ಆನೇಕಲ್: ಶಿಕ್ಷಣ ಕ್ಷೇತ್ರದಲ್ಲಿ (Education Sector) ಯಾವ ರೀತಿ ಘಟನೆಗಳು ಜರುಗುತ್ತವೆ ಎಂಬುದನ್ನು ಊಹಿಸುವುದು ಕೂಡಾ ಕಷ್ಟ ಎನ್ನುವ ಪರಿಸ್ಥಿತಿ ಎದುರಾಗಿದೆ. ಅದರಂತೆ ಊಹೆಗೂ ನಿಲುಕದ ಒಂದು ಘಟನೆ ನಡೆದೇ ಬಿಟ್ಟಿದೆ. ಆನೇಕಲ್ನಲ್ಲಿ ಯುಕೆಜಿ (UKG) ಓದುತ್ತಿದ್ದ ಮಗುವನ್ನು (Children) ಫೇಲ್ ಮಾಡಲಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬ್ಲೇ ಬೇಕು ಯಾಕಂದ್ರೆ ಇದು ನಿಜ ಘಟನೆ. ಲಕ್ಷ (Lack) ಲಕ್ಷ ಶುಲ್ಕ ಪಾವತಿಸಿ ಎಷ್ಟೋ ಜನ ಪ್ರಾಥಮಿಕ (Primary) ಶಿಕ್ಷಣ ಕೊಡಿಸುವುದು ಈಗ ಆಶ್ಚರ್ಯವೇನೂ ಅಲ್ಲ ಎಂಬಷ್ಟರ ಮಟ್ಟಿಗೆ ರೂಢಿಗೊಳಗಾಗಿದೆ.
ಆದರೆ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂಬ ವಿಷಯ ಜನಜನಿತವಾಗಿದೆ. ಹೀಗಿರುವಾಗ ಇನ್ನೂ ಏನೂ ತಿಳಿಯದ, ಶಿಕ್ಷಣ ಎಂದರೇನು ಎಂಬುದನ್ನೇ ಸಂಪೂರ್ಣವಾಗಿ ಅರಿಯದ ಪುಟ್ಟ ಕಂದಮ್ಮನನ್ನು ಫೇಲ್ ಮಾಡಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಖುದ್ದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರಕಾರ ಇದಕ್ಕೆ ಏನು ಹೇಳುತ್ತೀರಿ ನೀವೇ ನಿರ್ಧರಿಸಿ. ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ ಈ ಘಟನೆ ಎನ್ನುವುದಕ್ಕಿಂತ ಎಡವಟ್ಟು ನಡೆದಿದೆ ಎನ್ನಬಹುದು.
ಇದನ್ನೂ ಓದಿ: High School Teacher Jobs: ಬೆಂಗಳೂರಿನಲ್ಲಿ ಹೈಸ್ಕೂಲ್ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಪುಟ್ಟ ಹುಡುಗಿಯ ಹೆಸರು ಬಿ ನಂದಿನಿ. ಈ ಪುಟ್ಟ ಕಂದಮ್ಮನನ್ನು ಆನೇಕಲ್ ತಾಲೂಕಿನ ಹುಸ್ಕೂರು ಗೇಟ್ ಸಮೀಪದಲ್ಲಿರುವ ಶಾಲೆಯಲ್ಲಿ ಫೇಲ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಪುಟಾಣಿ ಬಿ ನಂದಿನಿ
ಇವಳ ಪಾಲಕರಿಗೂ ಸಹ ಈ ಘಟನೆಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿಯದಂತಾಗಿದೆ. ಶಾಲೆಯ ಆಡಳಿತ ಮಂಡಳಿ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಈ ಸಂಬಂಧ ಟ್ವೀಟ್ ಮಾಡಲಾಗಿದೆ. ಬಳಿಕ ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ಗಳ ಸರಮಾಲೆಯೇ ಆರಂಭವಾಗಿದೆ.
ಈ ಕುರಿತು ಕ್ರಮಕೈಗೊಂಡ ಶಿಕ್ಷಣ ಅಧಿಕಾರಿ
ಈ ಮಹಾಕೃತ್ಯ ಗೊತ್ತಾದ ಕೂಡಲೇ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ತಾಲೂಕು ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದೇನೆ ಎಂದು ಹೇಳಿರುವ ಸುರೇಶ್ ಕುಮಾರ್, ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರ
ಇನ್ನು ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಸೆಂಟ್ ಜೋಸೆಪ್ ಚಾರ್ಮಿನೆಡ್ ಶಾಲೆಗೆ ನೋಟೀಸ್ ಜಾರಿಮಾಡಿದ್ದಾರೆ. ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರ. ಆದಕಾರಣ ಸಂಪೂರ್ಣ ಲಿಖಿತ ವಿವರಣೆಯನ್ನು ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ತಪ್ಪಿದ್ದಲ್ಲಿ ನಿಮ್ಮ ಶಾಲೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯುಕೆಜಿ ಮಗುವನ್ನು ಯಾಕೆ ಅನುತ್ತೀರ್ಣ ಮಾಡಿದ್ದೀರಿ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಸುತ್ತಿದೆ. ಶಾಲಾ ನಿಯಮಾನುಸಾರ 9ನೇ ತರಗತಿಯವರೆಗೆ ಅನುತ್ತೀರ್ಣ ಮಾಡುವಂತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿರುವಾಗ ಈ ಶಾಲೆಯವರಿಗೆ ತಿಳಿದಿರಲಿಲ್ಲವೇ?
ಅನುತ್ತೀರ್ಣ ಮಾಡಿರುವ ಕುರಿತು ಮಾಹಿತಿ ಕೇಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಇನ್ನೂ ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸೆಂಟ್ ಜೋಸೆಪ್ ಚಾರ್ಮಿನೆಡ್ ಶಾಲೆಗೆ ಈಗಾಗಲೇ ನೋಟೀಸ್ ಜಾರಿಯಾಗಿದೆ. ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿಈ ಕುರಿತು ಕ್ರಮ ಕೈಗೊಂಡಿದ್ದಾರೆ. ಶಾಲಾ ಪ್ರಾಂಶುಪಾಲರಿಗೆ ಶಿಕ್ಷಣ ಸಂಯೋಜಕ ದತ್ತಗುರುರಿಂದ ನೋಟೀಸ್ ಜಾರಿಯಾಗಿದೆ.
ಆ್ಯಪ್‌ನಿಂದ ಉಂಟಾಯ್ತಾ ಗೊಂದಲ?
ಈ ಕುರಿತು ವಿಚಾರಣೆಯಾದಾಗ ಆ್ಯಪ್ ದೋಷದಿಂದ ಮಕ್ಕಳು ಮತ್ತು ಪೋಷಕರಲ್ಲಿ ಗೊಂದಲ ಉಂಟಾಗಿದೆ ವಿದ್ಯಾರ್ಥಿನಿಯನ್ನು ಫೇಲ್ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. ದೋಷ ಪೂರಿತ ಈ ಆ್ಯಪ್ ಅನ್ನು ಇನ್ನು ಮುಂದೆ ನೀಷೇಧ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಿರು ಪರೀಕ್ಷೆ ರೈಮ್ಸ್ ವಿಷಯದಲ್ಲಿ ಕಡಿಮೆ ಅಂಕ ಪಡೆದಿರುವ ಬಗ್ಗೆ ಪೋಗ್ರೆಸ್ ರಿಪೋರ್ಟ್ ನಲ್ಲಿ ಉಲ್ಲೆಖಮಾಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ. ಟೀಚ್ ಮೆಟ್ ಆ್ಯಪ್ ಶಿಕ್ಷಣ ಸಂಯೋಜಕ ದತ್ತಗುರು ನಿಷೇಧಕ್ಕೆ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ