ಕೆಲವು ವರ್ಷಗಳಿಂದ ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಸೀಟುಗಳು ಮತ್ತು ಪೇಮೆಂಟ್ (Payment) ಸೀಟುಗಳನ್ನು ವಿದ್ಯಾರ್ಥಿಗಳಿಗೆ ನೀಡಿದ ನಂತರವೂ ಸಹ ಅನೇಕ ಸೀಟುಗಳು ಹಾಗೆಯೇ ಖಾಲಿ ಉಳಿದಿರುತ್ತಿವೆಯಂತೆ. ಹೀಗಂತ ಹೇಳಿದರೆ ಬಹುಶಃ ಯಾರು ನಂಬಲಿಕ್ಕಿಲ್ಲ, ಆದರೆ ಇದನ್ನು ಹೇಳುತ್ತಿರುವುದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (AICTE). ಎಐಸಿಟಿಇ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮಂಜೂರಾದ ಸೀಟುಗಳಲ್ಲಿ ಕನಿಷ್ಠ 35-40 ಪ್ರತಿಶತದಷ್ಟು ಸೀಟುಗಳು ಪ್ರತಿ ವರ್ಷ ಹಾಗೆಯೇ ಖಾಲಿ ಉಳಿಯುತ್ತಿವೆಯಂತೆ, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಇರುವ ಇಂಜಿನಿಯರ್ ಕಾಲೇಜುಗಳಲ್ಲಿ (College) ಅಂತೆ.
ಪ್ರತಿ ವರ್ಷ ಸೀಟುಗಳು ಖಾಲಿ ಉಳಿಯುತ್ತಿರುವ ಬಗ್ಗೆ ಎಐಸಿಟಿಇ ಏನ್ ಹೇಳುತ್ತೆ ನೋಡಿ
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಈ ಇಂಜಿನಿಯರ್ ಕಾಲೇಜುಗಳಲ್ಲಿನ ಪದವಿಪೂರ್ವ ಕೋರ್ಸ್ ಗಳಲ್ಲಿ ಶೇಕಡಾ 33 ರಷ್ಟು ಸೀಟುಗಳು 2021-22 ರ ಶೈಕ್ಷಣಿಕ ವರ್ಷದಲ್ಲಿ ಖಾಲಿ ಉಳಿದಿದ್ದರೆ, ಭರ್ತಿಯಾಗದ ಸೀಟುಗಳ ಸಂಖ್ಯೆ ಕ್ರಮವಾಗಿ 2020-21 ಮತ್ತು 2019-2020 ರಲ್ಲಿ ಶೇಕಡಾ 44 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪೂರ್ವ ವರ್ಷಗಳಲ್ಲಿ ಖಾಲಿಯಾದ ಸೀಟುಗಳ ಪಾಲು ಇನ್ನೂ ಹೆಚ್ಚಾಗಿದೆ. 2018-19 ರಲ್ಲಿ ಕ್ರಮವಾಗಿ 48.56 ಪ್ರತಿಶತ ಮತ್ತು 2017-18 ರಲ್ಲಿ 49.14 ಪ್ರತಿಶತದಷ್ಟು ಸೀಟುಗಳು ಹಾಗೆಯೇ ಖಾಲಿ ಉಳಿದಿವೆಯಂತೆ.
ಅಂಕಿ ಅಂಶಗಳ ಪ್ರಕಾರ, ಈ ಸಂಸ್ಥೆಗಳ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ, ಪ್ರತಿ ವರ್ಷ ಕೋರ್ಸ್ ಅನ್ನು ಉತ್ತೀರ್ಣಗೊಳಿಸುವವರ ಸಂಖ್ಯೆಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2021-22 ರಲ್ಲಿ ಉತ್ತಮ ಕ್ಯಾಂಪಸ್ ನೇಮಕಾತಿಗಳು ಕಂಡು ಬಂದಿದ್ದರೂ, ಈ ಸಂಖ್ಯೆಗಳು ಕಡಿಮೆಯಾಗಿವೆ.
2021-22ರಲ್ಲಿ 4,92,915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 4,28,437 ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿದ್ದಾರೆ. ಇನ್ನೂ 2020-21ರಲ್ಲಿ 5,85,985 ಮಂದಿ ಉತ್ತೀರ್ಣರಾಗಿರುವವರ ಪೈಕಿ ಕೇವಲ 3,69,394 ವಿದ್ಯಾರ್ಥಿಗಳು ಮಾತ್ರ ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿದ್ದಾರೆ.
ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ
2019-20ನೇ ಸಾಲಿನಲ್ಲಿ 6,48,938 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 3,97,740 ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿದ್ದಾರೆ.
ಇಂಜಿನಿಯರಿಂಗ್ ಸೀಟುಗಳು ಏಕೆ ಭರ್ತಿಯಾಗದೆ ಉಳಿದಿವೆ?
ಅಧಿಕಾರಿಗಳ ಪ್ರಕಾರ, ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಸಂಖ್ಯೆಯು ಬೇಡಿಕೆ ಮತ್ತು ಪೂರೈಕೆಯ ಪರಿಸ್ಥಿತಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಖಾಸಗಿ ಸಂಸ್ಥೆಗಳು ಇಂಜಿನಿಯರ್ ಸಂಸ್ಥೆಗಳನ್ನು ತೆರೆದಿವೆ ಆದರೆ ನೀಡಲಾಗುವ ಕೋರ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಿಗುವುದಿಲ್ಲ.
ಇದು ಹೆಚ್ಚಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಕೆಮಿಕಲ್ ನಂತಹ ಕೋರ್ ಎಂಜಿನಿಯರಿಂಗ್ ಕೋರ್ಸ್ ಗಳಾಗಿವೆ, ಹೆಚ್ಚಿನ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಲು ಬಯಸುತ್ತಾರೆ, ಇದು ಪ್ರಮುಖ ವಿಷಯ ಕ್ಷೇತ್ರಗಳಿಗೆ ಹೋಲಿಸಿದರೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡುತ್ತದೆ.
"ಕೋರ್ ಇಂಜಿನಿಯರ್ ವಿಷಯಗಳನ್ನು ತೆಗೆದುಕೊಳ್ಳುವವರು ಕಡಿಮೆ ಆಗಿದ್ದಾರೆ ಎಂಬುದು ನಿಜವಾಗಿದ್ದರೂ, ಅದನ್ನು ನಿಭಾಯಿಸುವ ಸಲುವಾಗಿ, ಎಐ, ರೊಬೊಟಿಕ್ಸ್, ಐಒಟಿ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ನಾವು ಸಂಸ್ಥೆಗಳನ್ನು ಕೇಳಿದ್ದೇವೆ.
ಇದನ್ನೂ ಓದಿ: ಡಿಗ್ರಿ ಪಾಸಾಗಿದ್ರೆ ಅಪ್ಲೈ ಮಾಡಿ- ಇವತ್ತೇ ಲಾಸ್ಟ್ ಡೇಟ್
ಅದರೊಂದಿಗೆ, ಇದರಿಂದ ಅವರು ಉತ್ತಮ ಮಾರ್ಗಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಈ ಶಾಖೆಗಳಲ್ಲಿ ಪ್ರವೇಶವು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ.
ಕೋರ್ ಇಂಜಿನಿಯರಿಂಗ್ ಅನ್ನು ಉತ್ತೇಜಿಸಲು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕಲಿಸಲು ನಾವು ಹೆಚ್ಚಿನ ಸಂಖ್ಯೆಯ ಕೋರ್ ಎಂಜಿನಿಯರಿಂಗ್ ಬೋಧಕರಿಗೆ ತರಬೇತಿ ನೀಡಿದ್ದೇವೆ" ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18 ಗೆ ತಿಳಿಸಿದ್ದಾರೆ.
ಉಳಿದಿರುವ ಸೀಟುಗಳಲ್ಲಿ, ಹೆಚ್ಚಿನವು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಕಂಡು ಬರುತ್ತವೆ, ಮುಖ್ಯವಾಗಿ ವಿದ್ಯಾರ್ಥಿಗಳು ಈ ಮೆಟ್ರೋ ನಗರಗಳಿಗೆ ಹೋಗಿ ಓದಲು ಬಯಸುತ್ತಾರೆ, ಏಕೆಂದರೆ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಂಪರ್ಕ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳಿರುತ್ತವೆ.
ಹೀಗೆ ಖಾಲಿ ಉಳಿದಿರುವ ಸೀಟುಗಳ ಬಗ್ಗೆ ಏನೆಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಐಸಿಟಿಇ
ಇಂಜಿನಿಯರ್ ಕಾಲೇಜುಗಳಲ್ಲಿ ಹೀಗೆ ಖಾಲಿ ಉಳಿದಿರುವ ಸೀಟುಗಳ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಐಸಿಟಿಇ ಈ ಕಾಲೇಜುಗಳಿಗೆ ಅಲ್ಪಾವಧಿ ಮತ್ತು ಮಧ್ಯಮಾವಧಿಯ ನಿರೀಕ್ಷಿತ ಯೋಜನೆಗಳನ್ನು ಶಿಫಾರಸು ಮಾಡಲು ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅಧ್ಯಕ್ಷ ಬಿ ವಿ ಆರ್ ಮೋಹನ್ ರೆಡ್ಡಿ ನೇತೃತ್ವದ ಸಮಿತಿಯನ್ನು ರಚಿಸಿತು.
2020 ರಿಂದ ಯಾವುದೇ ಹೊಸ ಇಂಜಿನಿಯರ್ ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಬಾರದು ಮತ್ತು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಇಂಜಿನಿಯರ್ ಸಂಸ್ಥೆಗಳಲ್ಲಿ ಸೀಟುಗಳನ್ನು ಭರ್ತಿ ಮಾಡುವುದು ಬೇಡಿಕೆ-ಪೂರೈಕೆ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ, ಇದು ಸಂಸ್ಥೆಗಳ ಸ್ಥಳ, ಶೈಕ್ಷಣಿಕ ಮತ್ತು ಮೂಲಸೌಕರ್ಯ ಸೌಲಭ್ಯಗಳು ಮತ್ತು ಉದ್ಯೋಗಾವಕಾಶಗಳನ್ನು ಅವಲಂಬಿಸಿರುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಕಳೆದ ವರ್ಷ ಸಂಸತ್ತಿಗೆ ಮಾಹಿತಿ ನೀಡಿತ್ತು.
ಗ್ರಾಮೀಣ ಮತ್ತು ದೂರದ ಪ್ರದೇಶಗಳ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಭಾಷಾ ಅಡೆತಡೆಗಳನ್ನು ಪರಿಹರಿಸಲು ಕೋರ್ಸ್ ಪುಸ್ತಕಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುತ್ತಿದ್ದೇವೆ ಎಂದು ಎಐಸಿಟಿಇ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ, ನಾವು ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಎಂಬ ಐದು ಪ್ರಮುಖ ಕ್ಷೇತ್ರಗಳಲ್ಲಿ ಪುಸ್ತಕಗಳ ಅನುವಾದವನ್ನು ಕೈಗೆತ್ತಿಕೊಂಡಿದ್ದೇವೆ" ಎಂದು ಅಧಿಕಾರಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ