• ಹೋಂ
  • »
  • ನ್ಯೂಸ್
  • »
  • Jobs
  • »
  • Doctorate: 53 ವರ್ಷ ಶ್ರಮಪಟ್ಟು ಓದಿ ಡಾಕ್ಟರೇಟ್​ ಪದವಿ ಪಡೆದ 76ರ ತಾತ!

Doctorate: 53 ವರ್ಷ ಶ್ರಮಪಟ್ಟು ಓದಿ ಡಾಕ್ಟರೇಟ್​ ಪದವಿ ಪಡೆದ 76ರ ತಾತ!

ಡಾ. ಆಕ್ಸ್ಟೆನ್

ಡಾ. ಆಕ್ಸ್ಟೆನ್

ವರದಿಯ ಪ್ರಕಾರ, ಡಾ.ನಿಕ್ ಆಕ್ಸ್ಟೆನ್ ಅವರು 1970 ರಲ್ಲಿ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ‘ಮೆಥಮೇಟಿಕಲ್ ಸೊಷಿಯಾಲಜಿ’ ವಿಷಯದಲ್ಲಿ ಪಿಎಚ್‌ಡಿ ಗಾಗಿ ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು. ಅವರು ಅಪೂರ್ಣ ಪಿಎಚ್‌ಡಿ ಯೊಂದಿಗೆ 5 ವರ್ಷಗಳ ನಂತರ ಯುಕೆಗೆ ಮರಳಿದರು.

  • News18 Kannada
  • 2-MIN READ
  • Last Updated :
  • New Delhi, India
  • Share this:

ಕೆಲವೊಬ್ಬರು ತಮ್ಮ ನೆಚ್ಚಿನ ವಿಷಯದಲ್ಲಿ (Subject) ಪದವಿ ಪಡೆದರೆ ಸಾಕು, ಅದಕ್ಕೆ ತಕ್ಕಂತ ಯಾವುದಾದರೂ ಕೆಲಸ (Work) ಹುಡುಕಿಕೊಂಡು ಆರಾಮಾಗಿ ಇದ್ದು ಬಿಡೋಣ ಅಂತ ಯೋಚನೆ ಮಾಡಿದರೆ, ಇನ್ನೂ ಕೆಲವರು ತಮ್ಮ ಜೀವನದುದ್ದಕ್ಕೂ ಯಾವುದಾದರೊಂದು ವಿಷಯದಲ್ಲಿ ಕೋರ್ಸ್ ಗಳನ್ನು(Course) ಮಾಡುತ್ತಲೆ ಇರುವುದನ್ನು ನಾವು ನೋಡಿರುತ್ತೇವೆ. ಕಲಿಕೆಯು ಜೀವನಪರ್ಯಂತದ ಪ್ರಕ್ರಿಯೆಯಾಗಿದೆ ಎಂಬ ಮಾತನ್ನು (Talk) ನಾವು ಅನೇಕ ಬಾರಿ ಕೇಳಿರುತ್ತೇವೆ. ಯಾರಿಗಾದರೂ ತಾವು ಜೀವನದಲ್ಲಿ (Life) ಬಯಸಿದ್ದನ್ನು ಸಾಧಿಸಲು ಎಂದಿಗೂ ತಡವಾಗಿರುವುದಿಲ್ಲ. ಸಾಧನೆಗೆ ವಯಸ್ಸು ಎಂದೂ ಅಡ್ಡಿ ಬರುವುದಿಲ್ಲ ಅಂತ ಹೇಳಬಹುದು. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ ನೋಡಿ.


ಪಿಎಚ್‌ಡಿ ಮುಗಿಸಲು 50 ವರ್ಷ ತೆಗೆದುಕೊಂಡಿದ್ದಾರೆ ಈ ವ್ಯಕ್ತಿ


ಇಲ್ಲೊಬ್ಬ ವ್ಯಕ್ತಿಯು ತನ್ನ ಪಿಎಚ್‌ಡಿ (ಡಾಕ್ಟರ್ ಆಫ್ ಫಿಲಾಸಫಿ) ಪೂರ್ಣಗೊಳಿಸಲು ತೆಗೆದುಕೊಂಡ ಸಮಯ ಅಷ್ಟಿಷ್ಟಲ್ಲ ಬಿಡಿ. ಈ ವ್ಯಕ್ತಿ ತಮ್ಮ ಪಿಎಚ್‌ಡಿ ಮುಗಿಸಲು ಎಷ್ಟು ವರ್ಷ ತೆಗೆದುಕೊಂಡರು ಅಂತ ಕೇಳಿದರೆ ನಿಮಗೆ ಶಾಕ್ ಆಗುವುದಂತೂ ನಿಜ. ಸಾಮಾನ್ಯವಾಗಿ ಯಾರೇ ಆದರೂ ತಮ್ಮ ಪಿಎಚ್‌ಡಿ ಯನ್ನು ಐದು ಅಥವಾ ಆರು ವರ್ಷಗಳಲ್ಲಿ ಪೂರ್ಣಗೊಳಿಸುತ್ತಾರೆ. ಆದರೆ ಈ ವ್ಯಕ್ತಿ 1970 ರಲ್ಲಿ ಪಿಎಚ್‌ಡಿ ಗೆ ದಾಖಲಾದ 76 ವರ್ಷದ ವ್ಯಕ್ತಿ. 50 ವರ್ಷಗಳ ನಂತರ ಅದನ್ನು ಪೂರ್ಣಗೊಳಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.


1970 ರಲ್ಲಿ ಪಿಎಚ್‌ಡಿ ಗೆ ದಾಖಲಾಗಿದ್ರಂತೆ ಡಾ.ನಿಕ್


ವರದಿಯ ಪ್ರಕಾರ, ಡಾ.ನಿಕ್ ಆಕ್ಸ್ಟೆನ್ ಅವರು 1970 ರಲ್ಲಿ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ‘ಮೆಥಮೇಟಿಕಲ್ ಸೊಷಿಯಾಲಜಿ’ ವಿಷಯದಲ್ಲಿ ಪಿಎಚ್‌ಡಿ ಗಾಗಿ ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು. ಅವರು ಅಪೂರ್ಣ ಪಿಎಚ್‌ಡಿ ಯೊಂದಿಗೆ 5 ವರ್ಷಗಳ ನಂತರ ಯುಕೆಗೆ ಮರಳಿದರು.


ಇದನ್ನೂ ಓದಿ: ICSI CS ಪರೀಕ್ಷಾ ಫಲಿತಾಂಶ ದಿನಾಂಕ ಪ್ರಕಟ, ಇಲ್ಲೇ ಚೆಕ್​ ಮಾಡಿ


ಇಷ್ಟೇ ಅಲ್ಲದೆ ಇವರು ತಮ್ಮ 69ನೇ ವಯಸ್ಸಿನಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಎಂಎ ಅಧ್ಯಯನ ಮಾಡುವ ಮೂಲಕ ಡಾ.ಆಕ್ಸ್ಟೆನ್ 2016 ರಲ್ಲಿ ತಮ್ಮ ಅಧ್ಯಯನವನ್ನು ಮತ್ತೆ ಶುರು ಮಾಡಿದರು. ನಂತರ ಅವರು ಅದೇ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ಮಾಡಿದರು, 2022 ರಲ್ಲಿ 75ನೇ ವಯಸ್ಸಿನಲ್ಲಿ ಅದನ್ನು ಮುಗಿಸಿದರು.


ಫೆಬ್ರವರಿ 14, 2023 ರಂದು, ಬ್ರಿಸ್ಟಲ್ ವಿಶ್ವವಿದ್ಯಾಲಯವು ಅವರ ಪತ್ನಿ ಕ್ಲೇರ್ ಆಕ್ಸ್ಟೆನ್ ಮತ್ತು 11 ವರ್ಷದ ಮೊಮ್ಮಗಳು ಫ್ರೇಯಾ ಅವರ ಮುಂದೆ ಡಾಕ್ಟರ್ ಆಫ್ ಫಿಲಾಸಫಿ ಪ್ರಶಸ್ತಿಯನ್ನು ನೀಡಿತು.




ಡಾ.ನಿಕ್ ಅವರ ಸಂಶೋಧನೆ ಯಾವ ವಿಷಯದಲ್ಲಿದೆ ನೋಡಿ..


ಡಾ. ಆಕ್ಸ್ಟೆನ್ ಅವರ ಸಂಶೋಧನೆಯು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುವ ಮೌಲ್ಯಗಳ ಆಧಾರದ ಮೇಲೆ ಮಾನವ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಹೊಸ ಸಿದ್ಧಾಂತವಾಗಿದೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದು ನಡವಳಿಕೆಯ ಮನೋವಿಜ್ಞಾನದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.


ಆಕ್ಸ್ಟೆನ್ ಅವರು ತಮ್ಮ ಸಂಶೋಧನೆಯು ತುಂಬಾನೇ ಕಷ್ಟಕರವಾಗಿತ್ತು ಎಂದು ಹೇಳಿದರು. "70 ರ ದಶಕದ ಆರಂಭದಲ್ಲಿ ನಾನು ಮಾಡಲು ಪ್ರಯತ್ನಿಸುತ್ತಿದ್ದ ಕೆಲಸವು ತುಂಬಾನೇ ಕಷ್ಟಕರವಾಗಿತ್ತು. ಕೆಲವು ಸಮಸ್ಯೆಗಳು ಎಷ್ಟು ಕಠಿಣವಾಗಿದ್ದವು ಎಂದರೆ, ಅವುಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮ ಜೀವಮಾನದ ಒಂದು ಭಾಗವನ್ನೇ ಮುಡಿಪಾಗಿಡಬೇಕಾಯಿತು. ಈ ವಿಷಯಕ್ಕೆ ದೀರ್ಘವಾದ ಕಠಿಣ ಚಿಂತನೆಯ ಅಗತ್ಯವಿತ್ತು ಮತ್ತು ಇದು 50 ವರ್ಷಗಳನ್ನು ತೆಗೆದುಕೊಂಡಿತು" ಎಂದು ಅವರು ಹೇಳಿದರು.


ಡಾ.ನಿಕ್ ಬಗ್ಗೆ ಅವರ ಪ್ರೊಫೆಸರ್ ಹೇಳಿದ್ದೇನು?


ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ಅವರ ಮೇಲ್ವಿಚಾರಕ ಪ್ರೊಫೆಸರ್ ಸಮೀರ್ ಒಕಾಶಾ "ನಿಕ್ ಅವರು ಇಲ್ಲಿದ್ದಾಗ ನಂಬಲಾಗದಷ್ಟು ಉತ್ಸಾಹಿ, ಶಕ್ತಿಯುತ ಮತ್ತು ಬದ್ಧತೆಯ ವಿದ್ಯಾರ್ಥಿಯಾಗಿದ್ದರು. ಅವರು ತಮ್ಮ ಮೂಲ ಪಿಎಚ್‌ಡಿ ಯನ್ನು ಪ್ರಾರಂಭಿಸಿದ ಅರ್ಧ ಶತಮಾನದ ನಂತರ ಪದವಿ ಪಡೆಯುವುದನ್ನು ನೋಡುವುದು ಅದ್ಭುತವಾಗಿತ್ತು” ಎಂದು ಹೇಳಿದರು. ಅವರು ತಮ್ಮ ಪತ್ನಿಯೊಂದಿಗೆ ಸೊಮರ್ಸೆಟ್ ನ ವೆಲ್ಸ್ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಬ್ಬರು ಮಕ್ಕಳ ತಂದೆ ಮತ್ತು ನಾಲ್ಕು ಮೊಮ್ಮಕ್ಕಳ ಅಜ್ಜ ಸಹ ಆಗಿದ್ದಾರೆ.

First published: