• ಹೋಂ
 • »
 • ನ್ಯೂಸ್
 • »
 • Jobs
 • »
 • Bengaluru: ಖಾಸಗಿ ಶಾಲೆಗಳ ಶುಲ್ಕದಲ್ಲಿ ಗಣನೀಯ ಏರಿಕೆ; ಆರಂಭವಾಯ್ತು ಪಾಲಕರ ಪರದಾಟ

Bengaluru: ಖಾಸಗಿ ಶಾಲೆಗಳ ಶುಲ್ಕದಲ್ಲಿ ಗಣನೀಯ ಏರಿಕೆ; ಆರಂಭವಾಯ್ತು ಪಾಲಕರ ಪರದಾಟ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಖಾಸಗಿ ಶಾಲೆಗಳಿಗೆ ಶೇ.10-15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಶಾಲಾ ಸಂಘಗಳು ಸೂಚಿಸಿದ್ದರೂ ನಗರದ ಹಲವು ಶಾಲೆಗಳು ಅದನ್ನು ಪಾಲಿಸಿಲ್ಲ. ಎಲ್ಲಾ ವರ್ಗದ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಕಂಡುಬರುತ್ತಿದೆ.

 • News18 Kannada
 • 4-MIN READ
 • Last Updated :
 • Karnataka, India
 • Share this:
 • published by :

ಪ್ರತಿ ವರ್ಷ ವಿದ್ಯಾರ್ಥಿಗಳನ್ನು (Students) ಶಾಲೆಗೆ ಕಳಿಸುವಾಗಲು ಪಾಲಕರು ವಿದ್ಯಾರ್ಥಿಗಳ ಶಾಲಾ (School) ಶುಲ್ಕದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಶುಲ್ಕದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಅದೇ ರೀತಿ ಈ ವರ್ಷವೂ ಪಾಲಕರಿಗೆ ಶುಲ್ಕ ಏರಿಕೆಯ ಬಿಸಿ ತಲುಗಲಿದೆ ಎಂಬ ಸೂಚನೆ ಸಿಕ್ಕಿದೆ. ಖಾಸಗಿ ಶಾಲೆಗಳು 2023-24ನೇ ಸಾಲಿನಿಂದ ಶುಲ್ಕವನ್ನು (Fees) ಹೆಚ್ಚಳ ಮಾಡುತ್ತಿವೆ. ಈ ವರ್ಷ ಎಷ್ಟು ಪ್ರತಿಶತ ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು (Information) ಇಲ್ಲಿ ನೀಡಲಾಗಿದೆ ಗಮನಿಸಿ. ಪ್ರತಿಯೊಬ್ಬ ಪಾಲಕರೂ ಇದನ್ನು ಗಮನಿಸಲೇ ಬೇಕು. 


ಈ ವರ್ಷ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರಿಗೆ ದೊಡ್ಡ ಹೊಣೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಪಾಲಕರಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳ ಮಾಡಿದ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ರೀತಿ ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಇದನ್ನು ಪೂರ್ತಿ ಓದಿ. ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರೆ ಈ ಕುರಿತು ಯೋಚಿಸಿ.


ಈ ವರ್ಷ ಶುಲ್ಕದ ಮೇಲೆ ಸರ್ಕಾರದ ಯಾವುದೇ ನಿಯಂತ್ರಣವಿಲ್ಲ ಬೆಂಗಳೂರಿನ ಹಲವಾರು ಖಾಸಗಿ ಶಾಲೆಗಳು ಶುಲ್ಕವನ್ನು 30-40% ರಷ್ಟು ಹೆಚ್ಚಿಸಿವೆ. ಈ ವರ್ಷ ವಿವೇಚನಾರಹಿತ ಶುಲ್ಕ ಹೆಚ್ಚಳದ ಬಗ್ಗೆ ಪೋಷಕರಿಂದ ದೂರುಗಳು ಬರುತ್ತಿದ್ದು, ಈ ವರ್ಷ ಸುಮಾರು 50,000 ರೂ ಹೆಚ್ಚಳ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.


ಇದನ್ನೂ ಓದಿ: CUET 2023 ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ, ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ


ಖಾಸಗಿ ಶಾಲೆಗಳಿಗೆ ಶೇ.10-15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಶಾಲಾ ಸಂಘಗಳು ಸೂಚಿಸಿದ್ದರೂ ನಗರದ ಹಲವು ಶಾಲೆಗಳು ಅದನ್ನು ಪಾಲಿಸಿಲ್ಲ. ಎಲ್ಲಾ ವರ್ಗದ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಕಂಡುಬರುತ್ತಿದೆ. ಕಳೆದ ವರ್ಷದವರೆಗೆ ವರ್ಷಕ್ಕೆ 1.6 ಲಕ್ಷ ರೂ. ಪಾವತಿಸುತ್ತಿದ್ದೆ. ಈ ಬಾರಿ 2.1 ಲಕ್ಷ ರೂ.ಗೆ ಬಂದಿದೆ. ಇಷ್ಟೋಂದು ಪ್ರಮಾಣದ ಹಣಕಾಸಿನ ಹೆಚ್ಚಳಕ್ಕೆ ಯಾರು ಹೊಣೆ ಎಂದು ಪಾಲಕರೊಬ್ಬರು ಪ್ರಶ್ನೆ ಮಾಡಿದ್ದಾರೆ. ಶಾಲೆಗಳ ಫೀಸ್​ ಹೆಚ್ಚಾಗುತ್ತಿದೆ ಹೊರತಾಗಿ ನಮ್ಮ ಸಂಬಳವಲ್ಲ ಎಂದು ಅವರು ಹೇಳಿದ್ದಾರೆ.


ನನ್ನ ಮಗುವನ್ನು 7ನೇ ತರಗತಿಗೆ ಸೇರುತ್ತಿದೆ. ಕಳೆದ ವರ್ಷ ಬೋಧನಾ ಶುಲ್ಕ 1.18 ಲಕ್ಷ ರೂ. ಈ ವರ್ಷ 1.6 ಲಕ್ಷ ರೂ. ಪುಸ್ತಕ ಶುಲ್ಕಗಳು, ಪರೀಕ್ಷಾ ಶುಲ್ಕಗಳು ಮತ್ತು ವಾರ್ಷಿಕ ಶುಲ್ಕಗಳಂತಹ ವಿವಿಧ ಉಪಶೀರ್ಷಿಕೆಗಳ ಅಡಿಯಲ್ಲಿ ಹೆಚ್ಚುವರಿ ಶುಲ್ಕಗಳಿವೆ. ಇದು ನಮ್ಮನ್ನು ಮೀರಿದ್ದು ನಮ್ಮ ಕೈಯಲ್ಲಿ ಇಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು  ಜೆಇಇ ಕೋಚಿಂಗ್‌ಗೆ ಹೆಸರಾದ ತೆಲಂಗಾಣ ಮೂಲದ ಶಾಲೆಯ ವಿದ್ಯಾರ್ಥಿಯೊಬ್ಬರ ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಹೆಚ್ಚು ಶುಲ್ಕ ವಿಧಿಸುತ್ತಿರುವ ಶಾಲೆಗಳಲ್ಲ, ನಾನು ಮೂರು ಕಂತುಗಳಲ್ಲಿ 60,000 ರೂ. ಪಾವತಿಸಿದ್ದೆ ಆದರೆ ಈಗ 98,000 ರೂ. ನಾನು ಹೇಗೆ ಇವುಗಳನ್ನು ಹ್ಯಾಂಡಲ್​ ಮಾಡಲಿ ಎಂದು ಪಾಲಕರೊಬ್ಬರು ಹೇಳಿದ್ದಾರೆ.


ನಾವು ವಾರ್ಷಿಕವಾಗಿ 10% ಹೆಚ್ಚಳವನ್ನು ಹೇಗೋ ನಿಭಾಯಿಸಬಹುದಿತ್ತು ಆದರೆ ಈಗ ಇಷ್ಟೊಂದು ಹೆಚ್ಚಳವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಡುಗೋಡಿಯ ಶಾಲೆಯ ಪೋಷಕರು ಹೇಳಿದ್ದಾರೆ. "ಶಾಲೆಗಳು ಇತ್ತೀಚಿನ ಹೈಕೋರ್ಟ್ ಆದೇಶಗಳನ್ನು ತಪ್ಪಾಗಿ ಅರ್ಥೈಸುತ್ತಿವೆ. ಶುಲ್ಕ ರಚನೆಯನ್ನು ನಿಗದಿಪಡಿಸಲು ಅನುಮತಿ ನೀಡಲಾಗಿದೆ. ಆದರೆ ಅದಕ್ಕೂ ಸಹ ಕೆಲವು ಶರತ್ತುಗಳು ಅನ್ವಯವಾಗುತ್ತವೆ ಎಂಬುದನ್ನು ಮರೆತಿವೆ ಎಂದು ದೂರಿದ್ದಾರೆ.ಒಟ್ಟಿನಲ್ಲಿ ಈ ಬಾರಿ ಪಾಲಕರ ಜೇಬಿಗೆ ಕತ್ತರಿ ಬಿದ್ದಿದೆ.

top videos
  First published: