• ಹೋಂ
  • »
  • ನ್ಯೂಸ್
  • »
  • Jobs
  • »
  • Education News: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಈ ದೇಶದಲ್ಲೂ ಸಿಗಲಿದೆ ನಿಮ್ಮ ಪದವಿಗೆ ಮಾನ್ಯತೆ!

Education News: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಈ ದೇಶದಲ್ಲೂ ಸಿಗಲಿದೆ ನಿಮ್ಮ ಪದವಿಗೆ ಮಾನ್ಯತೆ!

ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ ಅವರೊಂದಿಗೆ ಧರ್ಮೇಂದ್ರ ಪ್ರಧಾನ್​

ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ ಅವರೊಂದಿಗೆ ಧರ್ಮೇಂದ್ರ ಪ್ರಧಾನ್​

ನೀವು ಆಸ್ಟ್ರೇಲಿಯನ್ ವಿಶ್ವವಿದ್ಯಾನಿಲಯದೊಂದಿಗೆ ಅಥವಾ ಭಾರತದಲ್ಲಿರುವ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಅವಕಾಶವಿರುತ್ತದೆ. ಹೇಗೆ ಗೊತ್ತಾ? ಇಲ್ಲಿದೆ ವಿವರ.

  • Share this:

ಆಸ್ಟ್ರೇಲಿಯಾ ಹಾಗೂ ಭಾರತದ ನಡುವೆ ಶೈಕ್ಷಣಿಕ (Educational) ಒಪ್ಪಂದ ನಡೆದಿದೆ ಇದರ ಪ್ರಕಾರ ಭಾರತದಲ್ಲಿ (India) ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಲ್ಲಿ ಪದವಿ ಪಡೆದ ಆಧಾರದ ಮೇಲೆ ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಲಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದೇಶದಲ್ಲಿ ನೀವು ಶಿಕ್ಷಣ ಮುಂದುವರಿಸಲು ನೀವು ಆಸಕ್ತರಾಗಿದ್ದರೆ ಖಂಡಿತ ಈ ಒಪ್ಪಂದದಿಂದ ನಿಮಗೊಂದು ಸುವರ್ಣಾವಕಾಶವೇ ಒದಗಿ ಬಂದಿದೆ ಎಂದರೆ ತಪ್ಪಾಗಲಾರದು. ಈ ಕುರಿತು ಸಂಪೂರ್ಣ ಮಾಹಿತಿ (Information) ಇಲ್ಲಿದೆ ಓದಿ. 


ಗುರುವಾರ ಎರಡು ದೇಶಗಳ ನಡುವೆ ಸಹಿ ಮಾಡಲಿರುವ ಪರಸ್ಪರ ಚೌಕಟ್ಟಿನ ಅಡಿಯಲ್ಲಿ ಭಾರತದಲ್ಲಿ ಪಡೆದ ಉನ್ನತ ಶಿಕ್ಷಣ ಪದವಿಗಳನ್ನು ಆಸ್ಟ್ರೇಲಿಯಾ ಗುರುತಿಸಲು ಪ್ರಾರಂಭಿಸುತ್ತದೆ.  ಆದರೆ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನು ಪಾಸ್ ಔಟ್‌ಗಳ ವೃತ್ತಿಪರ ನೋಂದಣಿಗಳು ಅದರ ವ್ಯಾಪ್ತಿಯಿಂದ ಹೊರಗಿರುತ್ತವೆ ಎಂದು ಹೇಳಲಾಗಿದೆ.  ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ವಿದ್ಯಾರ್ಹತೆಗಳ ಪರಸ್ಪರ ಗುರುತಿಸುವಿಕೆಗಾಗಿ ಕಾರ್ಯವಿಧಾನಕ್ಕೆ ಸಹಿ ಹಾಕಲಿರುವ ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ ಅವರು ಬುಧವಾರ ದೆಹಲಿಗೆ ಭೇಟಿ ನೀಡಿದ್ದು, ಈ ಚೌಕಟ್ಟು ಒಂದು ದಶಕದಲ್ಲಿ ನಡೆದ ಚರ್ಚೆಯ ಫಲಿತಾಂಶವಾಗಿದೆ ಎಂದು ಹೇಳಿದರು.


ಎರಡು ದೇಶಗಳ ನಡುವೆ ಒಪ್ಪಂದ


ಭಾರತವು ಯುಎಸ್‌ನಂತಹ  ದೇಶಗಳೊಂದಿಗೆ ಇತರ ಒಪ್ಪಂದಗಳನ್ನು ಹೊಂದಿದೆ. ಯುಎಸ್ ಜೊತೆಗಿನ ಒಪ್ಪಂದಕ್ಕಿಂತ ಇದು ವಿಶಾಲವಾದದ್ದು, ಇದು ಆನ್‌ಲೈನ್ ಕೋರ್ಸ್‌ಗಳನ್ನು ಒಳಗೊಂಡಿದೆ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ನಡೆಸಬಹುದಾದ ಕೋರ್ಸ್‌ಗಳನ್ನು ಹೊರತುಪಡಿಸಿ ಭಾರತದಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯ ಸ್ಥಾಪಿಸುತ್ತಿರುವಂತಹ ಸ್ವತಂತ್ರ ಕ್ಯಾಂಪಸ್‌ ಬಗ್ಗೆ ಮಾಹಿತಿ ನೀಡಲಾಗಿದೆ.


ಇದನ್ನೂ ಓದಿ: NEET 2023 ಯುಜಿ ಪರೀಕ್ಷೆಗಳ ಮಾಹಿತಿ ಇಲ್ಲಿದೆ ಗಮನಿಸಿ


ಚೌಕಟ್ಟು ವೃತ್ತಿಪರ ಅರ್ಹತೆಗಳಿಗೆ ಪರಸ್ಪರ ಮನ್ನಣೆಯನ್ನು ನೀಡುತ್ತದೆಯೇ ಎಂದು ಕೇಳಿದಾಗ, ಆ ನಿಬಂಧನೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಕ್ಲೇರ್ ಹೇಳಿದರು.


ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬಹುದಾ?


ಒಬ್ಬ ಭಾರತೀಯ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿಯನ್ನು ಹೊಂದಿರುವ ವೈದ್ಯನಾಗಿದ್ದರೆ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಬಹುದಾ? ಮತ್ತು ವೈದ್ಯಕೀಯ ಅಭ್ಯಾಸ ಮಾಡಬಹುದೇ? ಎಂದು ಕೇಳಲಾಯಿತು. "ಈ ಸಮಯದಲ್ಲಿ, ಉತ್ತರವು ಇಲ್ಲ, ಏಕೆಂದರೆ ವೈದ್ಯಕೀಯ ವೃತ್ತಿಯು ತನ್ನದೇ ಆದ ನೋಂದಣಿ ಪ್ರಕ್ರಿಯೆಯನ್ನು ಹೊಂದಿರುವಲ್ಲಿ ಇದಕ್ಕಾಗಿ ಮತ್ತೊಂದು ಹೆಜ್ಜೆ ತೆಗೆದುಕೊಳ್ಳಬೇಕಾಗಿದೆ" ಎಂದು ಅವರು ಹೇಳಿದರು.


ಆದ್ದರಿಂದ ಇದರರ್ಥ ನೀವು ಆಸ್ಟ್ರೇಲಿಯನ್ ವಿಶ್ವವಿದ್ಯಾನಿಲಯದೊಂದಿಗೆ ಅಥವಾ ಭಾರತದಲ್ಲಿರುವ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಅವಕಾಶವಿರುತ್ತದೆ. ಆಸ್ಟ್ರೇಲಿಯನ್ ಆನ್ಲೈನ್ ಕೋರ್ಸ್ ಮಾಡಲು ಅವಕಾಶವಿದೆ. ಈ ಪದವಿಗಳಿಗೆ ಭಾರತ ಹಾಗು ಆಸ್ಟ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗುತ್ತದೆ.” ಎಂದು ತಿಳಿಸಿದರು.
ಅವರು ಭಾಗವಹಿಸಿದ್ದ 2015ರ ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮಂಡಳಿಯ ಸಭೆಯನ್ನು ನೆನಪಿಸಿಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್, ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಶಾಖೆಯ ಕ್ಯಾಂಪಸ್ ಅನ್ನು ಸ್ಥಾಪಿಸುವ ವೊಲೊಂಗಾಂಗ್ ವಿಶ್ವವಿದ್ಯಾನಿಲಯದ ಜಾಗತಿಕ ಬ್ರಾಂಡ್ ಅಂಬಾಸಿಡರ್ ಎಂಬುದನ್ನು ತಿಳಿಸಿದರು. ಇದರಿಂದ ಭಾರತದ ವಿದ್ಯಾರ್ಥಿಗಳಿಗೆ ಅವಕಾಶ ಹೆಚ್ಚಲಿದೆ. ಉದ್ಯೋಗದ ಕ್ಷೇತ್ರ ವಿಸ್ತಾರವಾಗಲಿದೆ. ಹೊರ ದೇಶದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳ ಬೇಕು ಎಂಬ ಆಶಯ ಹೊಂದಿದವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.


ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ವಿದ್ಯಾರ್ಹತೆಗಳ ಪರಸ್ಪರ ಗುರುತಿಸುವಿಕೆಗಾಗಿ ಕಾರ್ಯವಿಧಾನಕ್ಕೆ ಸಹಿ ಹಾಕಲಿರುವ ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ ಅವರು ಬುಧವಾರ ದೆಹಲಿಗೆ ಭೇಟಿ ನೀಡಿದ್ದು, ಈ ಚೌಕಟ್ಟು ಒಂದು ದಶಕದಲ್ಲಿ ನಡೆದ ಚರ್ಚೆಯ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು