ಮಧುಗಿರಿ: ಶಾಲೆಯಲ್ಲಿ ವಿದ್ಯಾರ್ಥಿನಿಯರ (Students) ಮೇಲೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತದೆ. ಎಷ್ಟೇ ಇದನ್ನು ತಪ್ಪಿಸುವ ಪ್ರಯತ್ನ ನಡೆಯುತ್ತಿದ್ದರೂ ಒಂದಲ್ಲಾ ಒಂದು ಕಡೆ ಇದು ಮತ್ತೆ ಮತ್ತೆ ತಲೆಯೆತ್ತಿ ನಿಲ್ಲುತ್ತಿದೆ. ಅದೇ ರೀತಿಯ ಒಂದು ಘಟನೆ ಈಗ ಇಲ್ಲೂ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ಎಂಬಲ್ಲಿ ನಡೆದ ಘಟನೆ ಇದು. ವಿದ್ಯಾರ್ಥಿನಿಯೊಬ್ಬಳಿಗೆ ಶಾಲಾ (School) ಶಿಕ್ಷಕನಿಂದಲೇ (Teacher) ಲೈಂಗಿಕ ಕಿರುಕುಳ ಉಂಟಾಗಿದೆ ಎಂಬುದು ತಿಳಿದು ಬಂದಿದೆ. ಇದನ್ನು ಕೇಳಿದ ನಂತರ ಗ್ರಾಮಸ್ಥರು ಏನು ಮಾಡಿದ್ದಾರೆ ಎಂಬುದನ್ನು ಈಗ ನೀವೆ ನೋಡಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಗ್ರಾಮಸ್ಥರೇ ಥಳಿಸಿದ ಘಟನೆ ಜರುಗಿದೆ. ಇದು ಆಗಿದ್ದು ದೊಡ್ಡೇರಿ ಹೋಬಳಿ ಬೋರಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಜರುಗಿದೆ. ಹೀಗೆ ಕಿರುಕುಳ ನೀಡಿದ ಶಿಕ್ಷಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಶಿಕ್ಷಕ ಮಂಜುನಾಥ್ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ತಮ್ಮ ಪಾಲಕರಲ್ಲಿ ಹೇಳಿಕೊಂಡಿದ್ದಾರೆ. ಅದಾದ ನಂತರ ಪಾಲಕರಿಗೆ ಈ ವಿಚಾರ ತಿಳಿದಿದೆ. ಸೋಮವಾರ ತರಗತಿಗೆ ಶಿಕ್ಷಕ ಆಗಮಿಸುವ ಮುನ್ನವೇ ಶಿಕ್ಷಕನನ್ನು ತಡೆ ಹಿಡಿದು ವಿಚಾರಿಸಿ ಹೊಡೆದಿದ್ದಾರೆ.
ಇದನ್ನೂ ಓದಿ: Public Exam: ರಾಜ್ಯದಲ್ಲಿ ಇಂದಿನಿಂದ 5 ಹಾಗೂ 8ನೇ ತರಗತಿ ಪರೀಕ್ಷೆ ಆರಂಭ
ವಿಷಯ ತಿಳಿದು ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, ಬಡವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ, ಸಿಡಿಪಿಒ ಅನಿತಾ ಅವರು ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದರು. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಇವರ ಮೇಲೆ ದೂರು ದಾಖಲಾಗಿದೆ. ಶಿಕ್ಷಕ ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆಯರು ಸೇರಿದಂತೆ ಸ್ತ್ರೀಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ನಡೆದ ಘಟನೆಯೊಂದು ಹೇಗಿದೆ ನೋಡಿ. ಮೆಡಿಕಲ್ ಕೋರ್ಸ್ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೋಮವಾರ ಚರ್ಚ್ ಪಾದ್ರಿಯೊಬ್ಬರನ್ನು ಪೊಲೀಸರು ಕನ್ಯಾಕುಮಾರಿಯಲ್ಲಿ ಬಂಧಿಸಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಪಾದ್ರಿ ಬೆನೆಡಿಕ್ಟ್ ಆಂಟೊ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಾದ್ರಿ ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿದ್ದ, ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಇಂದು ಬೆಳಗ್ಗೆ ನಾಗರ್‌ಕೋಯಿಲ್‌ನ ಫಾರ್ಮ್‌ಹೌಸ್‌ನಲ್ಲಿ ಬಂಧನ ಮಾಡಿದ್ದಾರೆ. ಇತ್ತೀಚೆಗೆ ಆರೋಪಿ ಪಾದ್ರಿಯ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಪಾದ್ರಿಯ ಲ್ಯಾಪ್‌ಟಾಪ್ ಕಿತ್ತುಕೊಂಡಿತ್ತು. ಅದರಲ್ಲಿ ಆತನ ಖಾಸಗಿ ಸಮಯದ ವಿಡಿಯೋಗಳು ಇತ್ತು ಎನ್ನಲಾಗಿದೆ. ಆದಾಗ್ಯೂ, ಪಾದ್ರಿ ಯಾರ ವಿರುದ್ಧವೂ ದೂರು ನೀಡಿರಲಿಲ್ಲ.
ಪಾದ್ರಿಯು ಮಹಿಳೆಯೊಂದಿಗೆ ನಡೆಸಿದ ಸರಸ- ಸಲ್ಲಾಪ
ಈ ನಡುವೆ ಪಾದ್ರಿಯು ಮಹಿಳೆಯೊಂದಿಗೆ ನಡೆಸಿದ ಸರಸ- ಸಲ್ಲಾಪದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬಗ್ಗೆಯೂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಲ್ಯಾಪ್‌ಟಾಪ್ ವಶಪಡಿಸಿಕೊಂಡ ಒಂದೆರಡು ದಿನಗಳ ನಂತರ, ಪಾದ್ರಿ ಆಂಟೊ ಯುವತಿಯರೊಂದಿಗೆ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ