• ಹೋಂ
 • »
 • ನ್ಯೂಸ್
 • »
 • jobs
 • »
 • Oldest Teacher: 93ನೇ ವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡ್ತಾರಂತೆ ಈ ಟೀಚರ್: ವಿಶ್ವದ ಅತ್ಯಂತ ಹಿರಿಯ ಪ್ರಾಧ್ಯಾಪಕಿ ಇವರು

Oldest Teacher: 93ನೇ ವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡ್ತಾರಂತೆ ಈ ಟೀಚರ್: ವಿಶ್ವದ ಅತ್ಯಂತ ಹಿರಿಯ ಪ್ರಾಧ್ಯಾಪಕಿ ಇವರು

ಅತಿ ಹಿರಿ ವಯಸ್ಸಿನ ಟೀಚರ್ (ಶಾಂತಮ್ಮ)​

ಅತಿ ಹಿರಿ ವಯಸ್ಸಿನ ಟೀಚರ್ (ಶಾಂತಮ್ಮ)​

ಮಾರ್ಚ್ 8, 1929 ರಂದು ಆಗ್ನೇಯ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಜನಿಸಿದ ಶಾಂತಮ್ಮ ಅವರು 1989 ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ತಮ್ಮ ಕೆಲಸದಿಂದ ನಿವೃತ್ತರಾದರು.  ನಿವೃತ್ತಿಯ ನಂತರವೂ, ಅವರು ಮಕ್ಕಳಿಗೆ ಬೋಧನೆ ಮಾಡುವುದನ್ನು ಹಾಗೆ ಮುಂದುವರಿಸಲು ನಿರ್ಧರಿಸಿದರು ಮತ್ತು ಈಗ ಏಳು ದಶಕಗಳಿಂದ ಯುವ ಮನಸ್ಸುಗಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ಜೀವನಕ್ಕೆ ಸ್ಫೂರ್ತಿ ನೀಡುವ ನೀತಿ ಪಾಠಗಳನ್ನು ಸಹ ಹೇಳುತ್ತಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • New Delhi, India
 • Share this:

ನಮ್ಮಲ್ಲಿ ಅನೇಕರು 50 ವರ್ಷ (Years) ವಯಸ್ಸಾದ ತಕ್ಷಣ ‘ಯಾವಾಗಪ್ಪಾ 60 ವರ್ಷ ಆಗುತ್ತೆ. ಕೆಲಸದಿಂದ ನಿವೃತ್ತಿ ಸಿಗುತ್ತೆ, ಆರಾಮಾಗಿ ಮನೆಯಲ್ಲಿ ರೆಸ್ಟ್ (Rest) ಮಾಡಬಹುದು’ ಅಂತ ಅಂದುಕೊಳ್ಳುತ್ತಾ ಇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಎಂದರೆ ದೀರ್ಘ ಸಮಯದವರೆಗೆ ಕೆಲಸ (Work) ಮಾಡಿ ಅವರಿಗೆ ಯಾವಾಗಪ್ಪಾ ನಿವೃತ್ತಿ ವಯಸ್ಸು (Age) ಹತ್ತಿರ ಬರುತ್ತದೆ ಅನ್ನೋ ಯೋಚನೆ ತಪ್ಪು ಅಂತ ಅನ್ನುವಂತಿಲ್ಲ.


ಆದರೆ ಕೆಲವರು ತಮ್ಮ ವೃತ್ತಿಯನ್ನು ಎಷ್ಟರ ಮಟ್ಟಿಗೆ ಆನಂದಿಸುತ್ತಿರುತ್ತಾರೆ ಎಂದರೆ ಅವರಿಗೆ ಒಂದು ದಿನ ರಜೆ ತಗೆದುಕೊಂಡರೂ ಸಹ ಮನೆಯಲ್ಲಿ ಅವರಿಗೆ ನೆಮ್ಮದಿ ಇರುವುದಿಲ್ಲ. ಕೆಲಸಕ್ಕೆ ಅಷ್ಟರ ಮಟ್ಟಿಗೆ ಅಂಟಿಕೊಂಡಿರುತ್ತಾರೆ ಮತ್ತು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ತಾವು ಮಾಡುವ ಕೆಲಸದ ಬಗ್ಗೆ ಅಷ್ಟೊಂದು ಅವರಿಗೆ ಒಲವು ಇರುತ್ತದೆ ಅಂತ ಹೇಳಬಹುದು.


93 ವರ್ಷ ವಯಸ್ಸಾದರೂ ಪಾಠ ಹೇಳಿಕೊಡುವುದನ್ನು ಬಿಟ್ಟಿಲ್ಲ


ಅನೇಕ ಜನರು ತಮ್ಮ ನಿವೃತ್ತಿ ಹೊಂದಿದ ಮೇಲೆ ದಿನದ ಸಮಯವನ್ನು ಹೇಗೆ ಕಳೆಯಬೇಕು ಅನ್ನೋದರ ಬಗ್ಗೆ ಮೊದಲೇ ಯೋಜಿಸಿಕೊಂಡಿರುತ್ತಾರೆ ಅಂತ ಹೇಳಬಹುದು. ಹೆಚ್ಚಿನವರು ಆರಾಮದಾಯಕ ಮತ್ತು ಸುಲಭದ ಜೀವನವನ್ನು ಯೋಜಿಸುತ್ತಾರೆ.


ಆದರೆ ಇಲ್ಲೊಬ್ಬರು ಪ್ರಾಧ್ಯಾಪಕರಿಗೆ 93 ವರ್ಷ ವಯಸ್ಸಾದರೂ ಸಹ ವಯಸ್ಸು ಕೇವಲ ಸಂಖ್ಯೆಯಾಗಿದೆ ಮತ್ತು ನಿವೃತ್ತಿ ಒಂದು ವಿದೇಶಿ ಪರಿಕಲ್ಪನೆಯಾಗಿದೆ ಅಂತ ಹೇಳುತ್ತಾರೆ. ಇವರು ಭಾರತ ಮೂಲದ ವಿದ್ವಾಂಸರಾದ ಚಿಲುಕುರಿ ಶಾಂತಮ್ಮ ಅಂತ ಹೇಳಲಾಗುತ್ತಿದೆ. ಇವರಿಗೆ ಭೌತಶಾಸ್ತ್ರ ವಿಷಯದ ಬಗ್ಗೆ ಎಲ್ಲಿಲ್ಲದ ಉತ್ಸಾಹವಿರುತ್ತದೆ. ಇಷ್ಟೇ ಅಲ್ಲದೆ ಬೋಧನೆಯು ಅವರ ಜೀವನದ ಪರಮ ಉದ್ದೇಶವಾಗಿದೆ, ಇದನ್ನು ಅವರು ತಮ್ಮ ವೃದ್ಧಾಪ್ಯದಲ್ಲೂ ಹಾಗೆಯೇ ಮುಂದುವರಿಸಿಕೊಂಡು ಹೋಗಿದ್ದಾರೆ ನೋಡಿ.


ಇದನ್ನೂ ಓದಿ: BTech Students: ಬಿಟೆಕ್ ಮುಗೀತಾ? ಹಾಗಾದ್ರೆ ನೀವಿನ್ನು ನೇರವಾಗಿ PHD ಮಾಡ್ಬಹುದು


ಆಂಧ್ರಪ್ರದೇಶದ ಶಾಂತಮ್ಮ ಏಳು ದಶಕಗಳಿಂದ ಪಾಠ ಹೇಳಿಕೊಡ್ತಾ ಇದ್ದಾರೆ


ಮಾರ್ಚ್ 8, 1929 ರಂದು ಆಗ್ನೇಯ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಜನಿಸಿದ ಶಾಂತಮ್ಮ ಅವರು 1989 ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ತಮ್ಮ ಕೆಲಸದಿಂದ ನಿವೃತ್ತರಾದರು.  ನಿವೃತ್ತಿಯ ನಂತರವೂ, ಅವರು ಮಕ್ಕಳಿಗೆ ಬೋಧನೆ ಮಾಡುವುದನ್ನು ಹಾಗೆ ಮುಂದುವರಿಸಲು ನಿರ್ಧರಿಸಿದರು ಮತ್ತು ಈಗ ಏಳು ದಶಕಗಳಿಂದ ಯುವ ಮನಸ್ಸುಗಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ಜೀವನಕ್ಕೆ ಸ್ಫೂರ್ತಿ ನೀಡುವ ನೀತಿ ಪಾಠಗಳನ್ನು ಸಹ ಹೇಳುತ್ತಿದ್ದಾರೆ.


ತನ್ನ ಬೋಧನಾ ಉತ್ಸಾಹವನ್ನು ಪೂರೈಸಿಕೊಳ್ಳಲು ಪ್ರತಿದಿನ, ಅವರು ವಿಶಾಖಪಟ್ಟಣದಿಂದ ವಿಜಯನಗರಂಗೆ 60 ಕಿಲೋ ಮೀಟರ್ ಪ್ರಯಾಣಿಸುತ್ತಾರೆ. ಅವರು ಆಂಧ್ರಪ್ರದೇಶದ ಸೆಂಚುರಿಯನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಕಲಿಸುತ್ತಾರೆ.


ಶಾಂತಮ್ಮ ಅವರ ತಾಯಿಯೇ ಅವರಿಗೆ ಸ್ಪೂರ್ತಿ


ಶಾಂತಮ್ಮ ಅವರ ತಾಯಿ ವನಜಾಕ್ಷಮ್ಮ ಅವರು ಸಹ ತಮ್ಮ 104ನೇ ವಯಸ್ಸಿನವರೆಗೆ ಬದುಕಿದ್ದರು ಎಂದು ವರದಿಯಾಗಿದೆ, ಇದು 93 ವರ್ಷದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಗೆ ಸ್ಫೂರ್ತಿ ನೀಡುತ್ತದೆ. ಈ ವಯಸ್ಸಿನಲ್ಲಿ, ಅವರು ವಾಸ್ತವವಾಗಿ ವಿಶ್ವದ ಅತ್ಯಂತ ಹಳೆಯ ಬೋಧನಾ ಪ್ರಾಧ್ಯಾಪಕರಾಗಿದ್ದಾರೆ.
ಅವರು ಭೌತಶಾಸ್ತ್ರದಲ್ಲಿ ಬಿ.ಎಸ್‌ಸಿ ಪದವಿಯನ್ನು ಓದಿದ್ದು ಮತ್ತು ಆಂಧ್ರ ವಿಶ್ವವಿದ್ಯಾಲಯದಿಂದ ಮೈಕ್ರೋವೇವ್ ಸ್ಪೆಕ್ಟ್ರೋಸ್ಕೋಪಿಯಲ್ಲಿ ಡಿ.ಎಸ್‌ಸಿ (ಪಿಎಚ್‌ಡಿಗೆ ಸಮಾನವಾದ) ಅಧ್ಯಯನವನ್ನು ಮಾಡಿದ್ದಾರೆ.


ಅನೇಕ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಈ ಶಾಂತಮ್ಮ


ಶಾಂತಮ್ಮ ಅವರು ತಮ್ಮ ಸುದೀರ್ಘ, ಪ್ರತಿಷ್ಠಿತ ವೃತ್ತಿಜೀವನದಲ್ಲಿ, ಅನೇಕ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಪನ್ಯಾಸಕ, ಪ್ರಾಧ್ಯಾಪಕ, ಓದುಗ ಮತ್ತು ಕೇಂದ್ರ ಸರ್ಕಾರದ ವಿವಿಧ ವಿಭಾಗಗಳಿಗೆ ತನಿಖಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಟೋಮಿಕ್ ಸ್ಪೆಕ್ಟ್ರೋಸ್ಕೋಪಿ ಮತ್ತು ಮಾಲಿಕ್ಯುಲರ್ ಸ್ಪೆಕ್ಟ್ರೋಸ್ಕೋಪಿಯ ವಿಶ್ಲೇಷಣೆಗಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಾಂತಮ್ಮ ಒಬ್ಬ ಲೇಖಕಿ ಸಹ ಆಗಿದ್ದು, ಅವರು ಪುರಾಣಗಳು, ವೇದಗಳು ಮತ್ತು ಉಪನಿಷತ್ತುಗಳ ಬಗ್ಗೆ "ಭಗವದ್ಗೀತಾ- ದಿ ಡಿವೈನ್ ಡೈರೆಕ್ಟಿವ್" ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ.

First published: