ಇಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ (Stuents) ಶಿಕ್ಷಣ ನೀಡುವುದು ಕೆಲವು ಪಾಲಕರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಸಾಮಾನ್ಯ ಶಿಕ್ಷಣ ಎಂದಿಗೂ ಯಾವಕಾಲಕ್ಕೂ ದುಬಾರಿಯಾಗಿರುವುದಿಲ್ಲ ಆದರೆ ಎಲ್ಲಾ ಪಾಲಕರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವುದಕ್ಕೆ ಆಸೆ ಪಡುತ್ತಾರೆ. ತಾವೇ ಸೃಷ್ಟಿಸಿಕೊಂಡ ಸಮಾಜಕ್ಕೆ ಹೆದರಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ (Education) ನೀಡುವ ನೆಪದಲ್ಲಿ ಎಷ್ಟೋ ಜನ (People) ಸಾಲ ಮಾಡುತ್ತಾರೆ. ಎರಡು ಮಕ್ಕಳು ಇದ್ದರಂತೂ ಸಾಲದ ಹೊರೆ ತೀರಿಸಲಾಗದೇ ಪರದಾಡುತ್ತಾರೆ. ಅಷ್ಟು ಹಣ (Money) ಸಂಪಾದನೆ ಮಾಡಲು ಸಾಧ್ಯವಾಗದೇ ಇದ್ದರೂ ಸಹ ಸರ್ಕಾರಿ ಶಾಲೆಗಳನ್ನು ನಿರಾಕರಿಸುತ್ತಾರೆ.
ಇನ್ನು ಉನ್ನತ ಶಿಕ್ಷಣದ ಹಂತಕ್ಕೆ ಬಂದರೆ ವೃತ್ತಿಪರ ಕೋರ್ಸ್ಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಉಸಿರುಗಟ್ಟಿಸುವ ಸ್ವರ್ಧಾತ್ಮಕ ಕೊಚಿಂಗ್ ಸೆಂಟರ್ಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಪರದಾಡುತ್ತಾರೆ. ಶಿಕ್ಷಣವೇ ಒಂದು ಉಧ್ಯಮವಾಗಿ ಬದಲಾಗಿ ಯಾವುದೋ ಕಾಲವಾಗಿದೆ.
ಶಿಕ್ಷಣ ಪಡೆಯೊ ಮುಂಚೆಯೆ ಸಾಕಷ್ಟು ಮೊತ್ತ ಕೇವಲ ಕೊಚಿಂಗ್ ಹೆಸರಿನಲ್ಲಿ ಖಾಲಿಯಾಗಿರುತ್ತದೆ. ಮಕ್ಕಳು ಪೋಷಕರಿಗೆ ಹೊರೆಯಾಗಿ ಪರಣಮಿಸುತ್ತಾರೆ. ನಮ್ಮ ದೇಶದಲ್ಲಿ ಸರ್ಕಾರಿ ನೌಕರಿ ಎಲ್ಲಾ ಜನರಿಗೂ ಲಭ್ಯವಾಗಲು ಸಾಧ್ಯವೇ ಇಲ್ಲ. ಖಾಸಗಿ ಹುದ್ದೆಗಳು ಲಭ್ಯವಿದ್ದರೂ ಎಷ್ಟೋ ಜನ ಇನ್ನೂ ಸರ್ಕಾರಿ ನೌಕರಿಗಾಗಿ ಪೈಪೋಟಿ ನಡೆಸುತ್ತಾ ದುಬಾರಿ ಕೋಚಿಂಗ್ ಸೇರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: KSOU: ಕರಾಮುವಿ ಪ್ರವೇಶಾತಿ ಆರಂಭ, ಈ ಲಿಂಕ್ ಕ್ಲಿಕ್ ಮಾಡಿ ಅಪ್ಲೈ ಮಾಡಿ
ಟಾಪ್ ಕಾಲೆಜುಗಳಲ್ಲಿ ಸೀಟ್ ಗಿಟ್ಟಿಸಿಕೊಳ್ಳುವ ಸಲುವಾಗಿ ಡೊನೇಷನ್ ನೀಡಿ ಅಲ್ಲೊಂದಿಷ್ಟು ಹಣ ವ್ಯಯ ಮಾಡುತ್ತಾರೆ. ಮಧ್ಯಮ ವರ್ಗದವರಿಗಂತೂ ಇದು ಎಷ್ಟು ದೊಡ್ಡ ಕಷ್ಟ ಎಂದರೆ ಹೇಳತೀರದು. ಆಯಾ ದೇಶದ ವ್ಯವಸ್ತೆಗಳ ಆಧಾರದ ಮೇಲೆ ಶೈಕ್ಷಣಿಕ ಶುಲ್ಕ ನಿಗದಿಯಾಗುತ್ತದೆ. ನಮ್ಮ ದೇಶದಲ್ಲಿ ಪ್ರೌಢಶಾಲಾ ಹಂತದವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾಮಾನ್ಯ ಕಾಲೇಜು ಶಿಕ್ಷಣ ಉಚಿತ ಮಾತ್ರವಲ್ಲ, ಅದರೊಟ್ಟಿಗೆ ಅವರಿಗೆ ಉತ್ತಮ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತದೆ.
ಜರ್ಮನಿಯಲ್ಲಿ ಹೇಗಿದೆ ನೋಡಿ ಶಿಕ್ಷಣ ವ್ಯವಸ್ಥೆ
ಜರ್ಮನಿಯಲ್ಲಂತೂ ಜರ್ಮನ್ ಭಾಷೆಯಲ್ಲಿ ಹಿಡಿತ ಸಾಧಿಸಿ ಒಂದು ಪ್ರವೇಶ ಪರೀಕ್ಷೆ ಬರೆದರೆ ಸಾಕು ಅಲ್ಲಿನ ಕಾಲೇಜು ಅವರ ಎಲ್ಲಾ ಶೈಕ್ಷಣಿಕ ವೆಚ್ಚವನ್ನು ತಾನೇ ನೋಡಿಕೊಳ್ಳುತ್ತದೆ. ಶಿಕ್ಷಣ ಯಶಸ್ಸಿನ ಕೀಲಿಕೈ ಎಂಬುದು ಸುಳ್ಳಲ್ಲ ಆದರೆ ಆ ಶಿಕ್ಷಣ ಪಡೆಯುವ ಸಲುವಾಗಿಯೇ ಹಲವಾರು ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಒಂದು ರೀತಿಯಲ್ಲಿ ಶಿಕ್ಷಣ ದುಬಾರಿಯಾಗಲು ಜನರೇ ಕಾರಣ ಈಗ ಅದೇ ಜನರು ಶಿಕ್ಷಣ ದುಬಾರಿ ಎಂದು ದೂರುತ್ತಿದ್ದಾರೆ. ಮೊದಲಿನ ರೀತಿ ಗುರುಕುಲ ಶಿಕ್ಷಣ ಇದ್ದಿದ್ದರೆ ಅದರಲ್ಲೇ ಸುಧಾರಣೆ ಕಂಡುಕೊಳ್ಳುತ್ತಾ ಬಂದಿದ್ದರೆ ತುಂಬಾ ಲಾಭವಿತ್ತು ಆದರೆ ವಿದೇಶಿ ವ್ಯಾಮೋಹ, ದೂರ ಶಿಕ್ಷಣ, ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆ ಮತ್ತು ಚಿಕ್ಕಂದಿನಿಂದಲೇ ಮಕ್ಕಳನ್ನು ಕಾನ್ವೆಂಟಿಗೆ ಕಳಿಸುವ ರೂಢಿ ಬೆಳೆಸಿಕೊಂಡಿದ್ದೇ ಜನರು.
ಸರ್ಕಾರಿ ಶಾಲೆಗಳ ಮೇಲಿನ ತಾತ್ಸಾರ ಮನೋಭಾವವೇ ದುಬಾರಿ ಶಿಕ್ಷಣಕ್ಕೆ ಕಾರಣ
ಮಧ್ಯಾಹ್ನದ ಬಿಸಿಊಟ, ಉಚಿತ ಪಠ್ಯ ಪುಸ್ತಕ ಅಷ್ಟೇ ಅಲ್ಲಾ ಸಮವಸ್ತ್ರವನ್ನೂ ಸಹ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಆದರೂ ಸರ್ಕಾರಿ ಶಾಲೆಗಳನ್ನು ನಿರಾಕರಿಸಿದ ಪಾಲಕರು ಶಿಕ್ಷಣದ ವೆಚ್ಚ ಹೆಚ್ಚಾಗುವಂತೆ ತಾವೇ ತಮ್ಮ ಕೈ ಮೇಲೆ ಬರೆ ಎಳೆದುಕೊಂಡಿದ್ದಾರೆ. ಯಾವಾಗ ಜನರ ಮನಸ್ಥಿತಿ ಬದಲಾಗುತ್ತದೋ ಅಂದೇ ಶಿಕ್ಷಣದ ವೆಚ್ಚ ಕೂಡಾ ಕಡಿಮೆಯಾಗುತ್ತದೆ ಎಂದರೆ ತಪ್ಪಾಗಲಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ