ಪೂರಕ ಪರೀಕ್ಷೆಗಳನ್ನು (Supplementary Exam) ಬರೆಯುವುದು ಎಂದರೆ ಅದನ್ನೊಂದು ಅವಮಾನ ಎಂಬುದಾಗಿ ಪರಿಗಣಿಸದಿರಿ. ಪರೀಕ್ಷೆಗಳಲ್ಲಿ ವಿಫಲತೆಯನ್ನು ಹೊಂದಿದಾಗ ಪೂರಕ ಪರೀಕ್ಷೆಗಳು ಪರೀಕ್ಷಾರ್ಥಿಯ ಶಕ್ತಿಯನ್ನು ಹೊರಹಾಕುವಲ್ಲಿ ಸಮರ್ಥ ಅಸ್ತ್ರವಾಗಿ ಸಹಕಾರಿಯಾಗುತ್ತದೆ. ಪೂರಕ ಪರೀಕ್ಷೆಗಳಲ್ಲಿ ಹಾಜರಾಗುವ ಮೂಲಕ ಸಾಧಿಸಬೇಕೆಂದುಕೊಂಡಿರುವ ಅಂಕಗಳನ್ನು (Marks) ಗಳಿಸಬಹುದು ಅಂತೆಯೇ ಸಾಧಿಸಲು ಇದು ವಿದ್ಯಾರ್ಥಿಗಳ ಮುಂದಿರುವ ಇನ್ನೊಂದು ವಿಧಾನವಾಗಿದೆ.
ಪೂರಕ ಪರೀಕ್ಷೆಗಳು
ಮೆಟ್ರಿಕ್ ಎಂಬುದು ಕಠಿಣ ವರ್ಷವಾಗಿದೆ. ಫೈನಲ್ ಪರೀಕ್ಷೆಗಳು ಹೆಚ್ಚು ಒತ್ತಡದಿಂದ ಕೂಡಿರುತ್ತವೆ ಹಾಗೂ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಒತ್ತಡವನ್ನೊಡ್ಡುತ್ತದೆ. ಹಾಗಾಗಿ ಶಿಕ್ಷಣ ಇಲಾಖೆ ಪೂರಕ ಪರೀಕ್ಷೆಗಳನ್ನು ಬರೆಯುವ ಅವಕಾಶವನ್ನೊದಗಿಸುತ್ತದೆ.
ಹಾಗಾಗಿ ಪೂರಕ ಪರೀಕ್ಷೆಗಳಲ್ಲಿ ಹಾಜರಾಗುವ ಸಮಯದಲ್ಲಿ ನಾಚಿಕೆ, ಅವಮಾನ, ಬಿಗುಮಾನಗಳೆಲ್ಲವನ್ನೂ ಬದಿಗೊತ್ತಿ ಉತ್ತಮ ಅಂಕ ಪಡೆಯುವಲ್ಲಿ ಸಫಲರಾಗಿ ಹಾಗೂ ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿ. ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಹೇಗೆ ಎಂಬುದರ ಕುರಿತು ಕೆಲವೊಂದು ಸಲಹೆಗಳನ್ನು ಇಂದಿಲ್ಲಿ ನೀಡುತ್ತಿದ್ದು ಅದನ್ನು ಪಾಲಿಸಿದರೆ ಜಯ ಖಂಡಿತ.
ಇದನ್ನೂ ಓದಿ: Karnataka 2nd PUC Supplementary Exam 2023: ಫೇಲ್ ಆದ ವಿದ್ಯಾರ್ಥಿಗಳೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್
ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಲಹೆಗಳು
ಯಾವುದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು ಎಂದರೆ ಚೆನ್ನಾಗಿ ಅಧ್ಯಯನ ನಡೆಸಬೇಕು ಪೂರಕ ಪರೀಕ್ಷೆಯನ್ನು ನಿರ್ದಿಷ್ಟ ದಿನಾಂಕಗಳಲ್ಲಿ ಮಾಡುವ ಕಾರಣ ವೃಥಾ ಕಾಲಹರಣ ಮಾಡದಿರಿ ಇದನ್ನೂ ಕೂಡ ಇತರ ಪರೀಕ್ಷೆಯಂತೆಯೇ ಹೆಚ್ಚಿನ ಅಸ್ಥೆ ಹಾಗೂ ಗಮನಿಟ್ಟು ಓದುವ ಮೂಲಕ ಗಂಭೀರವಾಗಿ ಪರಿಗಣಿಸಿ. ಪಠ್ಯಪ್ರವಚನಗಳನ್ನು ಪರೀಕ್ಷೆಯ ದಿನಗಳಲ್ಲಿ ಕ್ಲಪ್ತ ಸಮಯದಲ್ಲಿ ಮುಗಿಸಿಕೊಳ್ಳಿ.
ತಪ್ಪುಗಳನ್ನು ಗುರುತಿಸಿ
ನಿಮ್ಮ ಪರೀಕ್ಷೆಯನ್ನು ಈಗಾಗಲೇ ನೀವು ಬರೆದಿದ್ದರೆ, ಆ ಪರೀಕ್ಷೆಯಲ್ಲಿ ಯಾವ ತಪ್ಪುಗಳೆನ್ನಸಗಿ ಅನುತ್ತೀರ್ಣರಾದಿರಿ ಎಂಬುದನ್ನು ಪತ್ತೆಹಚ್ಚುವುದಾಗಿದೆ. ಪೂರಕ ಪರೀಕ್ಷೆಯಲ್ಲಿ ಆ ತಪ್ಪುಗಳನ್ನು ಮರುಕಳಿಸುವ ಅವಕಾಶ ಕಡಿಮೆ ಇರುತ್ತದೆ.
ನೀವು ಅನುತ್ತೀರ್ಣರಾದ ಉತ್ತರ ಪತ್ರಿಕೆಯನ್ನು ನೋಡಲು ಸಾಧ್ಯವಾದರೆ ಅದನ್ನೊಮ್ಮೆ ಪರಿಶೀಲಿಸಿ. ಎಲ್ಲಿ ತಪ್ಪು ಮಾಡಿದ್ದೀರಿ ಎಂಬುದನ್ನು ಗಮನಿಸಿ ಹಾಗೂ ಆ ತಪ್ಪುಗಳನ್ನು ಸರಿಪಡಿಸಲು ಪೂರಕ ಪರೀಕ್ಷೆಯನ್ನು ವಿಧಾನವಾಗಿ ಬಳಸಿಕೊಳ್ಳಿ.
ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಿ
ಒಂದೇ ರೀತಿಯ ಕಲಿಕಾ ವಿಧಾನಕ್ಕೆ ಅಂಟಿಕೊಂಡಿದ್ದೀರಾ? ಹಾಗಾದರೆ ಅದನ್ನು ಬದಲಾಯಿಸುವ ಸಮಯ ಬಂದೊದಗಿದೆ ಎಂದರ್ಥವಾಗಿದೆ. ಹೊಸತನವನ್ನು ಪ್ರಯತ್ನಿಸುವ ಸಮಯ ಇದಾಗಿದೆ. ಸಹಪಾಠಿಗಳೊಂದಿಗೆ ಅವರು ಅನುಸರಿಸುವ ಅಧ್ಯಯನ ವಿಧಾನಗಳನ್ನು ಚರ್ಚಿಸಿ ಹಾಗೂ ಅವರ ಸಲಹೆಗಳನ್ನು ಪಡೆದುಕೊಳ್ಳಿ.
ವಿಷಯಗಳನ್ನು ಮನನ ಮಾಡಿಕೊಂಡು ಅಧ್ಯಯನ ನಡೆಸಿ
ಕಲಿಕೆ ಎಂದರೆ ಅರ್ಥಮಾಡಿಕೊಳ್ಳುವುದು ಎಂದಾಗಿದೆ. ಒಮ್ಮೊಮ್ಮೆ ಸಂಪೂರ್ಣ ನಿಮ್ಮ ಶೈಕ್ಷಣಿಕ ಪಠ್ಯ ಪುಸ್ತಕಗಳನ್ನು ಓದಿದರೂ ವಿಷಯಗಳು ಅರ್ಥವಾಗುವುದಿಲ್ಲ. ಹಾಗಾಗಿ ವಿಷಯವನ್ನು ಅರ್ಥಮಾಡಿಕೊಂಡು ಓದಿ. ಇದರಿಂದ ಪೂರಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದಾಗಿದೆ.
ಅಧ್ಯಯನ ಗುಂಪುಗಳನ್ನು ಸೇರಿಕೊಳ್ಳಿ
ಧ್ಯಯನದ ಗುಂಪಿಗೆ ಸೇರುವುದರಿಂದ ಹೊಸ ಅಧ್ಯಯನ ತಂತ್ರಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳುತ್ತೀರಿ ಮತ್ತು ಹೊಸ ದೃಷ್ಟಿಕೋನದಿಂದ ವಿಷಯವನ್ನು ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ದೊರೆಯುತ್ತದೆ. ಗುಂಪಿನಲ್ಲಿ ಅಧ್ಯಯನ ಮಾಡುವುದರಿಂದ ಇನ್ನಷ್ಟು ಹೆಚ್ಚು ಅರ್ಥಮಾಡಿಕೊಂಡು ಕಲಿಯಲು ಸಾಧ್ಯವಾಗುತ್ತದೆ.
ಹಿಂದಿನ ಪ್ರಶ್ನೆ ಪತ್ರಿಕೆಗಳ ನೆರವು ಪಡೆದುಕೊಳ್ಳಿ
ವಿದ್ಯಾರ್ಥಿಗಳು ತಮ್ಮ ಪೂರಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಇರುವ ಉತ್ತಮ ವಿಧಾನವೆಂದರೆ ಹಿಂದಿನ ಪತ್ರಿಕೆಗಳನ್ನು ಅಧ್ಯಯನ ಸಮಯದಲ್ಲಿ ನೆರವಿಗೆ ಪಡೆದುಕೊಳ್ಳುವುದಾಗಿದೆ. ಸಾಧ್ಯವಾದರೆ, ನೀವು ಅಧ್ಯಯನ ಮಾಡುವಾಗ ಹಿಂದಿನ ಪ್ರಶ್ನೆ ಪೇಪರ್‌ಗಳನ್ನು ಬಳಸಲು ಪ್ರಯತ್ನಿಸಿ ಮತ್ತು ಅದಕ್ಕೆ ಉತ್ತರಿಸುವ ಮೂಲಕ ಇನ್ನಷ್ಟು ಅಧ್ಯಯನ ನಡೆಸಿ.
ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ ಎಂಬುದು ನಿಮಗಿಲ್ಲಿ ಅರಿವಾಗುತ್ತದೆ ಮತ್ತು ನಿಮ್ಮನ್ನು ಕೇಳಲಾಗುವ ಪ್ರಶ್ನೆಗಳ ಪ್ರಕಾರಗಳನ್ನು ಗುರುತಿಸಲು ಈ ವಿಧಾನ ಸಹಾಯ ಮಾಡುತ್ತದೆ.
ಪೂರಕ ಪರೀಕ್ಷೆಗೆ ವಿದ್ಯಾರ್ಥಿ ಅರ್ಹತೆ ಹೊಂದಿರುವುದನ್ನು ಪರಿಶೀಲಿಸುವುದು
ಎರಡು ಮೆಟ್ರಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ಫೇಲ್ ಆದರೆ ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗಬಹುದು.
ಪರೀಕ್ಷೆ ಬರೆಯಲು ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಹೊಂದಲು ವೈದ್ಯಕೀಯವಾಗಿ ಅನರ್ಹರಾಗಿದ್ದರೆ ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಾಗಬಹುದು.
ಪರೀಕ್ಷೆಯ ದಿನ ಕುಟುಂಬದಲ್ಲಿ ಏನಾದರೂ ದುರ್ಘಟನೆಗಳು ಸಂಭವಿಸಿದರೆ ವಿದ್ಯಾರ್ಥಿ ಪೂರಕ ಪರೀಕ್ಷೆಗೆ ಹಾಜರಾಗಬಹುದು.
ನೋಂದಾವಣೆ
ಪೂರಕ ಪರೀಕ್ಷೆಗಳಿಗೆ ಅಗತ್ಯವಿರುವ ಅವಶ್ಯಕತೆಗಳನ್ನು ವಿದ್ಯಾರ್ಥಿಗಳು ಪೂರೈಸಿದರೆ, ರಿಜಿಸ್ಟ್ರೇಶನ್ ಪ್ರಕ್ರಿಯೆಗೆ ಮುಂದುವರಿಯಬಹುದು. ನೋಂದಣಿಯ ದಿನಾಂಕದೊಳಗೆ ವಿದ್ಯಾರ್ಥಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಗಿಸಿಕೊಳ್ಳಬೇಕು.
ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಏನು ಮಾಡಬಹುದು
ಮೆಟ್ರಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ನಿಮಗೆ ಇನ್ನೂ ಅವಕಾಶವಿರುತ್ತದೆ. ಪುನಃ ಮೆಟ್ರಿಕ್‌ಗೆ ಹಾಜರಾಗಲು ನೋಂದಾವಣೆ ಮಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ