ಹತ್ತನೇ ತರಗತಿ ವಿದ್ಯಾರ್ಥಿಗಳು (Students) ಫಲಿತಾಂಶ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆಲ್ಲಾ ಇಲ್ಲೊಂದು ಶುಭ ಸಮಾಚಾರವಿದೆ. ಆಂದ್ರದ SSC ವಿದ್ಯಾರ್ಥಿಗಳ ಫಲಿತಾಂಶದ ಕುರಿತು ಮಹತ್ವದ ಮಾಹಿತಿ ಬಿಡುಗಡೆಯಾಗಿದೆ. ಆಂಧ್ರಪ್ರದೇಶದ TEN ವಿದ್ಯಾರ್ಥಿಗಳಿಗೆ ಆಂಧ್ರಪ್ರದೇಶSSC ಬೋರ್ಡ್ ವೆಬ್‌ಸೈಟ್‌ನಲ್ಲಿ AP ಹತ್ತನೇ ಫಲಿತಾಂಶಗಳು (AP 10th Results) ಪರಿಶೀಲಿಸಬಹುದು. ಆಂಧ್ರಪ್ರದೇಶದಲ್ಲಿ ಮೇ 6 ರಂದು ಬೆಳಿಗ್ಗೆ 11 ಗಂಟೆಗೆ ಎಪಿ 10 ನೇ ತರಗತಿ ಫಲಿತಾಂಶವನ್ನು ಬಿಡುಗಡೆ (Release) ಮಾಡಲಾಗುವುದು ಎಂದು ಎಪಿ (Ap) ಶಿಕ್ಷಣ ಸಚಿವ ಬೋತ್ಸಾ ಸತ್ಯನಾರಾಯಣ ಘೋಷಿಸಿದ್ದಾರೆ.
ಈ ಮಾಹಿತಿ ತಿಳಿಸಿದ ಶಿಕ್ಷಣ ಇಲಾಖೆ ಇಂದೇ ಫಲಿತಾಂಶ ಬಿಡುಗಡೆ ಮಾಡಲಿದೆ ಇದಾದ ನಂತರ ಕರ್ನಾಟಕದಲ್ಲಿ ಮೇ 8 ರಂದು ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಈಗಾಗಲೇ ತಿಳಿಸಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು. ಎಪಿ ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯದ ನಿರ್ದೇಶಕರು ಕೂಡ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರೊಂದಿಗೆ, ಲಕ್ಷಾಂತರ TEN ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಫಲಿತಾಂಶ ಪರಿಶೀಲಿಸಲು ಈ ಹಂತಗಳನ್ನು ಬಳಸಿ
ಫಲಿತಾಂಶಗಳು ಬಿಡುಗಡೆಯಾದಾಗ ನೀವು ನೋಟಿಫಿಕೇಶನ್ ಕೂಡಾ ಪಡೆಯಬಹುದು. ಎಪಿ ಸರ್ಕಾರಿ ಪರೀಕ್ಷೆಗಳ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಫಲಿತಾಂಶಗಳನ್ನು ಪರಿಶೀಲಿಸಲು ಅನುವು ಮಾಡಿಕೊಟ್ಟಿದೆ.
ಹಂತ 1- ಮೊದಲುwww.bse.ap.gov.inವೆಬ್‌ಸೈಟ್ ತೆರೆಯಬೇಕು.
ಹಂತ 2- ಮುಖಪುಟದಲ್ಲಿ ಎಪಿ ಹತ್ತನೇ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3- ಅದರ ನಂತರ ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸಿ.
ಹಂತ 4- ನೀವು ಹುಡುಕಾಟದ ಮೇಲೆ ಕ್ಲಿಕ್ ಮಾಡಿದರೆ, ಎಪಿ ಹತ್ತನೇ ಫಲಿತಾಂಶಗಳು ಪರದೆಯ ಮೇಲೆ ಗೋಚರಿಸುತ್ತವೆ.
ಹಂತ 5- ಪ್ರಿಂಟ್ ತೆಗೆದುಕೊಂಡು ಪ್ರತಿಯನ್ನು ಇಟ್ಟುಕೊಳ್ಳಿ.
ಆಂಧ್ರಪ್ರದೇಶದಲ್ಲಿ ಹತ್ತನೇ ತರಗತಿ ಪರೀಕ್ಷೆಗಳು ಏಪ್ರಿಲ್ 3 ರಿಂದ ಏಪ್ರಿಲ್ 18 ರವರೆಗೆ ನಡೆದವು. ಒಟ್ಟು 6,05,052 ವಿದ್ಯಾರ್ಥಿಗಳು ಹತ್ತನೇ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 3,09,245 ಬಾಲಕರು ಮತ್ತು 2,95,807 ಬಾಲಕಿಯರು ಆಂಧ್ರಪ್ರದೇಶದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇವರೆಲ್ಲರೂ ಹತ್ತನೇ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಇಂದೇ ಫಲಿತಾಂಶ ಬಿಡುಗಡೆಯಾಗುತ್ತದೆ. ಫಲಿತಾಂಶ ಬಿಡುಗಡೆ ಮಾಡುವ ಸಲುವಾಗಿ ಎಲ್ಲಾ ತಯಾರಿಯನ್ನು ಪರೀಕ್ಷಾ ಹಾಗೂ ಮೌಲ್ಯ ಮಾಪನ ಮಂಡಳಿ ಸಿದ್ಧಪಡಿಸಿಕೊಂಡಿದೆ. ಮೌಲ್ಯಮಾಪನ ಕೂಡಾ ಮುಕ್ತಾಯವಾಗಿದೆ.
ಕರ್ನಾಟಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ
ಹತ್ತನೆ ತರಗತಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ಕೇವಲ ಮೂರೇ ಮೂರು ದಿನಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಅಂದರೆ ಮೇ 8ನೇ ತಾರೀಕು ಫಲಿತಾಂಶ ಪ್ರಕಟವಾಗಲಿದೆ.
ಈ ವರ್ಷದ SSLC ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲು ಕೆಲವೇ ದಿನ ಇದೆ ಇದಕ್ಕೆ ಕಾರಣ ಹತ್ತಿರ ಬರುತ್ತಿರುವ ಚುನಾವಣೆಯೂ ಒಂದಾಗಿದೆ. ಚುನಾವಣೆಗೆ ಅಡ್ಡಿಯಾಗದಂತೆ ಮಕ್ಕಳಿಗೂ ತೊಂದರೆಯಾಗದಂತೆ ಫಲಿತಾಂಶ ಬಿಡುಗಡೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರೀಕ್ಷಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. kseab.karnataka.gov.in ಅಥವಾ karresults.nic.in ಗೆ ಭೇಟಿ ನೀಡಿ ಫಲಿತಾಂಶ ಪರೀಕ್ಷಿಸಿ.
ಪರೀಕ್ಷಾ ಮಂಡಳಿಯು ಕರ್ನಾಟಕ SSLC ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21 ರಂದು ಆರಂಭವಾಗಿದೆ
ಫಲಿತಾಂಶ ಬಿಡುಗಡೆ ಮಾಡುವ ಸಲುವಾಗಿ ಎಲ್ಲಾ ತಯಾರಿಯನ್ನು ಪರೀಕ್ಷಾ ಹಾಗೂ ಮೌಲ್ಯ ಮಾಪನ ಮಂಡಳಿ ಸಿದ್ಧಪಡಿಸಿಕೊಂಡಿದೆ. ಮೌಲ್ಯಮಾಪನ ಕೂಡಾ ಮುಕ್ತಾಯವಾಗಿದೆ.ಕೆಎಸ್‌ಇಎಬಿ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಅವರು ಕ್ಯಾರಿಯರ್ 360 ಜೊತೆಗೆ ಮಾತನಾಡಿ, ನಾವು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನುಮೇ 8 ರಂದು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ