• ಹೋಂ
  • »
  • ನ್ಯೂಸ್
  • »
  • Jobs
  • »
  • Fake Visa: 700 ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ ಗಡಿಪಾರು!

Fake Visa: 700 ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ ಗಡಿಪಾರು!

ಭಾರತೀಯ ವಿದ್ಯಾರ್ಥಿಗಳು

ಭಾರತೀಯ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಿಗೆ ಗಡಿಪಾರು ಪತ್ರ ನೀಡಲಾಗಿದೆ. ಒಟ್ಟು 700 ವಿದ್ಯಾರ್ಥಿಗಳನ್ನು ಗಡಿಪಾಡು ಮಾಡಲಾಗಿದೆ. ಈ ನೋಟಿಸ್​ ಜಾರಿಯಾಗುತ್ತಿದ್ದಂತೆ ಎಲ್ಲರಿಗೂ ಶಾಕ್​ ಆಗಿದೆ. ಇವರು ಇತ್ತೀಚೆಗೆ ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿಯಿಂದ (CBSA) ಗಡೀಪಾರು ಪತ್ರಗಳನ್ನು ಸ್ವೀಕರಿಸಿದ್ದಾರೆ

ಮುಂದೆ ಓದಿ ...
  • Share this:

ಕೆನಡಾದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳಿಗೆ (Students) ಅನ್ಯಾಯವಾಗಿರುವ ವಿಷಯ ಬೆಳಕಿಗೆ ಬಂದಿದೆ. ಉನ್ನತ ಅಧ್ಯಯನಕ್ಕೆಂದು ಕೆನಡಾಕ್ಕೆ (Canada) ತೆರಳಿ ಅಲ್ಲಿ ಅಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ವೀಸಾ ವಿಷಯದಲ್ಲಾದ ಮೋಸ ತಿಳಿದು ಶಾಕ್ (Shock)​ ಆಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಈಗಾಗಲೇ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಕೆಲಸಕ್ಕಾಗಿ (Job) ಅಲ್ಲೇ ನೆಲೆಸುವ ಗುರಿಯನ್ನು ಇವರು ಹೊಂದಿದ್ದರು ಎಂದು ತಿಳಿದು ಬಂದಿದೆ. ಕೆಲಸಕ್ಕಾಗಿ ಅಲ್ಲಿನ ಪರವಾನಗಿಯನ್ನು ಈ ಮೊದಲೇ ಅವರು ಪಡೆದುಕೊಂಡಿದ್ದರು. ಆದರೆ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ತೊಂದರೆಗೆ (Problem) ಸಿಲುಕಿಕೊಂಡಿದ್ದಾರೆ.


ಆದರೆ ಈಗ ಇದೇ ವಿದ್ಯಾರ್ಥಿಗಳಿಗೆ ಗಡಿಪಾರು ಪತ್ರ ನೀಡಲಾಗಿದೆ. ಒಟ್ಟು 700 ವಿದ್ಯಾರ್ಥಿಗಳನ್ನು ಗಡಿಪಾಡು ಮಾಡಲಾಗಿದೆ. ಈ ನೋಟಿಸ್​ ಜಾರಿಯಾಗುತ್ತಿದ್ದಂತೆ ಎಲ್ಲರಿಗೂ ಶಾಕ್​ ಆಗಿದೆ. ಇವರು ಇತ್ತೀಚೆಗೆ ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿಯಿಂದ (CBSA) ಗಡೀಪಾರು ಪತ್ರಗಳನ್ನು ಸ್ವೀಕರಿಸಿದ್ದಾರೆ.


700 ವಿದ್ಯಾರ್ಥಿಗಳು ಮೋಸದ ಬಲೆಗೆ


ಮಾಧ್ಯಮ ವರದಿಗಳ ಪ್ರಕಾರ 700 ವಿದ್ಯಾರ್ಥಿಗಳು ಬ್ರಿಜೇಶ್ ಮಿಶ್ರಾ ನೇತೃತ್ವದ ಶಿಕ್ಷಣ ವಲಸೆ ಸೇವೆಗಳ ಮೂಲಕ ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದರು ಆ ವಿದ್ಯಾರ್ಥಿಗಳು ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಹಂಬರ್ ಕಾಲೇಜಿನ ಪ್ರವೇಶ ಶುಲ್ಕ ಸೇರಿದಂತೆ ಎಲ್ಲಾ ವೆಚ್ಚಗಳಿಗಾಗಿ ಪ್ರತಿ ವಿದ್ಯಾರ್ಥಿಗೆ 16 ಲಕ್ಷ ರೂ. ಪಡೆದಿದ್ದಾರೆ. ವಿಮಾನ ಟಿಕೆಟ್‌ಗಳು ಮತ್ತು ಭದ್ರತಾ ಠೇವಣಿಗಳನ್ನು ಹೊರತುಪಡಿಸಿ ಇಷ್ಟು ಹಣ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Udupi: ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ, ಶಿಕ್ಷಣ ಇಲಾಖೆಯ ಸೂಚನೆ ಹೀಗಿದೆ


ಈ ವಿದ್ಯಾರ್ಥಿಗಳು 2018-19 ರಲ್ಲಿ ಅಧ್ಯಯನದ ಆಧಾರದ ಮೇಲೆ ಕೆನಡಾಕ್ಕೆ ಹೋಗಿದ್ದರು. ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಶಾಶ್ವತ ನಿವಾಸಕ್ಕೆ (PR) ಅರ್ಜಿ ಸಲ್ಲಿಸಿದಾಗ ವಂಚನೆ ಬೆಳಕಿಗೆ ಬಂದಿದ್ದು, ಇದಕ್ಕಾಗಿ 'ಪ್ರವೇಶ ಪತ್ರ'ಗಳು ಪರಿಶೀಲನೆಗೆ ಒಳಪಟ್ಟಿವೆ ಅಂದರೆ, CBSA ವಿದ್ಯಾರ್ಥಿಗಳಿಗೆ ವೀಸಾಗಳನ್ನು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿದೆ.


ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಈಗಾಗಲೇ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ, ಕೆಲಸದ ಪರವಾನಗಿಯನ್ನು ಪಡೆದಿದ್ದಾರೆ ಮತ್ತು ಕೆಲಸದ ಅನುಭವವನ್ನೂ ಪಡೆದಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. PR ಗೆ ಅರ್ಜಿ ಸಲ್ಲಿಸಿದಾಗ ಮಾತ್ರ ಅವರು ತೊಂದರೆಗೆ ಸಿಲುಕಿರುವುದು ಬೆಳಕಿಗೆ ಬಂದಿದೆ.




ಕೆನಡಾಕ್ಕೆ ಹೆಚ್ಚಿನ ಸಂಖ್ಯೆಯ ಅರ್ಜಿದಾರರ ಪರಿಣಾಮವಾಗಿ ಹೀಗಾಗಿದೆ


ಈ ಶಿಕ್ಷಣ ವಂಚನೆಯು ಕೆನಡಾದಲ್ಲಿ ಮೊದಲ ಬಾರಿಗೆ ಮುಂಚೂಣಿಗೆ ಬಂದ ವಿಷಯವಾಗಿದೆ. ಕೆನಡಾಕ್ಕೆ ಹೆಚ್ಚಿನ ಸಂಖ್ಯೆಯ ಅರ್ಜಿದಾರರ ಪರಿಣಾಮವಾಗಿ ಇಂತಹ ದೊಡ್ಡ ವಂಚನೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ಕೆನಡಾಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿರುವ ಜಲಂಧರ್ ಮೂಲದ ಸಮಾಲೋಚಕರೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಬಗ್ಗೆ ತಿಳಿಸಿದ್ದಾರೆ. ಇಂತಹ ವಂಚನೆಗಳಲ್ಲಿ ಕಾಲೇಜುಗಳ ನಕಲಿ ಆಫರ್ ಲೆಟರ್‌ಗಳನ್ನು ಪಡೆಯುವುದರಿಂದ ಹಿಡಿದು ವೀಸಾ ಪಡೆಯಲು ವಿದ್ಯಾರ್ಥಿಗಳಿಗೆ ನಕಲಿ ಶುಲ್ಕ ಪಾವತಿ ರಶೀದಿಗಳನ್ನು ಒದಗಿಸುವವರೆಗೆ ಅನೇಕ ಅಂಶಗಳು ಒಳಗೊಂಡಿವೆ . ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿದ ನಂತರವೇ ವೀಸಾಗಳನ್ನು ನೀಡಲಾಗುತ್ತದೆ.


ಬೇರೆ ಕಾಲೇಜುಗಳಿಗೆ ಸ್ಥಳಾಂತರಿಸಲಾಗಿದೆ


ಹೆಚ್ಚಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಸೆಮಿಸ್ಟರ್​ ಮಧ್ಯದಲ್ಲಿ ಬೇರೆ ಕಾಲೇಜಿಗೆ ಹೋಗಿ ಎಂಬ ಸೂಚನೆ ನೀಡಲಾಗಿತ್ತು ಎಂಬ ವಿಷಯ ಬೆಳಕಗೆ ಬಂದಿದೆ. ಹೀಗೆ ಕಾಲೇಜ್​ ಬದಲಿಸಿದ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದೆ. ಏಜೆಂಟುಗಳು ಯಾವುದೇ ಅರ್ಜಿಗೂ ಸಹಿ ಹಾಕದ ಕಾರಣ ಈ ವಿಚಾರದಿಂದ ಬಚಾವ್​ ಆಗಿದ್ದಾರೆ. ಮತ್ತೆ ಎಲ್ಲರೂ ಕೆನಡಾ ಬಿಟ್ಟು ಭಾರತಕ್ಕೆ ಮರಳೂವಂತಾಗಿದೆ.

First published: