• Home
  • »
  • News
  • »
  • jobs
  • »
  • Amazon Scholarship: ವರ್ಷಕ್ಕೆ 1.6 ಲಕ್ಷ ವಿದ್ಯಾರ್ಥಿ ವೇತನ, ಈ ಕೂಡಲೇ ಅಪ್ಲೈ ಮಾಡಿ

Amazon Scholarship: ವರ್ಷಕ್ಕೆ 1.6 ಲಕ್ಷ ವಿದ್ಯಾರ್ಥಿ ವೇತನ, ಈ ಕೂಡಲೇ ಅಪ್ಲೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅದರಂತೆ ಮುಂಬರುವ ವರ್ಷ ಅಂದರೆ 2023ರಲ್ಲೂ ಸಹ ಈ ವಿದ್ಯಾರ್ಥಿವೇತನ ಲಭ್ಯವಿದ್ದು ನೀವು ಅಧಿಕೃತ ವಿದ್ಯಾರ್ಥಿ ವೇತನದ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಧಿಕೇತ ಜಾಲತಾಣದ ಲಿಂಕ್​ ಇಲ್ಲಿದೆ ನೋಡಿ. 

  • News18 Kannada
  • 4-MIN READ
  • Last Updated :
  • Karnataka, India
  • Share this:

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುವ ಸಲುವಾಗಿ ಅಮೆಜಾನ್ (Amezon Scholarship) ಸಂಸ್ಥೆಯು ಹೊಸ ವಿದ್ಯಾರ್ಥಿವೇತನವನ್ನು ಬಿಡುಗಡೆಮಾಡಿದೆ. ವಾರ್ಷಿಕ 40,000 ರೂ ವಿದ್ಯಾರ್ಥಿ ವೇತನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಆರ್ಥಿಕ (Economic) ಸಂಕಷ್ಟ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ (Students) ಸಹ ಇದರಿಂದ ಪ್ರಯೋಜನ (Benifits) ದೊರೆಯಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ವಿದ್ಯಾರ್ಥಿ ವೇತನ ತುಂಬಾ ಪ್ರಯೋಜನ ನೀಡಲಿದೆ. 


ಅಮೆಜಾನ್ ವಿದ್ಯಾರ್ಥಿವೇತನ ಅರ್ಹತೆ
1. ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಶಾಖೆಗಳಲ್ಲಿ BE/BTech ಕಲಿಯುತ್ತಿರುವ ಭಾರತೀಯ  ವಿದ್ಯಾರ್ಥಿನಿಯರು ಇದಕ್ಕೆ ಅಪ್ಲೈ ಮಾಡಬಹುದು.
2. ಪ್ರಸ್ತುತ ಪದವಿಯ ಮೊದಲ ವರ್ಷದಲ್ಲಿ ಓದುತ್ತಿರಬೇಕು.
3. ಕುಟುಂಬದ ವಾರ್ಷಿಕ ಆದಾಯ INR 3,00,000 ಕ್ಕಿಂತ ಕಡಿಮೆ ಇರಬೇಕು.
4. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ತೆಗೆದುಕೊಳ್ಳಲಾಗುತ್ತದೆ.


ಪ್ರಯೋಜನಗಳು:
INR 1,60,000 (ಪದವಿಯಾಗುವವರೆಗೆ ವರ್ಷಕ್ಕೆ INR 40,000) ಲಭಿಸುತ್ತದೆ.


ಇದನ್ನೂ ಓದಿ: Sukanya Samriddhi: ನಿಮ್ಮ ಮಗಳ ಹೆಸ್ರಲ್ಲಿ ಈ ಖಾತೆ ತೆರೆಯರಿ! ಇಂದಿನಿಂದಲೇ ಶಿಕ್ಷಣ, ಮದುವೆಗಾಗಿ ಹಣ ಸೇರಿಸಿ!


ಅಗತ್ಯವಾದ ದಾಖಲೆಗಳು
1. 10 ನೇ ತರಗತಿ ಮತ್ತು 12 ನೇ ತರಗತಿಯ ಅಂಕಪಟ್ಟಿ
2. ಕಾಲೇಜಿನಿಂದ  ಪ್ರಮಾಣಪತ್ರ
3. ಶ್ರೇಣಿಯ ಪ್ರಮಾಣಪತ್ರ
4. ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಪತ್ರ
5. ಕುಟುಂಬದ ಆದಾಯ ಪ್ರಮಾಣಪತ್ರ ಅಥವಾ ಸಂಬಳದ ಸ್ಲಿಪ್ (3 ತಿಂಗಳವರೆಗೆ) ಅಥವಾ ಐಟಿ ರಿಟರ್ನ್ ಫಾರ್ಮ್
6..ಬೋಧನೆ/ಹಾಸ್ಟೆಲ್/ಮೆಸ್ ಪಾವತಿಸಿದ ರಸೀದಿಗಳು
7. ಕಾಲೇಜಿನಿಂದ ಅಂದಾಜು ವೆಚ್ಚಗಳ ಹೇಳಿಕೆ
8. ಬ್ಯಾಂಕ್ ಖಾತೆ ವಿವರಗಳ ದೃಢೀಕರಣಕ್ಕಾಗಿ ಬ್ಯಾಂಕ್ ಪಾಸ್ ಬುಕ್ ನಕಲು
9. ಇ-ಆಧಾರ್ ಅಥವಾ ನಿಮ್ಮ ಮೂಲ ಆಧಾರ್‌ನ ಸ್ಕ್ಯಾನ್ ಮಾಡಿದ ಪ್ರತಿ
10. ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿವೇತನ 2023 ಅಪ್ಲಿಕೇಶನ್ ಪ್ರಕ್ರಿಯೆಗೆ ಬೇಕಾಗುವ ಅಗತ್ಯ ದಾಖಲೆಗಳು ಇವಿಷ್ಟು. ಇವನ್ನು ನೀಡಿ ನಿಮ್ಮ ವಿದ್ಯಾರ್ಥಿ ಜೀವನಕ್ಕೆ ಸಹಾಯವಾಗುತ್ತದೆ.


ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅದರಂತೆ ಮುಂಬರುವ ವರ್ಷ ಅಂದರೆ 2023ರಲ್ಲೂ ಸಹ ಈ ವಿದ್ಯಾರ್ಥಿವೇತನ ಲಭ್ಯವಿದ್ದು ನೀವು ಅಧಿಕೃತ ವಿದ್ಯಾರ್ಥಿ ವೇತನದ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಧಿಕೇತ ಜಾಲತಾಣದ ಲಿಂಕ್​ ಇಲ್ಲಿದೆ ನೋಡಿ.


ಅರ್ಜಿ ಸಲ್ಲಿಸಲು ಹೀಗೆ ಮಾಡಿ


ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು.
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್​ ಮಾಡಿ


1. ಇಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಮೊದಲು ವಿದ್ಯಾರ್ಥಿವೇತನದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.


2. ನಿಮ್ಮ ಪರದೆಯ ಮೇಲೆ ಮುಖಪುಟ ತೆರೆಯುತ್ತದೆ.


3. ಮುಖಪುಟದಲ್ಲಿರುವ ಆನ್‌ಲೈನ್ ಅನ್ವಯಿಸು ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕು .


4. ಅರ್ಜಿ ನಮೂನೆಯೊಂದಿಗೆ ಹೊಸ ಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ.


5. ಅಲ್ಲಿ ನೀವು ನಿಮಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಬೇಕಾಗುತ್ತದೆ.


6. ಸಂಸ್ಥೆಯು ಪ್ರಸ್ತುತಪಡಿಸಿದ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ  ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಭರ್ತಿ ಮಾಡಿ.


7. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಸಂಪರ್ಕ ಸಂಖ್ಯೆ ನಮೂದಿಸಿ.


8. ಅಷ್ಟೇ ಅಲ್ಲ ಸರಿಯಾದ ಮೇಲ್​ ಐಡಿ ನೀಡಿ.


ಇನ್ನೂ ಹಲವು ವಿದ್ಯಾರ್ಥಿ ವೇತನದ ಮಾಹಿತಿ ನೀಡಲಾಗುತ್ತದೆ. ಡಿಸೆಂಬರ್​ 31ಕ್ಕೆ ಅಪ್ಲೈ ಮಾಡಬಹುದಾದ ಹಲವಾರು ವಿದ್ಯಾರ್ಥಿ ವೇತನಗಳಿದ್ದು ಆದಷ್ಟು ಬೇಗ ಅಪ್ಲೈ ಮಾಡಿ. ವಿದ್ಯಾರ್ಥಿ ವೇತನವನ್ನು ನಿಮ್ಮದಾಗಿಸಿಕೊಳ್ಳಿ.

First published: