಿ ಅಗತ್ಯವಿದ್ದರೆ ಇತರರಿಗೆ ಇದನ್ನು ಹಂಚಿ.

    First published: