• Home
  • »
  • News
  • »
  • jobs
  • »
  • JNU: ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ, ಘಟನೆಗೆ ಕಾರಣ ತಿಳಿಸಿದ ಉಪ ಕುಲಪತಿ

JNU: ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ, ಘಟನೆಗೆ ಕಾರಣ ತಿಳಿಸಿದ ಉಪ ಕುಲಪತಿ

ಜೆಎನ್​ಯು

ಜೆಎನ್​ಯು

ಹೊರಗಿನವರು ಕ್ಯಾಂಪಸ್‌ಗೆ ಪ್ರವೇಶಿಸಿ ಇದೆಲ್ಲವನ್ನೂ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ನಾವು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಯೋಚಿಸುತ್ತಿದ್ದೇವೆ ಎಂದು JNU ಉಪಕುಲಪತಿ ಹೇಳಿದ್ದಾರೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಕ್ಯಾಂಪಸ್‌ನ ಕೆಲವು ಗೋಡೆಗಳ (Walls) ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದಿರುವ ಘಟನೆಯ (Incident) ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. ಇದರಲ್ಲಿ ಹೊರಗಿನವರ ಕೈವಾಡವಿರಬಹುದು.‌ ವಿದ್ಯಾರ್ಥಿಗಳು (Students) ಈ ಘಟನೆಯಲ್ಲಿ ಭಾಗಿಯಾಗದೇ ಇರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ನಿಜ ಸಂಗತಿ ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ. 


ಇಂತಹ ಘಟನೆಗಳನ್ನು ತಪ್ಪಿಸಲು ಕ್ಯಾಂಪಸ್‌ನಲ್ಲಿ ಸಿಸಿಟಿವಿಯಿಂದ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇನ್ನು ಮುಂದಿನ ದಿನದಲ್ಲಿ ಖಂಡಿತ ಈ ರೀತಿಯ ಘಟನೆ ಜರುಗಲು ಅವಕಾಶಮಾಡಿಕೊಡುವುದಿಲ್ಲ. ಜೆಎನ್‌ಯು ಎಲ್ಲರಿಗೂ ಸೇರಿದ್ದು ಮತ್ತು ಯಾವುದೇ ಗುಂಪಿನ ವಿರುದ್ಧ ದ್ವೇಷವನ್ನು ಹರಡಲು ವಿಶ್ವವಿದ್ಯಾಲಯವು ಬಯಸುವುದಿಲ್ಲ ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಸ್ಪಷ್ಟಪಡಿಸಿದ್ದಾರೆ.


ಈ ತಿಂಗಳ ಆರಂಭದಲ್ಲಿ, JNU ನ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ (SIS)-II ಕಟ್ಟಡವನ್ನು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧ ಘೋಷಣೆಗಳೊಂದಿಗೆ ಧ್ವಂಸಗೊಳಿಸಲಾದ ವಿಷಯ ಎಲ್ಲೆಡೆ ಸುದ್ಧಿಯಾಗಿತ್ತು. ಕ್ಯಾಂಪಸ್ ಮತ್ತು ದೇಶವನ್ನು ಬಿಟ್ಟು ಹೋಗುವಂತೆ ಅದರಲ್ಲಿ ಬರೆಯಲಾಗಿತ್ತು.


ಇದನ್ನೂ ಓದಿ: Medical Studies: ಯುಕೆ, ಕೆನಡಾದಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ಬಯಸುವ ಭಾರತೀಯ ಆಕಾಂಕ್ಷಿಗಳಿಗೆ ಸಲಹೆ


ಈ ವಿಷಯದ ಕುರಿತು ಮಾಧ್ಯಮದೊಂದಿಗಿನ ತಮ್ಮ ಮೊದಲ ಸಂವಾದದಲ್ಲಿ, ಉಪಕುಲಪತಿ ಘಟನೆಯ ಕುರಿತು ಇದೊಂದು ದುರದೃಷ್ಟಕರ ಸಂಗತಿ ಎಂದು ವಿಶಾದ ವ್ಯಕ್ತಪಡಿಸಿದರು. ವಿಷಯ ಬೆಳಕಿಗೆ ಬಂದ 24 ಗಂಟೆಗಳ ಒಳಗೆ ಗೋಡೆಗಳಿಗೆ ಪುನಃ ಬಣ್ಣ ಬಳಿಯಲಾಗಿದೆ ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಕ್ಯಾಂಪಸ್‌ನಲ್ಲಿ ಸಿಸಿಟಿವಿ ಅಳವಡಿಕೆ


ಕ್ಯಾಂಪಸ್‌ನಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಜೊತೆಗೆ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸುವ ಮೂಲಕ ಈ ಘಟನೆಯ ವಿರುದ್ಧ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಖಂಡನೆ ವ್ಯಕ್ತಪಡಿಸಿದರು. ಇದನ್ನು ಮಾಡಿದವರು ಹೊರಗಿನವರೇ ಎಂಬ ಬಲವಾದ ನಂಬಿಕೆ ಇದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆದರೆ ಮಾತ್ರ ಸತ್ಯ ಬಯಲಾಗುತ್ತದೆ ಎಂದು ಅವರು ತಿಳಿಸಿದರು.


JNU


ಹೊರಗಿನವರು ಕ್ಯಾಂಪಸ್‌ಗೆ ಪ್ರವೇಶಿಸಿದ್ದಾರೆ 


ಅವರು ಹೇಳಿರುವ ಪ್ರಕಾರ ಹೊರಗಿನವರು ಕ್ಯಾಂಪಸ್‌ಗೆ ಪ್ರವೇಶಿಸಿ ಇದೆಲ್ಲವನ್ನೂ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯಾದ ಘಟನೆಗಳು ನಡೆಯದಂತೆ ತಡೆಯಲು ನಾವು ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಯೋಚಿಸುತ್ತಿದ್ದೇವೆ. ಈ ಘಟನೆಯ ನಂತರ, ಜೆಎನ್‌ಯು ತನ್ನ ಎಲ್ಲಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೇಳಿಕೊಂಡಿದೆ. ಎಲ್ಲಾ ಶಾಲೆಗಳು ಮತ್ತು ಕೇಂದ್ರಗಳು ಒಂದೇ ಪ್ರವೇಶ ಮತ್ತು ನಿರ್ಗಮನ ಗೇಟ್ ಅನ್ನು ಮಾತ್ರ ಹೊಂದಿರಬೇಕು. ಹಾಗಾಗಿ ನಾವು ಈ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಬೇರೆ ದ್ವಾರಗಳನ್ನು ತೆರೆಯದಂತೆ  ಸಲಹೆಯಲ್ಲಿ ತಿಳಿಸಿದ್ದೇವೆ ಎಂದು ಜೆಎನ್​ಯು ಉಪ ಕುಲಪತಿ  ಶಾಂತಿಶ್ರೀ ಧೂಳಿಪುಡಿ ಪಂಡಿತ್ ತಿಳಿಸಿದ್ದಾರೆ.


JNU ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಬೆಳೆಸಬೇಡಿ


JNU ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಬೆಳೆಸಬೇಡಿ. ಇಲ್ಲಿ ಎಲ್ಲರಿಗೂ ಸಮಾನತೆ ಇದೆ ಎಂದು ತಿಳಿಸಿದರು. ಶೈಕ್ಷಣಿಕ ಸ್ಥಳಗಳನ್ನು ಕಲಿಕೆಗೆ ಮಾತ್ರ ಬಳಸಬೇಕು. ವಿದ್ಯಾರ್ಥಿಗಳು ಕೋಮು ಗಲಬೆಗಳನ್ನು ಬಿಟ್ಟು ನಾವೆಲ್ಲಾ ಒಂದು ಎಂಬ ಭಾವನೆಯಿಂದ ಇರಬೇಕು. ಅದನ್ನು ಬಿಟ್ಟು ಸಮುದಾಯಗಳನ್ನು ವಿರೂಪಗೊಳಿಸುವ ಕಾರ್ಯ ಮಾಡಬಾರದು ಎಂದು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಮನವಿ ಮಾಡಿದ್ದಾರೆ.

First published: