ಇಂದು ಆಂದ್ರ ಪ್ರದೇಶದಲ್ಲಿ ಇಂಟರ್ ಫಲಿತಾಂಶಗಳು(AP Inter Results) ಬಿಡುಗಡೆಯಾಗಿದೆ. ವಿದ್ಯಾರ್ಥಿಗಳು ಈ ಫಲಿತಾಂಶಕ್ಕಾಗಿ ಕಾದಿದ್ದರು. ಸಂಜೆ 5 ಗಂಟೆಗೆ ಸರಿಯಾಗಿ ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದು ಈ ಹಿಂದೆ ತಿಳಿಸಿದ್ದರು. ಅದಕ್ಕೆ ತಕ್ಕಂತೆ ಫಲಿತಾಂಶ ಸರಿಯಾದ ಸಮಯಕ್ಕೆ (Time) ಬಿಡುಗಡೆಯಾಗಿಲ್ಲಾ ಒಂದು ಗಂಟೆ ತಡವಾಗಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿದೆ. ನೀವು ಈ ಫಲಿತಾಂಶವನ್ನು ಚೆಕ್ ಮಾಡಲು ನಾವು ಅಧಿಕೃತ ಜಾಲತಾಣದ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ (Information) ಪಡೆದುಕೊಳ್ಳಬಹುದು. ಫಲಿತಾಂಶವನ್ನೂ ಚೆಕ್ ಮಾಡಬಹುದು.
ಇಂಟರ್ ಬೋರ್ಡ್(ಎಪಿ ಇಂಟರ್ ಬೋರ್ಡ್) ನಿನ್ನೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಒಟ್ಟು 10,03,990 ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗಿದ್ದರು. ಇದರಲ್ಲಿ 4.84 ಲಕ್ಷ ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು 5.19 ಲಕ್ಷ ಪ್ರೌಢ ವಿದ್ಯಾರ್ಥಿಗಳು ಹಾಜರಾಗಿದ್ದರು. ಈಪರೀಕ್ಷೆಗಳಿಗೆ(ಎಪಿ ಇಂಟರ್ ಎಕ್ಸಾಮ್ಸ್) ರಾಜ್ಯದಾದ್ಯಂತ 1,489 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮೊದಲ ವರ್ಷದ ಪರೀಕ್ಷೆಗಳು ಮೇ 15 ರಂದು ಪ್ರಾರಂಭವಾಗಿದ್ದರೆ, ದ್ವಿತೀಯ ಪರೀಕ್ಷೆಗಳು 15 ರಂದು ಪ್ರಾರಂಭವಾಯಿತು.
ಇದನ್ನೂ ಓದಿ: Success Story: ಓದಿಗೆ ವಯಸ್ಸು ಬೇಕಾಗಿಯೇ ಇಲ್ಲ, ಇಳಿ ವಯಸ್ಸಿನಲ್ಲಿ ಪದವೀಧರರಾದ ಸಾಧಕರಿವರು
ಈ ಪರೀಕ್ಷೆಗಳು ಏಪ್ರಿಲ್ 4 ರಂದು ಕೊನೆಗೊಂಡಿವೆ. ಇದರೊಂದಿಗೆ, ಎಪಿ ಇಂಟರ್ ಬೋರ್ಡ್ ಪರೀಕ್ಷೆಗಳು ಮುಗಿದ ಕೇವಲ 22 ದಿನಗಳಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಮತ್ತು ಇದೊಂದು ಹೊಸ ಸಂಚಲನವನ್ನು ಸೃಷ್ಟಿಸಿದೆ. ಆದರೆ ಫಲಿತಾಂಶಗಳು ಇಂಟರ್ ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿವೆ. https://bieap.apcfss.in/ ನಲ್ಲಿ ನೀವು ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಆಂಧ್ರಪ್ರದೇಶ ಶಿಕ್ಷಣ ಮಂಡಳಿಯು ಮಾರ್ಚ್-ಏಪ್ರಿಲ್ 2023 ರ ನಡುವೆ ವಿದ್ಯಾರ್ಥಿಗಳ 1 ನೇ ಮತ್ತು 2 ನೇ ವರ್ಷದ ಮಧ್ಯಂತರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇಷ್ಟು ಬೇಗ ಫಲಿತಾಂಶ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಕೂಡ ಅಲ್ಲಿ ಇರಲಿಲ್ಲ. ಆದರೂ ಬೇಗ ಫಲಿತಾಂಶ ಪ್ರಕಟವಾಗಿದ್ದಕ್ಕೆ ವಿದ್ಯಾರ್ಥಿಗಳು ಹರ್ಷಗೊಂಡಿದ್ದಾರೆ.
ಫಲಿತಾಂಶ ಚೆಕ್ ಮಾಡಲು ಈ ರೀತಿ ಮಾಡಿ
ಹಂತ 1: ಮೊದಲು ಇಂಟರ್ ಬೋರ್ಡ್‌ನ ಅಧಿಕೃತ ವೆಬ್‌ಸೈಟ್https://bieap.apcfss.in/ ತೆರೆಯಬೇಕು.
ಹಂತ 2: ಮುಖಪುಟದಲ್ಲಿ ನೀವು ಕಾಣುವ AP ಇಂಟರ್ ಫಲಿತಾಂಶಗಳು 2023 ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಫಲಿತಾಂಶಗಳ ಪುಟ ತೆರೆಯುತ್ತದೆ.
ಹಂತ 3: ಆ ಪುಟದಲ್ಲಿ ನೀವು ನಿಮ್ಮ ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಸೇವ್ ಬಟನ್ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ. ಪ್ರಿಂಟ್ ತೆಗೆದುಕೊಳ್ಳಿ. ಇದು ಮುಂದೆ ನಿಮ್ಮ ಕಾಲೆಜ್ ಅಡ್ಮಿಷನ್ ಪ್ರಕ್ರಿಯೆಗೆ ಸಾಕ್ಷಿ ರೂಪದಲ್ಲಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ