• ಹೋಂ
  • »
  • ನ್ಯೂಸ್
  • »
  • Jobs
  • »
  • Anganwadi Workers: ಅಕ್ಕಂದಿರ ಮೊರೆ ಕೇಳದ ಸರ್ಕಾರ! 10ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Anganwadi Workers: ಅಕ್ಕಂದಿರ ಮೊರೆ ಕೇಳದ ಸರ್ಕಾರ! 10ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೇತನ ಸಹಿತ ರಜೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರತಿಭಟನೆಯನ್ನು ಕಡೆಗಣಿಸಿದ್ದು ಅವರ ಬೇಡಿಕೆಗಳನ್ನು ಕೇಳುವ ಸೌಜನ್ಯ ತೋರುತ್ತಿಲ್ಲ ಎಂದು ಕಾಂಗ್ರೇಸ್​ ನಾಯಕರು ದೂರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಕಳೆದ ಹತ್ತು ದಿನಗಳಿಂದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಕೆಲವು ಬೇಡಿಕೆಗಳನ್ನು ಸರ್ಕಾರದ ಮುಮದಿಟ್ಟಿದ್ದಾರೆ. ಹಿಂದೊಮ್ಮೆ ಅಂಗನವಾಡಿಗಳಿಗೆ NEP ಜಾರಿ ಮಾಡುವಂತೆ ಕೋರಿ ನಡೆಸಿದ ಪ್ರತಿಭಟನೆಗೆ ಸಚಿವರು NEP ಫೆಬ್ರವರಿಯಲ್ಲಿ ಜಾರಿಯಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು ಆದ್ದರಿಂದ ಪ್ರತಿಭಟನೆಗೆ (Protest) ಬ್ರೇಕ್​ ಸಿಕ್ಕಿತ್ತು. ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಹತ್ತು ದಿನದಿಂದ ಚಳಿಯಲ್ಲೇ ಕೂತು ಅಲ್ಲೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸರ್ಕಾರ (Government) ಗಮನಹರಿಸುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಬೇಸರಗೊಂಡಿದ್ದಾರೆ. 


ಕಳೆದ 10 ದಿನಗಳಿಂದ ರಾಜಧಾನಿಯಲ್ಲಿ ಕೊರೆಯುವ ಚಳಿಯಲ್ಲಿ ಪಟ್ಟು ಬಿಡದೇ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರತ್ತ ರಾಜ್ಯ ಸರ್ಕಾರ ತಿರುಗಿಯೂ ನೋಡುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಆಗಾಗ ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಸಿಎಂಗೆ ಬೆಂಗಳೂರಿನ ಪ್ರೀಡಂ ಪಾರ್ಕ್​ ದೂರವಾಯ್ತಾ? ಎಂಬ ಪ್ರಶ್ನೆ ಇಟ್ಟಿದ್ದಾರೆ.


ಗ್ರಾಜ್ಯುಟಿ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂಬುದು ಇವರ ಮುಖ್ಯ ಬೇಡಿಕೆಯಾಗಿದ್ದು ಒಟ್ಟು ಐದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅದನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Teachers Transfer: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್!


ವೇತನ ಸಹಿತ ರಜೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರತಿಭಟನೆಯನ್ನು ಕಡೆಗಣಿಸಿದ್ದು ಅವರ ಬೇಡಿಕೆಗಳನ್ನು ಕೇಳುವ ಸೌಜನ್ಯ ತೋರುತ್ತಿಲ್ಲ ಎಂದು ಕಾಂಗ್ರೇಸ್​ ನಾಯಕರು ದೂರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.


10 ದಿನ ಕಳೆದರೂ ಬೇಡಿಕೆ ಈಡೇರಿಲ್ಲ


10 ದಿನ ಕಳೆದರೂ ತಮ್ಮ ಮನೆಗೆ ತೆರಳದೇ ಇಲ್ಲೇ ಹಗಲು ರಾತ್ರಿ ಎನ್ನದೇ ಚಳಿಯಲ್ಲಿ ನಡುಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳೂ ಸಹ ಅವರು ಪ್ರತಿಭಟನೆ ಮಾಡುತ್ತಿರುವ ಸ್ಥಳದಲ್ಲಿ ಸಿಗುತ್ತಿಲ್ಲ. ಹತ್ತು ದಿನಗಳಾದರೂ ತಮ್ಮ ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಕೈಬಿಡುತ್ತಿಲ್ಲ ಇತ್ತ ಸರ್ಕಾರವೂ ಅವರ ಬೇಡಿಕೆಗಳನ್ನು ಆಲಿಸುತ್ತಿಲ್ಲ. ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ವಿಧಾನಸೌಧದ ಬಳಿಯೇ ಪ್ರೀಡಂ ಪಾರ್ಕ್​ಗೆ ಭೇಡಿ ನೀಡಿ ಬೇಡಿಕೆಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲವೇ ಎಂಬ ಪ್ರಶ್ನೆ




ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು


1). ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು


2) ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ವೇತನ ನೀಡಬೇಕು


3) ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು


4) ಗ್ರಾಚ್ಯುಟಿ ಹಣ , ಪೆನ್‌ಷನ್ ಜಾರಿ ಮಾಡಬೇಕು


5) ಆರೋಗ್ಯವಿಮೆಯಾದ ಇ.ಎಸ್.ಐ. ಬಾರಿ ಮಾಡಬೇಕು


6) ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು.


ಈ ಐದು ಬೇಡಿಕೆಗಳನ್ನು ಮುಂದಿಟ್ಟು CITU ಸಂಘಟನೆಯಿಂದ ಪ್ರತಿಭಟನೆ ಆರಂಭವಾಗಿದೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ನಂತರವೇ ಮುಷ್ಕರ ನಿಲ್ಲಿಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದು ಕೂತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯನ್ನು ಮತ್ತು ಅವರ ಕೆಲಸವನ್ನು ಖಾಯಂ ಮಾಡಬೇಕು ಅಂದರೆ ತಮಗೆ ಕೆಲಸದ ಭದ್ರತೆ ಬೇಕು ಎಂಬ ನಿಲುವನ್ನು ಸೂಚಿಸಿದ್ದಾರೆ. ಈ ಮೇಲಿನ ಎಲ್ಲಾ ಬೇಡಿಕೆಗಳೂ ಈಡೇರಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಕೇಳಿಕೊಳ್ಳುತ್ತಿದ್ದಾರೆ.


ಈ  ಪ್ರತಿಭಟನೆ ಯಾವಾಗ ಅಂತ್ಯ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು