• Home
  • »
  • News
  • »
  • jobs
  • »
  • Study Report: ಕರ್ನಾಟಕದ ಇಷ್ಟೊಂದು ಮಕ್ಕಳಿಗೆ ಓದೋಕೇ ಬರಲ್ವಂತೆ!

Study Report: ಕರ್ನಾಟಕದ ಇಷ್ಟೊಂದು ಮಕ್ಕಳಿಗೆ ಓದೋಕೇ ಬರಲ್ವಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾರ್ವಜನಿಕ ಶಿಕ್ಷಣ ಇಲಾಖೆಯು, ವರದಿಯು ಬಹಿಂರಂಗಪಡಿಸಿರುವ ಅಂಕಿ ಅಂಶಗಳನ್ನು ನಿರಾಕರಿಸಿದ್ದು, ಕಲಿಕಾ ಚೇತರಿಕೆ ಕಾರ್ಯಕ್ರಮಗಳು ಮಕ್ಕಳ ಮೇಲೆ ಪರಿಣಾಮ ಬೀರಿಲ್ಲ ಎಂಬ ಅಂಶವನ್ನು ಅಂಗೀಕರಿಸಿಲ್ಲ.

  • Trending Desk
  • 5-MIN READ
  • Last Updated :
  • Karnataka, India
  • Share this:

ಶಿಕ್ಷಣ ಇಂದಿನ ದಿನಗಳಲ್ಲಿ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಕೋವಿಡ್‌ ಸಾಂಕ್ರಾಮಿಕದ ಹಾವಳಿಯಿಂದ ಹೆಚ್ಚು ಪರಿಣಾಮಕ್ಕೊಳಗಾಗಿರುವುದು ಶಿಕ್ಷಣ (Education) ಕ್ಷೇತ್ರವಾಗಿದೆ. ಕೋವಿಡ್ ಕಾರಣ ಶಾಲೆಗಳನ್ನು ಮುಚ್ಚಬೇಕಾಯಿತು ಹಾಗೂ ಈ ಸಮಯದಲ್ಲಿ ಮಕ್ಕಳಿಗೆ ಪಾಠ (Lesson) ಪ್ರವಚನಗಳು ತಪ್ಪಬಾರದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ (Students) ಆನ್‌ಲೈನ್ ಕಲಿಕಾ ಪದ್ಧತಿಯನ್ನು ಪರಿಚಯಿಸಲಾಯಿತು. ಶಾಲೆಯ ಮುಕ್ತ ವಾತಾವರಣದಲ್ಲಿ ಓದಬೇಕಾದ (Reading) ಮಕ್ಕಳು ಸರಿಸುಮಾರು 2 ವರ್ಷಗಳವರೆಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವಂತಾಯಿತು.


ಕಲಿಕಾ ಚೇತರಿಕೆ ಕಾರ್ಯಕ್ರಮಗಳು


2021ರ ಮಧ್ಯಭಾಗದಲ್ಲಿ ಶಾಲೆಗಳು ಪುನಃ ತೆರೆದಾಗ ಮಕ್ಕಳಲ್ಲಿ ಏಕಾಗ್ರತೆ, ಶಾಲಾ ಪರಿಸರಕ್ಕೆ ಹೊಂದಿಕೊಳ್ಳದಿರುವುದು, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ಇರುವುದು ಮೊದಲಾದ ಸವಾಲುಗಳನ್ನು ಶಾಲೆಗಳು ಎದುರಿಸಬೇಕಾಯಿತು. ಇದಕ್ಕಾಗಿಯೇ ಮಕ್ಕಳಿಗೆ ಕೋವಿಡ್ ಸಮಯದಲ್ಲಿ ನಷ್ಟವಾದ ಕಲಿಕೆಯನ್ನು ಪುನರ್ ರೂಪಿಸುವುದಕ್ಕಾಗಿ ಶಾಲೆಗಳು ಅದೇ ರೀತಿಯ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡವು, ಇದರಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಖ್ಯವಾದುದು.


ವಿದ್ಯಾರ್ಥಿಗಳ ನಿರಾಶಾದಾಯಕ ಬೆಳವಣಿಗೆ


ಇದೀಗ ASER (ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ) ಕರ್ನಾಟಕದ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳ ನಿರಾಶಾದಾಯಕ ಬೆಳವಣಿಗೆಯನ್ನು ವರದಿ ಮಾಡಿದೆ. ಮಕ್ಕಳು ವಾಕ್ಯಗಳನ್ನು ಓದುವುದರಲ್ಲಿ ಪದಗಳನ್ನು ಪ್ರಯೋಗಿಸುವುದರಲ್ಲಿ ಕಳಪೆ ಪ್ರದರ್ಶನಗಳನ್ನು ನೀಡಿದ್ದಾರೆ ಎಂದು ವರದಿ ಮಾಡಿದೆ.


ಎರಡನೇ ತರಗತಿಯ ಪಠ್ಯಪುಸ್ತಕಗಳನ್ನು 3 ನೇ ತರಗತಿಯ ಮಕ್ಕಳು ಓದಲು ಕಷ್ಟಪಡುತ್ತಿದ್ದಾರೆ


ಸರಕಾರಿ ಅಥವಾ ಖಾಸಗಿ ಶಾಲೆಗಳ 3 ನೇ ತರಗತಿಯ ಮಕ್ಕಳಲ್ಲಿ ಓದಿನ ಕೊರತೆ ಕಂಡುಬಂದಿದ್ದು ಎರಡನೇ ತರಗತಿಯ ಪಠ್ಯಪುಸ್ತಕಗಳನ್ನು ಓದುವಲ್ಲಿ ಅಸಮರ್ಥರಾಗಿದ್ದಾರೆ ಹಾಗೂ 2018 ರಲ್ಲಿ 19% ದಿಂದ ಈ ಪ್ರಮಾಣ 2022 ರಲ್ಲಿ 9% ಕ್ಕೆ ಇಳಿದಿದೆ ಎಂದು ವರದಿ ದಾಖಲಿಸಿದೆ.ಇನ್ನು ಹುಡುಗರಿಗಿಂತ (7.5%) ಹುಡುಗಿಯರು (9.6%) ಓದಿನಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಓದಿದ್ದೇನು? 'ಕಿರಿಕ್ ಪಾರ್ಟಿ'ಯಲ್ಲಿ ಪಾಠ ಮಾಡಿದ್ದ 'ಸಾನ್ವಿ' ರಿಯಲ್ ಲೈಫಲ್ಲಿ ಈ ಕೋರ್ಸ್ ಮಾಡಿದ್ದಾರಾ?


ಗಣಿತದಲ್ಲಿ ಹಿಂದಿರುವ ವಿದ್ಯಾರ್ಥಿಗಳು


ಅಂಕಗಣಿತದಲ್ಲಿ ಐದನೇ ತರಗತಿಯ ಮಕ್ಕಳ ಸಾಮರ್ಥ್ಯವನ್ನು ನೋಡುವುದಾದರೆ 2018 ರಲ್ಲಿ 21% ದಿಂದ 2022 ರಲ್ಲಿ 13% ಕ್ಕೆ ಇಳಿದಿದೆ. ಇಂಗ್ಲೀಷ್ ಭಾಷೆಯನ್ನು ಓದುವುದರಲ್ಲಿ ಐದನೇ ತರಗತಿಯ ಮಕ್ಕಳ ಪ್ರದರ್ಶನವು 20% ದಿಂದ 2% ಕ್ಕೆ ಇಳಿದಿದ್ದು, ಎಂಟನೇ ತರಗತಿಯ ಮಕ್ಕಳ ಪ್ರದರ್ಶನವು 2016 ರಿಂದ 48% ಇಳಿಕೆಯಾಗಿದೆ.


ಶಿಕ್ಷಕರ, ವಿದ್ಯಾರ್ಥಿಗಳ ಹಾಜರಾತಿಗಳಲ್ಲಿ ಹೆಚ್ಚಳ


ದೇಶದ ಇತರೆಡೆಗಳಲ್ಲಿ ಕೋವಿಡ್ ಕಾರಣದಿಂದ ASER ಸರ್ವೆಯನ್ನು ನಡೆಸಲಿಲ್ಲ. ಒಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ಸ್ಥಿತಿ 2022 ರಲ್ಲಿ ತೀರಾ ಕೆಟ್ಟದಾಗಿದೆ ಎಂದು ವರದಿ ದಾಖಲಿಸಿದೆ. ಈ ನಡುವೆ ಒಳ್ಳೆಯ ಸುದ್ದಿ ಎಂದರೆ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಯು ಏರಿಕೆಯಾಗಿದ್ದು 2018 ರಲ್ಲಿ 89.9% ದಿಂದ 2022 ರಲ್ಲಿ 92.6% ಕ್ಕೆ ಹೆಚ್ಚಳವಾಗಿರುವುದಾಗಿದೆ. ಅದೇ ರೀತಿ ಮಕ್ಕಳ ಹಾಜರಾತಿಯನ್ನು ಗಮನಿಸುವುದಾದರೆ 84.1% ದಿಂದ 2022 ರಲ್ಲಿ 87.5% ಕ್ಕೆ ಏರಿಕೆಯಾಗಿರುವುದಾಗಿದೆ.


ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿಪ್ರಾಯವೇನು?


ಸಾರ್ವಜನಿಕ ಶಿಕ್ಷಣ ಇಲಾಖೆಯು, ವರದಿಯು ಬಹಿಂರಂಗಪಡಿಸಿರುವ ಅಂಕಿ ಅಂಶಗಳನ್ನು ನಿರಾಕರಿಸಿದ್ದು, ಕಲಿಕಾ ಚೇತರಿಕೆ ಕಾರ್ಯಕ್ರಮಗಳು ಮಕ್ಕಳ ಮೇಲೆ ಪರಿಣಾಮ ಬೀರಿಲ್ಲ ಎಂಬ ಅಂಶವನ್ನು ಅಂಗೀಕರಿಸಿಲ್ಲ.




ಕಲಿಕಾ ಚೇತರಿಕೆ ಯೋಜನೆ/ಕಾರ್ಯಕ್ರಮವನ್ನು ನಾವು ಪ್ರಸ್ತುತಪಡಿಸದೇ ಇರುತ್ತಿದ್ದರೆ ಶೈಕ್ಷಣಿಕ ಫಲಿತಾಂಶಗಳು ಇನ್ನಷ್ಟು ಹದಗೆಟ್ಟಿರುತ್ತಿತ್ತು ಎಂದು ತಿಳಿಸಿದೆ.


ಈ ಕಾರ್ಯಕ್ರಮವು ಮಕ್ಕಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿದೆ ಹಾಗೂ ನಿಧಾನವಾಗಿ ಕಲಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.


ಈ ಹಿಂದಿನ ಸಾಮಾನ್ಯ ಮಟ್ಟಕ್ಕೆ ಮಕ್ಕಳು ಪ್ರಗತಿ ಸಾಧಿಸದೇ ಇದ್ದರೂ ಕಲಿಕಾ ಚೇತರಿಕೆ ಕಾರ್ಯಕ್ರಮ 2.0 ಅನ್ನು ಆರಂಭಿಸುವವರಿದ್ದೇವೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಮೀಷನರ್ ವಿಶಾಲ್. ಆರ್ ತಿಳಿಸಿದ್ದಾರೆ.

First published: