• ಹೋಂ
 • »
 • ನ್ಯೂಸ್
 • »
 • Jobs
 • »
 • ChatGPTs in Classrooms: ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿತ ಚಾಟ್‌ಬಾಟ್ ChatGPT ಬಳಕೆ ಎಷ್ಟು ಸೂಕ್ತ?

ChatGPTs in Classrooms: ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿತ ಚಾಟ್‌ಬಾಟ್ ChatGPT ಬಳಕೆ ಎಷ್ಟು ಸೂಕ್ತ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಾಟ್‌ ಬಾಟ್ ಎನ್ನುವುದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. ಅದು ಬಳಕೆದಾರರ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಲು ಹಾಗೂ ಉತ್ತರಿಸಲು ಕೃತಕ ಬುದ್ಧಿಮತ್ತೆ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆ ಬಳಕೆ ಮಾಡುತ್ತದೆ. ಮಾನವ ಸಂಭಾಷಣೆ ಫಾಲೋ ಮಾಡುತ್ತದೆ.

 • Share this:

  ಕೃತಕ ಬುದ್ಧಿಮತ್ತೆ ಅಥವಾ AI ಆಧಾರಿತ ಚಾಟ್‌ಬಾಟ್ ChatGPT ಸಾಕಷ್ಟು ನಿಖರತೆ ಹೊಂದಿದ್ದು, ಇದು ಇಡೀ ಪಠ್ಯ ಉತ್ಪಾದನೆಯನ್ನೇ (Text Generation) ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಂದಿನ ಶೈಕ್ಷಣಿಕ ಪದ್ಧತಿ (Education System) ಮತ್ತು ಪಠ್ಯ ಚಟುವಟಿಕೆಯು ಆನ್ ಲೈನ್ (Online) ರೂಪ ಪಡೆದಿದೆ. ಮಕ್ಕಳು ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ (Computer) ಹಾಗೂ ಡಿಜಿಟಲ್ ಆಧಾರಿತ ಅಭ್ಯಾಸ ಮಾಡುತ್ತಾರೆ. ಕೊರೊನಾ ನಂತರದ ದಿನಗಳಲ್ಲಿ ಡಿಜಿಟಲ್ ಆಧಾರಿತ ಶೈಕ್ಷಣಿಕ ಪದ್ಧತಿಗೆ ಸರ್ಕಾರಗಳು ಸಹ ಹೆಚ್ಚು ಒತ್ತು ನೀಡುತ್ತಿವೆ. ಶಾಲಾ ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ AI ಆಧಾರಿತ ಚಾಟ್‌ಬಾಟ್ ChatGPT ಬಳಕೆ ಹೆಚ್ಚುತ್ತಿದೆ.


  ಕೃತಕ ಬುದ್ಧಿಮತ್ತೆ ಅಥವಾ AI ಆಧಾರಿತ ಚಾಟ್‌ಬಾಟ್ ChatGPT ಬಳಕೆ ನಿಷೇಧ


  ಆದರೆ ಈ ಪದ್ಧತಿಯು ಪರೀಕ್ಷೆಯಲ್ಲಿ ಮಕ್ಕಳು ಪ್ರಾಮಾಣಿಕವಾಗಿ ಪಾಸ್ ಆಗುದಕ್ಕೆ ಸಮಸ್ಯೆ ತಂದೊಡ್ಡುತ್ತಿದ್ದು, ಇದನ್ನು ಮುಂಬರುವ 10 ಮತ್ತು 12 ಬೋರ್ಡ್ ಪರೀಕ್ಷೆಗಳಲ್ಲಿ ನಿಷೇಧ ಮಾಡಬೇಕೆಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಹೇಳಿದೆ. ಜೊತೆಗೆ ಇದು ಪ್ರಾಮಾಣಿಕವಲ್ಲದ ವಿಧಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಚಾಟ್ ಬಾಟ್ ಎಂದರೇನು?


  ಚಾಟ್‌ ಬಾಟ್ ಎನ್ನುವುದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. ಅದು ಬಳಕೆದಾರರ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಲು ಹಾಗೂ ಉತ್ತರಿಸಲು ಕೃತಕ ಬುದ್ಧಿಮತ್ತೆ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆ ಬಳಕೆ ಮಾಡುತ್ತದೆ. ಮಾನವ ಸಂಭಾಷಣೆ ಫಾಲೋ ಮಾಡುತ್ತದೆ. ನಿರ್ದಿಷ್ಟ ಟ್ರಿಗ್ಗರ್‌ ಹಾಗೂ ಅಲ್ಗಾರಿದಮ್‌ ಗಳಿಂದ ಚಾಟ್‌ಬಾಟ್‌ಗಳು ಕ್ರಿಯೆ ನಿರ್ವಹಿಸುತ್ತವೆ.
  ಇಂದಿನ ದಿನದಲ್ಲಿ AI ಚಾಟ್‌ಬಾಟ್‌ನ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಟೆಕ್ ನಾಯಕರು ಇದನ್ನೂ ಸುಧಾರಿಸಲು ಯತ್ನಿಸುತ್ತಿದ್ದಾರೆ. ಚಾಟ್ ಬಾಟ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ವ್ಯಾಪಾರವನ್ನು ಬೆಳೆಸಲು ಸಹಕಾರಿ.


  ಸಕ್ರಿಯ ಇಂಟರ್ನೆಟ್ ಬಳಕೆದಾರರು ChatGPT ಬಗ್ಗೆ ಕೇಳಿರ್ತಾರೆ. ಇದು AI-ಚಾಲಿತ ಚಾಟ್‌ಬಾಟ್ ಮೂಲಮಾದರಿ. ಇದನ್ನು OpenAI ಅಭಿವೃದ್ಧಿಪಡಿಸಿದೆ, ಅದೇ ಸಂಸ್ಥೆಯು ಟೆಕ್ಸ್ಟ್-ಟು-ಇಮೇಜ್ ಜನರೇಟರ್ DALL-E ಅನ್ನು ಅಭಿವೃದ್ಧಿಪಡಿಸಿದೆ. ಇದು ಬಳಕೆದಾರ ಸ್ನೇಹಿಯಾಗಿದೆ.


  ಚಾಟ್‌ಬಾಟ್ ChatGPT ಶೈಕ್ಷಣಿಕ ಹಂತದಲ್ಲಿ


  ಕೃತಕ ಬುದ್ಧಿಮತ್ತೆ ಅಥವಾ AI ಆಧಾರಿತ ಚಾಟ್‌ಬಾಟ್ ChatGPT ದೊಡ್ಡ ಭಾಷಾ ಮಾದರಿ ಒಳಗೊಂಡಿದೆ. ಚಾಟ್‌ಜಿಪಿಟಿ ನೀಡಿದ ಪ್ರಾಂಪ್ಟ್ ಅಥವಾ ವಿಷಯದ ಆಧಾರದ ಮೇಲೆ ಮಾನವ ತರಹದ ಪಠ್ಯ ರಚಿಸುತ್ತದೆ. ಸಂವಹನಕ್ಕಾಗಿ ನೈಸರ್ಗಿಕ ಭಾಷೆ ಬಳಕೆ ಮಾಡಲಾಗುತ್ತದೆ.


  ಪ್ರಾಂಪ್ಟ್‌ಗೆ ಪ್ರತಿಕ್ರಿಯೆ ರೂಪಿಸಲು ಉಪಕರಣವು ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿ ಸಂಗ್ರಹಿಸುತ್ತದೆ. ಶಾಲಾ ಮಕ್ಕಳು ತಮ್ಮ ಕಾರ್ಯ ಯೋಜನೆ ಪೂರ್ಣಗೊಳಿಸಲು ಅಪ್ಲಿಕೇಶನ್ ಎಂಟ್ರಿ ಆಗಬಹುದು. ಆದರೆ ಇದು ವಿದ್ಯಾರ್ಥಿಗಳ ಸೃಜನಶೀಲ ಚಿಂತನೆ ಮತ್ತು ಸಂಶೋಧನಾ ಕೌಶಲ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಎಂದು ಕೆಲವು ತಜ್ಞರು ವಾದಿಸುತ್ತಿದ್ದಾರೆ.


  ಇನ್ನು ಕೆಲವು ತಜ್ಞರು ಚಾಟ್‌ಜಿಪಿಟಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ವೀಕ್ಷಣಾ ಕೌಶಲ್ಯಕ್ಕೆ ಅಡ್ಡಿ ಮಾಡಲ್ಲ ಎನ್ನುತ್ತಾರೆ.


  ಆನ್ ಲೈನ್ ಸಂಪನ್ಮೂಲ


  ಶಾಲಾ ಶಿಕ್ಷಣದಲ್ಲಿ ಇಂಟರ್ನೆಟ್ ಉಪಕರಣಗಳ ಬಳಕೆ ಹೊಸದಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೋಂ ವರ್ಕ್ ಕಾರ್ಯ ಯೋಜನೆ  ಪೂರ್ಣಗೊಳಿಸಲು ಆನ್‌ಲೈನ್ ಸಂಪನ್ಮೂಲ ಬಳಸಿದ್ದಾರೆ. ಇದಕ್ಕೆ ತಕ್ಕಂತೆ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಬೇಕಾದ ಸಂಪನ್ಮೂಲವನ್ನು ಒದಗಿಸುವ ವ್ಯವಸ್ಥೆಯನ್ನು ChatGPT ಯಲ್ಲಿ ಮೌಲ್ಯಮಾಪನವನ್ನು ವಿನ್ಯಾಸ ಮಾಡಬೇಕು. ಇದು ಸರ್ಚಿಂಗ್ ಸಮಯ ಕಡಿಮೆ ಮಾಡುತ್ತದೆ.


  ಸಾಂದರ್ಭಿಕ ಚಿತ್ರ


  ಚಾಟ್‌ಬಾಟ್ ChatGPT ಬಳಕೆಗೆ ವಿದ್ಯಾರ್ಥಿಗಳಿಗೆ ಕಡಿವಾಣ ಹಾಕುವ ಬದಲು ಸೂಕ್ತ ರೀತಿಯಲ್ಲಿ ಬಳಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎನ್ನುತ್ತಾರೆ ಕೆಲವರು. ವಿದ್ಯಾರ್ಥಿಗಳಿಗೆ ಚಾಟ್‌ಜಿಪಿಟಿಯನ್ನು ಅತ್ಯುತ್ತಮ ರೀತಿಯಲ್ಲಿ ಬಳಸಲು ಅವಕಾಶ ನೀಡಬೇಕು. ಅದರ ಸಾಮರ್ಥ್ಯ ಕಾರ್ಯ ನಿರ್ವಹಣೆ ತಿಳಿಯಲು ಅಧ್ಯಾಪಕರಿಗೆ ಪ್ರೋತ್ಸಾಹಿಸಬೇಕು.


  ChatGPT  ಶಿಕ್ಷಕರಿಗೆ ಅನುಕೂಲಕರವೇ?


  ವಿದ್ಯಾರ್ಥಿಗಳಿಗೆ ಚಾಟ್‌ಜಿಪಿಟಿಯ ಬಳಕೆ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಚಾಟ್‌ಜಿಪಿಟಿಯು ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸುಧಾರಿತ ಸಾಮರ್ಥ್ಯದ ಸದುಪಯೋಗ ಹಾಗೂ ಬೋಧನೆಯಲ್ಲಿ ಪರಿಣಾಮಕಾರಿ ವಿನ್ಯಾಸ ತರಬೇಕು. ಕಂಪ್ಯೂಟರ್‌ ಕೋರ್ಸ್‌ ಮಾಡುವ ವಿದ್ಯಾರ್ಥಿಗಳು ಡೇಟಾ ಮತ್ತು ಕೋಡ್‌ ಜೊತೆ ಕೆಲಸ ಮಾಡ್ತಾರೆ. ಅಂತವರಿಗೆ ChatGPT ಪ್ರಯೋಜನಕಾರಿಯಾಗಿದೆ.


  ಸಮಯ ವ್ಯಯ ತಡೆಯುತ್ತದೆ. ಶಿಕ್ಷಕರಿಗೆ ವಿಮರ್ಶಾತ್ಮಕ ವಿಶ್ಲೇಷಣಾ ಮಾದರಿ ಮತ್ತು ವರದಿಗಳ ಮೇಲೆ ಹೆಚ್ಚು ಗಮನಹರಿಸಲು ಸಹಕಾರಿ. ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನಾರ್ಜನೆ ನೀಡುತ್ತದೆ.


  ಇದನ್ನೂ ಓದಿ: ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ, ಖಾಸಗಿ ಶಾಲೆಗಳ ಮೇಲೆ ಹೆಚ್ಚಾಗುತ್ತಿರುವ ಪೋಷಕರ ವ್ಯಾಮೋಹ! ಕಾರಣವೇನು?


  ಸಂಕೀರ್ಣ ವಿಷಯವನ್ನು ಸರಳವಾದ ಭಾಷೆಯಲ್ಲಿ ಕಲಿಯಬಹುದು. ವಿಷಯದ ಕಲಿಕೆ ಸುಲಭವಾಗುತ್ತದೆ. ಇಂಗ್ಲಿಷ್ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಮತ್ತು ಅಥವಾ ಸಾರಾಂಶ ರಚಿಸುವುದು ಸುಲಭ.

  Published by:renukadariyannavar
  First published: