ಮಾನ್ಯವಾಗಿ ಪಿಯುಸಿ (Pre-university Course) ಮುಗಿಸಿದ ನಂತರ ಅನೇಕರಿಗೆ ಮುಂದೆ ಪದವಿಯಲ್ಲಿ (Degree) ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಇದ್ದೇ ಇರುತ್ತದೆ. ಅದರಲ್ಲೂ ಪಿಯುಸಿಯಲ್ಲಿ ಉತ್ತಮ ಅಂಕಗಳು ಬಂದಿದ್ದು, ಎಂಜಿನಿಯರಿಂಗ್ (Engineering) ಮತ್ತು ವೈದ್ಯಕೀಯ ಕೋರ್ಸ್ ಗಳನ್ನು(Medical Course) ಆಯ್ಕೆ ಮಾಡಿಕೊಂಡಿರುವವರಿಗೆ ಇಂತಹ ಗೊಂದಲ ಅಷ್ಟಾಗಿ ಇರುವುದಿಲ್ಲ ಅಂತ ಹೇಳಬಹುದು. ಆದರೆ ಇವೆರಡನ್ನು ಆಯ್ಕೆ ಮಾಡಿಕೊಳ್ಳಲು ಅಂಕಗಳು ಕಡಿಮೆ ಇದ್ದಾಗ ವಿದ್ಯಾರ್ಥಿಗಳು ಬೇರೆ ಯಾವ ವಿಷಯಗಳನ್ನು ಓದುವುದು ಅಂತ ತಲೆ ಕೆಡೆಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಅಂತಹವರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಇಂದಿನ ಸಮಯದಲ್ಲಿ ಪ್ರತಿಯೊಂದು ಕ್ಷೇತ್ರ ತನ್ನದೇ ಆದ ವೈಶಿಷ್ಠ್ಯತೆಯನ್ನು ಹೊಂದಿದ್ದು ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಈಗಂತೂ ಅನೇಕ ವಿಷಯಗಳಲ್ಲಿ ನೀವು ಪದವಿಯನ್ನು ಮಾಡಬಹುದು. ಅದರಲ್ಲೂ ಈ ಮನಃಶಾಸ್ತ್ರ ವಿಷಯವೆಂದರೆ ಅನೇಕರಿಗೆ ಒಂದು ರೀತಿಯ ಕುತೂಹಲ ಅಂತ ಹೇಳಬಹುದು.
ಮನೋವಿಜ್ಞಾನ ಎಂದರೇನು?
ಮನೋವಿಜ್ಞಾನ ಎಂದರೆ ಮಾನವನ ಮನಸ್ಸು ಮತ್ತು ನಡವಳಿಕೆಯ ವೈಜ್ಞಾನಿಕ ಅಧ್ಯಯನ, ತುಂಬಾನೇ ಕುತೂಹಲ ಇರುತ್ತದೆ. ಈ ಮನಃಶಾಸ್ತ್ರದಲ್ಲಿ ಕ್ಲಿನಿಕಲ್ ಸೈಕಾಲಜಿ, ಹೆಲ್ತ್ ಸೈಕಾಲಜಿ, ಕೌನ್ಸಿಲಿಂಗ್, ಫೋರೆನ್ಸಿಕ್ ಸೈನ್ಸ್ ಅಥವಾ ಇತರ ಅನೇಕ ವಲಯಗಳಿದ್ದು ಒಂದರಲ್ಲಿ ಪರಿಣತಿ ಪಡೆದಿದ್ದರೂ, ಈ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ ಅಂತ ಹೇಳಬಹುದು.
ಆದರೆ ಪದವಿಯಲ್ಲಿ ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಮನಃಶಾಸ್ತ್ರದ ವಿಷಯಗಳ ಕೋರ್ಸ್ ಅನ್ನು ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಅಥವಾ ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ) ಈ ಎರಡರಲ್ಲಿ ಯಾವುದು ಮಾಡುವುದು ಅಂತ ಗೊಂದಲ ಇರುವುದು ಸಹಜ. ಇವೆರಡರಲ್ಲಿ ಯಾವುದು ಉತ್ತಮ ಅಂತ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಮನಃಶಾಸ್ತ್ರದಲ್ಲಿ ಬಿಎ ಮಾಡುವುದು
ಮನಃಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) 3 ವರ್ಷದ ಪದವಿಯಾಗಿದ್ದು, ಬಿಎ ಸೈಕಾಲಜಿ ಕೋರ್ಸ್ ಅನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಪರಿಣತಿ ಹೊಂದಲು ಆಯ್ಕೆ ಮಾಡಿಕೊಳ್ಳಬಹುದು.
ಸಾಂಸ್ಥಿಕ ಮನೋವಿಜ್ಞಾನ, ಮಕ್ಕಳ ಮನೋವಿಜ್ಞಾನ ಮತ್ತು ವಿಧಿವಿಜ್ಞಾನ ಮನೋವಿಜ್ಞಾನ ಹೀಗೆ ಅನೇಕ ವಿಷಯಗಳಲ್ಲಿ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುತ್ತಾರೆ ಮತ್ತು ಕೋರ್ಸ್ ನ ಪಠ್ಯಕ್ರಮವನ್ನು ಒಳಗೊಂಡಿರುವ ಸಿದ್ಧಾಂತಗಳ ತಿಳುವಳಿಕೆಯನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ಸಮಸ್ಯೆಯನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ಕಲಿಯುತ್ತಾರೆ.
ಮನಃಶಾಸ್ತ್ರದಲ್ಲಿ ಬಿಎಸ್ಸಿ ಮಾಡುವುದು
ಮನಃಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ) ಪಠ್ಯಕ್ರಮವು ವಿಜ್ಞಾನ ಮತ್ತು ಗಣಿತ ಅಂಶಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ಬಿಎ ಸೈಕಾಲಜಿಯಲ್ಲಿ ಕಲಿಸಲಾಗುವ ವಿಷಯಗಳಿಗೆ ಹೋಲಿಸಿದರೆ, ಹೆಚ್ಚಿನ ಪ್ರಯೋಗಾಲಯದ ಕೆಲಸ ಮತ್ತು ಅಂಕಿ ಅಂಶಗಳು ಇಲ್ಲಿ ಇರುತ್ತವೆ ಅಂತ ಹೇಳಬಹುದು. ಈ ಕೋರ್ಸ್, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯವನ್ನು ನಿರ್ಮಿಸಲು ಸಹಾಯಕವಾಗುತ್ತದೆ.
ವಿದ್ಯಾರ್ಥಿಗಳು ಅನುಭವ, ಪ್ರಾಯೋಗಿಕ ಕಲಿಕಾ ಅವಕಾಶಗಳು ಮತ್ತು ಮನಃಶಾಸ್ತ್ರಜ್ಞರಿಂದ ಸಂಸ್ಥೆಗಳು ಏನು ಬಯಸುತ್ತವೆ ಎಂಬುದರ ಸ್ಪಷ್ಟ ತಿಳುವಳಿಕೆಯನ್ನು ಪಡೆಯುತ್ತಾರೆ. ಇದು ಅನುಭವಾತ್ಮಕ ಕಲಿಕೆ ಮತ್ತು ಉನ್ನತ ಪರಿಕಲ್ಪನೆಯ ಅನ್ವಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈ ಕ್ಷೇತ್ರದ ಸಂಶೋಧನೆ ಮತ್ತು ಸಂಖ್ಯಾಶಾಸ್ತ್ರೀಯ ವೈಶಿಷ್ಟ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದು ಈ ಕೋರ್ಸ್ ನ ಗುರಿಯಾಗಿದೆ.
ಇವೆರಡೂ ಕೋರ್ಸ್ ಗಳ ನಡುವಿನ ವ್ಯತ್ಯಾಸ ನೋಡಿ..
ಇವೆರಡರಲ್ಲಿರುವ ವೃತ್ತಿ ಅವಕಾಶಗಳು
ಮನಃಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದ ವಿದ್ಯಾರ್ಥಿಗಳು ಮನಶ್ಶಾಸ್ತ್ರಜ್ಞರಾಗಿ ವೃತ್ತಿಯನ್ನು ಶುರು ಮಾಡಬೇಕು ಎಂದಿರುವವರಿಗೆ ಒಳ್ಳೆಯದು. ಈ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಕೇಂದ್ರಗಳು ಮತ್ತು ಕಾರ್ಪೊರೇಟ್ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ.
ಇದನ್ನೂ ಓದಿ: Exam Result: ತುಮಕೂರು ಯುನಿವರ್ಸಿಟಿ ಸ್ನಾತಕೋತ್ತರ ಪದವಿ ಫಲಿತಾಂಶ ವಿಳಂಬ, ವಿದ್ಯಾರ್ಥಿಗಳಿಂದ ತೀವ್ರ ಅಸಮಾಧಾನ
ಮನಃಶಾಸ್ತ್ರದಲ್ಲಿ ಬಿಎ ಮಾಡಿದ ವಿದ್ಯಾರ್ಥಿಗಳು ಕಾನೂನು, ಸಮಾಜ ಸೇವೆ, ಕೌನ್ಸೆಲಿಂಗ್, ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಶಿಕ್ಷಣ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪದವಿಯ ನಂತರ ಹಲವಾರು ವೃತ್ತಿ ಆಯ್ಕೆಗಳನ್ನು ಹೊಂದಿರುತ್ತಾರೆ.
ಪದವಿ ಮುಗಿಸಿದ ನಂತರ ಕಾನೂನು ಅಥವಾ ಕೌನ್ಸೆಲಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಓದಲು ಬಯಸಿದರೆ ಇದೊಂದು ಒಳ್ಳೆಯ ಆಯ್ಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ