ಆಸ್ಟ್ರಲ್ ಫೌಂಡೇಶನ್ 10th/12th/Diploma ನಂತರ ಪದವಿಪೂರ್ವ ಅಥವಾ ಡಿಪ್ಲೊಮಾ ಕೋರ್ಸ್ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ (Students) ಹಣಕಾಸಿನ ಸಹಾಯವನ್ನು ಒದಗಿಸುತ್ತಿರುವ ವಿದ್ಯಾರ್ಥಿವೇತನ. ಅದೇ ರೀತಿ ಹಲವಾರು ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳ ಜೀವನ ಸುಧಾರಣೆಗೆಂದು ಮತ್ತು ಉನ್ನತ ಶಿಕ್ಷಣ (Education) ಪೂರೈಸುವ ಸಲುವಾಗಿ ನೀಡಲಾಗುತ್ತದೆ. ಆಸ್ಟ್ರಲ್ ಫೌಂಡೇಶನ್ ಎಲ್ಲಾ ವಿಭಾಗದ ವಿದ್ಯಾರ್ಥಗಳಿಗೂ ಲಭ್ಯವಿದ್ದು ನೀವೂ ಸಹ ಅಪ್ಲೈ (Apply) ಮಾಡಬಹುದು. ಈ ವಿದ್ಯಾರ್ಥಿ ವೇತನದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಯೋಜನೆಯ ಹೆಸರು | ಆಸ್ಟ್ರಲ್ ಫೌಂಡೇಶನ್ ವಿದ್ಯಾರ್ಥಿವೇತನ |
ಪ್ರಾರಂಭಿಸಿದವರು | ಆಸ್ಟ್ರಲ್ ಫೌಂಡೇಶನ್ |
ಫಲಾನುಭವಿಗಳು | ವಿದ್ಯಾರ್ಥಿಗಳು |
ಪ್ರಯೋಜನಗಳು | ವರ್ಷಕ್ಕೆ 10 ರಿಂದ 30 ಸಾವಿರ |
ಅಪ್ಲಿಕೇಶನ್ ವಿಧಾನ | ಆನ್ಲೈನ್ |
ಅಧಿಕೃತ ಸೈಟ್ | www.vidyasaarathi.co.in |
ಸ್ಕಾಲರ್ ಶಿಪ್ನ ಉದ್ದೇಶ:
ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು. ಆರ್ಥಿಕ ಸಂಕಷ್ಟದಿಂದ ಉತ್ತನ ಶಿಕ್ಷಣ ಅಥವಾ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಆಸ್ಟ್ರಲ್ ಫೌಂಡೇಶನ್ ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವನ್ನು ನೀಡುತ್ತದೆ.
ಇದನ್ನೂ ಓದಿ: PM Poshan Yojana: ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆ ವಿಸ್ತರಣೆಗೆ ಚಿಂತನೆ
ಅಪ್ಲೈ ಮಾಡುವುದು ಹೇಗೆ?
1ಈಗ ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಹೆಸರನ್ನು ಸರ್ಚ್ ಮಾಡಿ.
2.ಮುಖ ಪುಟ ತೆರೆಯುತ್ತದೆ.
3. ಅಪ್ಲಿಕೇಶನ್ ಫಾರ್ಮ್ ವಿಂಡೋ ಪರದೆಯ ಮೇಲೆ ತೆರೆಯುತ್ತದೆ.
4. ಅಗತ್ಯ ದಾಖಲೆಗಳನ್ನು ನೀಡಿ
5.ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
6. ಸರಿಯಾದ ದೂರವಾಣಿ ಸಂಖ್ಯೆ ನೀಡಿ
7. ಸರಿಯಾದ ಮೇಲ್ ಐಡಿ ನೀಡಿ
8. ಮುಂದಿನ ಸಂಪರ್ಕಕ್ಕೆ ಸಹಾಯವಾಗುವ ರೀತಿಯಲ್ಲಿ ಸೇವ್ ಮಾಡಿ
9. ಒಂದು ಹಾರ್ಡ್ ಕಾಫಿ ತೆಗೆದುಕೊಳ್ಳಿ.
10. ಅರ್ಜಿ ಶುಲ್ಕ ಕೇಳಿದರೆ ಪಾವತಿಸಿ.
11. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ www.vidyasaarathi.co.in
ಅಪ್ಲಿಕೇಷನ್ ಆರಂಭ ದಿನಾಂಕ: ಡಿಸೆಂಬರ್ 1, 2022
ಅಪ್ಲಿಕೇಷನ್ ಕೊನೆ ದಿನಾಂಕ: ಡಿಸೆಂಬರ್ 31, 2022
ಯಾರೆಲ್ಲಾ ಅರ್ಹರಾಗಿರುತ್ತಾರೆ?
1. B.Sc ಅಗ್ರಿಕಲ್ಚರ್ ಕೋರ್ಸ್ಗಾಗಿ ಆಸ್ಟ್ರಲ್ ಫೌಂಡೇಶನ್ ನವೀಕರಣ ವಿದ್ಯಾರ್ಥಿವೇತನ (2022-2023) ಕನಿಷ್ಠ 50% ಅಂಕಗಳೊಂದಿಗೆ 10 ನೇ ಮತ್ತು 12 ನೇ ತರಗತಿ ಪರೀಕ್ಷೆ ಪಾಸ್ ಆಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚಿರಬಾರದು.
2. ಅಂಡರ್ ಗ್ರಾಜುಯೇಟ್ ಕೋರ್ಸ್ಗಾಗಿ ಆಸ್ಟ್ರಲ್ ಫೌಂಡೇಶನ್ ನವೀಕರಣ ವಿದ್ಯಾರ್ಥಿವೇತನ (2022-2023)
3. BE/B.Tech ಕೋರ್ಸ್ಗಾಗಿ ನವೀಕರಣ ವಿದ್ಯಾರ್ಥಿವೇತನ (2022-2023) ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ, 12 ನೇ ತರಗತಿ ಮತ್ತು ಡಿಪ್ಲೊಮಾ ಪರೀಕ್ಷೆಯನ್ನು ಪಾಸ್ ಆಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚಿರಬಾರದು.
4. ಡಿಪ್ಲೊಮಾ ಕೋರ್ಸ್ಗಾಗಿ ಆಸ್ಟ್ರಲ್ ಫೌಂಡೇಶನ್ ನವೀಕರಣ ವಿದ್ಯಾರ್ಥಿವೇತನ (2022-2023) 10 ನೇ ತರಗತಿಯನ್ನು ಹೊಂದಿರಬೇಕು, ಕನಿಷ್ಠ 50% ಅಂಕಗಳೊಂದಿಗೆ ಪರೀಕ್ಷೆಯನ್ನು ಪಾಸ್ ಆಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚಿರಬಾರದು.
ಅಗತ್ಯ ದಾಳಲೆಗಳು:
1. ಗುರುತಿನ ಪುರಾವೆ
2. ವಿಳಾಸದ ಪುರಾವೆ
3. 10 ನೇ ಮತ್ತು 12 ನೇ ತರಗತಿ ಅಂಕಪಟ್ಟಿಗಳು
4. ಆದಾಯ ಪ್ರಮಾಣಪತ್ರ
5. ವಿದ್ಯಾರ್ಥಿಯ ಬ್ಯಾಂಕ್ ಪಾಸ್ಬುಕ್
6. ಪ್ರಸ್ತುತ ವರ್ಷದ ಕಾಲೇಜು ಶುಲ್ಕ ರಶೀದಿ
ಆದಷ್ಟು ಬೇಗ ಈ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಿ ಮತ್ತು ಇಂದೇ ಅರ್ಜಿ ಭರ್ತಿ ಮಾಡಿ ಅಪ್ಲೈ ಮಾಡಿಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ