ಕಳೆದ ಹತ್ತು ದಿನಗಳಿಂದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಕೆಲವು ಬೇಡಿಕೆಗಳನ್ನು ಸರ್ಕಾರದ ಮುಮದಿಟ್ಟಿದ್ದರು. ಹಿಂದೊಮ್ಮೆ ಅಂಗನವಾಡಿಗಳಿಗೆ NEP ಜಾರಿ ಮಾಡುವಂತೆ ಕೋರಿ ನಡೆಸಿದ ಪ್ರತಿಭಟನೆಗೆ ಸಚಿವರು NEP ಫೆಬ್ರವರಿಯಲ್ಲಿ ಜಾರಿಯಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು ಆದ್ದರಿಂದ ಪ್ರತಿಭಟನೆಗೆ (Protest) ಬ್ರೇಕ್ ಸಿಕ್ಕಿತ್ತು. ಇನ್ನೂ ಕೆಲವು ಬೇಡಿಕೆಗಳನ್ನು (Demands) ಈಡೇರಿಸುವಂತೆ ಕೋರಿ ಹತ್ತು ದಿನದಿಂದ ಚಳಿಯಲ್ಲೇ ಕೂತು ಅಲ್ಲೇ ಮಲಗಿ ಪ್ರತಿಭಟನೆ ನಡೆಸುತ್ತಿದ್ದರೂ. ಆದರೆ ಸರ್ಕಾರ (Government) ಇದೀಗ ಉತ್ತಮ ಸ್ಪಂದನೆ ನೀಡಿದ್ದು ಎರಡನೇ ಬಾರಿ ಪ್ರತಿಭಟನೆಗೆ ಬ್ರೇಕ್ ನೀಡಿದ್ದಾರೆ.
ಗ್ರಾಚ್ಯೂಟಿ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕಾಗಿ ಸ್ಪಂದನೆ ನೀಡಿದ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಳೆದ 10 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ವಾಪಸ್ ಪಡೆದಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ನೀಡಬೇಕು. ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯ ನಿಗದಿ, ಪದೋನ್ನತಿ ಕುರಿತು ಆದೇಶ ವಾಪಸ್ ಸೇರಿ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ ಆ ಕಾರಣದಿಂದ ಪ್ರತಿಭಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿಲ್ಲಿಸಿದ್ದಾರೆ.
ಈ ಬಾರಿ ಬಜೆಟ್ನಲ್ಲಿ ಕೂಡಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಎಂ ಕೂಡ ಗ್ರಾಚ್ಯುವಿಟಿ ನೀಡಲು ಒಪ್ಪಿಗೆ ಕೊಟ್ಟಿದ್ದು, ಎಲ್ಲವನ್ನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಕೂಡ ಒಪ್ಪಿದ್ದು ಗ್ಯಾಚ್ಯುಟಿ ಸಂಬಂಧ ಮತ್ತೊಂದು ಸಭೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಪಿಯುಸಿ ಅರ್ಹತೆ ಇಲ್ಲದೇ ಇರುವ ಕಾರ್ಯಕರ್ತೆಯರಿಗೂ ಒಂದು ಬಾರಿ ಬಡ್ತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹಾಲಪ್ಪ ಅವರು ಹೇಳಿದ್ದಾರೆ.
ಇದನ್ನೂ ಓದಿ: Anganwadi Workers: ಅಕ್ಕಂದಿರ ಮೊರೆ ಕೇಳದ ಸರ್ಕಾರ! 10ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮುಗಿಸಿದ್ದು ಇದೀಗ ಮನೆಗೆ ತೆರಳಿದ್ದಾರೆ. ಪ್ರತಿನಿತ್ಯ 10 ರಿಂದ 1 ಗಂಟೆವರೆಗೆ ಕೆಲಸ ಮಾಡಬೇಕು ಆ ಸಮಯದಲ್ಲಿ ಬೇರೆ ಯಾವ ಕೆಲಸವನ್ನೂ ಸಹ ಅವರ ಮೇಲೆ ಹೇರುವ ಹಾಗಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಸರ್ಕಾರವೂ ಒಪ್ಪಿದೆ. ಇವರ ಹತ್ತು ದಿನದ ಪ್ರತಿಭಟನೆಗೂ ಸಹ ಸರ್ಕಾರ ಮಣಿಯದೇ ಇದ್ದರೆ. ಸಿಎಂ ಮನೆಗೆ ತೆರಳಿ ಮನೆಯ ಸುತ್ತ ಧರಣಿ ಕೂರುವುದಾಗಿ ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದರು.
ಜ.23ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿಂಪಡೆಯಲಾಗಿದೆ
ಜ.23ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದು ಅಂಗನವಾಡಿ ನೌಕರರ ಸಂಘ ಘೋಷಿಸಿದೆ. ಆ ಕಾರಣ ಈ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ಸಿಕ್ಕರು ಮುಂದೊಮ್ಮೆ ಈ ಕಾರ್ಯಗಳಾಗದೆ ಇದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವ ಸೂಚನೆ ಇದರಲ್ಲಿದೆ.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು
1). ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು
2) ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ವೇತನ ನೀಡಬೇಕು
3) ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು
4) ಗ್ರಾಚ್ಯುಟಿ ಹಣ , ಪೆನ್‌ಷನ್ ಜಾರಿ ಮಾಡಬೇಕು
5) ಆರೋಗ್ಯವಿಮೆಯಾದ ಇ.ಎಸ್.ಐ. ಬಾರಿ ಮಾಡಬೇಕು
6) ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು.
ಇವಿಷ್ಟು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟ ಬೇಡಿಕೆಗಳಾಗಿದ್ದು ಎಲ್ಲದಕ್ಕೂ ತಾತ್ಕಾಲಿಕವಾಗಿ ಕೆಲವು ಸೂಚನೆ ಮತ್ತು ಧನಾತ್ಮಕ ಸ್ಪಂದನೆ ದೊರೆತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ