• Home
  • »
  • News
  • »
  • jobs
  • »
  • PUC Preparatory Exam: ಈ ತಿಂಗಳೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ

PUC Preparatory Exam: ಈ ತಿಂಗಳೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷೆಗಳನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ನಿಮ್ಮ ಜಿಲ್ಲೆಯ ವೇಳಾಪಟ್ಟಿ ಯಾವಾಗ ಎಂದು ಪರಿಶೀಲಿಸಿ.

  • News18 Kannada
  • Last Updated :
  • Karnataka, India
  • Share this:

ವಿದ್ಯಾರ್ಥಿಗಳೆಲ್ಲರೂ ಕಾದಿರುವ ದ್ವಿತೀಯ ಪಿಯುಸಿ ವೇಳಾಪಟ್ಟಿ (Time Table) ಈಗಾಗಲೇ ಬಿಡುಗಡೆಯಾಗಿದೆ. ಆದರೆ ಅದಕ್ಕೂ ಮುನ್ನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಅದರ ವೇಳಾಪಟ್ಟಿ ಕೂಡ ಇದೀಗ ಬಿಡುಗಡೆಯಾಗಿದೆ. ಇದನ್ನು ಗಮನಿಸಿ ವಿದ್ಯಾರ್ಥಿಗಳು (Student) ಸಿದ್ಧತೆಯಲ್ಲಿ ತೊಡಗಿಕೊಂಡರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಇಲ್ಲಿ ಪರೀಕ್ಷೆ ದಿನಾಂಕ (Date) ಹಾಗೂ ವಿಷಯಗಳ ವಿವವರಗಳನ್ನು ನೀಡಲಾಗಿದೆ ಇದಕ್ಕನುಗುಣವಾಗಿ ಪರೀಕ್ಷೆ ನಡೆಯಲಿದೆ.  ಸದ್ಯದಲ್ಲೇ ಈ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ವೇಳಾಪಟ್ಟಿ ಗಮನಿಸಿ. 


ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷೆಗಳನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ವಿಷಯವಾರು ವೇಳಾಪಟ್ಟಿಯನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಥವಾ ಕಾಲೇಜುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.


ಆದ್ದರಿಂದ ನಿಮ್ಮ ಕಾಲೇಜಿಗೆ ಸಂಬಂಧ ಪಟ್ಟ ವೇಳಾಪಟ್ಟಿ ಯಾವಾಗ ಎಂದು ಖಾತ್ರಿ ಪಡಿಸಿಕೊಳ್ಳಿ. ಆದರೆ ಎಲ್ಲಾ ಕಡೆಯೂ ಈ ತಿಂಗಳಲ್ಲೇ ಪೂರ್ವ ಸಿದ್ಧತಾ ಪರೀಕ್ಷೆ ಜರುಗಲಿದೆ ಎನ್ನುವುದಂತು ಖಚಿತ


ಇದನ್ನೂ ಓದಿ: Success Story: ಅಂದು 12ನೇ ತರಗತಿ ಫೇಲ್​, ಈಗ IPS ಅಧಿಕಾರಿ! UPSC ಟಾಪರ್ ಆಗಲು ಗೆಳತಿಯೇ ಸ್ಪೂರ್ತಿ


2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ರಾಜ್ಯದ್ಯಾಂತ ಏಕಕಾಲದಲ್ಲಿ ನಡೆಸಲಾಗುತ್ತದೆ. ಈ ಬಾರಿಯ ಪ್ರಾಯೋಗಿಕ ಪರೀಕ್ಷೆಗಳನ್ನು ದಿನಾಂಕ 06-02-2023 ರಿಂದ 28-02-2023 ರವರೆಗೆ ನಡೆಯಲಿದೆ.


ಜನವರಿ 23 ರಿಂದ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿದ್ದು ನೀವೆಲ್ಲರೂ ಈಗಿನಿಂದಲೇ ಸಿದ್ದತೆ ನಡೆಸಿ ಉತ್ತಮ ಅಂಕಗಳಿಸಿ. ಯಾವುದೇ ನಿಖರವಾದ ದಿನಾಂಕ ಅಥವಾ ವೇಳಾಪಟ್ಟಿ ಇಲ್ಲದೇ ಇರುವ ಕಾರಣ ಆಯಾ ಜಿಲ್ಲೆಗಳಲ್ಲಿ ಯಾವಾಗ ಪೂರ್ವ ಸಿದ್ಧತಾ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ.


ಅಂದಾಜು ವೇಳಾಪಟ್ಟಿ


18-01-2023 ಬುಧವಾರ - ಕನ್ನಡ.
19-01-2023 ಗುರುವಾರ - ಇಂಗ್ಲಿಷ್.
20-01-2023 ಶುಕ್ರವಾರ - ಇತಿಹಾಸ, ಭೌತಶಾಸ್ತ್ರ.
21-01-2023 ಶನಿವಾರ - ಲೆಕ್ಕಶಾಸ್ತ್ರ, ಶಿಕ್ಷಣಶಾಸ್ತ್ರ, ಐಚ್ಛಿಕ ಕನ್ನಡ.
22-01-2023 ಭಾನುವಾರ ರಜೆ.
23-01-2023 ಸೋಮವಾರ - ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಂಖ್ಯಾಶಾಸ್ತ್ರ.
24-01-2023 ಮಂಗಳವಾರ - ಅರ್ಥಶಾಸ್ತ್ರ, ರಸಾಯನಶಾಸ್ತ್ರ.
25-01-2023 ಬುಧವಾರ - ವ್ಯವಾಹರ ಅಧ್ಯಯನ, ಸಮಾಜಶಾಸ್ತ್ರ, ಗಣಿತ.
26-01-2023 ಗುರುವಾರ ಗಣರಾಜೋತ್ಸವ.
27-01-2023 ಶುಕ್ರವಾರ - ಭೂಗೋಳಶಾಸ್ತ್ರ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ.
28-01-2023 ಶನಿವಾರ - ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಬ್ಯೂಟಿ & ವೆಲ್‌ನೆಸ್.
29-01-2023 ಭಾನುವಾರ ರಜೆ




ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಭ್ಯಾಸ ಮಾಡಿ
ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ತರಗತಿಯ ವಿಷಯಗಳೊಂದಿಗೆ ಏಕಕಾಲದಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಾಯವಾಗುತ್ತದೆ. ಓದಿದ ವಿಷಯವನ್ನು ಇನ್ನೊಮ್ಮೆ ಓದಿ ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲು ನೆರವಾಗುತ್ತದೆ.


ಮುಂದಿನ ನಿರ್ಧಾರಕ್ಕೆ ಪೂರಕ
ಅಷ್ಟೇ ಅಲ್ಲ ತಮ್ಮ ಅಂಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಇದು ಸಹಾಯವಾಗುತ್ತದೆ. ಆ ಕಾರಣದಿಂದ ಸರಿಯಾಗಿ ಅಭ್ಯಾಸ ಮಾಡಿ ಅಂಕಗಳಿಸಲು ಪ್ರಯತ್ನಿಸುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮಕ್ಕಳು ಸಿದ್ಧತೆ ನಡೆಸುತ್ತಾರೆ. ಈಗ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ವಿಶೇಷ ಅಧ್ಯಯನಕ್ಕೆ ಸಿದ್ಧರಾಗುತ್ತಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು