• ಹೋಂ
 • »
 • ನ್ಯೂಸ್
 • »
 • Jobs
 • »
 • Mumbai: ವಿದ್ಯಾರ್ಥಿಗಳಿಗೆ ಶಿಕ್ಷಕ ಕೊಟ್ಟ ಟಾರ್ಚರ್​ ನೋಡಿ; ಪಾಪ ಈ ಮಕ್ಕಳು

Mumbai: ವಿದ್ಯಾರ್ಥಿಗಳಿಗೆ ಶಿಕ್ಷಕ ಕೊಟ್ಟ ಟಾರ್ಚರ್​ ನೋಡಿ; ಪಾಪ ಈ ಮಕ್ಕಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪಾಲಕರ ಬಳಿ ಹಣ ಕೇಳಲು ನಾನು ಮರೆಯುವುದಿಲ್ಲ ಎಂದು 30 ಬಾರಿ ಬರೆಸಿದ್ದಾರೆ. 300 ರೂಪಾಯಿಗಳನ್ನು ತನ್ನಿ ಎಂದು ಬರೆಸಲಾಗಿದೆ. ಇದನ್ನು ನೀಡಲು 20 ನೆ ತಾರೀಖು ಕೊನೆ ದಿನವಾಗಿದೆ. ಯಾವುದೋ ಷರತ್ತಿನ ಮೇರೆಗೆ ನಮ್ಮ ಮಕ್ಕಳ ಬಳಿ ಈ ರೀತಿ ಕೆಲಸ ಮಾಡಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಮಗ ಶಾಲೆಗೆ ಹೋಗಲು ಒಪ್ಪಲಿಲ್ಲ ಎಂದು ವಿದ್ಯಾರ್ಥಿಯೊಬ್ಬನ ಪಾಲಕರು ಹೇಳಿದ್ದಾರೆ.

ಮುಂದೆ ಓದಿ ...
 • Share this:
 • published by :

ಮುಂಬೈ: ಥಾಣೆಯ ಗೋಧ್‌ಬಂದರ್ ರಸ್ತೆಯಲ್ಲಿರುವ (Road) ನ್ಯೂ ಹಾರಿಜಾನ್ ಸ್ಕಾಲರ್ಸ್ ಸ್ಕೂಲ್, ಸುಮಾರು ಐದರಿಂದ ಎಂಟು ವಿದ್ಯಾರ್ಥಿಗಳ ಪೋಷಕರಿಗೆ ಡೈರಿ ಮತ್ತು ಗುರುತಿನ ಚೀಟಿಗಳ ಶುಲ್ಕವನ್ನು ಪಾವತಿಸಲು ಸಮೀಪಿಸುತ್ತಿರುವ ಗಡುವಿನ ಬಗ್ಗೆ ನೆನಪಿಸಲು ವಿದ್ಯಾರ್ಥಿಗಳನ್ನು (Students) ಬೇರೆ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗಳ ಕೈಯಲ್ಲೂ ಹಲವು 30 ಬಾರಿ ಒಂದೇ ವಿಷಯವನ್ನು ಬರೆಸಿ ಪಾಲಕರಿಗೆ ನೆನಪಿಸುವಂತೆ ಸೂಚಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ (Information) ಇಲ್ಲಿದೆ. 


ಪಾಲಕರ ಬಳಿ ಹಣ ಕೇಳಲು ನಾನು ಮರೆಯುವುದಿಲ್ಲ ಎಂದು 30 ಬಾರಿ ಬರೆಸಿದ್ದಾರೆ. 300 ರೂಪಾಯಿಗಳನ್ನು ತನ್ನಿ ಎಂದು ಬರೆಸಲಾಗಿದೆ. ಇದನ್ನು ನೀಡಲು 20 ನೆ ತಾರೀಖು ಕೊನೆ ದಿನವಾಗಿದೆ. ಯಾವುದೋ ಷರತ್ತಿನ ಮೇರೆಗೆ ನಮ್ಮ ಮಕ್ಕಳ ಬಳಿ ಈ ರೀತಿ ಕೆಲಸ ಮಾಡಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಮಗ ಶಾಲೆಗೆ ಹೋಗಲು ಒಪ್ಪಲಿಲ್ಲ ಎಂದು ವಿದ್ಯಾರ್ಥಿಯೊಬ್ಬನ ಪಾಲಕರು ಹೇಳಿದ್ದಾರೆ.


ಶಿಕ್ಷೆಯನ್ನು ಎದುರಿಸಿದ ಇನ್ನೊಬ್ಬ ವಿದ್ಯಾರ್ಥಿ ಈ ವಾಕ್ಯದ ಬದಲು ಮಕ್ಕಳಿಗೆ ಪಠ್ಯ ಪುಸ್ತಕದಿಂದ ಪ್ಯಾರಾಗ್ರಾಫ್ ಅನ್ನು ಐದು ಬಾರಿ ಬರೆಯುವಂತೆ ಮಾಡಬಹುದಿತ್ತು ಎಂಬುದಾಗಿ ಹೇಳಿದ್ದಾನೆ.   ಪೋಷಕರು ಡೈರಿ ಮತ್ತು ಗುರುತಿನ ಚೀಟಿ ಶುಲ್ಕವನ್ನು ಪಾವತಿಸದಿದ್ದಕ್ಕಾಗಿ ಶಿಕ್ಷೆಯಾಗಿ 30 ಬಾರಿ ವಾಕ್ಯವನ್ನು ಬರೆಯಲು ವಿದ್ಯಾರ್ಥಿಗಳಿಗೆ ತಿಳಿಸಿ ಮುಂಬೈನ ಶಾಲೆಯೊಂದು ಟೀಕೆಗಳನ್ನು ಎದುರಿಸಿತು.


ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನನ್ನ ಮಗ ಅವಮಾನಕ್ಕೊಳಗಾಗಿದ್ದಾನೆ. ಘಟನೆಯಿಂದ ಉಂಟಾದ ಅವರ ಭಾವನಾತ್ಮಕ ಸಂಕಟವನ್ನು ಯಾರು ಪಾವತಿಸುತ್ತಾರೆ? ಎಂದು ಪಾಲಕರೊಬ್ಬರು ಕೇಳಿದ್ದಾರೆ.


ಇದನ್ನೂ ಓದಿ: Compulsory Maths: 18 ವರ್ಷ ವಯಸ್ಸಿನ ಎಲ್ಲಾ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಗಣಿತ ಕಡ್ಡಾಯ: ರಿಷಿ ಸುನಕ್


ಈ ರೀತಿ ಶಿಕ್ಷಕರು ನೀಡಿದ ಈ ಶಿಕ್ಷೆಯನ್ನು ಒಬ್ಬ ವಿದ್ಯಾರ್ಥಿ ಬರೆಯಲು ನಿರಾಕರಿಸಿದಾಗ, “ಶಿಕ್ಷಕರು ಅವಳನ್ನು ತರಗತಿಯ ಮೂಲೆಗೆ ಕಳುಹಿಸಿ ಅಲ್ಲಿ ನಿಂತುಕೊಂಡು ಬರೆಯಲು ಹೇಳಿದರು” ಎಂದು ಇನ್ನೊಬ್ಬ ಪೋಷಕರು ಹೇಳಿದ್ದಾರೆ.


ಮಂಗಳವಾರ, ಪೋಷಕರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಘಟನೆಯ ಬಗ್ಗೆ ಆಡಳಿತ ಮಂಡಳಿಗೆ ವರದಿ ಮಾಡಿದ್ದಾರೆ, ನಂತರ ಉಪ ಪ್ರಾಂಶುಪಾಲರು ಕರೆ ಮಾಡಿ ಅವರೊಂದಿಗೆ ಮಾತಿಗೆ ಮಾತು ಬೆಳೆಸಿದ್ದಾರೆ. ಪೋಷಕರು ಹೇಳಿರುವ ಪ್ರಕಾರ  ಅವರು ಶಾಲೆಗೆ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ ಹಲವು ಬಾರಿ ಶಿಕ್ಷಕರನ್ನು ಭೇಟಿಯಾಗಲು ಬಯಸಿದ್ದೆವು ಆದರೆ ನಮ್ಮನ್ನು ತಡೆದಿದ್ದರು ಎಂದು ಹೇಳಿದ್ದಾರೆ.
ಶಾಲೆಯೊಳಗೆ ಪ್ರವೇಶಿಸಲು ಸಹ ನಮಗೆ ಅವಕಾಶ ನೀಡಲಿಲ್ಲ. ಆದರೆ, ಈಗ ಉಪ ಪ್ರಾಂಶುಪಾಲರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಮ್ಮ ಮಕ್ಕಳು ಎದುರಿಸಿದ ಅವಮಾನಕ್ಕೆ ಉತ್ತರ ನೀಡಿಲ್ಲ. ಶುಲ್ಕದ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸದಂತೆ ಈ ಹಿಂದೆ ತಮ್ಮ ಗುಂಪು ಆಡಳಿತ ಮಂಡಳಿಗೆ ವಿನಂತಿಸಿದೆ ಎಂದು ಪೋಷಕರು ತಿಳಿಸಿದ್ದಾರೆ.


ಹೀಗೂ ಒಂದು ಘಟನೆ ಜರುಗಿತ್ತು


ಶುಲ್ಕ ಪಾವತಿಸದ 12 ವರ್ಷದ ಬಾಲಕನನ್ನು ತರಗತಿಯ ಹೊರಗೆ ಕುಳಿತುಕೊಳ್ಳುವಂತೆ ಮಾಡಿದ ಆರೋಪದ ಮೇಲೆ ಶಿಕ್ಷಕರ ವಿರುದ್ಧ ಬಾಲಕನ ತಾಯಿ ಪೊಲೀಸ್  ಕಂಪ್ಲೇಂಟ್​ ನೀಡಿದ್ದಾರೆ. ಎಷ್ಟು ದಿನದಿಂದ ಈ ವಿದ್ಯಾರ್ಥಿಯನ್ನು ಹೊರಗೆ ಕೂರಿಸಲಾಗಿತ್ತು ಎಂದು ನೀವು ಕೇಳಿದರೆ ನಿಮಗೂ ಖಂಡಿತ ಬೇಸರ ಆಗುತ್ತೆ. ಒಬ್ಬ ವಿದ್ಯಾರ್ಥಿಯನ್ನು  ಈ ರೀತಿ ಅವಮಾನಿಸುವುದು ನಿಜಕ್ಕೂ ಸರಿಯಲ್ಲ ಎಂದು ನಿಮಗೆ ಅನಿಸಿಯೇ ಅನಿಸುತ್ತೆ. ಇಲ್ಲಿನ ಶಾಲೆಯೊಂದರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಹಾಗಾದರೆ ಆಗಿದ್ದೇನು ಎಂಬ ಮಾಹಿತಿಗಾಗಿ ಇದನ್ನು ಸಂಪೂರ್ಣವಾಗಿ ಓದಿ.

top videos


  ಬಾಲಕನ ತಾಯಿ ಮಂಗಳವಾರ ಉಪನಗರ ವಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಾಲೆಯ ಅಧಿಕಾರಿಗಳು ತನ್ನ ಇಬ್ಬರು ಪುತ್ರರು, 8 ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಮತ್ತು ಅವನ ಕಿರಿಯ ಸಹೋದರನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವು ಹಣಕಾಸಿನ ಸಮಸ್ಯೆಗಳಿಂದ ಕುಟುಂಬವು ತನ್ನ 12 ವರ್ಷದ ಮಗನ ವಾರ್ಷಿಕ ಶುಲ್ಕ 7,500 ರೂ.ಗಳನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

  First published: