• ಹೋಂ
 • »
 • ನ್ಯೂಸ್
 • »
 • Jobs
 • »
 • Neet Exam: ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ವೈದ್ಯಕೀಯ ಪ್ರವೇಶ ಪಡೆದ ವಿದ್ಯಾರ್ಥಿಗೆ ಕಾನೂನಿನ ಸಂಕಷ್ಟ

Neet Exam: ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ವೈದ್ಯಕೀಯ ಪ್ರವೇಶ ಪಡೆದ ವಿದ್ಯಾರ್ಥಿಗೆ ಕಾನೂನಿನ ಸಂಕಷ್ಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪುದುಚೇರಿಯ ಜಿಐಪಿಎಮ್​ಇಆರ್ ವಿವಿಯಲ್ಲಿ 21 ವರ್ಷದ ವೈದ್ಯಕೀಯ ವಿದ್ಯಾರ್ಥಿಯ ನೇಟಿವಿಟಿಯ ಹಕ್ಕು ಕುರಿತು ಕಾನೂನು ವಿವಾದವು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು ಪ್ರವೇಶ ಮಾನದಂಡಗಳ ಬಗ್ಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡು ಬಂದಿದೆ.

 • Trending Desk
 • 4-MIN READ
 • Last Updated :
 • Share this:

  ವೈದ್ಯಕೀಯ ಅಧ್ಯಯನಕ್ಕೆ (Medical Studies) ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಬರೆಯಲೇಬೇಕಾದ ಪರೀಕ್ಷೆ ನೀಟ್‌. ವೈದ್ಯರಾಗುವ ಹೆಬ್ಬಯಕೆ ಹೊಂದಿರುವ ಪ್ರತಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಈ ಪರೀಕ್ಷೆಯನ್ನು ತೇರ್ಗಡೆ ಹೊಂದುತ್ತಾರೆ. ದೇಶದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಭಾರತದಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣಮಂಡಳಿಯು ವರ್ಷದಿಂದ ವರ್ಷಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಇದಾಗಿದೆ. ನೀಟ್ ಪರೀಕ್ಷೆಯಲ್ಲಿ (NEET Exam) ವಿದ್ಯಾರ್ಥಿಗಳು ತೆಗೆದುಕೊಂಡ ಶ್ರೇಯಾಂಕವು ಅವರು ಯಾವ ಕಾಲೇಜುಗಳಿಗೆ ಸೇರಬಹುದು ಎಂಬುದನ್ನು ನಿರ್ಧರಿಸುತ್ತದೆ. ಹೀಗೆ ನೀಟ್‌ ಪರೀಕ್ಷೆ ಬರೆದು ಒಳ್ಳೆಯ ಅಂಕ ಪಡೆದು ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗೆ ಈಗ ಡ್ಯುಯಲ್‌ ರೆಸಿಡೆನ್ಸಿ (Dual Residency) ಕಾನೂನು ಸಮಸ್ಯೆ ತಲೆದೂರಿದೆ.


  ಪುದುಚೇರಿಯ ಜಿಐಪಿಎಮ್​ಇಆರ್ ವಿವಿಯಲ್ಲಿ 21 ವರ್ಷದ ವೈದ್ಯಕೀಯ ವಿದ್ಯಾರ್ಥಿಯ ನೇಟಿವಿಟಿಯ ಹಕ್ಕು ಕುರಿತು ಕಾನೂನು ವಿವಾದವು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು ಪ್ರವೇಶ ಮಾನದಂಡಗಳ ಬಗ್ಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡು ಬಂದಿದೆ.


  ಏನಿದು ಘಟನೆ?


  ನಜಿಹ್ ಖಾಲಿದ್ ಎಂಬ ವಿದ್ಯಾರ್ಥಿ ಕಳೆದ ವರ್ಷ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) 99.30 ಶೇಕಡಾ ಅಂಕ ಗಳಿಸಿದರು ಮತ್ತು ರೆಸಿಡೆನ್ಸಿ ಕೋಟಾದ ಅಡಿಯಲ್ಲಿ ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (JIPMER) ನಲ್ಲಿ ಪ್ರವೇಶ ಪಡೆದಿದ್ದರು.


  ಇದನ್ನೂ ಓದಿ: ಉತ್ತಮ ಸಂಬಳದ ಉದ್ಯೋಗ ಬಿಟ್ಟು ಗಣಿತ ಹೇಳಿಕೊಡುತ್ತಿದ್ದಾರೆ ಈ ಐಐಟಿ ಪದವೀಧರ!


  ಆದರೆ ಈಗ ವಿದ್ಯಾರ್ಥಿ ವಿರುದ್ಧ ಡ್ಯುಯಲ್‌ ರೆಸಿಡೆನ್ಸಿಯಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಖಾಲಿದ್‌ಗೆ ಕಾನೂನಿನ ಸಂಕಷ್ಟ ತಲೆದೋರಿದೆ.


  ಖಾಲಿದ್‌ ವಿರುದ್ಧ ಮತ್ತೋರ್ವ ವಿದ್ಯಾರ್ಥಿ ಆರೋಪ


  ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ, 18 ವರ್ಷದ ಸಮಿನಾಥನ್ ಎಸ್, ಖಾಲಿದ್ ಪುದುಚೇರಿ ಮತ್ತು ಕೇರಳದಲ್ಲಿ ನೇಟಿವಿಟಿ ಹಕ್ಕು ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರವೇಶವನ್ನು ರದ್ದುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠ ಪುದುಚೇರಿ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಖಾಲಿದ್ ಪ್ರವೇಶದ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ.


  ಸಾಂದರ್ಭಿಕ ಚಿತ್ರ


  ಪುದುಚೇರಿ ಕೇಂದ್ರಕ್ಕೆ ನೀಟ್‌ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಜಿಐಪಿಎಮ್​ಇಆರ್​ನ ಕಾರೈಕಲ್ ಕ್ಯಾಂಪಸ್‌ನಲ್ಲಿ ಸೀಟು ಪಡೆದ ಅರ್ಜಿದಾರ ಸಾಮಿನಾಥನ್, ಅಫಿಡವಿಟ್ ಸಲ್ಲಿಸುವ ಮೂಲಕ ಅಧಿಕಾರಿಗಳನ್ನು ದಾರಿ ತಪ್ಪಿಸಿದ ಕಾರಣ ಖಾಲಿದ್ ಅವರ ಪ್ರವೇಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಸಾಮಿನಾಥನ್ ಅವರು ಪ್ರಸ್ತುತ ಖಾಲಿದ್ ಅವರ ಸೀಟ್‌ ಅನ್ನು ರದ್ದು ಮಾಡಿ ತನ್ನನ್ನು ಅಲ್ಲಿಗೆ ವರ್ಗಾಯಿಸಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.


  ಪ್ರವೇಶ ನಿಯಮ ಏನು ಹೇಳುತ್ತದೆ?


  ಪ್ರವೇಶ ನಿಯಮಗಳ ಪ್ರಕಾರ, ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯು ಶೈಕ್ಷಣಿಕ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನೇಟಿವಿಟಿ/ರೆಸಿಡೆನ್ಸಿ ಪಡೆಯಲು ಸಾಧ್ಯವಿಲ್ಲ ಎನ್ನುತ್ತದೆ.


  ಆದರೆ ಅನೇಕ ವಿದ್ಯಾರ್ಥಿಗಳು ವಿವಿಧ ರಾಜ್ಯಗಳಲ್ಲಿನ ವಿಭಿನ್ನ ನೇಟಿವಿಟಿ ಮಾನದಂಡಗಳ ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ಅತ್ಯುತ್ತಮ ಅವಕಾಶವನ್ನು ಪಡೆದುಕೊಳ್ಳಲು ಅನೇಕ ರಾಜ್ಯಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಎಂದು ಪುದುಚೇರಿಯ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿ ಪರ ಸಂಘಟನೆಯೊಂದು ಹೇಳಿಕೊಂಡಿದೆ.


  ಕೋರ್ಟ್‌ ಹೇಳಿದ್ದೇನು?


  ಪುದುಚೇರಿಯ ವೈದ್ಯಕೀಯ ಶಿಕ್ಷಣ ನಿರ್ದೇಶಕರು (DME), ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಖಾಲಿದ್ ಮತ್ತು ಸಂಬಂಧಿಸಿದ ಇತರ ಪಕ್ಷಗಳಿಗೆ ಪ್ರಸ್ತುತ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.


  ಇಲ್ಲಿನ ಪ್ರತಿವಾದಿಗಳ ಅಸಡ್ಡೆ ಧೋರಣೆಯಿಂದಾಗಿ ಪುದುಚೇರಿ ಮೂಲದ ವಿದ್ಯಾರ್ಥಿಗೆ ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸಲಾಗಿದೆ. ನ್ಯಾಯಾಲಯವು ಹೇಳಿದ ವಿದ್ಯಾರ್ಥಿಯ ಸೀಟನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಆದರೆ ಐದನೇ ಪ್ರತಿವಾದಿ (ನಜಿಹ್ ಸರ್ಫ್ರಾಜ್ ಖಾಲಿದ್) ಸುಳ್ಳು ಘೋಷಣೆಯ ಮೂಲಕ ಸ್ಥಾನ ಪಡೆದಿದ್ದಾರೆ ಎಂಬ ಘೋಷಣೆಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.


  ಖಾಲಿದ್ ಹಾಗೂ ಸಾಮಿನಾಥನ್‌ಗೆ ಸಂಬಂಧಿಸಿದಂತೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ 10 ಕೆಲಸದ ದಿನಗಳ ಅವಧಿಯಲ್ಲಿ ಅವರಿಗೆ ತಿಳಿಸುವಂತೆ ನ್ಯಾಯಾಲಯವು ಎರಡೂ ಅಧಿಕಾರಿಗಳನ್ನು ಕೇಳಿದೆ.


  "ನೇಟಿವಿಟಿ ಕ್ಲೈಮ್ ಪರಿಣಾಮದ ಬಗ್ಗೆ ತಿಳಿದುಕೊಂಡಿರಬೇಕು"


  ಈ ಕಾನೂನಿನ ತೊಡಕಿನ ಬಗ್ಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಲಹೆಗಾರರು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನೇಟಿವಿಟಿ ಕ್ಲೈಮ್ ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು.


  ಇಂತಹ ಚಟುವಟಿಕೆಗಳು ವೈದ್ಯಕೀಯ ಸೀಟುಗಳನ್ನು ನಿರ್ಬಂಧಿಸುತ್ತವೆ ಮತ್ತು ಇತರ ಅರ್ಹ ಅಭ್ಯರ್ಥಿಗಳ ಪ್ರವೇಶಕ್ಕೆ ಅಡಚಣೆಯನ್ನು ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
  "ಸ್ಥಳೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ದಿಷ್ಟ ಶೇಕಡಾವಾರು ಸೀಟುಗಳನ್ನು ರೆಸಿಡೆನ್ಸಿ ಕೋಟಾದಡಿಯಲ್ಲಿ ಕಾಯ್ದಿರಿಸಲಾಗಿರುವುದರಿಂದ, ಡ್ಯುಯಲ್ ನೇಟಿವಿಟಿಯನ್ನು ಹೊಂದಿರುವ ಅನೇಕ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಆ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸುತ್ತಾರೆ.


  ವಿದ್ಯಾರ್ಥಿಗಳು ತಪ್ಪುದಾರಿಗೆಳೆಯುವ ಮತ್ತು ತಪ್ಪು ಕಾರ್ಯಗಳನ್ನು ಮಾಡಬಹುದು ಎಂಬುದನ್ನು ನಜಿಹ್ ಪ್ರಕರಣದಿಂದ ಕಲಿಯಬೇಕು'' ಎಂದು ಪುದುಚೇರಿ ಮೂಲದ ವೈದ್ಯಕೀಯ ಶಿಕ್ಷಣ ಸಲಹೆಗಾರ ಪಂಚಪಕೇಶನ್ ಗಣೇಶನ್ ತಿಳಿಸಿದ್ದಾರೆ.

  Published by:Prajwal B
  First published: