• ಹೋಂ
  • »
  • ನ್ಯೂಸ್
  • »
  • Jobs
  • »
  • NEP ಪ್ರಕಾರ ನೀವು PHD ಮಾಡಲು ಸ್ನಾತಕೋತ್ತರ ಪದವಿ ಅಗತ್ಯವಿಲ್ಲ!

NEP ಪ್ರಕಾರ ನೀವು PHD ಮಾಡಲು ಸ್ನಾತಕೋತ್ತರ ಪದವಿ ಅಗತ್ಯವಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರೀಸರ್ಚ್ ವಿಭಾಗ ಇರುವ ನಾಲ್ಕು ವರ್ಷಗಳ ಡಿಗ್ರಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಇಲ್ಲದೆಯೇ ಪಿಎಚ್‌ಡಿ ಅಧ್ಯಯನ ನಡೆಸಬಹುದಾಗಿದೆ. ಪ್ರಸ್ತುತ ಬೋರ್ಡ್ ಆಫ್ ಸ್ಟಡೀಸ್ ಹಾಗೂ 40 ಉಪ ಸಮಿತಿಗಳು ಐದನೇ, ಆರನೇ, ಏಳನೇ ಹಾಗೂ ಎಂಟನೇ ಸೆಮಿಸ್ಟರ್‌ಗಳಿಗಾಗಿ ಸಿದ್ಧಗೊಳ್ಳುತ್ತಿವೆ.

  • Share this:

ನ್ಯಾಶನಲ್ ಎಜ್ಯುಕೇಶನ್ ಪಾಲಿಸಿ (NEP) ವಿದ್ಯಾರ್ಥಿಗಳು ಶೀಘ್ರದಲ್ಲೇ ತಮ್ಮ ಶೈಕ್ಷಣಿಕ ವರ್ಷದ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದು ಡಿಗ್ರಿ ಕಾಲೇಜುಗಳು ಸಂಬಂಧಿತ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿಸಿಕೊಂಡು ವಿದ್ಯಾರ್ಥಿಗಳಿಗೆ ನಾಲ್ಕನೆಯ ವರ್ಷವನ್ನು ಆಫರ್ ಮಾಡಬಹುದಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಹೆಚ್ಚುವರಿ ಶಿಕ್ಷಣ ಮಂಡಳಿ (KSHEC) ಶೀಘ್ರದಲ್ಲೇ ಸುತ್ತೋಲೆಯನ್ನು ಹೊರಡಿಸಲಿದೆ.


ನಾಲ್ಕು ವರ್ಷಗಳ ಪದವಿ ಪ್ರೋಗ್ರಾಮ್


ಎನ್‌ಇಪಿ ಪ್ರಕಾರ, ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಕಾರ್ಯಕ್ರಮವನ್ನು ಮುಗಿಸಿದಲ್ಲಿ ಡಿಗ್ರಿ ಆನರ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮೂರು ವರ್ಷಗಳನ್ನು ಮುಗಿಸುವ ಆಯ್ಕೆಯನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿದೆ.


ಕಾಲೇಜುಗಳು ನಾಲ್ಕನೆಯ ವರ್ಷವನ್ನು ವಿದ್ಯಾರ್ಥಿಗಳಿಗೆ ನೀಡಲು ಬಯಸಿದರೆ ಅಗತ್ಯ ಮೂಲಸೌಕರ್ಯ, ಬೋಧಕರು ಹಾಗೂ ಇನ್ನಿತರ ಸೌಕರ್ಯಗಳನ್ನು ಪ್ರದರ್ಶಿಸುವ ಮೂಲಕ ತನ್ನ ಸಂಯೋಜನೆಯನ್ನು ವಿಸ್ತರಿಸಬಹುದಾಗಿದೆ.


ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!


ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಿದೆ


ಕಾಲೇಜುಗಳು ವಿದ್ಯಾರ್ಥಿಗಳಿಗೆ ನಾಲ್ಕನೇ ವರ್ಷದ ಬೋಧನೆಯನ್ನು ಒದಗಿಸಲು ಬಯಸಿದರೆ ಸಂಯೋಜನೆ ಪ್ರಕ್ರಿಯೆಯನ್ನು ಮುಂದಿನ ವರ್ಷ ನಡೆಸಬಹುದಾಗಿದೆ. ನಾಲ್ಕು ವರ್ಷದ ಡಿಗ್ರಿ ಕಲಿಕೆ ಎಂಬದು ಜಾಗತಿಕ ಮಾದರಿಯಾಗಿರುವುದರಿಂದ ಎನ್‌ಇಪಿ ಯ ಮೂಲ ಉದ್ದೇಶವಾಗಿದೆ.


ಕಾಲೇಜುಗಳು ನಾಲ್ಕು ವರ್ಷದ ಪದವಿ ನಮೂನೆಯನ್ನು ಅಳವಡಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಕೆಎಸ್‌ಎಚ್‌ಇಸಿ ಯ ಸಲಹೆಗಾರರಾದ ತಿಮ್ಮೇ ಗೌಡ. ಬಿ ತಿಳಿಸಿದ್ದಾರೆ.


ಕೆಲವು ಕಾಲೇಜುಗಳು ಮೂರು ವರ್ಷದ ಪದವಿ ಶಿಕ್ಷಣವನ್ನು ಒದಗಿಸಿದರೆ ಇನ್ನು ಕೆಲವು ನಾಲ್ಕು ವರ್ಷವನ್ನು ಒದಗಿಸುತ್ತಿವೆ ಇನ್ನು ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಡಿಗ್ರಿಯನ್ನೇ ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಕಾಲೇಜುಗಳಿಗೆ ತಮ್ಮ ಸಂಯೋಜನೆಯನ್ನು ವಿಸ್ತರಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.


ವಿಶ್ವವಿದ್ಯಾಲಯಗಳು ಪಿಎಚ್‌ಡಿ ಗೈಡ್‌ಗಳನ್ನು ಹೊಂದಿರಬೇಕು


ರೀಸರ್ಚ್ ವಿಭಾಗ ಇಲ್ಲದೆಯೇ ನಾಲ್ಕು ವರ್ಷಗಳ ಡಿಗ್ರಿ ಕಲಿಕೆಯನ್ನು ಒದಗಿಸಬಹುದಾಗಿದೆ. ರೀಸರ್ಚ್ ವಿಭಾಗವಿದ್ದುಕೊಂಡು ಕಾಲೇಜುಗಳು ನಾಲ್ಕು ವರ್ಷ ಡಿಗ್ರಿ ಕಲಿಕೆಯನ್ನು ಒದಗಿಸುವುದಾದರೆ ಪದವಿಪೂರ್ವ ಹಂತದಲ್ಲಿ ಇಬ್ಬರು ಪಿಎಚ್‌ಡಿ ಗೌರವಾನ್ವಿತ ಮಾರ್ಗದರ್ಶಿಗಳನ್ನು ಹೊಂದಿರುವುದು ಅಗತ್ಯವಾಗಿದೆ.




ಇಲ್ಲದಿದ್ದರೆ ವಿದ್ಯಾರ್ಥಿಗಳು ನಾಲ್ಕು ವರ್ಷದ ಡಿಗ್ರಿ ಕಲಿಕೆಯನ್ನು ಒದಗಿಸುವ ಸಂಯೋಜಿತ ಕಾಲೇಜು ಅಥವಾ ನಾಲ್ಕನೆಯ ವರ್ಷಕ್ಕೆ ಸಂಯೋಜನೆ ವಿಸ್ತರಿಸಿಕೊಂಡಿರುವ ಕಾಲೇಜುಗಳಿಗೆ ಸೇರಬೇಕು.


ಸ್ನಾತಕೋತ್ತರ ಪದವಿ ಇಲ್ಲದೆಯೇ ಪಿಎಚ್‌ಡಿ ಅಧ್ಯಯನ ನಡೆಸಬಹುದು


ರೀಸರ್ಚ್ ವಿಭಾಗ ಇರುವ ನಾಲ್ಕು ವರ್ಷಗಳ ಡಿಗ್ರಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಇಲ್ಲದೆಯೇ ಪಿಎಚ್‌ಡಿ ಅಧ್ಯಯನ ನಡೆಸಬಹುದಾಗಿದೆ. ಪ್ರಸ್ತುತ ಬೋರ್ಡ್ ಆಫ್ ಸ್ಟಡೀಸ್ ಹಾಗೂ 40 ಉಪ ಸಮಿತಿಗಳು ಐದನೇ, ಆರನೇ, ಏಳನೇ ಹಾಗೂ ಎಂಟನೇ ಸೆಮಿಸ್ಟರ್‌ಗಳಿಗಾಗಿ ಸಿದ್ಧಗೊಳ್ಳುತ್ತಿವೆ.


ನಾಲ್ಕು ವರ್ಷಗಳ ಡಿಗ್ರಿ ಯೋಜನೆಯಲ್ಲಿ ವಿದ್ಯಾರ್ಥಿಗಳು ಎರಡು ಸೆಮಿಸ್ಟರ್‌ಗಳನ್ನು ಪೂರ್ತಿಗೊಳಿಸಬಹುದು ಹಾಗೂ ಪ್ರಮಾಣಪತ್ರವನ್ನು ಪಡೆಯಬಹುದು, ನಾಲ್ಕು ಸೆಮಿಸ್ಟರ್ ಮುಗಿಸಿದ ನಂತರ ಡಿಪ್ಲೊಮಾ ಪದವಿಯನ್ನು ಗಳಿಸಬಹುದು ಅಂತೆಯೇ ಆರು ಸೆಮಿಸ್ಟರ್‌ಗಳನ್ನು ಪೂರ್ತಿಗೊಳಿಸಿದ ನಂತರ ಮುಖ್ಯ ಪದವಿಪೂರ್ವ ಪದವಿಯನ್ನು ಗಳಿಸಬಹುದು. ಎಂಟನೆಯ ಸೆಮಿಸ್ಟರ್ ಪೂರ್ಣಗೊಳಿಸಿದ ತರುವಾಯ ವಿದ್ಯಾರ್ಥಿಗಳು ಆಯ್ಕೆಮಾಡಿದ ವಿಷಯದ ಮೇಲೆ ಆನರ್ಸ್ ಪದವಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.


ಇಂತಹುದೇ ವಿಷಯ ಆಯ್ದುಕೊಳ್ಳಬೇಕೆಂಬ ಕಡ್ಡಾಯವಿಲ್ಲ


ವಿದ್ಯಾರ್ಥಿಗಳು ಇಂತಹದೇ ವಿಷಯವನ್ನು ಆಯ್ಕೆಮಾಡಿಕೊಳ್ಳಬೇಕೆಂಬ ನಿಯಮವಿಲ್ಲ. ವಿಜ್ಞಾನ ವಿಷಯವನ್ನು ಪ್ರಧಾನವಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಇತರ ವಿಭಾಗಗಳ ವಿಷಯವನ್ನು ಆಯ್ದುಕೊಳ್ಳಬಹುದು.


ಭಾಷೆ ಹಾಗೂ ಜೀವನ ಕೌಶಲ್ಯ ವಿಷಯಗಳು ಕಡ್ಡಾಯವಾಗಿರುತ್ತವೆ ಎಂದು ತಿಮ್ಮೇಗೌಡ ತಿಳಿಸಿದ್ದಾರೆ. ಒಂದು ಹೆಚ್ಚುವರಿ ವರ್ಷದಲ್ಲಿ ವಿದ್ಯಾರ್ಥಿ ಎರಡು ಪದವಿಗಳನ್ನು ಗಳಿಸಬಹುದು. ಇದಾದ ನಂತರ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿಗೆ ಅಪ್ಲೈ ಮಾಡಬಹುದು ಸ್ನಾತಕೋತ್ತರ ಪದವಿಯನ್ನು ಗಳಿಸಬೇಕಾದ ಕಡ್ಡಾಯವಿಲ್ಲ ಎಂದು ತಿಮ್ಮೇಗೌಡ ತಿಳಿಸಿದ್ದಾರೆ.


ವಿಶ್ವವಿದ್ಯಾಲಯಗಳು ನಾಲ್ಕು ವರ್ಷಗಳ ಡಿಗ್ರಿ ಪದವಿಯನ್ನು ಆರಂಭಿಸಿದರೆ ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಮ್ಮೇಗೌಡ ತಿಳಿಸಿದ್ದಾರೆ.

First published: