• ಹೋಂ
  • »
  • ನ್ಯೂಸ್
  • »
  • Jobs
  • »
  • Parenting Tips: ಮಕ್ಕಳ ಶೈಕ್ಷಣಿಕ ಸಾಧನೆಯೊಂದೇ ಜೀವನದ ಯಶಸ್ಸಲ್ಲ; ಮನೋಶಾಸ್ತ್ರಜ್ಞರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ

Parenting Tips: ಮಕ್ಕಳ ಶೈಕ್ಷಣಿಕ ಸಾಧನೆಯೊಂದೇ ಜೀವನದ ಯಶಸ್ಸಲ್ಲ; ಮನೋಶಾಸ್ತ್ರಜ್ಞರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳು ಯಾವುದಾದರೊಂದು ವಿಷಯದಲ್ಲಿ ಆಸಕ್ತರಾಗಿದ್ದರೆ ಅವರಿಗೆ ಅದರಲ್ಲಿಯೇ ಮುಂದುವರಿಯಲು ಅನುಮತಿಸಿ ಎಂಬುದು ಬೆಕ್ಕಿ ಅವರ ಮಾತಾಗಿದೆ. ತಮ್ಮ ಆಸಕ್ತಿಯ ಮೂಲಕವೇ ಮಕ್ಕಳು ಇನ್ನಿತರ ವಿಷಯಗಳತ್ತ ಗಮನ ಹರಿಸುತ್ತಾರೆ ಎಂದು ಬೆಕ್ಕಿ ಸಲಹೆ ನೀಡುತ್ತಾರೆ.

  • Share this:
  • published by :

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ (Students) ಮೇಲೆ ಹೆತ್ತವರ ಒತ್ತಡ ಹೆಚ್ಚಾಗುತ್ತಲೇ ಇದೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ನೆರೆಹೊರೆಯ ಮಕ್ಕಳು ಪರೀಕ್ಷೆಗಳಲ್ಲಿ ಶೈಕ್ಷಣಿಕ (Education) ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೊಡನೆ ತಮ್ಮ ಮಕ್ಕಳ ಮೇಲೆ ಒತ್ತಡ ಹೇರಲಾರಂಭಿಸುತ್ತಾರೆ. ಶಾಲೆಯಲ್ಲಿ (School) ಸಾಧನೆ ಮಾಡಿದರಷ್ಟೇ ಸಾಧನೆ ಎಂಬುದು ಪೋಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಮಕ್ಕಳನ್ನು ಐಷಾರಾಮಿ ಶಾಲೆಗಳಿಗೆ ಸೇರಿಸುವುದು ಹಾಗೂ ಉತ್ತಮ ಟ್ಯೂಷನ್ ತರಗತಿಗಳಿಗೆ ಸೇರಿಸುವುದು ಇದೊಂದೇ ಅವರ ಜೀವನದ (Life) ಸಾಧನೆಯಲ್ಲ ಎಂಬುದು ಈ ಲೇಖನದಲ್ಲಿ ಮುಖ್ಯವಾಗಿ ಹೇಳಿರುವ ಅಂಶವಾಗಿದೆ. ದುಬಾರಿ ಶಾಲೆಗಳಲ್ಲಿ ಮಕ್ಕಳು ಕಲಿಯುವುದೇ ಇಂದಿನ ಪೋಷಕರಿಗೆ ಹೆಮ್ಮಯ ವಿಚಾರವಾಗಿರುತ್ತದೆ.


ನೈತಿಕತೆ ರೂಪಿಸಿ


ಪ್ರೊಫೆಸರ್ ಹಾಗೂ ಬ್ಲಾಗರ್ ಆಗಿರುವ ಬೆಕ್ಕಿ ಡೈಮಂಡ್ ಶಿಕ್ಷಣವೆಂಬುದು ಮಕ್ಕಳಿಗೆ ಹೊರೆಯಾಗಬಾರದು ಎಂಬ ಕಿವಿಮಾತನ್ನು ಪೋಷಕರಿಗೆ ನೀಡಿದ್ದಾರೆ. ಪ್ರತಿಷ್ಟಿತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಬದಲಿಗೆ ಅವರಲ್ಲಿ ನೈತಿಕತೆಯನ್ನು ರೂಪಿಸಬೇಕು ಎಂಬ ಕಿವಿಮಾತನ್ನು ಹೇಳಿದ್ದಾರೆ.


ಶಿಕ್ಷಣವೆಂಬುದು ಜ್ಞಾನ ಪ್ರಯಾಣವೇ ಹೊರತು ಬ್ರ್ಯಾಂಡಿಂಗ್ ತಾಣವಲ್ಲ


ಬೆಕ್ಕಿಯವರು ತಮ್ಮದೇ ಜೀವನದ ಉದಾಹರಣೆಯನ್ನು ಲೇಖನದಲ್ಲಿ ನೀಡಿದ್ದು ಶಾಲಾ ಜೀವನದಲ್ಲಿ ಅವರು ಅಷ್ಟೊಂದು ಸಾಧನೆ ಮಾಡುವ ವಿದ್ಯಾರ್ಥಿನಿಯಾಗಿರಲಿಲ್ಲ ಎಂದು ತಿಳಿಸುತ್ತಾರೆ. ಬಿ ಗ್ರೇಡ್‌ನಲ್ಲಿ ಅಂಕಗಳನ್ನು ತೆಗೆದಾಗ ಕೂಡ ತಾವು ಜೀವನದಲ್ಲಿ ವಿಫಲರಾಗಬಹುದೆಂದು ಅಂದುಕೊಂಡಿರಲಿಲ್ಲ ಎಂಬುದು ಬೆಕ್ಕಿಯವರ ಮಾತಾಗಿದೆ. ನೀವು ಏನು ಮಾಡಲು ಬಯಸಿದ್ದೀರೋ ಅದನ್ನು ಸಾಧಿಸಿ ಎಂಬುದು ಬೆಕ್ಕಿಯವರ ಸಲಹೆಯಾಗಿದೆ.


ಇದನ್ನೂ ಓದಿ: JEE Main Result 2023 ಫಲಿತಾಂಶ ದಿನಾಂಕ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ


ಶೈಕ್ಷಣಿಕ ಸಾಧನೆಯೊಂದೇ ಸಾಧನೆಯಲ್ಲ


ಮಕ್ಕಳು ಯಾವುದಾದರೊಂದು ವಿಷಯದಲ್ಲಿ ಆಸಕ್ತರಾಗಿದ್ದರೆ ಅವರಿಗೆ ಅದರಲ್ಲಿಯೇ ಮುಂದುವರಿಯಲು ಅನುಮತಿಸಿ ಎಂಬುದು ಅವರ ಮಾತಾಗಿದೆ. ತಮ್ಮ ಆಸಕ್ತಿಯ ಮೂಲಕವೇ ಮಕ್ಕಳು ಇನ್ನಿತರ ವಿಷಯಗಳತ್ತ ಗಮನ ಹರಿಸುತ್ತಾರೆ ಎಂದು ಬೆಕ್ಕಿ ಸಲಹೆ ನೀಡುತ್ತಾರೆ.


ಮಕ್ಕಳ ಮನಶ್ಶಾಸ್ತ್ರಜ್ಞ ಮತ್ತು ಸೈಕಾಲಜಿ ಟುಡೇ ಬ್ಲಾಗರ್ ಪೀಟರ್ ಗ್ರೇ ಕೂಡ ಮಕ್ಕಳಲ್ಲಿ ಓದುವ ವಿಷಯಕ್ಕೆ ಇನ್ನಿಲ್ಲದ ಒತ್ತಡ ಹೇರಲಾಗುತ್ತಿದೆ ಎಂಬ ಮಾತನ್ನು ಸೇರಿಸಿದ್ದಾರೆ. ಮಕ್ಕಳು ಅಧ್ಯಯನ ಮಾಡಲು ವಯಸ್ಕರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದಾರೆ ಎಂಬ ಅಂಶವನ್ನು ಪೀಟರ್ ತಮ್ಮ ಇತ್ತೀಚಿನ ಅಧ್ಯಯನದಲ್ಲಿ ತಿಳಿಸಿದ್ದಾರೆ. ಮಕ್ಕಳು ಮನಸ್ಸಿಟ್ಟು ಆಸಕ್ತಿಯಿಂದ ಅಧ್ಯಯನ ನಡೆಸುತ್ತಿಲ್ಲ ಎಂಬ ಅಂಶಕ್ಕೂ ಪೀಟರ್ ಮಹತ್ವ ನೀಡಿದ್ದಾರೆ.


ಅತಿಯಾದ ಒತ್ತಡ ಮಕ್ಕಳ ಭವಿಷ್ಯವನ್ನು ಹಾಳುಗೆಡವುತ್ತಿದೆ


ಒತ್ತಡದಿಂದಾಗಿ ಹೆಚ್ಚಿನ ಮಕ್ಕಳು ಆತಂಕದಲ್ಲಿಯೇ ದಿನದೂಡುವಂತಾಗಿದೆ ಎಂದು ಅಟ್ಲಾಂಟಿಕ್ ವಿಶ್ವವಿದ್ಯಾನಿಲಯದ ಸೈಕಾಲಜಿ ಪ್ರೊಫೆಸರ್ ಹಾಗೂ ಲೇಖಕರಾಗಿರುವ ಡೇವಿಡ್ ಬ್ಜೋರ್ಕ್‌ಲಂಡ್ ತಿಳಿಸುತ್ತಾರೆ. ಮಕ್ಕಳು ಶೈಕ್ಷಣಿಕ ಕಲಿಕೆಯ ವಿಷಯದಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದರೂ ಮಗುವಿನ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.


ಮಕ್ಕಳಿಗೆ ತಪ್ಪಾದ ಸಂದೇಶ ನೀಡಲಾಗುತ್ತಿದೆ


ಮಕ್ಕಳ ಕಲಿಕೆಯ ವಿಧಾನ ತಪ್ಪಾಗಿದೆ ಎಂಬುದು ಮನಃಶಾಸ್ತ್ರಜ್ಞರ ಮಾತಾಗಿದೆ. ಐಷಾರಾಮಿ ಶಾಲೆಗಳಿಗೆ ಸೇರುವ ಹೆಚ್ಚಿನ ಮಕ್ಕಳು ಆತಂಕ ಹಾಗೂ ಖಿನ್ನತೆಗೆ ಒಳಗಾಗಿ ತಮ್ಮ ಎಳೆಯ ಜೀವನವನ್ನೇ ಬಲಿಕೊಡುತ್ತಿದ್ದಾರೆ ಎಂಬ ಸೂಚನೆಯನ್ನು ನೀಡಿದ್ದಾರೆ. ಒಂದು ರೀತಿಯ ಒತ್ತಡಕ್ಕೆ ಈ ಮಕ್ಕಳು ಒಳಗಾಗುತ್ತಿದ್ದಾರೆ ಲೂಥರ್ ಸೈಕಾಲಜಿ ಟುಡೇ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.


ಶೈಕ್ಷಣಿಕ ಸಾಧನೆಯೊಂದೇ ಸಾಧನೆ ಎಂಬ ವಿಶ್ವಾಸ ಹೊಂದಿರುವ ಪೋಷಕರು ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶ ನೀಡಬೇಕು ಎಂಬ ಕಿವಿಮಾತನ್ನು ಲೂಥರ್ ನೀಡಿದ್ದಾರೆ. ಮಕ್ಕಳು ಐಷಾರಾಮಿ ಶಾಲೆಗಳಿಗೆ ದಾಖಲಾಗುವುದು ಸಾಧನೆಯಲ್ಲ ಅವರಲ್ಲಿರುವ ಕ್ರಿಯಾತ್ಮಕತೆ ಹಾಗೂ ಚಟುವಟಿಕೆಗಳು ನಿಲ್ಲುವಂತಹ ಒತ್ತಡ ಅವರ ಮೇಲೆ ಬೀಳಬಾರದು ಎಂದು ತಿಳಿಸುತ್ತಾರೆ.

First published: