• Home
  • »
  • News
  • »
  • jobs
  • »
  • Education: ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತಿಮ ಸುತ್ತಿನ ನಂತರ ಖಾಲಿ ಉಳಿದಿವೆಯಂತೆ 6000 ಸೀಟುಗಳು!

Education: ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತಿಮ ಸುತ್ತಿನ ನಂತರ ಖಾಲಿ ಉಳಿದಿವೆಯಂತೆ 6000 ಸೀಟುಗಳು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶತಮಾನೋತ್ಸವವನ್ನು ಆಚರಿಸುತ್ತಿರುವ ದೇಶದ ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರತಿ ವರ್ಷ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗಾಗಿ ಪ್ರವೇಶ ಪಡೆಯಲು ತುಂಬಾನೇ ಸೆಣಸಾಟ ನಡೆಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತಿಮ ಸುತ್ತಿನ ನಂತರ ಖಾಲಿ ಉಳಿದಿರುವುದು 6000 ಸೀಟುಗಳು

ಮುಂದೆ ಓದಿ ...
  • Share this:

    ಶತಮಾನೋತ್ಸವವನ್ನು ಆಚರಿಸುತ್ತಿರುವ ದೇಶದ ಪ್ರತಿಷ್ಠಿತ ದೆಹಲಿ (Delhi)  ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು (Students) ಪ್ರತಿ ವರ್ಷ ಪದವಿ (Degree) ಮತ್ತು ಸ್ನಾತಕೋತ್ತರ  ಪದವಿ ಕೋರ್ಸ್ ಗಳಿಗಾಗಿ (Course) ಪ್ರವೇಶ ಪಡೆಯಲು ತುಂಬಾನೇ ಸೆಣಸಾಟ ನಡೆಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. 1922 ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯ ಈ ವರ್ಷ 100 ವರ್ಷಗಳನ್ನು (Year) ಪೂರೈಸಿದೆ ಅಂತ ಹೇಳಬಹುದು. ಈ ವಿಶ್ವವಿದ್ಯಾಲಯವು ಕಳೆದ ಐದು ದಶಕಗಳಿಂದ ದೇಶದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳೆರಡಕ್ಕೂ ಶೈಕ್ಷಣಿಕ ಕೇಂದ್ರವಾಗಿದೆ.


    ಕೆಲವು ವರ್ಷಗಳ ಹಿಂದಿನವರೆಗೆ ಅರ್ಹತಾ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಅಂಕಗಳನ್ನು ಪಡೆದರೂ ಸಹ ಈ ಪ್ರತಿಷ್ಠಿತ ಕ್ಯಾಂಪಸ್ ನಲ್ಲಿ ಸೀಟ್ ಸಿಗ್ತಾ ಇಲ್ಲ ಅಂತ ಅನೇಕ ವಿದ್ಯಾರ್ಥಿಗಳು ಹೇಳುವುದನ್ನು ನಾವು ಕೇಳಿರುತ್ತೇವೆ.


    ಡಿಯು ನಲ್ಲಿ ಇನ್ನೂ 6000 ಸೀಟುಗಳು ಖಾಲಿ ಇವೆಯಂತೆ!


    ಆದರೆ ಈಗ ಪದವಿ ಕೋರ್ಸ್ ಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಇನ್ನೂ 6000 ಸೀಟುಗಳನ್ನು ಖಾಲಿ ಇದೆ ಎಂದು ಅದು ಉಲ್ಲೇಖಿಸಿದೆ. ಇದರರ್ಥ ವಿಶ್ವವಿದ್ಯಾಲಯವು ತನಗೆ ಹಂಚಿಕೆ ಮಾಡಿದ ಸುಮಾರು 10 ಪ್ರತಿಶತದಷ್ಟು ಸೀಟುಗಳನ್ನು ಸಹ ಭರ್ತಿ ಮಾಡಲು ಈ ಬಾರಿ ಅಸಮರ್ಥವಾಗಿದೆ ಅಂತ ಅರ್ಥವಾಗುತ್ತದೆ.


    2022-23ರ ಶೈಕ್ಷಣಿಕ ಅವಧಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಯು ಡಿಸೆಂಬರ್ 31 ರಂದು ಕೊನೆಗೊಳ್ಳಲಿದೆ ಎಂದು ವಿಶ್ವವಿದ್ಯಾಲಯ ಈಗಾಗಲೇ ಘೋಷಿಸಿದೆ.


    ಪದವಿ ಕೋರ್ಸ್ ಗಳ ಪ್ರವೇಶದ ಕೊನೆಯ ಸುತ್ತಿನಲ್ಲಿ ದೆಹಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಕೇವಲ 3,500 ಸೀಟುಗಳನ್ನು ಮಾತ್ರ ಹಂಚಿಕೆ ಮಾಡಿದೆ ಮತ್ತು ಕಾಲೇಜುಗಳಲ್ಲಿ ಇನ್ನೂ ಸುಮಾರು 6,000 ಸೀಟುಗಳು ಖಾಲಿ ಇವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.


    ಇಲ್ಲಿಯವರೆಗೆ, ಒಟ್ಟು 70,000 ಪದವಿ ಸೀಟುಗಳ ಪೈಕಿ ಸುಮಾರು 64,000 ಸೀಟುಗಳು ಭರ್ತಿಯಾಗಿವೆ ಎಂದು ಅವರು ಹೇಳಿದರು. ಪ್ರವೇಶ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.


    ಸೀಟುಗಳ ಹಂಚಿಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ..


    ಸೀಟುಗಳು ಹಂಚಿಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಯಿತು. ಅಭ್ಯರ್ಥಿಗಳು ಶುಕ್ರವಾರದವರೆಗೆ ಹಂಚಿಕೆಯಾದ ಸೀಟುಗಳನ್ನು ಸ್ವೀಕರಿಸಬಹುದು. ಕಾಲೇಜುಗಳ ಎಲ್ಲಾ 70,000 ಸೀಟುಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಭರ್ತಿ ಮಾಡಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    6000 seats left vacant after final round in Delhi University
    ಸಾಂಕೇತಿಕ ಚಿತ್ರ


    "ಕೊನೆಯ ಸ್ಪಾಟ್ ಪ್ರವೇಶ ಸುತ್ತಿನಲ್ಲಿ, ವಿಶ್ವವಿದ್ಯಾಲಯವು ಸುಮಾರು 3,500 ಸೀಟುಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದೆ. ನಾವು ಡಿಸೆಂಬರ್ 31 ರೊಳಗೆ ಶೈಕ್ಷಣಿಕ ಅಧಿವೇಶನದ ಪ್ರವೇಶ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುತ್ತೇವೆ" ಎಂದು ಡಿಯು ಅಡ್ಮಿಷನ್ ವಿಭಾಗದ ಡೀನ್ ಆದ ಹನೀತ್ ಗಾಂಧಿ ಹೇಳಿದ್ದಾರೆ.


    ಇನ್ನು ಯಾವುದಾದರೂ ಹೆಚ್ಚುವರಿ ಸುತ್ತುಗಳನ್ನು ಘೋಷಿಸಲಾಗುತ್ತದೆಯೇ ಎಂದು ಕೇಳಿದಾಗ ಗಾಂಧಿಯವರು “ಇಲ್ಲ, ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಇದು ಕೊನೆಯ ಸುತ್ತು" ಎಂದು ಹೇಳಿದರು.


    ಇದರರ್ಥ 3,500 ಅಭ್ಯರ್ಥಿಗಳು ನಿಗದಿಪಡಿಸಿದ ಸೀಟುಗಳನ್ನು ಒಪ್ಪಿಕೊಂಡರೂ, ಕಾಲೇಜುಗಳಲ್ಲಿ ಇನ್ನೂ 2,500 ಸೀಟುಗಳು ಖಾಲಿ ಉಳಿಯುತ್ತವೆ.


    ಡಿಯು ನಲ್ಲಿ ಹೇಗೆ ನಡೆಯುತ್ತೇ ಈ ಪ್ರವೇಶ ಪ್ರಕ್ರಿಯೆ?


    ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲನೆಯದು ಅರ್ಜಿ ಪ್ರಕ್ರಿಯೆ, ಎರಡನೆಯದು ಆದ್ಯತೆಯ ಮೇರೆಗೆ ಸೀಟು ಭರ್ತಿ ಮತ್ತು ಕೊನೆಯದಾಗಿ ಸೀಟು ಹಂಚಿಕೆ.


    ಈ ವರ್ಷ, ವಿಶ್ವವಿದ್ಯಾಲಯವು ತಮ್ಮ 12ನೇ ತರಗತಿಯ ಅಂಕಗಳ ಆಧಾರದ ಬದಲಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುತ್ತಿದೆ.


    ಆಫ್-ಕ್ಯಾಂಪಸ್ ಕಾಲೇಜುಗಳಲ್ಲಿ ಸೀಟುಗಳು ಹೆಚ್ಚಾಗಿ ಖಾಲಿ ಇವೆ. ಈ ಕಾಲೇಜುಗಳಲ್ಲಿ ಹೆಚ್ಚಿನವು ಈ ಹಿಂದೆ ಸೀಟುಗಳನ್ನು ಭರ್ತಿ ಮಾಡಲು ಹೆಣಗಾಡಿದವುಗಳಾಗಿವೆ.


    6000 seats left vacant after final round in Delhi University
    ಸಾಂಕೇತಿಕ ಚಿತ್ರ


    ಪ್ರವೇಶಾತಿ ಪ್ರಾರಂಭದಲ್ಲಿನ ವಿಳಂಬವೇ ಇದಕ್ಕೆ ಕಾರಣವೇ ಎಂದು ಕೇಳಿದಾಗ, ಈ ವರ್ಷ ಪ್ರವೇಶವನ್ನು ಹಿಂತೆಗೆದುಕೊಳ್ಳುವುದು ಕಡಿಮೆಯಾಗಿದೆ ಎಂದು ಅಧಿಕಾರಿ ಹೇಳಿದರು.


    "ಪ್ರವೇಶ ಪ್ರಕ್ರಿಯೆ ತಡವಾಗಿ ಪ್ರಾರಂಭವಾಗಿದ್ದರಿಂದ, ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ನಿಜವಾಗಿಯೂ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದರು" ಎಂದು ಅವರು ಹೇಳಿದರು.


    ಇದನ್ನೂ ಓದಿ: Covid School Guidelines: ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ, ರುಪ್ಸಾ ಮಹತ್ವದ ನಿರ್ಧಾರ


    ಎಲ್ಲಾ ಸೀಟುಗಳನ್ನು ಭರ್ತಿ ಮಾಡುವ ಸಲುವಾಗಿ, ವಿಶ್ವವಿದ್ಯಾಲಯವು ಈ ವರ್ಷದ ಮೊದಲ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಪದವಿ ಕೋರ್ಸ್ ಗಳಲ್ಲಿ ಗರಿಷ್ಠ ಸೀಟುಗಳನ್ನು ಭರ್ತಿ ಮಾಡಲು ಕಾಯ್ದಿರಿಸದ ಮತ್ತು ಒಬಿಸಿ ವರ್ಗಗಳ ಅಡಿಯಲ್ಲಿ ಶೇಕಡಾ 20 ರಷ್ಟು ಮತ್ತು ಎಸ್ಸಿ, ಎಸ್ಟಿ ವರ್ಗದಲ್ಲಿ ಶೇಕಡಾ 30 ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ.

    Published by:Gowtham K
    First published: