• ಹೋಂ
  • »
  • ನ್ಯೂಸ್
  • »
  • Jobs
  • »
  • Education Loan: ವಿದ್ಯಾರ್ಥಿಗಳಿಂದ ಅರಿವು ಎಜುಕೇಶನ್​ ಲೋನ್​ಗೆ ಅರ್ಜಿ ಆಹ್ವಾನ

Education Loan: ವಿದ್ಯಾರ್ಥಿಗಳಿಂದ ಅರಿವು ಎಜುಕೇಶನ್​ ಲೋನ್​ಗೆ ಅರ್ಜಿ ಆಹ್ವಾನ

ಅಪ್ಲೈ ಮಾಡಿ

ಅಪ್ಲೈ ಮಾಡಿ

ವಿದ್ಯಾಬ್ಯಾಸ ಸಾಲವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಸಾಫ್ಟ್‍ವೇರ್ ಮೂಲಕ ಸಲ್ಲಿಸಬೇಕು. ಅರಿವು ಸಾಲ ಯೋಜನೆ ಎಂಬ ಹೆಸರಿನಲ್ಲಿ ಇದನ್ನು ನೀಡಲಾಗುತ್ತಿದೆ.

  • Share this:

ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎನ್ನುವ ಆಶಯದೊಂದಿಗೆ ಸರ್ಕಾರವೇ (Government) ಶೈಕ್ಷಣಿಕ ಸಾಲವನ್ನು (Education Loan) ವಿದ್ಯಾರ್ಥಿಗಳಿಗೆ ನೀಡುತ್ತಿದೆ. ವಿದ್ಯಾಬ್ಯಾಸ ಸಾಲವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಸಾಫ್ಟ್‍ವೇರ್ ಮೂಲಕ ಸಲ್ಲಿಸಬೇಕು. ಅರಿವು (Arivu) ಸಾಲ ಯೋಜನೆ ಎಂಬ ಹೆಸರಿನಲ್ಲಿ ಇದನ್ನು ನೀಡಲಾಗುತ್ತಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಈ ಮಾಹಿತಿ (Information) ಅನುಸಾರ ನೀವು ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ. 


1. ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ


2.ಆಯಾ ಜಿಲ್ಲಾ ಕಛೇರಿಗಳಲ್ಲಿ ಆನ್‍ಲೈನ್‍ನಲ್ಲಿ ನವೀಕರಣ ಅರ್ಜಿಗಳನ್ನು ಸಲ್ಲಿಸುವಾಗ ಹಿಂದಿನ ವರ್ಷದಲ್ಲಿ ನಿಗಮವು ಬಿಡುಗಡೆಮಾಡಿದ ಸಾಲದ 12% ಮೊತ್ತವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗುತ್ತದೆ.


3.ಅಲ್ಪಸಂಖ್ಯಾತವರ್ಗಕ್ಕೆ ಸೇರಿದ (ಕುಟುಂಬದ ಆದಾಯ ಮಿತಿ ರೂ. 8.00 ಲಕ್ಷಗಳನ್ನು ಮೀರಬಾರದು) ವಿದ್ಯಾರ್ಥಿಯ ಕುರಿತು ತಹಶೀಲ್ದಾರ್‍ರಿಂದ ಜಾತಿ/ಆದಾಯ ಪ್ರಮಾಣೀಕರಣವನ್ನು ಸಂಸ್ಥೆಗಳು / ಕಾಲೇಜುಗಳು ಖಚಿತಪಡಿಸಿಕೊಳ್ಳಬೇಕು.


4.ವಿದ್ಯಾರ್ಥಿಯ ಕುಟುಂಬದ ಆದಾಯಮಿತಿರೂ. 8.00 ಲಕ್ಷಮೀರಬಾರದು.
5.ವಿದ್ಯಾರ್ಥಿಗಳಿಗೆ ಸಾಲದ ಮೊತ್ತವನ್ನು ನಿಗಮದಿಂದ ನೇರವಾಗಿ ಡಿಬಿಟಿ ಮೂಲಕ ಕಾಲೇಜಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.


6.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಎಂ.ಬಿ.ಬಿ.ಎಸ್, ಎಂ.ಡಿ/ಎಂ.ಎಸ್ ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.3.00 ಲಕ್ಷದವರೆಗೆ ಸಾಲ ನೀಡಲಾಗುವುದು.


ಇದನ್ನೂ ಓದಿ: Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!


7.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಬಿ.ಡಿ.ಎಸ್.ಎಂ.ಡಿ.ಎಸ್ ಕೋರ್ಸ್‍ಗಳಿಗೆ ಗರಿಷ್ಟ ರೂ.1.00 ಲಕ್ಷದವರೆಗೆ, ಹಾಗೂ ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.50,000/- ಗಳನ್ನು ಸಾಲವಾಗಿ ನೀಡಲಾಗುವುದು.


8.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಅಂದರೆ ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್. ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.


9.ಅಲ್ಲದೆ MBA,MCA, LLB ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.


ಈ ಮೇಲಿನ ಎಲ್ಲಾ ಮಾಹಿತಿಗಳನ್ನು ಅಧಿಕೃತವಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರದ ಜಾಲತಾಣದಲ್ಲಿ ನೀಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಪ್ರತಿ ವರ್ಷಕ್ಕೆ ರೂ.50,000/- ದಿಂದ ರೂ.3,00,000/-ವರೆಗೆ ಸಾಲವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಸಾಲ ಪಡೆದ ವಿದ್ಯಾರ್ಥಿಯು ಶೇ2ರ ಸೇವಾಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಸಾಲ ಪಡೆಯುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.8.00ಲಕ್ಷಗಳು ಮೀರಿರಬಾರದು.


ಅರಿವು


1. ವಿದ್ಯಾರ್ಥಿಯ ಆನ್ಲಲೈನ್ ಅರ್ಜಿ
2. ವಿದ್ಯಾರ್ಥಿಯ ಇತ್ತೀಚಿನ 2 ಪಾಸ್‍ಪೂರ್ಟ್ ಅಳತೆಯ ಭಾವಚಿತ್ರ
3. ವಿದ್ಯಾರ್ಥಿಯ ಜಾತಿ ಮತ್ತುಆದಾಯ ಪ್ರಮಾಣಪತ್ರ
4. ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ
5. ವಿದ್ಯಾರ್ಥಿಯ SSLC/10ನೇ ತರಗತಿಯ ಅಂಕಪಟ್ಟಿ
6. ವಿದ್ಯಾರ್ಥಿಯ ಡಿಪ್ಲೋಮ/ಪಿ.ಯು.ಸಿ ಅಂಕಪಟ್ಟಿ
7.ಇಂಡಿಮ್ನಿಟೀ (ನಷ್ಟಪರಿಹಾರ) ಬಾಂಡ್
8.ವಿದ್ಯಾರ್ಥಿಯ ಕಾಲೇಜು ಬ್ಯಾಂಕ್ ವಿವರ
9.ವಿದ್ಯಾರ್ಥಿಯ ಬೋನಾಫೈಡ್/ಸ್ಟಡಿ ಸರ್ಟಿಫಿಕೇಟ್
10.ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
11.ಪೋಷಕರ ಸ್ವಯಂ ಘೋಷಣೆ ಪತ್ರ.
12.ಕಾಲೇಜು ಶುಲ್ಕ ರಚನೆ .
ಈ ಎಲ್ಲಾ ಧಾಖಲೆಗಳನ್ನೂ ಸಹ ಹೊಂದಿರ ಬೇಕು.


ಅರ್ಜಿ ಸಲ್ಲಿಸಲು ಆರಂಭ ದಿನಾಂಕ - 03-02-2023.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 03-03-2023.

First published: