ಹರಿಯಾಣ ಸರ್ಕಾರವು ತಮ್ಮ ಐದನೇ ವರ್ಷದಲ್ಲಿ ಎಂಬಿಬಿಎಸ್ (MBBS) ವಿದ್ಯಾರ್ಥಿಗಳಿಗೆ ಆಯುರ್ವೇದ ಅಧ್ಯಯನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹರ್ಯಾಣ ಆರೋಗ್ಯ (Health) ಸಚಿವ ಅನಿಲ್ ವಿಜ್ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ (Students) ಆಯುರ್ವೇದವನ್ನು ಕಲಿಸುವ ಕೋರ್ಸ್ ಕಾರ್ಯಕ್ರಮವನ್ನು ರೂಪಿಸುವ ಮತ್ತು ಸಿದ್ಧಪಡಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಲು ಯೋಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಮಾಡಲು ಕೆಲವು ತಂಡಗಳನ್ನೂ ಸಹ ರೂಪಿಸಿದ್ದಾರೆ. ಅಲೋಪತಿ ಮತ್ತು ಆಯುರ್ವೇದ (Ayurveda) ಎರಡಕ್ಕೂ ಸಾಮಾನ್ಯವಾದ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರದಂತಹ ವಿಷಯಗಳನ್ನು ಕಲಿಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಎರಡು ಶಾಖೆಗಳ ಅಧ್ಯಯನವನ್ನು ಹೈಬ್ರಿಡ್ ಆದೇಶವನ್ನಾಗಿ ಮಾಡಿದರೆ ಅದು ಕಲಿಕೆಯ ಅಂತರಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ನುರಿತ ಮತ್ತು ಅರ್ಹ ವೈದ್ಯರನ್ನು ಸೃಷ್ಟಿಸಲು ಇದು ತೊಡಕಾಗುತ್ತದೆ ಎಂಬ ಕಾರಣದಿಂದಾಗಿ ಪರಿಣಿತಿ ಹೊಂದಿದ ವೈದ್ಯರನ್ನು ನಿರ್ಮಾಣ ಮಾಡುವ ಸಲುವಾಗಿ ಈ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಆ ಕಾರಣದಿಂದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯುರ್ವೇದ ಕಲಿಕೆ ತುಂಬಾ ಮುಖ್ಯವಾಗುತ್ತದೆ.
ಆಯುರ್ವೇದ ಹಾಗೂ ಇಂಗ್ಲೀಷ್ ಔಷದಗಳು ಬೇರೆ ಬೇರೆಯಾಗಿರಬಹುದು ಆದರೆ ಮಾನವನ ಅಂಗಶಾಸ್ತ್ರ ಒಂದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಆ ಕಾರಣದಿಂದ ಆಯುರ್ವೆದ ಕಲಿಕೆ ಮುಖ್ಯವಾಗುತ್ತದೆ. ಎರಡೂ ಶಾಖೆಗಳ ಸಾಮಾನ್ಯ ಮತ್ತು ಪರಸ್ಪರ ಸಂಬಂಧ ಹೊಂದಿರುವ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಸುವುದು ಅತ್ಯಗತ್ಯ. ಕೇಸ್-ಟು-ಕೇಸ್ ಆಧಾರದ ಮೇಲೆ, ಅಲರ್ಜಿಯ ಕೆಮ್ಮು ಮತ್ತು ಶೀತವನ್ನು ಹೊಂದಿರುವ ರೋಗಿಗಳಿಗೆ ಆಯುರ್ವೇದ ಮತ್ತು ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Admission: UG ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ CUET ಸ್ಕೋರ್‌ಗಳನ್ನು ಪರಿಗಣಿಸಿ ಎಂದ UGC
ಡಾ ದಿನೇಶ್ ಸಂದುಜಾ, ಸಂಘಟನಾ ಕಾರ್ಯದರ್ಶಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಹರಿಯಾಣ ರಾಜ್ಯ) ಇವರು "ಔಷಧದ ಆಯುರ್ವೇದ ಶಾಖೆಯು ಉದಯೋನ್ಮುಖ ಕ್ಷೇತ್ರವಾಗಿದೆ, ಆದರೆ MBBS ನ ಮುಖ್ಯವಾಹಿನಿಯ ಪಠ್ಯಕ್ರಮದಲ್ಲಿ ಅದನ್ನು ಸೇರಿಸುವುದು ಅಪೇಕ್ಷಿತ ಕ್ರಮವಲ್ಲ. ಎಂಬಿಬಿಎಸ್‌ನ ಸಂಪೂರ್ಣ ಐದನೇ ವರ್ಷಕ್ಕೆ ಆಯುರ್ವೇದ ಬೋಧನೆಯನ್ನು ಕಡ್ಡಾಯಗೊಳಿಸುವ ಬದಲು, ಅಲೋಪತಿ ಮತ್ತು ಆಯುರ್ವೇದ ಶಾಖೆಗಳೆರಡಕ್ಕೂ ಸಾಮಾನ್ಯವಾಗಿರುವ ಶರೀರಶಾಸ್ತ್ರ ಮತ್ತು ಅಂಗರಚನಾಶಾಸ್ತ್ರದ ಕೆಲವು ಸಂಬಂಧಿತ ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬಹುದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಆಯುರ್ವೇದ ಮತ್ತು ಅಲೋಪತಿ ಔಷಧಗಳನ್ನು ಶಿಫಾರಸು ಮಾಡಬಹುದು
ಇದರ ಜೊತೆಗೆ, ಅಲರ್ಜಿಯ ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳಿಗೆ, ಆಯುರ್ವೇದ ಮತ್ತು ಅಲೋಪತಿ ಔಷಧಗಳನ್ನು ಶಿಫಾರಸು ಮಾಡಬಹುದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಲೋಪತಿ ಮತ್ತು ಆಯುರ್ವೇದ ಎರಡೂ ಶಾಖೆಗಳನ್ನು ಪ್ರತ್ಯೇಕವಾಗಿ ಕಲಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ಸಂಪೂರ್ಣ ಐದನೇ ವರ್ಷವನ್ನು ಆಯುರ್ವೇದವನ್ನು ಅಧ್ಯಯನ ಮಾಡಿದರೆ, ಅವರು ಮುಖ್ಯವಾಹಿನಿಯ MBBS ಪಠ್ಯಕ್ರಮದ ವಿಮರ್ಶಾತ್ಮಕ ತಿಳುವಳಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಶೈಕ್ಷಣಿಕ ನಷ್ಟಗಳಿಗೆ ಕಾರಣವಾಗುತ್ತದೆ.
ಹೈಬ್ರಿಡ್ ಮಾದರಿ ಬಳಕೆ
ಹೈಬ್ರಿಡ್ ಮಾದರಿಯನ್ನು ರಚಿಸುವ ಗುರಿಯನ್ನು ಹರಿಯಾಣ ಸರ್ಕಾರ ಹೊಂದಿದೆ. "ಸರ್ಕಾರವು ಆಯುರ್ವೇದ ಔಷಧವನ್ನು ಉತ್ತೇಜಿಸಲು ಬಯಸಿದರೆ, ಆಯುರ್ವೇದ ವೈದ್ಯರು ಆಯುರ್ವೇದ ಔಷಧಿಗಳನ್ನು ಮಾತ್ರ ಸೂಚಿಸಬೇಕು ಮತ್ತು ಅಲೋಪತಿ ಔಷಧಿಗಳನ್ನು ಶಿಫಾರಸು ಮಾಡುವುದನ್ನು ತಡೆಯಬೇಕು" ಎಂದು ಸಂದುಜಾ ಹೇಳುತ್ತಾರೆ.
ರಬಿನಾರಾಯಣ ಆಚಾರ್ಯ, ಡೈರೆಕ್ಟರ್ ಜನರಲ್, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (CCRAS), “ ಎಂಬಿಬಿಎಸ್‌ನಲ್ಲಿ ಆಯುರ್ವೇದದ ಸೇರ್ಪಡೆ ಪಠ್ಯಕ್ರಮವು MBBS ವಿದ್ಯಾರ್ಥಿಗಳ ಜ್ಞಾನದ ನೆಲೆಯನ್ನು ವಿಸ್ತರಿಸುತ್ತದೆ. ಏಕೆಂದರೆ ಅವರು ಅಲೋಪತಿ ಶಾಖೆಯನ್ನು ವಿವರವಾಗಿ ಅಧ್ಯಯನ ಮಾಡುವ ಜೊತೆಗೆ ಪರ್ಯಾಯ ಔಷಧದ ವ್ಯವಸ್ಥೆಯನ್ನು ಪರಿಚಯಿಸುತ್ತಾರೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ದೆಹಲಿಯ ಆರ್‌ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಬೆಂಗಳೂರಿನಲ್ಲಿ ಸಂಯೋಜಿತ ಹೊರರೋಗಿ ವಿಭಾಗವನ್ನು (ಒಪಿಡಿ) ಪ್ರಾರಂಭಿಸಲಾಗಿದೆ. ಅಲ್ಲಿ ರೋಗಿಗಳಿಗೆ ಅಲೋಪತಿ ಅಥವಾ ಆಯುರ್ವೇದ ಔಷಧದವನ್ನು ಶಿಫಾರಸು ಮಾಡುತ್ತಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ