ಸುಮಾರು 40-50 ವರ್ಷಗಳ ಹಿಂದಿನ ಶಿಕ್ಷಣ ವ್ಯವಸ್ಥೆಗೂ (Education System) ಮತ್ತು ಈಗಿನ ಶಿಕ್ಷಣ ವ್ಯವಸ್ಥೆಗೂ ತುಂಬಾನೇ ಅಜಗಜಾಂತರ ವ್ಯತ್ಯಾಸವಿದೆ ಅಂತ ಅನೇಕ ಮಂದಿ ಹಿರಿಯರು ಹೇಳುವುದು ನಮ್ಮ ಕಿವಿಗೆ ಆಗಾಗ್ಗೆ ಬೀಳುತ್ತಲೇ ಇರುತ್ತದೆ. ಹೌದು ಈ ಮಾತು ಅಕ್ಷರಶಃ ನಿಜ , ಏಕೆಂದರೆ ಹಳೆಯ ಕಾಲದಲ್ಲಿದ್ದ ಶಿಕ್ಷಣ ವ್ಯವಸ್ಥೆ, ಪಾಠ ಹೇಳಿ ಕೊಡುವ ಶಿಕ್ಷಕರ (Teachers) ಮನೋಭಾವನೆ ಮತ್ತು ಕಲಿತುಕೊಳ್ಳಬೇಕು ಎಂಬ ಜ್ಞಾನದ ದಾಹವಿರುವ ವಿದ್ಯಾರ್ಥಿಗಳು (Students), ಪಠ್ಯಗಳಲ್ಲಿರುವ ಪಾಠಗಳು ಮತ್ತು ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು. ಹೀಗೆ ಎಲ್ಲದರಲ್ಲೂ ತುಂಬಾನೇ ವ್ಯತ್ಯಾಸವಾಗಿರುವುದನ್ನು ನಾವು ಈಗ ನೋಡುತ್ತೇವೆ.
ಒಟ್ಟಿನಲ್ಲಿ ಅನೇಕರು ಹೇಳುವ ಪ್ರಕಾರ ಶಿಕ್ಷಣ ವ್ಯವಸ್ಥೆ ಹಿಂದೆಂದಿಗಿಂತಲೂ ಸುಧಾರಿಸಿರಬಹುದು, ಆದರೆ ಶಿಕ್ಷಣದ ಗುಣಮಟ್ಟ ಸ್ವಲ್ಪ ಮಟ್ಟಿಗೆ ಕುಸಿದಿದೆ. ಎಂದರೆ ಆಗಿನ ಪಠ್ಯಗಳು ತುಂಬಾನೇ ಕಠಿಣವಾಗಿದ್ದವು ಮತ್ತು ಪರೀಕ್ಷೆಗಳು ಸಹ ತುಂಬಾನೇ ಕಠಿಣವಾಗಿ ನಡೆಯುತ್ತಿದ್ದವು. ಆದರೆ ಈಗಿನ ದಿನಗಳಲ್ಲಿ ಪಠ್ಯಗಳು ಸಹ ತುಂಬಾನೇ ಸುಲಭೀಕರಿಸಲಾಗಿದೆ ಮತ್ತು ಪರೀಕ್ಷೆಗಳು ಹೇಗೆಲ್ಲಾ ನಡೆಯುತ್ತಿವೆ ಅಂತ ನಾವು ಪ್ರತ್ಯೇಕವಾಗಿ ಹೇಳುವುದೇ ಬೇಕಾಗಿಲ್ಲ.
ಹಿಂದೆಲ್ಲಾ ಪರೀಕ್ಷೆಯಲ್ಲಿ 50 ರಿಂದ 60 ಅಂಕಗಳು ಬಂದಿವೆ ಎಂದರೆ, ಅದು ತುಂಬಾನೇ ದೊಡ್ಡ ಸಾಧನೆಯಾಗಿರುತ್ತಿತ್ತು. ಆದರೆ ಈಗ ಆ ಅಂಕಗಳು 100ಕ್ಕೆ ಹೋಗಿ ತಲುಪಿದೆ. ಅನೇಕ ವಿದ್ಯಾರ್ಥಿಗಳು 90 ಪ್ರತಿಶತಕ್ಕಿಂತಲೂ ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಶಿಕ್ಷಣದ ವ್ಯವಸ್ಥೆಯಲ್ಲಿ ಮಾತ್ರ ಭಾರಿ ಬದಲಾವಣೆಯಾಗಿರುವುದಂತೂ ನಿಜ.
ಅರೇ ಈಗೇಕೆ ನಾವು ಹಳೆಯ ಮತ್ತು ಈಗಿನ ಶಿಕ್ಷಣ ವ್ಯವಸ್ಥೆಯನ್ನು ಹೋಲಿಕೆ ಮಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು.
ಇದನ್ನೂ ಓದಿ: New Education Policy: 4 ವರ್ಷದ ಪದವಿ ನೀಡಲು ಕಾಲೇಜುಗಳು ಅನುಮತಿ ಪಡೆಯುವುದು ಕಡ್ಡಾಯ!
1943 ರಲ್ಲಿ ಪಠ್ಯಕ್ರಮ ಹೇಗಿತ್ತು ಗೊತ್ತೇ?
ವಿಷಯ ಏನೆಂದರೆ ಸುಮಾರು 80 ವರ್ಷ ಹಳೆಯ ಪಠ್ಯಕ್ರಮ ಮತ್ತು ಇಂದಿನ ಪಠ್ಯಕ್ರಮದ ನಡುವಿನ ವ್ಯತ್ಯಾಸವನ್ನು ತೋರಿಸಲು ನಿವೃತ್ತ ಐಎಎಸ್ ಅಧಿಕಾರಿಯಾದ ಬದ್ರಿ ಲಾಲ್ ಸ್ವರ್ಣಕರ್ ಅವರು 5ನೇ ತರಗತಿಯ ಪ್ರಶ್ನೆ ಪತ್ರಿಕೆಯನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ 1943-44ರಲ್ಲಿ 5ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಪ್ರಶ್ನೆಗಳ ಗುಣಮಟ್ಟವನ್ನು ನೋಡಿ. ಶಿಕ್ಷಣ ವ್ಯವಸ್ಥೆಯು ಈಗ ಪರೀಕ್ಷೆಗಳನ್ನು ತುಂಬಾ ಸುಲಭಗೊಳಿಸಿದೆ!
ಆಗಿನ ಪ್ರಶ್ನೆಗಳು ಇಂದಿನದಕ್ಕಿಂತ ತುಂಬಾನೇ ಕಠಿಣವಾಗಿವೆ ಎಂದು ಇಲ್ಲಿ ನೋಡಬಹುದು. ಈಗ 5ನೇ ತರಗತಿಯ ಮಕ್ಕಳಿಗೆ ಇಂತಹ ಕಾಮರ್ಸ್ ಪ್ರಶ್ನೆಪತ್ರಿಕೆಯೂ ಇಲ್ಲ. ಅವರು ಕಲಿಯುವ ಎಲ್ಲಾ ಕಾಮರ್ಸ್ ಶಿಕ್ಷಣ ಈಗ ಗಣಿತ ಪ್ರಶ್ನೆ ಪತ್ರಿಕೆಯಿಂದ” ಅಂತ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಹಳೆಯ ಪ್ರಶ್ನೆ ಪತ್ರಿಕೆ 100 ಅಂಕದ್ದಾಗಿದ್ದು, 33 ಅಂಕ ಗಳಿಸಿದರೆ ಪಾಸ್ ಅಂತೆ..
1943-44ರ ಪ್ರಶ್ನೆ ಪತ್ರಿಕೆಗೆ ಗರಿಷ್ಠ ಅಂಕಗಳು 100 ಮತ್ತು ಉತ್ತೀರ್ಣ ಅಂಕಗಳನ್ನು 33 ಎಂದು ಉಲ್ಲೇಖಿಸಲಾಗಿದೆ. ಪರೀಕ್ಷೆಯ ಅವಧಿಯನ್ನು 2.5 ಗಂಟೆಗಳು ಎಂದು ಲೇಬಲ್ ಮಾಡಲಾಗಿದೆ ಮತ್ತು ವಯಸ್ಕರಾದ ನಮಗೆ ಈ ಪ್ರಶ್ನೆಗಳು ತುಂಬಾನೇ ಸುಲಭವೆಂದು ಅನ್ನಿಸಬಹುದು, ಆದರೆ 10 ವರ್ಷದ ಬಾಲಕನಿಗೆ ಈ ಪ್ರಶ್ನೆ ಪತ್ರಿಕೆಯನ್ನು ಬಿಡಿಸಲು ಕೇಳಿದಾಗ ಮಾತ್ರವೇ ಇದು ಎಷ್ಟೊಂದು ಟಫ್ ಅಗಿತ್ತೆಂದು ಅರ್ಥವಾಗುತ್ತದೆ.
ಆಗಿನ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಹೋಲಿಸಿದರೆ, ಇಂದು ಮಕ್ಕಳಿಗೆ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳು ತುಂಬಾನೇ ಸುಲಭವಾಗಿವೆ. ಈಗ ಮಕ್ಕಳು ಗಣಿತದ ಪರಿಕಲ್ಪನೆಯ ಬಗ್ಗೆ ಮಾತ್ರ ಸ್ಪಷ್ಟವಾಗಿದ್ದಾರೆ ಮತ್ತು ಅವರು ನಿಜ ಜೀವನದ ಸನ್ನಿವೇಶಗಳಲ್ಲಿ ಅದರ ಅನ್ವಯವನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
80 ವರ್ಷಗಳ ಹಿಂದಿನ ಕಾಮರ್ಸ್ ಪ್ರಶ್ನೆ ಪತ್ರಿಕೆಯು ಚಿಕ್ಕ ವಯಸ್ಸಿನ ಮಕ್ಕಳಿಗೆ ಕಾಮರ್ಸ್ ಎಂದರೇನು ಮತ್ತು ಸಂಖ್ಯೆಗಳ ಅನ್ವಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅದರ ಪರಿಕಲ್ಪನೆಗಳಿಗೆ ಮೂಲಭೂತ ಗಣಿತವನ್ನು ಹೇಗೆ ಅನ್ವಯಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ