• Home
  • »
  • News
  • »
  • jobs
  • »
  • Anganwadi Workers: ಅಂಗನವಾಡಿಗಳಿಗೂ NEP ಅನ್ವಯ ಮಾಡುವಂತೆ ನೌಕರರಿಂದ ಭಾರೀ ಪ್ರತಿಭಟನೆ

Anganwadi Workers: ಅಂಗನವಾಡಿಗಳಿಗೂ NEP ಅನ್ವಯ ಮಾಡುವಂತೆ ನೌಕರರಿಂದ ಭಾರೀ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಪ್ರತಿಯೊಂದು ಪ್ರಾಥಮಿಕ ಹಂತದಲ್ಲಿ ಚರ್ಚೆಯಾಗಿದೆ ಇನ್ನು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಮುಷ್ಕರ ಮುಗಿಯುವವರೆಗೂ ಅಂಗನವಾಡಿಗಳನ್ನು ತೆರೆಯೋದಿಲ್ಲ ಎಂದೂ ಸಹ ಹೇಳುತ್ತಿದ್ದಾರೆ. ಎಲ್ಲಾ ತಾಲೂಕಿನಿಂದಲೂ ಸಹ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿಗೆ ಪ್ರತಿಭಟನೆಗೆ ಎಂದೇ ಬರಲಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. 

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಅಂಗನವಾಡಿಗೂ ರಾಷ್ಟ್ರೀಯ ಶಿಕ್ಷಣ ನೀತಿ (New Education Policy) ಜಾರಿಯಾಗುತ್ತಿಲ್ಲ ಎಂದು ಹೇಳಲಾಗಿದೆ. ಇದೇ ವಿಷಯಕ್ಕೆ ಕಾರ್ಯಕರ್ತೆಯರು ಕೋಪಗೊಂಡಿದ್ದಾರೆ. ಜನವರಿ 18ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿಯ ಫ್ರತಿಭಟನೆ(Protest) ಮಾಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ (Education) ನೀತಿಯನ್ನು ಅಂಗನವಾಡಿಗೂ (Anganawadi) ವಿಸ್ತರಿಸಬೇಕು ಅನ್ನೋ ಕೂಗೆದ್ದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತೆಯರು, ಸಹಾಯಕಿಯರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. 


ಈಗಾಗಲೇ ಪ್ರತಿಯೊಂದು ಪ್ರಾಥಮಿಕ ಹಂತದಲ್ಲಿ ಚರ್ಚೆಯಾಗಿದೆ ಇನ್ನು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಮುಷ್ಕರ ಮುಗಿಯುವವರೆಗೂ ಅಂಗನವಾಡಿಗಳನ್ನು ತೆರೆಯೋದಿಲ್ಲ ಎಂದೂ ಸಹ ಹೇಳುತ್ತಿದ್ದಾರೆ. ಎಲ್ಲಾ ತಾಲೂಕಿನಿಂದಲೂ ಸಹ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿಗೆ ಪ್ರತಿಭಟನೆಗೆ ಎಂದೇ ಬರಲಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.


ತಕ್ಷಣ ಇಎಸ್‌ಐ ಸೌಲಭ್ಯ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಯಾವ ರೀತಿ ತಿರುವು ಪಡೆಯಲಿದೆ ತಿಳಿಯುತ್ತಿಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈ ಬಾರಿ ಬಲವಾಗಿರುವಂತೆ ತೋರುತ್ತಿದೆ.


ಇದನ್ನೂ ಓದಿ: Dharwad: ಶಾಲಾ ಕಾಲೇಜುಗಳಿಗೆ ನಾಳೆಯಿಂದ ರಜೆ ಘೋಷಣೆ!


ಹೌದು, ಅಂಗನವಾಡಿಗಳಿಗೂ ಸಹ ಹೊಸ ಶಿಕ್ಷಣ ನೀತಿ ಜಾರಿಯಾದರೆ ಸಹಾಐವಾಗುತ್ತದೆ. ಕಾರ್ಯಕರ್ತೆಯರಿಗೂ ಇದರ ಅನ್ವಯ ಉತ್ತಮ ವೇತನ ದೊರೆಯುತ್ತದೆ ಎಂಬುದು ಇವರ ಉದ್ದೇಶವಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಅಂಗನವಾಡಿಗಳಿಗೂ ಅನ್ವಯ ಮಾಡಿ ಎಂದು ಕೇಳುತ್ತಿದ್ದಾರೆ.


ಪ್ರಾಥಮಿಕ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯವಾಗುತ್ತಿದೆ. ಅದನ್ನು ಅಲ್ಲಿಗೇ ಸ್ಥಗಿತ ಗೊಳಿಸದೆ ಅಂಗನವಾಡಿ ಹಂತಗಳಿಗೂ ನೀವು ತರಬೇಕು ಎಂದು ಹೇಳುತ್ತಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ದಶಕದಿಂದ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.


ತಮ್ಮ ನ್ಯಾಯಯುತ ಬೇಡಿಕೆಳಿಗೆ ಬೆಲೆ ಕೊಡಲೇ ಬೇಕು


ತಮ್ಮ ನ್ಯಾಯಯುತ ಬೇಡಿಕೆಳಿಗೆ ಬೆಲೆ ಕೊಡಲೇ ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಜನವರಿ 18ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಯಕರ್ತೆಯರು, ಸಹಾಯಕಿಯರು ಆಗಮಿಸಲಿದ್ದಾರೆ. ಎಷ್ಟು ದಿನಗಳವರೆಗೆ ಈ ಬೇಡಿಕೆ ಸರ್ಕಾರದ ಕಿವಿ ಮುಟ್ಟುವುದಿಲ್ಲವೋ ಅಷ್ಟೂ ದಿನದ ವರೆಗೆ ಇಲ್ಲೇ ಇದ್ದು ಪ್ರತಿಭಟನೆ ಮಾಡುವುದಾಗಿ ಸೂಚಿಸಿದ್ದಾರೆ.


370 ಅಂಗನವಾಡಿಗಳಿದ್ದು, 700ಕ್ಕಿಂತಲೂ ಅಧಿಕ ನೌಕರರಿದ್ದಾರೆ


ಪುತ್ತೂರಿನ ಕಡಬ ತಾಲೂಕಿನಲ್ಲಿಒಟ್ಟು 370 ಅಂಗನವಾಡಿಗಳಿದ್ದು, 700ಕ್ಕಿಂತಲೂ ಅಧಿಕ ನೌಕರರಿದ್ದಾರೆ  ಇದರಲ್ಲಿ ಅರ್ಧದಷ್ಟು ಜನ ಈಗಾಗಲೇ ಬೆಂಗಳೂರಿಗೆ ತೆರಳಿದ್ದಾರೆ. ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದ್ದು, ಬೇಡಿಕೆ ಈಡೇರಿದ ಬಳಿಕವೇ ನಾವು ವಾಪಸ್‌ ಮರಳಲಿದ್ದೇವೆ ಎಂದು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲಾ ತಿಳಿಸಿದ್ದಾರೆ. ಎಂದು ವಿಜಯಕರ್ನಾಟಕ ವರದಿ ಮಾಡಿದೆ.


ಆರೋಗ್ಯ ವಿಮೆ ಹಾಗೂ ಭದ್ರತೆಗೆ ಬೇಡಿಕೆ


ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗನವಾಡಿಗಳಿಗೂ ಅನ್ವಯ ಮಾಡಿ. ನಾವು ಕಾರ್ಯಕರ್ತೆಯರು ಅನ್ನುವುದಕ್ಕಿಂತ ನಾವೂ ಶಿಕ್ಷಕಿಯರು ಎಂಬ ಸ್ಥಾನವನ್ನು ನೀಡಿ ಎಂಬ ಬೇಡಿಕೆ ಮುಂದಿಟ್ಟಿದೆ. ಅಷ್ಟೇ ಅಲ್ಲ ವೇತನದಲ್ಲಿ ಕೂಡಾ ಹೆಚ್ಚಳ ಮಾಡಿ ಎಂದು ಕೇಳಿಕೊಂಡಿದೆ. ನಮಗೂ ಆರೋಗ್ಯ ವಿಮೆ ಕೊಡಿ, ಉದ್ಯೋಗ ಭದ್ರತೆ ನೀಡಿ. ಸ್ವಲ್ಪ ಮಟ್ಟಿನ ನಿರಾಳತೆ ನಮಗೂ ಬೇಕಿದೆ ಎಂದು ಅವರು ಕೇಳಿಕೊಂಡಿದ್ದಾರೆ.

First published: