ಕೊಪ್ಪಳ: ಆರ್ ಎಂಎಸ್ ಪರೀಕ್ಷೆ (Exam) ನಡೆಯುತ್ತಿರುವ ಸ್ಥಳದಲ್ಲಿ ಜೇನು ನೊಣಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಕೊಪ್ಪಳದ ಪರೀಕ್ಷಾ ಕೇಂದ್ರದಲ್ಲಿ ಜೇನು ನೊಣಗಳ ದಾಳಿ ಆಗಿರುವುದರಿಂದ ವಿದ್ಯಾರ್ಥಿಗಳಿಗೆ (Students) ತುಂಬಾ ತೊಂದರೆ ಉಂಟಾಗಿದೆ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಅಸ್ವಸ್ಥವಾಗಿದ್ದಾರೆ. ಇವರನ್ನು ಆಸ್ಪತ್ರೆಗೆ (Hospital) ಸೇರಿಸಲಾಗಿದೆ. ಆರ್ ಎಂಎಸ್ ಪರೀಕ್ಷೆಗೆ ಬಂದಿರುವ ವಿದ್ಯಾರ್ಥಿಗಳು ಸದ್ಯ ಆಸ್ಪತ್ರೆಯಲ್ಲೇ ಇರುವಂತಾಗಿದೆ. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು ಅವರೆಲ್ಲರಿಗೂ ಜೇನು ನೊಣಗಳು ಕಚ್ಚಿವೆ.
ಆದರೆ 10 ಜನ ವಿದ್ಯಾರ್ಥಿಗಳಿಗೆ ಮಾತ್ರ ಕಾರಣ ಗಂಭೀರವಾಗಿ ತೊಂದರೆಯಾಗಿದೆ. ಕುಷ್ಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಕ್ಕಳ ಜೊತೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರಿಗೂ ಸಹ ಜೇನು ನೊಣಗಳು ಕಡಿದಿರುವುದು ವರದಿಯಾಗಿದೆ.
ಕುಷ್ಟಗಿ ಪಟ್ಟಣದ ದಿ ಕ್ರೈಸ್ತ ಕಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆರ್ ಎಂಎಸ್ ಪರೀಕ್ಷೆಗೆ ಬಂದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಕೂತಿದ್ದಾರೆ. ತಾಲೂಕಿನ ತಳುವಗೆರಿ, ನಿಡಸೇಸಿ, ಹಿರೇಮನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು ಜೇನು ದಾಳಿಗೆ ಸಿಲುಕಿ ನೋವುಣ್ಣುತ್ತಿದ್ದಾರೆ.
ಇದನ್ನೂ ಓದಿ: CUET PG 2023: ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟ; UGC ಮುಖ್ಯಸ್ಥ ಜಗದೇಶ್ ಕುಮಾರ್
ಪರೀಕ್ಷಾ ಕೇಂದ್ರದ ಬಳಿ ಬಂದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಮತ್ತೆ ಯಾವಾಗ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆಯೋ ಗೊತ್ತಿಲ್ಲ.
ಈ ಹಿಂದೆ ಕೂಡಾ ಪರೀಕ್ಷಾ ಕೇಂದ್ರಕ್ಕೆ ಜೇನುನೊಣಗಳು ದಾಳಿ ಮಾಡಿದ ಘಟನೆಗಳು ಜರುಗಿವೆ. ಇಂತಹ ಸಂದರ್ಭದಲ್ಲಾದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರವನ್ನು ನೋಡಿಕೊಳ್ಳಬೇಕು. ಇದೆಲ್ಲದರ ಬಗ್ಗೆಯೂ ಗಮನಕೊಡಬೇಕು. ಕೆಲವು ಸಂದರ್ಭದಲ್ಲಿ ಅರಿವಿಗೆ ಬರದಂತೆ ಈ ರೀತಿಯ ಘಟನೆಗಳು ಜರುಗುತ್ತದೆ.
CUET PG 2023 ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಗಮನಿಸಿ
CUET PG 2023 ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಈಗಾಗಲೇ ಸೂಚನೆಗಳಿಗಾಗಿ ಕಾಯುತ್ತಿರಬಹುದು. ಇನ್ನೇನು ಪರೀಕ್ಷಾ ದಿನಾಂಕ ಕೂಡಾ ಪ್ರಕಟವಾಗಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶೀಘ್ರದಲ್ಲೇ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ದಿನಾಂಕವನ್ನು ಪ್ರಕಟಗೊಳಿಸಲು ಸಿದ್ಧವಾಗಿದ್ದು ವಿದ್ಯಾರ್ಥಿಗಳಿಗೆ ಈ ಕುರಿತು ಸೂಚನೆಯನ್ನು ನೀಡುತ್ತಿದೆ.
cuet.nta.nic.inನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ. (CUET-PG) 2023 ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ — cuet.nta.nic.in ನಲ್ಲಿ ಡೇಟ್‌ಶೀಟ್ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಅಧಿಕೃತ ಡೇಟ್‌ಶೀಟ್ ಬಿಡುಗಡೆಯಾಗಿಲ್ಲ. ಆದರೂ ಯುಜಿಸಿ ಮುಖ್ಯಸ್ಥ ಎಂ ಜಗದೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಈ ಕುರಿತು ಅಲರ್ಟ್ ಆಗಿರುವಂತೆ ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ