• ಹೋಂ
  • »
  • ನ್ಯೂಸ್
  • »
  • Jobs
  • »
  • NAAC Colleges: ದೇಶಾದ್ಯಂತ ಈ 695 ಕಾಲೇಜುಗಳಿಗೆ ನ್ಯಾಕ್​ ಮಾನ್ಯತೆಯೇ ಇಲ್ಲ!

NAAC Colleges: ದೇಶಾದ್ಯಂತ ಈ 695 ಕಾಲೇಜುಗಳಿಗೆ ನ್ಯಾಕ್​ ಮಾನ್ಯತೆಯೇ ಇಲ್ಲ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಅಥವಾ ಇತರ ಮಾನ್ಯತೆ ಪಡೆದ ಸಂಸ್ಥೆಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕನಿಷ್ಠ ಶೈಕ್ಷಣಿಕ ಸೌಲಭ್ಯಗಳಿಗಾಗಿ ಪರಿಶೀಲಿಸುತ್ತದೆ. ಶೈಕ್ಷಣಿಕ ಅರ್ಹತೆ ಮತ್ತು ಅಗತ್ಯತೆಗಳನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದೆಯೇ? ಇಲ್ಲವೇ? ಎಂಬುದನ್ನು ಕಾಲೇಜುಗಳಿಗೆ ತೆರಳಿ ಪರಿಶೀಲನೆ ಮಾಡುತ್ತದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

NAAC ಮಾನ್ಯತೆ ಪಡೆದ ಶಾಲೆಗಳು (School) ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ದೇಶದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಹಕ್ಕಿದೆ. ಅದು ಪ್ರಾಥಮಿಕ ಶಿಕ್ಷಣ (Education) ಅಥವಾ ಉನ್ನತ ಶಿಕ್ಷಣವಾಗಿರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು NEP ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ಅನ್ನು ತರಲಾಗಿದೆ. ದೇಶದ 650 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 34 ಸಾವಿರಕ್ಕೂ ಹೆಚ್ಚು ಕಾಲೇಜುಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಮಾನ್ಯತೆ ಇಲ್ಲದೆ ನಡೆಯುತ್ತಿವೆ ಎಂದು ವರದಿಯಾಗಿದೆ.


ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಕೆಲಸವು ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಸಹಾಯ ಮಾಡುವುದು ಮತ್ತು ಕಾಲೇಜುಗಳ ಗುಣಮಟ್ಟವನ್ನು ಪರೀಕ್ಷಿಸುವುದು ಮತ್ತು ರೇಟಿಂಗ್ ನೀಡುವುದು. ಆದರೆ ದೇಶದಾದ್ಯಂತ ಸುಮಾರು 695 ವಿಶ್ವವಿದ್ಯಾಲಯಗಳು ಮತ್ತು ಸುಮಾರು 34,734 ಕಾಲೇಜುಗಳು ನ್ಯಾಕ್​ ಮಾನ್ಯತೆ ಇಲ್ಲದೆ ನಡೆಯುತ್ತಿವೆ.


ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಲೋಕಸಭೆಯಲ್ಲಿ ಕೇಳಿದ  ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯುಜಿಸಿಯಿಂದ ಬಂದಿರುವ ಮಾಹಿತಿಯ ಪ್ರಕಾರ 1,113 ವಿಶ್ವವಿದ್ಯಾಲಯಗಳು ಮತ್ತು 43,796 ಕಾಲೇಜುಗಳು, 418 ವಿಶ್ವವಿದ್ಯಾಲಯಗಳು ಮತ್ತು 9,062 ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿವೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಹೇಳಿದ್ದಾರೆ.


ಇದನ್ನೂ ಓದಿ: Smriti Mandhana Education: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಓದಿದ್ದೇನು? ಇಲ್ಲಿದೆ ವಿವರ


ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಹೇಳಿರುವ ಪ್ರಕಾರ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆ ವ್ಯವಸ್ಥೆಯಡಿ ತರಲು ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆಗಾಗಿ ಶುಲ್ಕವನ್ನು ಕಡಿಮೆ ಮಾಡಿದೆ ಆದರೂ ಇಷ್ಟೊಂದು ಶಾಲೆಗಳಿಗೆ ಮಾನ್ಯತೆಯೇ ಇಲ್ಲ.


NAAC ಎಂದರೇನು?


ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಅಥವಾ ಇತರ ಮಾನ್ಯತೆ ಪಡೆದ ಸಂಸ್ಥೆಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕನಿಷ್ಠ ಶೈಕ್ಷಣಿಕ ಸೌಲಭ್ಯಗಳಿಗಾಗಿ ಪರಿಶೀಲಿಸುತ್ತದೆ. ಶೈಕ್ಷಣಿಕ ಅರ್ಹತೆ ಮತ್ತು ಅಗತ್ಯತೆಗಳನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದೆಯೇ? ಇಲ್ಲವೇ? ಎಂಬುದನ್ನು ಕಾಲೇಜುಗಳಿಗೆ ತೆರಳಿ ಪರಿಶೀಲನೆ ಮಾಡುತ್ತದೆ. ಅದರ ಆಧಾರದ ಮೇಲೆ ಅವರಿಗೆ ದರ್ಜೆಯನ್ನು ನಿಗದಿಪಡಿಸುತ್ತದೆ.




NAAC ನ ಎಲ್ಲಾ ಮಾನದಂಡಗಳನ್ನು ಅನುಸರಿಸಿ


ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಅಥವಾ ಯಾವುದೇ ಇತರ ಶಿಕ್ಷಣ ಸಂಸ್ಥೆಗಳು NAAC ನ ಎಲ್ಲಾ ಮಾನದಂಡಗಳನ್ನು ಅನುಸರಿಸಿದ ನಂತರ ಒಂದಿಷ್ಟು ದಾಖಲೆಗಳನ್ನು ನೀಡಲಾಗುತ್ತದೆ. ಇದಾದ ನಂತರ NAAC ತಂಡವು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಈ ಸಮಯದಲ್ಲಿ ಅವರು ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿನ ಶೈಕ್ಷಣಿಕ ಸೌಲಭ್ಯ, ಮೂಲಸೌಕರ್ಯ, ಕಾಲೇಜು ಪರಿಸರದಂತಹ ವಿವಿಧ ಅಂಶಗಳನ್ನು ಪರಿಶೀಲಿಸುತ್ತಾರೆ. ಇದರ ನಂತರ ತಂಡವು ತನ್ನ ವರದಿಯನ್ನು ಸಲ್ಲಿಸುವ ಆಧಾರದ ಮೇಲೆ CGPA ನೀಡಲಾಗುತ್ತದೆ.


NAAC ನ ಅಧಿಕೃತ ವೆಬ್‌ಸೈಟ್ ಲಿಂಕ್​


ನಂತರ ಸಂಸ್ಥೆಗೆ ಗ್ರೇಡ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಾವು ಪ್ರವೇಶ ಪಡೆಯುತ್ತಿರುವ ಕಾಲೇಜು ಅಥವಾ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ಗುರುತಿಸಲ್ಪಟ್ಟಿದೆಯೇ ಎಂದು NAAC ನ ಅಧಿಕೃತ ವೆಬ್‌ಸೈಟ್ naac.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ಹಲವಾರು ಕಾಲೇಜುಗಳಿಗೆ ವಿದ್ಯಾರ್ಥಿಗಳು ಅಡ್ಮಿಷನ್​ ಪಡೆಯುವಾಗ ಮೊದಲು ನ್ಯಾಕ್​ ನಿಂದ ಈ ಕಾಲೇಜು ಮಾನ್ಯತೆ ಪಡೆದಿದೆಯಾ? ಹಾಗಾದರೆ ಯಾವ ಗ್ರೇಡ್​​ ಪಡೆದಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕವೇ ಅಡ್ಮಿಷನ್​ ಮಾಡಿಸುತ್ತಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು