• ಹೋಂ
  • »
  • ನ್ಯೂಸ್
  • »
  • Jobs
  • »
  • Education: US ಯುನಿವರ್ಸಿಟಿಗೆ 1 ಮಿಲಿಯನ್ ಡಾಲರ್ ಕೊಡುಗೆ ನೀಡಿದ ಭಾರತೀಯ!

Education: US ಯುನಿವರ್ಸಿಟಿಗೆ 1 ಮಿಲಿಯನ್ ಡಾಲರ್ ಕೊಡುಗೆ ನೀಡಿದ ಭಾರತೀಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದ ಮತ್ತು ಹಲವಾರು ಪ್ರಮುಖ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯಗಳ ಸದಸ್ಯನಾಗಿರುವ ರಮೇಶ್‌ ಭೂತಾಡ ಮಾತನಾಡಿದ್ದಾರೆ.

  • Share this:
  • published by :

ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಸಲುವಾಗಿ ವಿಶ್ವದಾದ್ಯಂತ ಸಾಕಷ್ಟು ಜನರು ದೇಣಿಗೆ ನೀಡುತ್ತಿದ್ದಾರೆ. ಇದೇ ರೀತಿ ಭಾರತ ಮೂಲದ ಅಮೆರಿಕಾದ ವಾಣಿಜ್ಯೋದ್ಯಮಿ ಹಿಂದೂ ವಿಶ್ವವಿದ್ಯಾಲಯಕ್ಕೆ (University) 1 ಡಾಲರ್ ಮಿಲಿಯನ್ ದೇಣಿಗೆ ನೀಡಿದ್ದಾರೆ. ಹೌದು, ಹೂಸ್ಟನ್ ಮೂಲದ ಸ್ಟಾರ್ ಪೈಪ್ ಪ್ರಾಡಕ್ಟ್ಸ್‌ನ ಸಿಇಒ (CEO) ರಮೇಶ್ ಭೂತಾಡ,‌ ಎಂಬುವವರು ಯುವಜನರು ಹಿಂದೂ ಧರ್ಮದ ಬಗ್ಗೆ ಹಿಂದಿನ ಜ್ಞಾನ ಮತ್ತು ತಿಳುವಳಿಕೆಯನ್ನು ಪಡೆಯಲು ಸಶಕ್ತಗೊಳಿಸಲು ಹಿಂದೂ (Hindu) ಯುನಿವರ್ಸಿಟಿ ಆಫ್‌ ಅಮೆರಿಕಾಕ್ಕೆ (ಹೆಚ್‌ಯುಎ) 1 ಡಾಲರ್‌ ಮಿಲಿಯ್‌ ದೇಣಿಗೆಯನ್ನು ನೀಡುವುದಾಗಿ ತಿಳಿಸಿದ್ದಾರೆ. ತಾನು ದೇಣಿಗೆ ನೀಡುತ್ತಿರುವುದರ ಹಿಂದಿರುವ ಕಾರಣವನ್ನು (Reson) ತಿಳಿಸಿರುವ ಭೂತಾಡ, ಇದರಿಂದ ಯುವಜನರು ಸಂತೋಷ ಮತ್ತು ಉತ್ಪಾದಕ ಜೀವನವನ್ನು ನಡೆಸಬಹುದು ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.


ಈ ದೇಣಿಗೆಯು 1989 ರಲ್ಲಿ ಸ್ಥಾಪನೆಯಾದ ಮತ್ತು 1993 ರಲ್ಲಿ ಫ್ಲೋರಿಡಾ ರಾಜ್ಯ ಸರ್ಕಾರದಿಂದ ಅಧಿಕೃತಗೊಂಡಿದೆ. ಈ ದೇಣಿಗೆಯು ಅಮೆರಿಕನ್‌ ಹಿಂದೂ ವಿಶ್ವವಿದ್ಯಾಲಯು ಸ್ವೀಕರಿಸಿದ ಅತ್ಯಧಿಕ ದೇಣಿಗೆ ಎಂಬ ಮಾನ್ಯತೆಯನ್ನು ಪಡೆದುಕೊಂಡಿದೆ. ಅಂತೆಯೇ ಹೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂತಾಡ ಅವರನ್ನು ಅಮೆರಿಕನ್‌ ಹಿಂದೂ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನ ಕೂಡ ಮಾಡಲಾಗಿದೆ.


ಹಿಂದೂ ಧರ್ಮ ಸಾಮರಸ್ಯದಿಂದ ಬದುಕುವುದನ್ನು ಕಲಿಸುತ್ತದೆ


ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದ ಮತ್ತು ಹಲವಾರು ಪ್ರಮುಖ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯಗಳ ಸದಸ್ಯನಾಗಿರುವ ರಮೇಶ್‌ ಭೂತಾಡ ಮಾತನಾಡಿ, "ಹಿಂದೂ ಧರ್ಮದ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ನನಗೆ 60 ವರ್ಷಗಳು ಬೇಕಾಯಿತು. ಈ ಧರ್ಮ ನಮ್ಮೊಳಗೆ, ನಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಇಡೀ ಪ್ರಪಂಚದೊಂದಿಗೆ ಹೇಗೆ ಸಾಮರಸ್ಯದಿಂದ ಬದುಕಬೇಕೆಂಬುದನ್ನು ಕಲಿಸುತ್ತದೆ" ಎಂದು ಹಿಂದೂ ಧರ್ಮದ ಕುರಿತು ಕುರಿತು ವಿವರಿಸಿದ್ದಾರೆ.


"ಇತರ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕಾಗಿ ಜ್ಞಾನವನ್ನು ನೀಡಬಹುದು. ಹೆಚ್‌ಯುಎ ಯಂತಹ ಸಂಸ್ಥೆ ಮಾತ್ರ ಹಿಂದೂ ಧರ್ಮದ ಜ್ಞಾನವನ್ನು ನೀಡುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ" ಎಂಬ ಅಂಶವನ್ನು ಇವರು ಸಾರಿ ಹೇಳಿದ್ದಾರೆ.


ಇದನ್ನೂ ಓದಿ: MBBS: ಉಕ್ರೇನ್‌ನಿಂದ ಭಾರತಕ್ಕೆ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ 1 ಬಾರಿ ಪರೀಕ್ಷೆ ಬರೆಯಲು ಅವಕಾಶ!


ಎಚ್‌ಯುಎ ಅಧ್ಯಕ್ಷ ಕಲ್ಯಾಣ್ ವಿಶ್ವನಾಥನ್ ಈ ಸಂದರ್ಭದಲ್ಲಿ ಮಾತನಾಡಿ, ತಂಜಾವೂರಿನ ಬೃಹದೀಶ್ವರ ದೇವಸ್ಥಾನದಂತಹ 1,000 ವರ್ಷಗಳಿಂದ ಗಟ್ಟಿಮುಟ್ಟಾಗಿರುವ ಅಥವಾ 1,700 ವರ್ಷಗಳಿಂದ ಜಗತ್ತಿಗೆ ಜ್ಞಾನದೀಪವಾಗಿದ್ದ ನಳಂದ ವಿಶ್ವವಿದ್ಯಾಲಯದಂತಹ ಹಿಂದೂ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ಪ್ರಸ್ತುತ ಎಲ್ಲಾ ಹಿಂದೂ ಸಮುದಾಯಗಳು ಒಗ್ಗೂಡಿವೆ ಎಂದು ತಿಳಿಸಿದ್ದಾರೆ.


ವಿಶ್ವವಿದ್ಯಾನಿಲಯದ ಅಧ್ಯಕ್ಷ ವೇದ್ ನಂದಾ ಕೂಡ ಮಾತನಾಡಿ ಹೆಚ್‌ಯುಎ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಹಿಂದೂ ಬೌದ್ಧಧರ್ಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಛಾಪು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.




ಈ ನಡುವೆ ಬಹಳಷ್ಟು ಹಿಂದೂ ವಿಶ್ವವಿದ್ಯಾನಿಲಯವನ್ನು ದೇಶದಾದ್ಯಂತ ನಿರ್ಮಿಸಲಾಗಿದೆ ಮತ್ತು ನಮ್ಮಲ್ಲಿ ಅತ್ಯಂತ ಹಳೆಯ ಹಿಂದೂ ವಿಶ್ವವಿದ್ಯಾಲಯಗಳಿವೆ.ಈ ವಿಶ್ವವಿದ್ಯಾಲಯದಲ್ಲಿ ಅವರು ಆರೋಗ್ಯಕರ ಜೀವನಶೈಲಿಯನ್ನು ನಿರ್ಮಿಸಲು ಉತ್ತಮ ವಿಷಯಗಳನ್ನು ತಿಳಿಸುತ್ತಾರೆ. ಹಿಂದೂ ಧರ್ಮ ಸಂಸಾರ (ಜೀವನ, ಸಾವು ಮತ್ತು ಪುನರ್ಜನ್ಮದ ನಿರಂತರ ಚಕ್ರ) ಮತ್ತು ಕರ್ಮ (ಕಾರಣ ಮತ್ತು ಪರಿಣಾಮದ ಸಾರ್ವತ್ರಿಕ ನಿಯಮ) ಸಿದ್ಧಾಂತಗಳಲ್ಲಿ ನಂಬಿಕೆಯನ್ನು ಒದಗಿಸುತ್ತದೆ ಎಂಬುದು ವೇದ್ ಅವರ ಅಭಿಪ್ರಾಯವಾಗಿದೆ.


ಭಾರತದ ಹೊರತಾಗಿಯೂ ವಿಶ್ವಾದ್ಯಂತ ಹಿಂದೂ ಧರ್ಮದ ಅನುಯಾಯಿಗಳನ್ನು ಹೊಂದಿದ್ದೇವೆ, ಅವರು ಹಿಂದೂ ಸಂಸ್ಕೃತಿ ಅಥವಾ ಹಿಂದೂ ದೇವರನ್ನು ನಂಬುತ್ತಾರೆ ಅದರೊಂದಿಗೆ ಒಳ್ಳೆಯ ವಿಷಯಗಳನ್ನು ಹಂಚುತ್ತಾರೆ ಮತ್ತು ಧರ್ಮದ ಪ್ರಗತಿಗೆ ಸಾಕಷ್ಟು ದೇಣಿಗೆಗಳನ್ನು ಹಲವಾರು ಜನರು ನೀಡುತ್ತಿದ್ದಾರೆ ಇದರಿಂದ ಹಿಂದೂ ಧರ್ಮವನ್ನು ಇನ್ನಷ್ಟು ಸುಭದ್ರವಾಗಿ ನಿರ್ಮಿಸಲು ಸಾಧ್ಯವಾಗುತ್ತಿದೆ ಎಂದು ವೇದ್ ತಿಳಿಸಿದ್ದಾರೆ.

top videos
    First published: