ಪುತ್ತೂರು: ಶಾಲೆಗಳಲ್ಲಿ (School) ವಿದ್ಯಾರ್ಥಿಗಳಿಗೆ ಕಲಿಸ ಬೇಕಾದ ವಿಚಾರಗಳು ಹಲವಾರು ಇರುತ್ತವೆ. ಅದರಲ್ಲೂ ಈ ಬಾರಿ ಶೈಕ್ಷಣಿಕ ಗುಣಮಟ್ಟವನ್ನು (Quality) ಹೆಚ್ಚಿಸುವ ಸಲುವಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಹೊಸ ಪಠ್ಯಕ್ರಮವನ್ನು ಜಾರಿಗೆ ತರುವ ಕಾರ್ಯವೂ ಜರುಗುತ್ತಿದೆ. ಆದರೆ ಇಲ್ಲೊಂದು ಕಡೆ ಪಠ್ಯದಲ್ಲಿರುವ ವಿಷಯವನ್ನು (Subject) ಬಿಟ್ಟು ಬೇರೆ ರೀತಿಯಲ್ಲಿ ಧರ್ಮ ಶಿಕ್ಷಣ (Education) ಪಾಠ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಹೌದು ಶಾಲಾ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಶಾಲೆಯ ಮೇಲೆ ಆರೋಪ ಕೇಳಿ ಬಂದಿದೆ.
ಮುಖ್ಯೋಪಾಧ್ಯಾಯ ಸೇರಿದಂತೆ ಸಂಘಟಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲು ಮಾಡಲು ಕಾರಣ ಏನು ಎಂದು ನೀವು ತಿಳಿಯುವುದಾದರೆ. ಇಲ್ಲಿನ ಹಿಂದೂ ವಿಧ್ಯಾರ್ಥಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ಪ್ರವಚನ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಆ ಕಾರಣದಿಂದ ಧರ್ಮ ಶಿಕ್ಷಣವನ್ನು ಶಾಲೆಯಲ್ಲಿ ಬಿತ್ತುತ್ತಿದ್ದಾರೆ. ಇದು ತಪ್ಪು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Chamarajanagar: ಮಕ್ಕಳನ್ನು ಶಾಲೆಗೆ ಕಳಿಸಿ ಇಲ್ಲದಿದ್ದರೆ ಸಮುದಾಯದಿಂದ ಹೊರಗಿರಿ! ಮುಖಂಡರ ಖಡಕ್ ಎಚ್ಚರಿಕೆ
ಅಡ್ಯನಡ್ಕದ ಜನತಾ ವಿದ್ಯಾ ಸಂಸ್ಥೆಯ ಮಕ್ಕಳನ್ನು ಇಸ್ಲಾಂ ಧಾರ್ಮಿಕ ಕಾರ್ಯಾಗಾರಕ್ಕೆ ಕಳುಹಿಸಲಾಗಿತ್ತು ಎಂದು ವರದಿಯಾಗಿದೆ. ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಇತ್ತ ಪಾಲಕರು ಭಾವಿಸುತ್ತಿದ್ದರೆ. ಪಾಠ ಮಾಡುವುದನ್ನು ಬಿಟ್ಟು ಕಾರ್ಯಾಗಾರಕ್ಕೆ ಮಕ್ಕಳನ್ನು ಕಳಿಸಿರುವ ವಿಚಾರಕ್ಕೆ ಪಾಲಕರು ಗರಂ ಆಗಿದ್ದಾರೆ. ವಿದ್ಯಾರ್ಥಿಗಳು ಈ ವಿಚಾರವನ್ನು ಪೋಷಕರ ಗಮನಕ್ಕೆ ತಂದಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್.ನಾಯ್ಕ್ , ರಫೀಕ್ ಮಾಸ್ಟರ್ ಅತೂರು, ಮತ್ತು ನಸ್ರತುಲಗ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ರೀತಿ ಚಾಮರಾಜನಗರದಲ್ಲಿ ನಡೆದಿದೆ ಇನ್ನೊಂದು ಘಟನೆ
ಶಾಲೆಗೆ ಮಕ್ಕಳನ್ನು ಕಳಿಸದ ಕುಟುಂಬಗಳಿಗೆ ಆ ಸಮುದಾಯವೇ ಖಡಕ್ ಎಚ್ಚರಿಕೆ ವಿಧಿಸಿದ ವಿದ್ಯಮಾನವೊಂದು ನಡೆದಿದೆ. ಹೌದು, ಇಂತಹ ಅಪರೂಪದ ಘಟನೆಗೆ ಚಾಮರಾಜನಗರ ಸಾಕ್ಷಿಯಾಗಿದೆ. ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ, ಇಲ್ಲದಿದ್ದರೆ ನಮ್ಮ ಸಮುದಾಯದಿಂದಲೇ ದೂರ ಉಳಿಯಿರಿ ಎಂದು ಸಮುದಾಯವೊಂದರ ಮುಖಂಡರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಮುದಾಯ
ಇಂತಹ ಎಚ್ಚರಿಕೆಯೊಂದನ್ನು ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಮುದಾಯದ ಹಲವರಿಗೆ ಅದೇ ಸಮುದಾಯದ ಪ್ರಮುಖ ಪ್ರಮುಖ ನಾಯಕರು ರವಾನಿಸಿದ್ದಾರೆ.ಇಂತಹ ಎಚ್ಚರಿಕೆ ವಿಧಿಸಲು ಪ್ರಮುಖ ಕಾರಣವಿದೆ. ಹೌದು, ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿರುವುದೇ ಈ ಸಂದೇಶ ರವಾನೆಯ ಹಿಂದಿನ ಕಾರಣ. ಅಂದಹಾಗೆ ಚಾಮರಾಜನಗರ ಜಿಲ್ಲೆಯಲ್ಲಿ 158 ಉಪ್ಪಾರ ಸಮಾಜದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಮುದಾಯದ ಮುಖಂಡರು ಕ್ರಮ ವಹಿಸುತ್ತಿದ್ದಾರೆ.
148 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ
ಉಪ್ಪಾರ ಸಮಾಜದ ಕೆಲವು ಕುಟುಂಬಗಳು ಇಂದಿಗೂ ಬಾಲ್ಯ ವಿವಾಹ, ಸಾಮಾಜಿಕ ಕಟ್ಟುಪಾಡುಗಳನ್ನು ಅನುಸರಿಸಿ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ.ಈ ಕಾರಣಗಳಿಂದ ಉಪ್ಪಾರ ಸಮಾಜದ 148 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಇಡೀ ಚಾಮರಾಜನಗರ ಜಿಲ್ಲೆಯಲ್ಲಿ 634 ವಿದ್ಯಾರ್ಥಿಗಳು ಶಾಲೆಯಿಂದ ದೂರವೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿದ್ಯಾರ್ಥಿಗಳ ಪೈಕಿ ಉಪ್ಪಾರ ಸಮಾಜದ ವಿದ್ಯಾರ್ಥಿಗಳೇ ಅತೀ ಹೆಚ್ಚಿರುವ ಕಾರಣ ಉಪ್ಪಾರ ಸಮಾಜದ ಮುಖಂಡರು ಮಕ್ಕಳನ್ನು ಶಾಲೆಗೆ ಕಳಿಸುವಂತೆ ಎಚ್ಚರಿಕೆಯ ಖಡಕ್ ಸಂದೇಶ ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ