• Home
  • »
  • News
  • »
  • jobs
  • »
  • PUC Model Question Paper: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ ಇಲ್ಲೇ ಸಿಗುತ್ತೆ ನೋಡಿ

PUC Model Question Paper: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ ಇಲ್ಲೇ ಸಿಗುತ್ತೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕರ್ನಾಟಕ II PUC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆಯೊಂದಿಗೆ ಪರಿಚಿತರಾಗಬೇಕು ಮಾದರಿ ಮತ್ತು ಪ್ರಶ್ನೆ ಪತ್ರಿಕೆ ವಿನ್ಯಾಸದ ಬಗ್ಗೆ ತಿಳಿದಿರಬೇಕು. ಹಾಗಿದ್ದಾಗ ಮಾತ್ರ ಸುಲಭವಾಗಿ ನೀವು ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಲು ಸಾಧ್ಯವಾಗುತ್ತದೆ. ನೀವು ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಗೂ ಮುನ್ನವೇ ಬಿಡಿಸಿದರೆ ಅದು ಪರೀಕ್ಷಾ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ  ಮಾಡುತ್ತದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಇನ್ನೇನು ಕೆಲವೇ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆನಡೆಯಲಿದ್ದು ಹಲವಾರು ವಿದ್ಯಾರ್ಥಿಗಳು (Students) ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಮಾದರಿ ಪ್ರಶ್ನೆ ಪತ್ರಿಕೆ ಲಭಿಸಿದರೆ ವಿದ್ಯಾರ್ಥಿಗಳ ಪರೀಕ್ಷಾ (Exam) ಸಿದ್ಧತೆಗೆ ತುಂಬಾ ಸಹಾಯವಾಗುತ್ತದೆ ಎಂಬ ನಿಟ್ಟಿನಲ್ಲಿ ಪರೀಕ್ಷಾ ಮಂಡಳಿಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು (Question Paper) ಬಿಡಿಗಡೆ ಮಾಡಿದೆ ಇದರ ಅನ್ವಯ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದು. ಅಧಿಕೃತ ಲಿಂಕ್ (Link)​ ಇಲ್ಲಿ ನೀಡಲಾಗಿದೆ. ಇದನ್ನು ಕ್ಲಿಕ್ ಮಾಡುವ ಮೂಲಕ ನೀವು ಮಾದರಿ ಪ್ರಶ್ನೆ ಪತ್ರಿಕೆಯನ್ನು ಪಡೆಯಬಹುದು.


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2023ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಯನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ. 10 ಅಂಕಗಳಿಗೆ ಬಹು ಆಯ್ಕೆ ಮಾದರಿ (MCQ) ಪ್ರಶ್ನೆಪತ್ರಿಕೆ ನೀಡಿದೆ.


ಪದವಿ ಪೂರ್ವ ಶಿಕ್ಷಣ ಇಲಾಖೆ (PUE) II PUC ವಾರ್ಷಿಕ ಪರೀಕ್ಷೆಯು ಪ್ರಾರಂಭ ದಿನಾಂಕ ಗುರುವಾರ, 9 ಮಾರ್ಚ್ 2023 ರಿಂದ ಆರಂಭವಾಗಿ ಬುಧವಾರದ ದಿನಾಂಕ, 29 ಮಾರ್ಚ್ 2023ರಂದು ಕೊನೆಗೊಳ್ಳಲಿದೆ. ಆ ಕಾರಣದಿಂದ ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಅಂತವರಿಗೆ ಸಹಾಯವಾಗಲಿ ಎಂದೇ ಇಲ್ಲಿ ಕೆಲವು ಪ್ರಶ್ನೆ ಪತ್ರಿಕೆಗಳ ಲಿಂಕ್​ ನೀಡುತ್ತಿದ್ದೇವೆ.


ಇದನ್ನೂ ಓದಿ: PUC Model Question Paper: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ, ಇಲ್ಲಿ ಪರಿಶೀಲಿಸಿ


ಕರ್ನಾಟಕ II PUC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆಯೊಂದಿಗೆ ಪರಿಚಿತರಾಗಬೇಕು ಮಾದರಿ ಮತ್ತು ಪ್ರಶ್ನೆ ಪತ್ರಿಕೆ ವಿನ್ಯಾಸದ ಬಗ್ಗೆ ತಿಳಿದಿರಬೇಕು. ಹಾಗಿದ್ದಾಗ ಮಾತ್ರ ಸುಲಭವಾಗಿ ನೀವು ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಲು ಸಾಧ್ಯವಾಗುತ್ತದೆ. ನೀವು ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಗೂ ಮುನ್ನವೇ ಬಿಡಿಸಿದರೆ ಅದು ಪರೀಕ್ಷಾ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ  ಮಾಡುತ್ತದೆ.


ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಗಳು


ವಿಷಯವಾರು ಮಾದರಿ ಪ್ರಶ್ನೆ ಪತ್ರಿಗೆಗಳು ಲಭ್ಯವಿದ್ದು ನೀವು ಪಿಡಿಎಪ್ ಡೌನ್ಲೋಡ್ ಕೂಡ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಕರ್ನಾಟಕ ಸರ್ಕಾರದ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯವಾಗುತ್ತದೆ. ಇದರ ಅನುಸಾರ ನೀವು ಅಭ್ಯಾಸ ಮಾಡಿದರೆ ಖಂಡಿತ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ.


ಪ್ರಶ್ನೆ ಪತ್ರಿಕೆ ಅಂಕ ಹಂಚಿಕೆ


ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಿದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, 5 ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ. ಒಟ್ಟಾರೆ 80 ಅಂಕಗಳಿಗೆ ವಿಸ್ತ್ರತವಾಗಿ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳಿವೆ. ಇದರಲ್ಲಿ ಸಂದಂರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆ ಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಿದೆ.


ನೀವು ಸರಿಯಾದ ರೀತಿಯಲ್ಲಿ ತಯಾರಿ ನಡೆಸಿ ಇಂದಿನಿಂದಲೇ ಅಭ್ಯಾಸ ಮಾಡಿದರೆ ಖಂಡಿತ ತರಗತಿಗೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಿದೆ. ಆ ಕಾರಣದಿಂದ ಈ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಉತ್ತರಿಸಿ. ಅಷ್ಟೇ ಅಲ್ಲ ಸರಿಯಾದ ಸಮಯ ನಿಗದಿ ಪಡಿಸಿಕೊಳ್ಳಿ ಅದರ ಅನುಸಾರ ನೀವು ಪರೀಕ್ಷೆ ಬರೆಯಲು ಸಮಯ ಸಾಲುತ್ತದೆಯೇ ಎಂದು ಪ್ರಶ್ನೆ ಪತ್ರಿಕೆ ಬಿಡಿಸುತ್ತಾ ಪ್ರಾಯೋಗಿಕ ಪರೀಕ್ಷೆ ನಡೆಸಿ. ನಿಮ್ಮ ಮನೆಯಲ್ಲೇ ಕೂತು ನಿಮಗೆ ನೀವೆ ಪರೀಕ್ಷೆ ಮಾಡಿಕೊಳ್ಳಿ.


ಕೇವಲ ನೆನಪಿನ ಶಕ್ತಿ ಇದ್ದರೆ ಸಾಲದು. ಅದನ್ನು ನಿರ್ಧಿಷ್ಟ ಸಮಯದೊಳಗೆ ಮುಗಿಸುವ ಸಾಮರ್ಥ್ಯವನ್ನು ಹೊಂದಿರ ಬೇಕಾಗುತ್ತದೆ. ಆದ್ದರಿಂದ ವೇಗವಾಗಿ ಬರೆಯುವುದನ್ನು ನಿಮಗೆ ನೀವೇ ರೂಢಿಸಿಕೊಳ್ಳಿ ಹೀಗೆ ಮಾಡುವುದರಿಂದ ಇದು ಪರೀಕ್ಷೆಯಲ್ಲಿ ತುಂಬಾ ಉಪಯೋಗವಾಗುತ್ತದೆ.

First published: